Zameer Ahmed Khan: ದಲಿತ ಸ್ವಾಮೀಜಿ ಎಂಜಲು ತಿಂದ ಜಮೀರ್ ಅಹ್ಮದ್ ಖಾನ್: ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು?

ಸೋಶಿಯಲ್ ಮೀಡಿಯಾದಲ್ಲಿ ಜಮೀರ್ ಅವರ ವಿಡಿಯೋಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ಇದೊಂದು ರಾಜಕೀಯ ಅಸ್ತ್ರ ಎಂದು ಹೇಳಿದ್ದಾರೆ. ಟ್ವಟರ್ ನಲ್ಲಿ ಎರಡು ಸಾವಿರಕ್ಕೂ ಅಧಿಕ ವ್ಯೂವ್ ಬಂದಿವೆ.

ಜಮೀರ್ ಅಹ್ಮದ್ ಖಾನ್

ಜಮೀರ್ ಅಹ್ಮದ್ ಖಾನ್

  • Share this:
ಚಾಮರಾಜಪೇಟೆಯ (Chamarajapete) ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ (Congress MLA Zameer Ahmed Khan) ಭ್ರಾತೃತ್ವ ಸಂದೇಶ ಸಾರಲು ದಲಿತ ಸ್ವಾಮೀಜಿಯೊಬ್ಬರ (Dalit Swamiji) ಎಂಜಲು ತಿಂದಿದ್ದಾರೆ. ಈ ವಿಡಿಯೋವನ್ನು (Video) ಟ್ವಿಟ್ಟರ್ ನಲ್ಲಿ (Twitter) ಹಂಚಿಕೊಂಡಿರುವ ಜಮೀರ್ ಅಹ್ಮದ್ ಖಾನ್, ಜಾತಿ, ಧರ್ಮಗಳೆಲ್ಲವನ್ನೂ ಮೀರಿದ್ದು ಮಾನವೀಯತೆ. ನಮ್ಮ ನಡುವಿನ ಮನುಷ್ಯ ಸಂಬಂಧಗಳಿಗೆ ಜಾತಿ, ಧರ್ಮಗಳು ಎಂದಿಗೂ ಅಡ್ಡಬರಬಾರದು. ನಾನು, ನೀವು, ಎಲ್ಲರೂ ಮನುಷ್ಯ ಜಾತಿ. ಮನುಷ್ಯನಾಗಿ ಬಾಳುವುದೇ ನಿಜವಾದ ಧರ್ಮ ಎಂದು ಬರೆದುಕೊಂಡಿದ್ದಾರೆ. ಕೊನೆಗೆ ಸಾಮರಸ್ಯ ಮತ್ತು ಮಾನವೀಯತೆ ಎಂಬ ಎರಡು ಹ್ಯಾಶ್ ಟ್ಯಾಗ್ ಸಹ ಬಳಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ (Viral) ಆಗಿದೆ.

ಭಾನುವಾರ ಅಂಬೇಡ್ಕರ್ ಜಯಂತಿ (Ambedkar Jayanti) ಮತ್ತು ಈದ್ ಮಿಲಾದ್ (Eid Milad) ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ದಲಿತ ಸ್ವಾಮೀಜಿಗಳು ಸೇರಿದಂತೆ ಎರಡೂ ಸಮುದಾಯದ ಮುಖಂಡರು ಭಾಗಿಯಾಗಿದ್ದರು. ಇದೇ ಕಾರ್ಯಕ್ರಮಕ್ಕೆ ಶಾಸಕರು ಸಹ ತೆರಳಿದ್ದರು.

ಸ್ವಾಮೀಜಿ ಎಂಜಲು ತಿಂದ ಶಾಸಕರು

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಮೀರ್ ಅಹ್ಮದ್ ಖಾನ್, ಸಮಾಜಘಾತುಕ ಅಂಶಗಳು ಸಮುದಾಯಗಳ ನಡುವೆ ಬಿರುಕು ಮೂಡಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.

ಇದನ್ನೂ ಓದಿ:  Congress ಇಟಾಲಿಯನ್ ಶಿಕ್ಷಣ ನೀತಿ ತಂದ್ರೆ ಅದನ್ನ ನಾಗ್ಪುರ ನೀತಿಯಾಗಿ ಬದಲಿಸುತ್ತೇವೆ: BC Nagesh

ಈ ವೇಳೆ ಪಕ್ಕದಲ್ಲಿಯೇ ಕುಳಿತಿದ್ದ ಸ್ವಾಮೀಜಿ ಒಬ್ಬರಿಗೆ ಸಿಹಿ ತಿನ್ನಿಸಿದರು. ನಂತರ ಅದನ್ನ ಉಗುಳವಂತೆ ಹೇಳಿ, ಆ ಸಿಹಿಯನ್ನು ತಿಂದರು. ಇದನ್ನ ನೋಡಿದ ಅತಿಥಿಗಳೆಲ್ಲ ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದರು.

ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಪ್ರತಿಕ್ರಿಯೆ

ಸೋಶಿಯಲ್ ಮೀಡಿಯಾದಲ್ಲಿ ಜಮೀರ್ ಅವರ ವಿಡಿಯೋಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ಇದೊಂದು ರಾಜಕೀಯ ಅಸ್ತ್ರ ಎಂದು ಹೇಳಿದ್ದಾರೆ. ಟ್ವಟರ್ ನಲ್ಲಿ ಎರಡು ಸಾವಿರಕ್ಕೂ ಅಧಿಕ ವ್ಯೂವ್ ಬಂದಿವೆ.ಹಲಾಲ್ ಇಲ್ಲದ ಮಾಂಸ ತಿಂದು ತೋರಿಸಿ

ಆಯ್ತು ಖಾನ್ ಸಾಹೇಬ್ರೇ, ನೀವು ಮಾಡಿದ ಸಾಮರಸ್ಯ ಮೂಡಿಸೋ ಪ್ರಯತ್ನ ಬಹಳ‌ ಒಳ್ಳೆಯದು. ಮನುಷ್ಯನಾಗಿ ಬಾಳುವುದು ನಿಜವಾದ ಧರ್ಮ ಎಂದು ಹೇಳಿದ್ದೂ ಬಹಳ‌ ಸಂತೋಷ. ಉತ್ತರಪ್ರದೇಶದಲಿ ನಡೆದ ಘಟನೆ ಖಂಡನೀಯ ಕೂಡ. ಇಷ್ಟೆಲಾ ಮಾತಾಡೋ ನೀವು ಹಲಾಲ್ ಇಲ್ಲದ ಮಾಂಸ ತಿಂದು ತೋರಿಸಿ ನೋಡೋಣ. ಆಗ ಎಲ್ಲರೂ‌ ನಿಮ್ಮ ಮಾತನ್ನು ಒಪ್ಪಿಕೊಳ್ತಾರೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.

ಪುರಷೋತ್ತಮ್ ಎಂಬವರು ಪ್ರತಿಕ್ರಿಯೆಬ ನೀಡಿದ್ದು, Good job jameer anna good job. ಪಾದ ತೊಳೆದ ನೀರು ಕುಡಿಯುವುದು ಅತಿರೇಖ. ಒಬ್ಬರ ಎಂಜಲು ತಿನ್ನುವುದು ಅತಿರೇಖ ಹೇಗೆ ಆಗುತ್ತದೆ? ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಯಣ್ಣನ ಪಾಠ ಬೇಡ, ಟಿಪ್ಪು ಬಗ್ಗೆ ಐದು ಪುಟ ಪಾಠ ಬೇಕು: ಬಿ.ಸಿ.ನಾಗೇಶ್ ವ್ಯಂಗ್ಯ

ವಿಪಕ್ಷ ಅಧಿಕಾರದಲ್ಲಿದ್ದಾಗ ಒಂದು ಪೇಜ್ ಇದ್ದ ಟಿಪ್ಪು ಪಠ್ಯ ಆರು ಪೇಜ್ ಮಾಡಿದ್ರು. ಒಡೆಯರ್ ಪಠ್ಯ ಯಾಕೆ ಕಡಿತ ಮಾಡಿದ್ದು? ಆವಾಗ ಏಕೆ ಯಾರೂ ಪ್ರಶ್ನೆ ಮಾಡಲಿಲ್ಲ. ಮತ ಬ್ಯಾಂಕ್ ಗಾಗಿ ಹೀಗೆಲ್ಲ ಮಾಡಿದ್ರಾ? ಬರಗೂರು ರಾಮಚಂದ್ರಪ್ಪ (Baraguru Ramachandrappa) ತುಂಬಾ ಒಳ್ಳೆಯವರು. ಅವರಿಗೆ ಒತ್ತಡ ಹೇರಿ ಹೀಗೆಲ್ಲ ಮಾಡಿದ್ರಾ? ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC Nagesh) ಪ್ರಶ್ನಿಸಿದ್ದಾರೆ.ಇದನ್ನೂ ಓದಿ:  DK Shivakumar Vs Siddaramaiah: ಮುಯ್ಯಿಗೆ ಮುಯ್ಯಿ: ಸಿದ್ದರಾಮಯ್ಯಗೆ ಡಿಕೆಶಿ ಚೆಕ್ ಮೇಟ್ ಕೊಟ್ಟಿದ್ದು ಹೇಗೆ ಗೊತ್ತಾ?

ಇದರ ಜೊತೆಗೆ ಈಗಾಗಲೆ ತೀವ್ರ ವಿವಾದ ಎಬ್ಬಿಸಿರುವ ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಇನ್ನಷ್ಟು ದೊಡ್ಡದಾಗಿ ಲಕ್ಷಣ ಗೋಚರಿಸುತ್ತಿದೆ. ರೋಹಿತ್ ಚಕ್ರತೀರ್ಥ (Rohith Chakrathirtha) ನೇತೃತ್ವದ ಸಮಿತಿಯು ಇದೇ ಸಮಿತಿಗೆ ಪಿಯು ಪಠ್ಯ ಪುಸ್ತಕ ಪರಿಷ್ಕರಣೆಯ (2nd PU Text Book Revise) ಜವಾಬ್ದಾರಿಯನ್ನೂ ವಹಿಸಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
Published by:Mahmadrafik K
First published: