Viral Fever: ಶಾಲಾ ಮಕ್ಕಳನ್ನೇ ಹೆಚ್ಚೆಚ್ಚು ಕಾಡುವ ವೈರಲ್ ಜ್ವರ; ಇಲ್ಲಿದೆ ಕಾರಣ...

ವೈರಲ್ ಜ್ವರದಿಂದ ಬಳಲುತ್ತಿರುವ ಮಗುವನ್ನು ಶಾಲೆಗೆ ಕಳಿಸದೇ ಮನೆಯಲ್ಲೇ ಔಷಧಿ, ವಿಶ್ರಾಂತಿ ಸಿಗುವಂತೆ ಮಾಡೋದು ಬಹಳ ಮುಖ್ಯ. ಆದರೆ, ಶಾಲೆಗಳಲ್ಲಿ ಶೇ. 100ರಷ್ಟು ಹಾಜರಿ ಕಡ್ಡಾಯ ಎನ್ನುವುದು ಈ ಮಕ್ಕಳ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ.

Sushma Chakre | news18-kannada
Updated:September 10, 2019, 9:23 AM IST
Viral Fever: ಶಾಲಾ ಮಕ್ಕಳನ್ನೇ ಹೆಚ್ಚೆಚ್ಚು ಕಾಡುವ ವೈರಲ್ ಜ್ವರ; ಇಲ್ಲಿದೆ ಕಾರಣ...
ಸಾಂದರ್ಭಿಕ ಚಿತ್ರ
Sushma Chakre | news18-kannada
Updated: September 10, 2019, 9:23 AM IST
ಬೆಂಗಳೂರು (ಸೆ. 9): ರಾಜ್ಯದಲ್ಲಿ ಪ್ರತಿದಿನ ಬದಲಾಗುತ್ತಿರುವ ಹವಾಮಾನದಿಂದಾಗಿ ವೈರಲ್ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಬೆಂಗಳೂರಿನಲ್ಲಿ ಶಾಲಾ ಮಕ್ಕಳಿಗೆ ಹೆಚ್ಚಾಗಿ ಈ ವೈರಲ್ ಜ್ವರದ ಸಮಸ್ಯೆ ಕಾಡುತ್ತಿದೆ. ಹಾಗಿದ್ದರೆ ಶಾಲೆಗಳು ವೈರಲ್ ಜ್ವರದ ಮೂಲತಾಣವಾಗಿ ಬದಲಾಗುತ್ತಿರುವುದಾದರೂ ಹೇಗೆ? ಇಲ್ಲಿದೆ ಸಂಪೂರ್ಣ ವಿವರ...

ಒಂದು ಮಗುವಿಗೆ ವೈರಲ್ ಫೀವರ್ ಬಂದಿದೆ ಅಂದರೆ ಔಷಧೋಪಚಾರಗಳ ಜೊತೆ ಅತೀ ಮುಖ್ಯವಾಗಿ ಬೇಕಾಗಿರೋದು ವಿಶ್ರಾಂತಿ. ವೈದ್ಯರು ಹೇಳೋ ಪ್ರಕಾರ ಕನಿಷ್ಠ 3ರಿಂದ 5 ದಿನಗಳಾದರೂ ವಿಶ್ರಾಂತಿ ಪಡೆದರೆ ಮಾತ್ರ ಮಗು ಸಂಪೂರ್ಣವಾಗಿ ಗುಣವಾಗುತ್ತದೆ. ಈಗ ಬೆಂಗಳೂರಿನ ಹವಾಮಾನ ಕೂಡ ಚೆನ್ನಾಗಿಲ್ಲ. ಮೋಡ ಕವಿದ ವಾತಾವರಣ, ಬಿಟ್ಟು ಬಿಟ್ಟು ಬರುವ ಮಳೆಯಿಂದಾಗಿ ವೈರಾಣುಗಳ ಸಂಖ್ಯೆ ವಿಪರೀತ ಹೆಚ್ಚುತ್ತದೆ. ಹಾಗಾಗಿ ವೈರಲ್ ಜ್ವರದಿಂದ ಬಳಲುವ ಮಕ್ಕಳ ಸಂಖ್ಯೆಯೂ ಜಾಸ್ತಿಯಾಗಿದೆ. ಅದರಲ್ಲೂ ಹೆಚ್ಚಾಗಿ 6 ವರ್ಷದೊಳಗಿನ ಮಕ್ಕಳಲ್ಲಿ ವೈರಲ್ ಫೀವರ್ ಜಾಸ್ತಿ ಅಂತಾರೆ ವೈದ್ಯರು.

PHOTOS: ಇವರೇ ನೋಡಿ ಒಂದು ದಿನದ ಮಟ್ಟಿಗೆ ಬೆಂಗಳೂರು ಪೊಲೀಸ್​ ಆಯುಕ್ತರಾದವರು

6 ವರ್ಷದೊಳಗಿನ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಬಹಳ ಕಡಿಮೆಯಿರುತ್ತದೆ. ಆದ್ದರಿಂದ ಸೋಂಕು ತಗುಲಿರುವ ಮಗುವಿನಿಂದ ಉಳಿದ ಮಕ್ಕಳಿಗೆ ಬಹಳ ಸುಲಭವಾಗಿ ಸೋಂಕು ಹರಡಿಬಿಡುತ್ತದೆ. ನರ್ಸರಿ, ಪ್ರಿ ಸ್ಕೂಲ್ ಮಕ್ಕಳಲ್ಲಿ ವೈರಲ್ ಫೀವರ್ ಹಾವಳಿ ಜೋರಾಗೋಕೆ ಇದೇ ಮುಖ್ಯ ಕಾರಣ. ಒಬ್ಬರಿಗೆ ಜ್ವರ ಬಂದರೂ ಅದು ಬೇಗ ಬೇರೆ ಮಕ್ಕಳಿಗೆ ಹರಡುತ್ತದೆ ಎನ್ನುತ್ತಾರೆ ಎನ್​ಎಸ್​ಎನ್​ಎಂಸಿ ಆಸ್ಪತ್ರೆ ಮಕ್ಕಳ ರೋಗ ತಜ್ಞ ಡಾ. ರವಿಶಂಕರ್.

ವೈರಲ್ ಜ್ವರದಿಂದ ಬಳಲುತ್ತಿರುವ ಮಗುವನ್ನು ಶಾಲೆಗೆ ಕಳಿಸದೇ ಮನೆಯಲ್ಲೇ ಔಷಧಿ, ವಿಶ್ರಾಂತಿ ಸಿಗುವಂತೆ ಮಾಡೋದು ಬಹಳ ಮುಖ್ಯ. ಆದರೆ, ಶಾಲೆಗಳಲ್ಲಿ ಶೇ. 100ರಷ್ಟು ಹಾಜರಿ ಕಡ್ಡಾಯ ಎನ್ನುವುದು ಈ ಮಕ್ಕಳ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. 5 ದಿನ ವಿಶ್ರಾಂತಿ ಪಡೆಯಬೇಕಾದ ಮಗುವನ್ನು ಹಾಜರಾತಿ ಕಡಿಮೆಯಾಗುತ್ತದೆ ಎಂದು ಎರಡೇ ದಿನಕ್ಕೆ ಮರಳಿ ಶಾಲೆಗೆ ಕಳಿಸಿಬಿಡುತ್ತಾರೆ. ಇದರಿಂದಾಗಿ ಇನ್ನೂ ವೈರಾಣು ಸೋಂಕು ಇರೋ ಆ ಮಗುವಿನಿಂದ ತರಗತಿಯ ಉಳಿದ ಮಕ್ಕಳಿಗೆ ಸುಲಭವಾಗಿ ಸೋಂಕು ಹರಡಿಬಿಡುತ್ತದೆ.

ಹೊಸ ಸಂಚಾರಿ ನಿಯಮದಡಿ ಬೆಂಗಳೂರಲ್ಲಿ ದಾಖಲಾದ ಪ್ರಕರಣಗಳೆಷ್ಟು? ಸಂಗ್ರಹವಾದ ದಂಡ ಎಷ್ಟು? ಇಲ್ಲಿದೆ ಮಾಹಿತಿ

ಮಕ್ಕಳ ಪೋಷಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಹಾಗೇ, ಕ್ಲಾಸ್ ಟೆಸ್ಟ್, ಪ್ರಾಜೆಕ್ಟ್ ಮುಂತಾದ ಸಬೂಬು ಹೇಳಿ ಮಕ್ಕಳ ಹಾಜರಾತಿ ಕಡ್ಡಾಯ ಮಾಡೋದನ್ನು ಶಾಲೆಗಳೂ ನಿಲ್ಲಿಸಬೇಕಿದೆ. ಅನಾರೋಗ್ಯ ಕಾರಣವಿದ್ದಾಗ ಮಗುವಿನ ವಿಶ್ರಾಂತಿಗೆ ಹೆಚ್ಚಿನ ಆದ್ಯತೆ ನೀಡಿ ಅಗತ್ಯ ರಜೆ ನೀಡುವುದು ಬಹಳ ಅವಶ್ಯ.
Loading...

ಒಟ್ಟಿನಲ್ಲಿ ಶಾಲೆಗಳ ಶೇ. 100ರಷ್ಟು ಹಾಜರಾತಿಯ ಒತ್ತಡದಲ್ಲಿ ಪೋಷಕರ ಒತ್ತಾಯಕ್ಕೆ ಮಣಿದು ಮಕ್ಕಳ ಆರೋಗ್ಯ ಕೈಕೊಡುತ್ತಿದೆ. ಜ್ವರದಿಂದ ಬಳಲೋ ಮಗು ಶಾಲೆಗೆ ಬಂದರೂ ಕಲಿಕೆಯಲ್ಲಿ ಗಮನ ಹರಿಸೋ ಸ್ಥಿತಿಯಲ್ಲಿ ಇರುವುದಿಲ್ಲ. ಒಂದು ಮಗುವಿನಿಂದ ಶಾಲೆಯ ಎಲ್ಲಾ ಮಕ್ಕಳಿಗೆ ಸುಲಭವಾಗಿ ಸೋಂಕು ಹರಡಿ ವೈರಲ್ ಫೀವರ್ ಎಲ್ಲೆಡೆ ತಾಂಡವವಾಡುತ್ತಿದೆ. ಮಕ್ಕಳ ಆರೋಗ್ಯದ ವಿಚಾರದಲ್ಲಾದರೂ ಪೋಷಕರು ಮತ್ತು ಶಾಲೆಗಳು ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾಗಿದೆ.

(ವರದಿ: ಸೌಮ್ಯ ಕಳಸ)

First published:September 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...