ಸಫಾರಿಗೆ ಹೋದವರಿಗೆ ಕಾಡು ಪ್ರಾಣಿಗಳ ದರ್ಶನವಾದರೆ ಅದು ಅದೃಷ್ಟ. ಅದರಲ್ಲೂ ಹುಲಿಯಂತೂ ದರ್ಶನ ನೀಡುವುದು ಅಪರೂಪ. ಆದರೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿರಾಯ ದರ್ಶನ ನೀಡುವ ಜೊತೆಗೆ ಪ್ರವಾಸಿಗರ ಮೇಲೆ ದಾಳಿ ನಡೆಸಿರುವ ಘಟನೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ. ಅದೃಷ್ಟವಶಾತ್ ಪ್ರವಾಸಿಗರು ಪಾರಾಗಿದ್ದು, ಯಾವುದೇ ಅನಾಹುತ ನಡೆದಿಲ್ಲ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಾಣಿಗಳ ದರ್ಶನಕ್ಕೆ ಹೊರಟ ಸಫಾರಿ ವಾಹನವೊಂದು ಕೆಟ್ಟು ನಿಂತಿದೆ. ಈ ವೇಳೆ ಸಫಾರಿ ವಾಹನದತ್ತ ಬಂದ ಹುಲಿ ಅದರ ಮೇಲೆ ದಾಳಿ ನಡೆಸಿದೆ. ಸಫಾರಿ ವಾಹನದ ಬಂಪರ್ ಅನ್ನು ತನ್ನ ಅರಿತವಾದ ಹಲ್ಲುಗಳಿಂದ ಕೀಳಲು ಇನ್ನಿಲ್ಲದ ಪ್ರಯತ್ನ ನಡೆಸಿದೆ. ಈ ದೃಶ್ಯಾವಳಿಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ.
Tiger pulling tourist vehicle in Bannerghatta park , Bengaluru
😣
Recieved on whatsapp pic.twitter.com/TfH8mAiN2b
— Mona Patel (@MonaPatelT) January 15, 2021
ಕೆಟ್ಟು ನಿಂತ ಸಫಾರಿ ವಾಹನದ ಮೇಲೆ ದಾಳಿ ನಡೆಸಿದ್ದು, ಸುಮಾರು ಹತ್ತು ವರ್ಷದ ಸುರೇಶ್ ಎಂಬ ಹುಲಿಯಾಗಿದ್ದು, ಅಪರೂಪಕ್ಕೊಮ್ಮೆ ಸಫಾರಿ ಪ್ರದೇಶದಲ್ಲಿ ಹುಲಿ- ಸಿಂಹಗಳು ಸಫಾರಿ ವಾಹನಗಳಿಗೆ ಅಡ್ಡ ಬರುವುದು, ವಾಹನಗಳ ಮೇಲೆ ದಾಳಿಯಂತಹ ಕಿರಿ ಕಿರಿ ಮಾಡುತ್ತವೆ. ಉಳಿದಂತೆ ಅವುಗಳ ಪಾಡಿಗೆ ವಿಹರಿಸುತ್ತವೆ. ಆದರೂ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಸಫಾರಿಗೆ ತೆರಳುವ ಎಲ್ಲಾ ವಾಹನಗಳಿಗೆ ಹಿಂದೆ ಮುಂದೆ ಮತ್ತು ಕಿಟಕಿಗಳಿಗೆ ಮೇಶ್ ಅಳವಡಿಸಲಾಗಿದೆ ಎಂದು ಉದ್ಯಾನವನದ ಅಧಿಕಾರಿಗಳು ಹೇಳುತ್ತಾರೆ
ತನ್ನ ಚೂಪಾದ ಕೊರೆಹಲ್ಲುಗಳಿಂದ ಹುಲಿರಾಯ ಸಫಾರಿ ವಾಹದನ ಬಂಪರ್ ಕಿತ್ತು ಹಾಕಿದ್ದಾನೆ. ಅಲ್ಲದೇ ಜೋರಾಗಿ ವಾಹನವನ್ನು ಎಳೆಯಲು ಇನ್ನಿಲ್ಲದ ಪ್ರಯತ್ನ ನಡೆಸಿದೆ. ಈ ವೇಳೆ ವಾಹನದ ಚಾಲಕ ನಿಧಾನಾಗಿ ರಿವರ್ಸ್ ಮಾಡಲು ಪ್ರಯತ್ನಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ