Bengaluru: ಮಕ್ಕಳಲ್ಲಿ ಹೆಚ್ಚಾಗುತ್ತಿದೆ ವೈರಲ್ ಸೋಂಕುಗಳು: ವೈದ್ಯರು ಹೇಳುವುದೇನು ನೋಡಿ

ಶಾಲೆಗಳು ಎಂದಿನಂತೆ ಪ್ರಾರಂಭವಾಗಿ ಕೆಲವು ತಿಂಗಳುಗಳೆ ಕಳೆದಿವೆ ಮತ್ತು ಈಗ ಬೆಂಗಳೂರಿನಲ್ಲಿ ಶಾಲೆಗೆ ಹೋಗುತ್ತಿರುವ ಮಕ್ಕಳಲ್ಲಿ ಎಂದರೆ ಅದರಲ್ಲೂ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಈ ವೈರಲ್ ಜ್ವರ ಮತ್ತು ಶ್ವಾಸನಾಳದ ಸೋಂಕುಗಳ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಬೆಂಗಳೂರಿನ ವೈದ್ಯರು ಗಮನಿಸಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಶಾಲೆಗಳು (School) ಎಂದಿನಂತೆ ಪ್ರಾರಂಭವಾಗಿ ಕೆಲವು ತಿಂಗಳುಗಳೆ ಕಳೆದಿವೆ ಮತ್ತು ಈಗ ಬೆಂಗಳೂರಿನಲ್ಲಿ (Bengaluru) ಶಾಲೆಗೆ ಹೋಗುತ್ತಿರುವ ಮಕ್ಕಳಲ್ಲಿ (Children) ಎಂದರೆ ಅದರಲ್ಲೂ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಈ ವೈರಲ್ ಜ್ವರ ಮತ್ತು ಶ್ವಾಸನಾಳದ ಸೋಂಕುಗಳ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಬೆಂಗಳೂರಿನ ವೈದ್ಯರು (Doctors) ಗಮನಿಸಿದ್ದಾರೆ. ಒಂದು ತರಗತಿಯಲ್ಲಿ ಕನಿಷ್ಠ 15 ರಿಂದ 20 ವಿದ್ಯಾರ್ಥಿಗಳು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಅನೇಕ ಪ್ರಾಥಮಿಕ ಶಾಲಾ ಶಿಕ್ಷಕರು ಹೇಳಿದರೆ, ಮಕ್ಕಳ ತಜ್ಞರು (Pediatrician) ಕಳೆದ ಮೂರು ವಾರಗಳಿಂದ ಪ್ರತಿ ನಾಲ್ಕು ಮಕ್ಕಳಲ್ಲಿ ಒಬ್ಬರು ವೈರಲ್ ಜ್ವರದಂತಹ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಹೇಳಿದರು.

ಆರಂಭಿಕ ಸೋಂಕಿನಿಂದ ಚೇತರಿಸಿಕೊಂಡ ಒಂದು ವಾರದೊಳಗೆ ಅನೇಕ ಮಕ್ಕಳಲ್ಲಿ ಮತ್ತೆ ಆ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ ಎಂದು ಹೇಳಿದ್ದಾರೆ. ಪ್ರತಿಕೂಲ ಹವಾಮಾನ ಮತ್ತು ಶಾಲೆಗಳ ಪುನರಾರಂಭ ಇದಕ್ಕೆ ಕಾರಣ ಎಂದು ಹೇಳಿದ ವೈದ್ಯರು, ಫ್ಲೂ ತರಹದ ಸೋಂಕಿನ ಹೆಚ್ಚಿನ ವರದಿಗಳು ವೈರಲ್ ನ್ಯುಮೋನಿಯಾವನ್ನು ಅಭಿವೃದ್ಧಿಪಡಿಸುತ್ತಿವೆ ಎಂದು ಹೇಳಿದರು.

ಆಸ್ಪತ್ರೆಗಳಲ್ಲಿ ಹೆಚ್ಚುತ್ತಿರುವ ರೋಗಿಗಳ ಸಂಖ್ಯೆ

ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಪೀಡಿಯಾಟ್ರಿಕ್ಸ್ ಪ್ರೊಫೆಸರ್ ಚಿಕ್ಕನರಸ ರೆಡ್ಡಿ ಅವರು ಮಾತನಾಡಿ “ಆಸ್ಪತ್ರೆಯಲ್ಲಿ ಪ್ರತಿದಿನ 120ಕ್ಕೂ ಹೆಚ್ಚು ಮಕ್ಕಳು ಜ್ವರ, ನೆಗಡಿ, ಕೆಮ್ಮು, ವಾಂತಿ ಮತ್ತು ಅತಿಸಾರದ ಕಾರಣಗಳಿಂದ ಚಿಕಿತ್ಸೆಯನ್ನು ಪಡೆಯಲು ಬರುತ್ತಿದ್ದಾರೆ.

ಈ ರೋಗಲಕ್ಷಣಗಳು ಕೋವಿಡ್ ಅನ್ನು ಹೋಲುತ್ತವೆಯಾದರೂ, ಅವುಗಳನ್ನು ಪರೀಕ್ಷಿಸಲಾಗುತ್ತಿಲ್ಲ. ನಾವು ಅವರಿಗೆ ರೋಗಲಕ್ಷಣಾತ್ಮಕವಾಗಿ ಚಿಕಿತ್ಸೆ ನೀಡುತ್ತಿದ್ದೇವೆ. ಶಾಲೆಗಳು ಪುನರಾರಂಭಗೊಳ್ಳುವುದರೊಂದಿಗೆ ಈ ವರ್ಷ ಈ ಪ್ರಕರಣಗಳು ಹೆಚ್ಚಾಗಿವೆ" ಎಂದು ಅವರು ಹೇಳಿದರು.

ಇನ್ನೂ ಕೆ.ಸಿ. ಜನರಲ್ ಆಸ್ಪತ್ರೆಯ ಹಿರಿಯ ಮಕ್ಕಳ ತಜ್ಞ ಎಸ್.ಆರ್.ಲಕ್ಷ್ಮೀಪತಿ ಅವರು ಮಾತನಾಡಿ, ಆಸ್ಪತ್ರೆಯ ಮಕ್ಕಳ ವಾರ್ಡ್ ಈಗಾಗಲೇ ಭರ್ತಿಯಾಗಿದ್ದು, ಹಲವಾರು ಸೋಂಕಿತ ಮಕ್ಕಳು ದಾಖಲಾಗುವ ಸಾಧ್ಯತೆಗಳಿವೆ. "ಬಹುತೇಕ ಎಲ್ಲಾ ಮಕ್ಕಳಲ್ಲಿ ಫ್ಲೂ ಮತ್ತು ಶ್ವಾಸನಾಳದ ಸೋಂಕು ಮತ್ತು ವೈರಲ್ ನ್ಯುಮೋನಿಯಾ ಇದೆ" ಎಂದು ಅವರು ಹೇಳಿದರು.

ಮಕ್ಕಳಿಗೆ ಈ ವೈರಲ್ ಸೋಂಕು ಹೇಗೆ ತಗಲುತ್ತದೆ

ಮುನ್ನೆಚ್ಚರಿಕೆಗಳನ್ನು ಸಲಹೆ ನೀಡಿದ ವೈದ್ಯರು, ಶಾಲೆಗಳನ್ನು ಹೊರತುಪಡಿಸಿ, ಮಕ್ಕಳು ತಮ್ಮ ಮನೆಗಳಲ್ಲಿ ವಯಸ್ಕರ ಮೂಲಕವೂ ಸೋಂಕಿಗೆ ಒಳಗಾಗುತ್ತಿದ್ದಾರೆ ಎಂದು ಹೇಳಿದರು. "ಪೋಷಕರು ಹೆಚ್ಚಿನ ಸಮಯದಲ್ಲಿ ತಮ್ಮ ಮಕ್ಕಳಿಗೆ ಸೋಂಕುಗಳನ್ನು ವರ್ಗಾಯಿಸುತ್ತಿದ್ದಾರೆ.

ಅವರು ಸಾಮಾಜಿಕ ಕಾರ್ಯಗಳಿಗೆ ಹೋಗುವಾಗ ಅವರು ಮಾಸ್ಕ್ ಧರಿಸುವುದು ಒಳ್ಳೆಯದು. ಮಗು ಅನಾರೋಗ್ಯದಿಂದ ಬಳಲುತ್ತಿದ್ದರೆ, ಮನೆಯಲ್ಲಿಯೇ ಔಷಧಿ ನೀಡುವ ಬದಲು ಆ ಮಗುವನ್ನು ಆಸ್ಪತ್ರೆಗೆ ಕಡೆದುಕೊಂಡು ಹೋಗಿ ಕೂಡಲೇ ವೈದ್ಯಕೀಯ ಸಲಹೆ ಪಡೆಯಬೇಕು" ಎಂದು ಅವರು ಹೇಳಿದರು.

ಇದನ್ನೂ ಓದಿ:  Covid 19: ಕರ್ನಾಟಕದಲ್ಲಿ ಹೆಚ್ಚಾಗುತ್ತಾ ಕೋವಿಡ್ ಅಬ್ಬರ? 7 ರಾಜ್ಯಗಳಿಗೆ ಕೇಂದ್ರದಿಂದ ಎಚ್ಚರಿಕೆ!

ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ಮಾಜಿ ನಿರ್ದೇಶಕ ಶಿವಾನಂದ ಅವರು ಮಾತನಾಡಿ “ಈ ಮಕ್ಕಳಲ್ಲಿರುವ ರೋಗಲಕ್ಷಣಗಳು ಕೋವಿಡ್ ನಂತೆ ಇದ್ದರೂ, ವೈದ್ಯರು ಕೆಮ್ಮಿನ ಪ್ರಕಾರದಿಂದ ವ್ಯತ್ಯಾಸವನ್ನು ಗುರುತಿಸಬಹುದು. "ನಾವು ಈಗ ನೋಡುತ್ತಿರುವ ಮಕ್ಕಳು ಕೋವಿಡ್-ಪ್ರೇರಿತ ಕೆಮ್ಮಿಗಿಂತ ಭಿನ್ನವಾಗಿ ದೀರ್ಘಕಾಲದ ಕೆಮ್ಮಿನೊಂದಿಗೆ ಆಸ್ಪತ್ರೆಗೆ ಬರುತ್ತಿದ್ದಾರೆ. ಇದಲ್ಲದೆ, ಅನೇಕರು ಚೇತರಿಸಿಕೊಂಡ ಒಂದು ವಾರದೊಳಗೆ ಇದೇ ರೀತಿಯ ರೋಗಲಕ್ಷಣಗಳೊಂದಿಗೆ ಮತ್ತೆ ಬರುತ್ತಿದ್ದಾರೆ" ಎಂದು ವೈದ್ಯರು ತಿಳಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿನ ವೈದ್ಯರು ಹೇಳುವುದೇನು?

ಖಾಸಗಿ ಆಸ್ಪತ್ರೆಗಳು ಸಹ ಇದೇ ರೀತಿಯ ದೃಶ್ಯಕ್ಕೆ ಸಾಕ್ಷಿಯಾಗುತ್ತಿವೆ. ಆಸ್ಟರ್ ಆರ್.ವಿ.ಆಸ್ಪತ್ರೆಯ ಪೀಡಿಯಾಟ್ರಿಕ್ ಎಮರ್ಜೆನ್ಸಿ ಮತ್ತು ಪೀಡಿಯಾಟ್ರಿಕ್ಸ್ ಸಮಾಲೋಚಕರಾದ ಶ್ರೀನಿವಾಸ್ ಅವರು “ವೈರಲ್ ಸೋಂಕಿನ ಹೊರತಾಗಿ, ಕೆಲವರು ಜ್ವರ, ತೀವ್ರ ಮೈ ಕೈ ನೋವು, ವಾಂತಿ ಮತ್ತು ಕಿಬ್ಬೊಟ್ಟೆಯ ನೋವಿನಂತಹ ಡೆಂಗ್ಯೂದಂತಹ ರೋಗಲಕ್ಷಣಗಳನ್ನು ಸಹ ವರದಿ ಮಾಡುತ್ತಿದ್ದಾರೆ ಎಂದು ಹೇಳಿದರು.

"ತಮ್ಮ ಮಗುವಿಗೆ 48 ಗಂಟೆಗಳಿಗಿಂತ ಹೆಚ್ಚು ಕಾಲ ಹೆಚ್ಚಿನ ಜ್ವರವಿದ್ದರೆ ಮತ್ತು ಬಿಟ್ಟುಬಿಡದ ಕೆಮ್ಮು ಅಥವಾ ವಾಂತಿ ಮತ್ತು ಹೊಟ್ಟೆ ನೋವು ಇದ್ದರೆ ಪೋಷಕರು ತಕ್ಷಣ ವೈದ್ಯಕೀಯ ಸಲಹೆ ಪಡೆಯಬೇಕು" ಎಂದು ವೈದ್ಯರು ಹೇಳಿದರು.

ಇದನ್ನೂ ಓದಿ:  Midday Meal: ಟೀಚರ್ ಇವತ್ತು ನಮಗೆ ಮೊಟ್ಟೆ ಬೇಡ, ಬಾಳೆಹಣ್ಣು ಕೊಡಿ; ಸಂದಿಗ್ಧ ಪರಿಸ್ಥಿತಿಯಲ್ಲಿ ಶಿಕ್ಷಕರು

ಶೇಷಾದ್ರಿಪುರಂ ನ ಅಪೊಲೊ ಆಸ್ಪತ್ರೆಯ ಕನ್ಸಲ್ಟೆಂಟ್ ನಿಯೋನಾಟಾಲಜಿಸ್ಟ್ ರಶ್ಮಿ ಜಿನಕೇರಿ ಅವರು “ಮಳೆಗಾಲದಲ್ಲಿ ವೈರಲ್ ಸೋಂಕುಗಳು ಸಾಮಾನ್ಯವಾಗಿದೆ ಮತ್ತು ಮಕ್ಕಳಾ ಪ್ರತಿರಕ್ಷಣಾ ವ್ಯವಸ್ಥೆಯು ಸಾಕಷ್ಟು ರಕ್ಷಣಾ ಪ್ರತಿಕ್ರಿಯೆಯನ್ನು ಹೆಚ್ಚಿಸಲು ವಿಫಲವಾಗಿದೆ,

ಇದು ಮಕ್ಕಳು ಮತ್ತು ವಯಸ್ಕರಲ್ಲಿ ಹೆಚ್ಚು ಸಾಂಕ್ರಾಮಿಕವಾಗಿರುವ ವೈರಲ್ ಸೋಂಕುಗಳ ತ್ವರಿತ ಹರಡುವಿಕೆಗೆ ಕಾರಣವಾಗುತ್ತದೆ. ಪೋಷಕರು ತಮ್ಮ ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದರೆ ಅವರನ್ನು ಮನೆಯಲ್ಲಿಯೇ ಇಟ್ಟುಕೊಳ್ಳಬೇಕು. ಇದು ಇತರ ಮಕ್ಕಳಿಗೂ ಸಹ ಹರಡಬಹುದು" ಎಂದು ಅವರು ಹೇಳಿದರು.
Published by:Ashwini Prabhu
First published: