ಬೀದರ್​ನಲ್ಲೊಂದು ವಿಚಿತ್ರ ಪ್ರಕರಣ; ಕಳ್ಳತನಕ್ಕೆ ಬಂದವರು ಅವಲಕ್ಕಿ, ಉಪ್ಪಿಟ್ಟು ತಿಂದು ಹೋದರು!

ಬೀದರ್​ನಲ್ಲಿ ಬಹಳ ದಿನಗಳಿಂದ ಮನೆಗೆ ಬೀಗ ಹಾಕಿರುವುದನ್ನು ಗಮನಿಸಿದ ಕಳ್ಳರು ರಾತ್ರಿ ವೇಳೆ ಮನೆಯ ಹಿಂಬದಿ ಬಾಗಿಲು ಮುರಿದು ಒಳಗೆ ಪ್ರವೇಶಿಸಿದ್ದರು. ಕಳ್ಳತನಕ್ಕೆ ಬಂದಿದ್ದ ಕಳ್ಳರು ಅವಲಕ್ಕಿ, ಉಪ್ಪಿಟ್ಟು ಮಾಡಿಕೊಂಡು ತಿಂದು ಹೋಗಿದ್ದಾರೆ.

Sushma Chakre | news18-kannada
Updated:January 20, 2020, 12:34 PM IST
ಬೀದರ್​ನಲ್ಲೊಂದು ವಿಚಿತ್ರ ಪ್ರಕರಣ; ಕಳ್ಳತನಕ್ಕೆ ಬಂದವರು ಅವಲಕ್ಕಿ, ಉಪ್ಪಿಟ್ಟು ತಿಂದು ಹೋದರು!
ಸಾಂದರ್ಭಿಕ ಚಿತ್ರ
  • Share this:
ಬೀದರ್ (ಜ. 20): ಕದಿಯಲು ಬರುವ ಕಳ್ಳರು ಮನೆಯ ಚಿನ್ನ, ಬೆಳ್ಳಿ, ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಹೋಗುವುದು ಸಾಮಾನ್ಯ. ಆದರೆ, ಬೀದರ್​ನ ಕಳ್ಳರು ಕದಿಯಲು ಬಂದ ಮನೆಯಲ್ಲಿ ಅಡುಗೆ ಮಾಡಿ, ಊಟ ಮಾಡಿಕೊಂಡು ಹೋಗಿದ್ದಾರೆ!

ವಿಚಿತ್ರವಾದರೂ ಇದು ಸತ್ಯ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಬಸವರಾಜ ಹೊನ್ನಪ್ಪನವರ್ ಎಂಬುವವರ ಮನೆಗೆ ಕನ್ನ ಹಾಕಲು ಬಂದಿದ್ದ ಕಳ್ಳರು ಅವರ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಕೃತ್ಯ ಎಸಗಿದ್ದಾರೆ. ಮನೆಗೆ ಬಂದ ಮಾಲೀಕರಿಗೆ ಮನೆಯಲ್ಲಿದ್ದ ಕಪಾಟು ಹಾಗೂ ಇತರೆ ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವುದು ಕಂಡು ಗಾಬರಿಯಾಗಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಇದನ್ನೂ ಓದಿ: ಕನ್ನಡ ಕಲಿತು ಶಂಕರ್​ನಾಗ್​ ಹಾಡಿಗೆ ದನಿಯಾದ ಲೇಡಿ ಸಿಂಗಂ; ಐಪಿಎಸ್ ಅಧಿಕಾರಿ ಇಶಾ ಪಂತ್ ವಿಡಿಯೋ ವೈರಲ್

ಕಳ್ಳತನಕ್ಕೆ ಬಂದಿದ್ದ ಕಳ್ಳರು ಅಡುಗೆ ಮನೆಗೆ ಹೋಗಿ ಅವಲಕ್ಕಿ, ಉಪ್ಪಿಟ್ಟು ಮಾಡಿಕೊಂಡು ತಿಂದು ಹೋಗಿದ್ದಾರೆ. ಬಸವರಾಜ ಹೊನ್ನಪ್ಪನವರ್ ತಮ್ಮ ಹೆಂಡತಿಗೆ ಅನಾರೋಗ್ಯವಾಗಿದ್ದರಿಂದ ಆಕೆಗೆ ಚಿಕಿತ್ಸೆ ಕೊಡಿಸಲು ಬೆಂಗಳೂರಿಗೆ ತೆರಳಿದ್ದರು. ಹೀಗಾಗಿ, 20 ದಿನಗಳಿಂದ ಮನೆಗೆ ಬೀಗ ಹಾಕಲಾಗಿತ್ತು.

ಬಹಳ ದಿನಗಳಿಂದ ಮನೆಗೆ ಬೀಗ ಹಾಕಿರುವುದನ್ನು ಗಮನಿಸಿದ ಕಳ್ಳರು ರಾತ್ರಿ ವೇಳೆ ಮನೆಯ ಹಿಂಬದಿ ಬಾಗಿಲು ಮುರಿದು ಒಳಗೆ ಪ್ರವೇಶಿಸಿದ್ದರು. ಮನೆಯಲ್ಲಿರುವ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಕದ್ದಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಮಂಠಾಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

(ವರದಿ: ಸಿದ್ದು ಸತ್ಯಣ್ಣನವರ್)
First published:January 20, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ