Viral Video: ಬೆಂಗಳೂರಿನ ಸ್ಯಾಂಕಿ ರಸ್ತೆಯ ಬಳಿ ಯುವಕ - ಯುವತಿಯರ ಜಾಲಿ ರೈಡ್‌ ವಿಡಿಯೋ ವೈರಲ್‌: ಪ್ರಕರಣ ದಾಖಲಿಸಿದ ಪೊಲೀಸರು

Jolly Ride: ವಿಡಿಯೋದಲ್ಲಿ ಯುವಕ - ಯುವತಿಯರು ಕಿಟಕಿಗಳ ಮೇಲೆ ಕುಳಿತಿರುವುದು ಮತ್ತು ಕಾರು ಅಪಾಯಕಾರಿಯಾಗಿ ಪ್ರಯಾಣಿಸುತ್ತಿರುವುದನ್ನು ಗಮನಿಸಲಾಗಿದೆ. ಈ ಹಿನ್ನೆಲೆ ಸುಮೋಟೋ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ವಾಹನವನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದೆ” ಎಂದು ಅವರು ಹೇಳಿದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ರಾಜ್ಯ ರಾಜಧಾನಿಯಲ್ಲಿ ಮರ್ಸಿಡಿಸ್ ಬೆಂಜ್‌(Mercedes-Benz) ಅನ್ನು ಅಜಾಗರೂಕತೆಯಿಂದ ಓಡಿಸಿದ ಯುವಕರ ಗುಂಪಿನ ಮೇಲೆ ನಗರ ಸಂಚಾರಿ ಪೊಲೀಸರು ಸುಮೋಟೋ ಪ್ರಕರಣ ಕೈಗೆತ್ತಿಕೊಂಡಿದ್ದಾರೆ. ಈ ಘಟನೆಯ ವಿಡಿಯೋವನ್ನು ಹಲವಾರು ಮಾಧ್ಯಮಗಳು (Viral Video)ಪ್ರಸಾರ ಮಾಡಿದ ಬಳಿಕ ಎಚ್ಚೆತ್ತುಕೊಂಡ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಬೆಂಗಳೂರಿನ ಕೋರಮಂಗಲದಲ್ಲಿ(Koramangala) ನಡೆದ ಘೋರ ಅಪಘಾತದ ನೆನಪು ಇನ್ನೂ ಮರೆಯಾಗಿಲ್ಲ. ಈ ನಡುವೆಯೇ ಶನಿವಾರ ರಾತ್ರಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಇತ್ತೀಚಿನ ಘಟನೆಯ ವಿಡಿಯೋದಲ್ಲಿ ಹಲವಾರು ಯುವಕ -ಯುವತಿಯರು ಕಾರಿನಲ್ಲಿ ಕಿಟಕಿಗಳು ಮತ್ತು ಛಾವಣಿ ಅಥವಾ ಮೇಲಿನ ರೂಫ್‌ ತೆರೆದು ಕುಳಿತಿರುವುದಲ್ಲದೇ , ಅದರ ಮೇಲೆ  ಅವರು ನೃತ್ಯ ಮಾಡುವುದನ್ನೂ ಕಾಣಬಹುದು.


ಕಾರು ಚಲಿಸುತ್ತಿರುವ ರಸ್ತೆ ಸ್ಯಾಂಕಿ ರಸ್ತೆಯ ಮುಂದಿನ ರಸ್ತೆಯಂತೆ ಕಾಣುತ್ತದೆ ಎಂದು  ಮಾಧ್ಯಮಗಳಿಗೆ  ಎಂ ಶಾಂತರಾಜು, ಉಪ ಪೊಲೀಸ್ ಆಯುಕ್ತರು (ಸಂಚಾರ, ಪೂರ್ವ) ಹೇಳಿದರು. ''ವಿಡಿಯೋದಲ್ಲಿ ಯುವಕ - ಯುವತಿಯರು ಕಿಟಕಿಗಳ ಮೇಲೆ ಕುಳಿತಿರುವುದು ಮತ್ತು ಕಾರು ಅಪಾಯಕಾರಿಯಾಗಿ ಪ್ರಯಾಣಿಸುತ್ತಿರುವುದನ್ನು ಗಮನಿಸಲಾಗಿದೆ. ಈ ಹಿನ್ನೆಲೆ ಸುಮೋಟೋ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ವಾಹನವನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದೆ” ಎಂದು ಅವರು ಹೇಳಿದರು.


ಇನ್ನು, ಕಾರಿನಲ್ಲಿದ್ದ ಯುವಕ - ಯುವತಿಯರು ಕುಡಿದಿದ್ದಾರೆಯೇ ಎಂದು ಕೇಳಿದಾಗ, ಈ ವಿವರ ತನಿಖೆಯಲ್ಲಿ ಇನ್ನೂ ಬಹಿರಂಗಗೊಂಡಿಲ್ಲ ಎಂದು ಹೇಳಿದರು.


ಬೆಂಗಳೂರು ಪೊಲೀಸರು ಐಪಿಸಿ ಸೆಕ್ಷನ್ 279 (ರ‍್ಯಾಶ್ ಅಥವಾ ನಿರ್ಲಕ್ಷ್ಯದಿಂದ ಸಾರ್ವಜನಿಕ ಹಾದಿಯಲ್ಲಿ ಚಾಲನೆ) ಮತ್ತು 336 (ಮಾನವ ಜೀವನ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ದುಡುಕಿನ ಅಥವಾ ನಿರ್ಲಕ್ಷ್ಯದ ಚಾಲನೆಗೆ ಶಿಕ್ಷೆ) ಕಾಯ್ದೆಯಡಿ ಕೇಸ್‌ ದಾಖಲಿಸಿದ್ದಾರೆ.


ಇದನ್ನೂ ಓದಿ: ವಿಶ್ವ ವಿಖ್ಯಾತ ಮೈಸೂರು ದಸರಾಕ್ಕೆ ಹೊರಟ ಕೊಡಗಿನ ಐದು ಆನೆಗಳು

ಇತ್ತೀಚೆಗಷ್ಟೇ ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಕಾರು ಅಪಘಾತದಲ್ಲಿ ಮೂವರು ಮಹಿಳೆಯರು ಮತ್ತು ತಮಿಳುನಾಡು ಶಾಸಕರ ಪುತ್ರ ಸೇರಿದಂತೆ 7 ಯುವಕರು ಮೃತಪಟ್ಟಿದ್ದರು.

ಪೊಲೀಸರ ಪ್ರಕಾರ, ಅತಿ ವೇಗದಲ್ಲಿದ್ದ ಆಡಿ ಕ್ಯೂ 3 ಸಮತೋಲನ ಕಳೆದುಕೊಂಡಿತು. ಪಾದಚಾರಿ ಮಾರ್ಗಕ್ಕೆ ನುಗ್ಗಿ ಕೋರಮಂಗಲ ಪೊಲೀಸ್ ಠಾಣೆ ಬಳಿ 80 ಅಡಿ ರಸ್ತೆಯ ಮಂಗಳ ಕನ್ವೆನ್ಷನ್ ಹಾಲ್ ಬಳಿಯ ಬ್ಯಾಂಕ್ ಕಟ್ಟಡಕ್ಕೆ ಅಪ್ಪಳಿಸಿತು. ಹೊಸೂರಿನ ಡಿಎಂಕೆ ಶಾಸಕ ವೈ ಪ್ರಕಾಶ್ ಪುತ್ರ ಕರುಣಾ ಸಾಗರ್ (28) ಸಹ ಈ ಕಾರಿನಲ್ಲಿದ್ದರು. ಅಲ್ಲದೆ, ಈ ಅಪಘಾತದಲ್ಲಿ ಬಿಂದು ಸಿ (25), ಸಾಗರ್ ಸಂಬಂಧಿ ಮತ್ತು ಖಾಸಗಿ ಸಂಸ್ಥೆಯೊಂದರ ಉದ್ಯೋಗಿ; ಧನುಷಾ ಎಂ (29), ದಂತವೈದ್ಯರು; ಅಕ್ಷಯ್ ಗೋಯೆಲ್ (25), ಕಾರ್ ಶೋರೂಂನಲ್ಲಿ ಮಾರಾಟ ಸಹವರ್ತಿ; ರೋಹಿತ್ ಲದ್ವಾ (23), ಬೈಜೂಸ್‌ನಲ್ಲಿ ವ್ಯಾಪಾರ ಅಭಿವೃದ್ಧಿ ಕಾರ್ಯನಿರ್ವಾಹಕ; ಇಶಿತಾ ಬಿಸ್ವಾಸ್ (21), ಎಂಎನ್‌ಸಿಯಲ್ಲಿ ಕೆಲಸ ಮಾಡುತ್ತಿದ್ದಾರೆ; ಮತ್ತು ಉತ್ಸವ್ ಕುಮಾರ್ (25), ಅಕೌಂಟೆಂಟ್ ಎಂಬುವರು ಮೃತಪಟ್ಟಿದ್ದಾರೆ.

ಎಲ್ಲಾ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದರಿಂದಲೇ ಈ ಘಟನೆ ಸಂಭವಿಸಿದೆ ಎಂದು ಜಂಟಿ ಪೊಲೀಸ್ ಆಯುಕ್ತರು (ಟ್ರಾಫಿಕ್) ಬಿ. ಆರ್ ರವಿಕಾಂತೇಗೌಡ ಘಟನೆಯ ಸಂಬಂಧ ಹೇಳಿಕೆ ನೀಡಿದ್ದರು.

"ಆರು ಜನರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದರು.. ಅವರಲ್ಲಿ ಯಾರೂ ಸೀಟ್ ಬೆಲ್ಟ್ ಧರಿಸಿರಲಿಲ್ಲ ಹಾಗಾಗಿ   ಏರ್ ಬ್ಯಾಗ್‌ಗಳು ತೆರೆಯಲು ವಿಫಲವಾಗಿವೆ ಎಂದೂ ಅವರು ಈ ಭೀಕರ ಅಪಘಾತದ ಬಗ್ಗೆ ಹೇಳಿದ್ದರು.

ಇದನ್ನೂ ಓದಿ: ಇಂದಿನಿಂದ ವಿಧಾನ ಮಂಡಲ ಅಧಿವೇಶನ; ವಿಧಾನಸೌಧದ ಸುತ್ತ ನಿಷೇಧಾಜ್ಞೆ ಜಾರಿ

ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರು ವಾಹನ ಚಾಲನೆ ಮಾಡುವಾಗ ಬೇಜವಾಬ್ದಾರಿಯಾಗಿ ವರ್ತಿಸುತ್ತಾರೆ. ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಜೀವಕ್ಕೆ ಅಪಾಯ ತಂದುಕೊಳ್ಳುವುದು ಅವರಿಗೆ ಆಟವಾಗಿದೆ.


First published: