Chitradurga: ನಾವ್ ಕರೆಂಟ್ ಬಿಲ್ ಕಟ್ಟಲ್ಲ; ಗ್ರಾಮಸ್ಥರ ಪಟ್ಟು; ವಿಡಿಯೋ ವೈರಲ್

ವೈರಲ್ ವಿಡಿಯೋ

ವೈರಲ್ ವಿಡಿಯೋ

Congress Manifesto: ಕಾಂಗ್ರೆಸ್​ಗೆ ಬಹುಮತ ಬಂದಿದ್ದು, ಆದೇಶ ಬರೋವರೆಗೂ ನೀವು ಬಿಲ್ ಪಾವತಿಸಬೇಕು ಎಂದು ಅಧಿಕಾರಿ ಹೇಳಿದ್ದಾರೆ. ಅದೆಲ್ಲ ನಮಗೆ ಗೊತ್ತಿಲ್ಲ. ಆದೇಶದ ಬಗ್ಗೆ ಕಾಂಗ್ರೆಸ್​ನವರನ್ನ ಕೇಳಿಕೊಳ್ಳಿ ಎಂದು ಗ್ರಾಮಸ್ಥರು ಹೇಳಿದ್ದಾರೆ.

  • Share this:

ಚಿತ್ರದುರ್ಗ: ಚುನಾವಣೆಯಲ್ಲಿ (Election 2023) ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಹಾಗಾಗಿ ನಾವು ವಿದ್ಯುತ್ ಬಿಲ್ ಪಾವತಿ ಮಾಡಲ್ಲ ಎಂದು ಬೆಸ್ಕಾಂ ಅಧಿಕಾರಿಗೆ (BESCOM Employee) ಗ್ರಾಮಸ್ಥರು ಅವಾಜ್ ಹಾಕಿದ್ದಾರೆ. ಚಿತ್ರದುರ್ಗ ತಾಲೂಕಿನ ಸಿದ್ದಾಪುರ (Siddapur, Chitradurga) ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮಸ್ಥರು ವಿದ್ಯುತ್ ಬಿಲ್ (Electricity Bill) ಪಾವತಿಸಲ್ಲ ಎಂದಿರುವ ವಿಡಿಯೋ (Viral Video) ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ. ಕಾಂಗ್ರೆಸ್ ಸರ್ಕಾರ ಬಂದಿದೆ. ಅವರ ಬಿಲ್ ಕಟ್ಟುವಂತಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ನಾವು ಬಿಲ್ ಪಾವತಿಸಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ. ಕಾಂಗ್ರೆಸ್​ಗೆ ಬಹುಮತ ಬಂದಿದ್ದು, ಆದೇಶ ಬರೋವರೆಗೂ ನೀವು ಬಿಲ್ ಪಾವತಿಸಬೇಕು ಎಂದು ಅಧಿಕಾರಿ ಹೇಳಿದ್ದಾರೆ. ಅದೆಲ್ಲ ನಮಗೆ ಗೊತ್ತಿಲ್ಲ. ಆದೇಶದ ಬಗ್ಗೆ ಕಾಂಗ್ರೆಸ್​ನವರನ್ನ ಕೇಳಿಕೊಳ್ಳಿ ಎಂದು ಗ್ರಾಮಸ್ಥರು ಹೇಳಿದ್ದಾರೆ.


ಸಾರಾ ಮಹೇಶ್ ಅಭಿಮಾನಿ ಆತ್ಮಹತ್ಯೆಗೆ ಯತ್ನ


ಮೈಸೂರು: ಮಾಜಿ ಸಚಿವ ಸಾರಾ ಮಹೇಶ್ ಸೋಲಿನಿಂದ ನೊಂದ ಅಭಿಮಾನಿ ವೆಂಕಟೇಶ್ ಆತ್ಮಹತ್ಯೆಗೆ ಯತ್ನಿಸಿದ್ದರು. ಮೈಸೂರು ಜಿಲ್ಲೆ ಯ ಕೆ ಆರ್ ನಗರ ತಾಲೂಕಿನ ದಮ್ಮನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸದ್ಯ ವೆಂಕಟೇಶ್​ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕಾಂಗ್ರೆಸ್ ಕಾರ್ಯಕರ್ತನಿಗೆ ಚಾಕು ಇರಿತ


ಹೊನ್ನಾಳಿ ವಿಧಾನಸಭಾ ಕ್ಷೇತ್ರದ (Honnali Constituency) ನ್ಯಾಮತಿ ತಾಲೂಕಿನ ಮಲ್ಲಿಗೇನಹಳ್ಳಿಯಲ್ಲಿ ಕಾಂಗ್ರೆಸ್​ ಕಾರ್ಯಕರ್ತನಿಗೆ ಚಾಕು ಇರಿಯಲಾಗಿದೆ. 24 ವರ್ಷದ ಮಧು ಚಾಕು ಇರಿತಕ್ಕೊಳಗಾದ ಕಾಂಗ್ರೆಸ್ ಕಾರ್ಯಕರ್ತ.
ಇದನ್ನೂ ಓದಿ:  Karnataka Next CM: ಡಿಕೆಶಿ-ಸಿದ್ದರಾಮಯ್ಯ ಬಣದ ಶಾಸಕರು ತೆಗೆದುಕೊಂಡ ಒಂದು ಸಾಲಿನ ನಿರ್ಣಯ ಏನು?


ಸದ್ಯ ಮಧು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ (Former MLA MP Renukacharya) ಅವರ ಬೆಂಬಲಿಗರಾದ ಪ್ರವೀಣ್ ಪ್ರಕಾಶ್ ತೀರ್ಥಲಿಂಗ ಸೇರಿ ಕೆಲ‌ ಬಿಜೆಪಿ ಕಾರ್ಯಕರ್ತರು ಈ ದಾಳಿ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

First published: