ನರೇಂದ್ರ ಮೋದಿ ಮಹಾರಾಷ್ಟ್ರದಲ್ಲಿ ಕನ್ನಡದಲ್ಲಿ ಮಾತನಾಡಿದ ವಿಡಿಯೋ ಈಗ ವೈರಲ್

Vijayasarthy SN | news18
Updated:January 10, 2019, 8:26 PM IST
ನರೇಂದ್ರ ಮೋದಿ ಮಹಾರಾಷ್ಟ್ರದಲ್ಲಿ ಕನ್ನಡದಲ್ಲಿ ಮಾತನಾಡಿದ ವಿಡಿಯೋ ಈಗ ವೈರಲ್
ನರೇಂದ್ರ ಮೋದಿ
  • News18
  • Last Updated: January 10, 2019, 8:26 PM IST
  • Share this:
- ಮಹೇಶ ವಿ. ಶಟಗಾರ,

ವಿಜಯಪುರ(ಜ. 10): ಮರಾಠಿಗರ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿ ಮಾತನಾಡುವ ಮೂಲಕ ಕನ್ನಡದ ಕಹಳೆ ಊದಿದ್ದಾರೆ. ಮಹಾರಾಷ್ಟ್ರದ ಸೋಲಾಪುರದಲ್ಲಿ ನಡೆದ ಸಮಾರಂಭವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಕನ್ನಡದ ಕಹಳೆ ಮೊಳಗಿಸಿದ್ದು, ಕನ್ನಡದಲ್ಲಿ ಕನ್ನಡಿಗರಿಗೆ ಮಕರ ಸಂಕ್ರಮಣದ ಶುಭಾಶಯ ಕೋರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಕನ್ನಡದಲ್ಲಿ ಶುಭಾಷಯ ಕೋರಿದ ಈ ವಿಡಿಯೋ ಈಗ ವೈರಲ್ ಆಗಿದೆ.  ಎಲ್ಲರಿಗೂ ಮಕರ ಸಂಕ್ರಾಂತಿ ಮತ್ತು ಗುಡ್ಡಾ ಯಾತ್ರೆಯ ಹಾರ್ದಿಕ ಶುಭಾಶಯಗಳು. ಎಳ್ಳು ಬೆಲ್ಲ ತಿನ್ನಿ, ಸಿಹಿ ಮಾತು ಮಾತನಾಡಿ ಎಂದು ಶುಭಾಷಯ ಕೋರಿದರು.  ನಂತರ ಮರಾಠಿಯಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಶ್ರೀ ಸಿದ್ಧರಾಮೇಶ್ವರ ದೇವರನ್ನು ನೆನೆದ ಶುಭಾಷಯ ಕೋರಿದರು.


ಪ್ರಧಾನಿ ಕನ್ನಡದಲ್ಲಿ ಮಕರ ಸಂಕ್ರಾಂತಿಯ ಶುಭಾಷಯ ಕೋರಿದನ್ನು ನೋಡಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್, ಇತರ ಮಹಾರಾಷ್ಟ್ರದ ಬಿಜೆಪಿ ಮುಖಂಡರು ಮುಗುಳ್ನಕ್ಕಿದ್ದಾರೆ.
First published:January 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ