Viral News: ಜನ್ಮದಿನದಂದು ಸಾವಿನ ಕುರಿತು  ಪ್ರವಚನ ನೀಡುತ್ತಲೇ ಲಿಂಗೈಕ್ಯರಾದ ಸ್ವಾಮೀಜಿ

ಗೋಕಾಕ್ ತಾಲೂಕಿನ ಬಳೋಬಾಳ ಗ್ರಾಮದಲ್ಲಿ ಭಕ್ತವೃಂದಕ್ಕೆ ಆಶೀರ್ವಚನ ನೀಡುತ್ತಿದ್ದರು. ಈ ವೇಳೆ ಸ್ವಾಮೀಜಿಗಳು ತೀವ್ರ ಹೃದಯಾಘಾತದಿಂದ ಕುಸಿದಿದ್ದಾರೆ. ಸಂಗನ ಬಸವ ಸ್ವಾಮೀಜಿ ಅವರಿಗೆ 53 ವರ್ಷ ವಯಸ್ಸಾಗಿತ್ತು.

ಸ್ವಾಮೀಜಿ ಸಾವು

ಸ್ವಾಮೀಜಿ ಸಾವು

  • Share this:
ಬೆಳಗಾವಿ: ಹುಟ್ಟಿದ ಜೀವ ಸಾಯಬೇಕು (Born And Death) ಎಂಬುವುದು ಪ್ರಕೃತಿಯ ನಿಯಮ. ಆದ್ರೂ ಮಾನವ ಕುಲ ಸಾವು ಅಂದ್ರೆ ಭಯಬೀಳುತ್ತೆ. ಕೆಲವೊಮ್ಮೆ ಸಾವು ಬಯಸಿದರೂ ಅದು ಬರಲ್ಲ. ಈ ಕ್ಷಣ ಕಣ್ಮುಂದೆ ಇದ್ದ ವ್ಯಕ್ತಿ ಮತ್ತೊಂದು ಗಳಿಗೆಯಲ್ಲಿ ನಮ್ಮ ಮೇಲೆ ಇಲ್ಲ ಅಂದ್ರೆ ನಂಬಲು ಅಸಾಧ್ಯ, ಅಕ್ಟೋಬರ್ 29ರಂದು ನಡೆದಿದ್ದು ಇಂತಹವುದೇ ಘಟನೆ. ಆರೋಗ್ಯವಾಗಿದ್ದ ಕನ್ನಡ ರತ್ನ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power Star Puneeth Rajkumar Death) ನಿಧನದ ಸುದ್ದಿಯನ್ನು ಕರುನಾಡಿನ ಜನತೆಗೆ ಇನ್ನೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ನವೆಂಬರ್ 6ರಂದು ಸ್ವಾಮೀಜಿಯೊಬ್ಬರು (Swamjji Death Video Viral) ಭಕ್ತರಿಗೆ ಪ್ರವಚನ ನೀಡುತ್ತಲೇ ಲಿಂಗೈಕ್ಯರಾಗಿದ್ದಾರೆ. ಈ ದೃಶ್ಯ ಭಕ್ತರೊಬ್ಬರ (Deovtee) ಮೊಬೈಲ್ ನಲ್ಲಿ  ಸೆರೆಯಾಗಿದ್ದು , ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ (Viral) ಆಗಿದೆ.

ಬಸವಯೋಗ  ಮಂಟಪ ಟ್ರಸ್ಟ್ ನ ಸಂಗನಬಸವ ಮಹಾ ಸ್ವಾಮೀಜಿ ವೇದಿಕೆಯ ಮೇಲೆಯೇ ಲಿಂಗೈಕ್ಯರಾಗಿದ್ದಾರೆ. ನವೆಂಬರ್ 6ರಂದು ಸ್ವಾಮೀಜಿಗಳ ಹುಟ್ಟು ಹಬ್ಬವಿತ್ತು.ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಬಳೋಬಾಳ ಗ್ರಾಮದಲ್ಲಿ ಭಕ್ತವೃಂದಕ್ಕೆ ಆಶೀರ್ವಚನ ನೀಡುತ್ತಿದ್ದರು. ಈ ವೇಳೆ ಸ್ವಾಮೀಜಿಗಳು ತೀವ್ರ ಹೃದಯಾಘಾತದಿಂದ ಕುಸಿದಿದ್ದಾರೆ. ಸಂಗನ ಬಸವ ಸ್ವಾಮೀಜಿ ಅವರಿಗೆ 53 ವರ್ಷ ವಯಸ್ಸಾಗಿತ್ತು.

ವೇದಿಕೆಯಲ್ಲೇ ತೀವ್ರ ಹೃದಯಾಘಾತ

ಸ್ವಾಮೀಜಿಗಳು ಕುಸಿಯುತ್ತನೇ ವೇದಿಕೆ ಮೇಲಿದ್ದ ಗಣ್ಯರು ಮತ್ತು ಭಕ್ತರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ವಾಮೀಜಿಗಳನ್ನು ಪರೀಕ್ಷಿಸಿದ ವೈದ್ಯರು ಸಾವನ್ನಪ್ಪಿರೋದನ್ನು ಖಚಿತ ಪಡಿಸಿದ್ದಾರೆ. ಆರೋಗ್ಯವಾಗಿಯೇ ಇದ್ದ ಸ್ವಾಮೀಜಿಗಳ ನಿಧನದಿಂದ ಭಕ್ತರು ಆತಂಕಕ್ಕೆ ಒಳಗಾಗಿದ್ದರು.

ತೀವ್ರ ಹೃದಯಾಘಾತದಿಂದ ಸ್ಪಷ್ಟಪಡಿಸಿದ್ದಾರೆ. ಸ್ವಾಮೀಜಿಗಳು ಕೊನೆ ಗಳಿಗೆಯಲ್ಲಿ ಸಾವಿನ ಕುರಿತ ವಿಷಯವನ್ನೇ ಮಾತನಾಡುತ್ತಿದ್ರು  ಎಂದು ಭಕ್ತರು ಹೇಳಿ ಕಣ್ಣೀರು ಹಾಕಿದ್ದಾರೆ.

ಏನಿದು ಹೃದಯಾಘಾತ ಮತ್ತು ಹೃದಯ ಸ್ತಂಭನ

ಬಹುತೇಕ ಮಂದಿ ಕಾರ್ಡಿಯಾಕ್​ ಅರೆಸ್ಟ್​ ಹಾಗೂ ಹಾರ್ಟ್​ ಅಟ್ಯಾಕ್ ಒಂದೇ ಎಂದು ತಿಳಿದಿದ್ದಾರೆ. ಆದರೆ ಇವರೆಡು ಒಂದೇ ಅಲ್ಲ. ಹೃದಯಾಘಾತವೆಂದರೆ ಪರಿಧಮನಿಯ ಅಪಧಮನಿಗಳಲ್ಲಿ ಒಂದನ್ನು ನಿರ್ಬಂಧಿಸಿದಾಗ. ಹೃದಯ ಸ್ನಾಯುವು ಅದರ ಪ್ರಮುಖ ರಕ್ತ ಪೂರೈಕೆಯನ್ನು ತಡೆಯುತ್ತದೆ. ಇದಕ್ಕೆ ಚಿಕಿತ್ಸೆ ನೀಡದೆ ಬಿಟ್ಟರೆ, ಅದು ಸಾಕಷ್ಟು ಆಮ್ಲಜನಕವನ್ನು ಪಡೆಯದ ಕಾರಣ ಹೃದಯ ಸಾಯಲು ಪ್ರಾರಂಭಿಸುತ್ತದೆ.

ಇದನ್ನೂ ಓದಿ:  Heart Attack Symptoms| ಹೃದಯ ಸ್ತಂಭನದ ಈ ಲಕ್ಷಣಗಳನ್ನು ಎಂದಿಗೂ ಕಡೆಗಣಿಸದಿರಿ

ಹೃದಯ ಸ್ತಂಭನ (cardiac arrest) ಎಂದರೆ ವ್ಯಕ್ತಿಯ ಹೃದಯವು ಅವರ ದೇಹದ ಸುತ್ತ ರಕ್ತವನ್ನು ಪಂಪ್ ಮಾಡುವುದನ್ನು ನಿಲ್ಲಿಸುತ್ತದೆ. ಇದರಿಂದ ಅವರು ಸಾಮಾನ್ಯವಾಗಿ ಉಸಿರಾಡುವುದನ್ನು ನಿಲ್ಲಿಸುತ್ತಾರೆ.

ಯುವ ವಯಸ್ಕರಲ್ಲಿ ಹೃದಯ ಸ್ತಂಭನಕ್ಕೆ (cardiac arrest) ಪ್ರಮುಖ ಕಾರಣ ಈ ಹೃದಯಾಘಾತ. ಇದು ಹೆಚ್ಚು ಅಪಾಯವನ್ನು ಮಾಡುವುದರ ಜೊತೆಗೆ ಹೃದಯ ಸ್ತಂಭನಕ್ಕೆ ಕಾರಣವಾಗುತ್ತದೆ.

ಹೃದಯಾಘಾತ ಮತ್ತು ಹೃದಯ ಸ್ತಂಭನ ಎರಡೂ ತುರ್ತು ಪರಿಸ್ಥಿತಿಗಳಾಗಿದ್ದು ತಕ್ಷಣಕ್ಕೆ ವೈದ್ಯರ ಸಂಪರ್ಕಿಸಬೇಕು.

ಹೃದಯಾಘಾತದ ಲಕ್ಷಣಗಳನ್ನು ನಿರ್ಲಕ್ಷಿಸಬಾರದು

ಹೃದಯಾಘಾತದ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಆದಾಗ್ಯೂ, ದಿ ಅಮೇರಿಕನ್ ಹಾರ್ಟ್ ಅಸೋಸಿಯೇಷನ್‍ನ (The American Heart Association) ಪ್ರಕಾರ, ಹೃದಯಾಘಾತಕ್ಕೆ ಕೆಲವು ಗಂಭೀರವಾದ ದೀರ್ಘಕಾಲದ ರೋಗಲಕ್ಷಣಗಳಿವೆ. ಅವುಗಳನ್ನು ಎಂದಿಗೂ ನಿರ್ಲಕ್ಷಿಸಬಾರದು. ಬದಲಾಗಿ, ಈ ರೋಗಲಕ್ಷಣಗಳನ್ನು ಪತ್ತೆಹಚ್ಚಿ ಆದಷ್ಟು ಬೇಗ ಪರಿಹರಿಸಿಕೊಳ್ಳಬೇಕು.

ಇದನ್ನೂ ಓದಿ:  Heart Care: ಕಾರ್ಡಿಯಕ್​ ಅರೆಸ್ಟ್​- ಹಾರ್ಟ್​ ಅಟ್ಯಾಕ್​ ನಡುವಿನ ವ್ಯತ್ಯಾಸವೇನು? ಪುನೀತ್​ಗೆ ಆಗಿದ್ದೇನು?

ಆರ್ಹೆತ್ಮಿಯಾ ಸ್ಥಿತಿ

ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದೇ ಹೋದರೆ ಹೃದಯ ಸ್ತಂಭನದಿಂದ ಸಾವು ಸಂಭವಿಸುತ್ತದೆ. ಹೃದಯವು ತನ್ನ ಬಡಿತವನ್ನು ಹಠಾತ್ ಆಗಿ ನಿಲ್ಲಿಸಿದಾಗ ಹೃದಯ ಸ್ತಂಭನವುಂಟಾಗುತ್ತದೆ. ನಮ್ಮ ಹೃದಯ ಬಡಿತವನ್ನು ವಿದ್ಯುತ್ ಪ್ರಚೋದನೆಗಳು ನಿಯಂತ್ರಿಸುತ್ತವೆ.

ಈ ಪ್ರಚೋದನೆಗಳು ತಮ್ಮ ಮಾದರಿಯನ್ನು ಬದಲಾಯಿಸಿದಾಗ ಇದು ಆರ್ಹೆತ್ಮಿಯಾ ಸ್ಥಿತಿಗೆ ಕಾರಣವಾಗುತ್ತದೆ. ಹೃದಯದ ಲಯವು ನಿಂತಾಗ, ಹೃದಯ ಸ್ತಂಭನ ಸಂಭವಿಸಿದಾಗ, ಅಂದರೆ ಹೃದಯ ಬಡಿತ ನಿಲ್ಲುತ್ತದೆ.
Published by:Mahmadrafik K
First published: