Ashwath Narayan: ಸಚಿವ ಅಶ್ವತ್ಥ ನಾರಾಯಣ ವಿರುದ್ಧ FIR ದಾಖಲು

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ವಿರುದ್ಧ ನಗರದ ಪೂರ್ವ ಪೊಲೀಸ್‌ ಠಾಣೆಯಲ್ಲಿ ಶುಕ್ರವಾರ ಎಫ್‌ಐಆರ್‌ ದಾಖಲಾಗಿದೆ. ಮೇ 16ರಂದು ಸಚಿವ ಅಶ್ವತ್ಥ ನಾರಾಯಣ ಅವರು ನಗರದ ವಿವಿಧ ಕಾಲೇಜುಗಳಲ್ಲಿ ವಿಧಾನ ಪರಿಷತ್‌ ದಕ್ಷಿಣ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್‌ ಪರ ಪ್ರಚಾರ ನಡೆಸಿದ್ದರು.

ಸಚಿವ ಅಶ್ವತ್ಥ​ ನಾರಾಯಣ್

ಸಚಿವ ಅಶ್ವತ್ಥ​ ನಾರಾಯಣ್

  • Share this:
ಮಂಡ್ಯ (ಮೇ 28): ಚುನಾವಣಾ ನೀತಿ ಸಂಹಿತೆ (Code of Conduct) ಉಲ್ಲಂಘಿಸಿದ ಆರೋಪದಲ್ಲಿ 2ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರ ನ್ಯಾಯಾಲಯದ ನಿರ್ದೇಶನದ ಮೇರೆಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ (Ashwath Narayan) ವಿರುದ್ಧ ನಗರದ ಪೂರ್ವ ಪೊಲೀಸ್‌ ಠಾಣೆಯಲ್ಲಿ ಶುಕ್ರವಾರ ಎಫ್‌ಐಆರ್‌ (FIR) ದಾಖಲಾಗಿದೆ. ಮೇ 16ರಂದು ಸಚಿವ ಅಶ್ವತ್ಥ ನಾರಾಯಣ ಅವರು ನಗರದ ವಿವಿಧ ಕಾಲೇಜುಗಳಲ್ಲಿ ವಿಧಾನ ಪರಿಷತ್‌ ದಕ್ಷಿಣ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್‌ (Y. V Ravi Shankar) ಪರ ಪ್ರಚಾರ ನಡೆಸಿದ್ದರು. ಅಧಿಕಾರ ದುರ್ಬಳಕೆ ಮಾಡಿಕೊಂಡು ಸಚಿವರು ಕಾಲೇಜುಗಳಲ್ಲಿ (College) ಪ್ರಚಾರ ಸಭೆ ನಡೆಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌, ಚುನಾವಣಾಧಿಕಾರಿಗೆ (Electoral Officer) ದೂರು ಸಲ್ಲಿಸಿತ್ತು. ಈ ಹಿನ್ನೆಲೆ ಸಚಿವ ಅಶ್ವತ್ಥ ನಾರಾಯಣ ವಿರುದ್ಧ FIR ದಾಖಲಿಸಲಾಗಿದೆ.

ಸಚಿವ ಅಶ್ವತ್ಥ ನಾರಾಯಣ ವಿರುದ್ಧ  FIR ದಾಖಲು

ಮಂಡ್ಯದ ಮಹಿಳಾ ಕಾಲೇಜು, ವೈದ್ಯಕೀಯ ಕಾಲೇಜಿನಲ್ಲಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಈ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಸುಂಡಹಳ್ಳಿ ಮಂಜುನಾಥ್ ದೂರು ನೀಡಿದ್ರು. ಸಚಿವರು ನೀತಿ ಸಂಹಿತೆ ಉಲ್ಲಂಘಿಸಿದ್ದು ಕಾನೂನು ಕ್ರಮ ಜರುಗಿಸುವಂತೆ ಕೋರಿ ಮಾದರಿ ನೀತಿ ಸಂಹಿತೆ ತಂಡದ ಮುಖ್ಯಸ್ಥರೂ ಆದ ಜಿಲ್ಲಾ ಪಂಚಾಯಿತಿ ಸಿಇಒ ಸಹಾಯಕ ಚುನಾವಣಾಧಿಕಾರಿಗೆ ವರದಿ ನೀಡಿದ್ದರು.

ಸಚಿವ ಅಶ್ವತ್ಥ ನಾರಾಯಣ A1 ಆರೋಪಿ

ಜೊತೆಗೆ 2ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಖಾಸಗಿ ದೂರು ಕೂಡ ನೀಡಿದ್ದರು. ಸಚಿವ ಅಶ್ವತ್ಥ ನಾರಾಯಣ A1, ಬಿಜೆಪಿ ಮೈ.ವಿ.ರವಿಶಂಕರ್ A2 ಆರೋಪಿಗಳಾಗಿದ್ದಾರೆ. IPC ಸೆಕ್ಷನ್ 1860 (U/s-171C, 171F) ಮತ್ತು REPRESENTATION OF PEOPLE ACT (ಪ್ರಜಾಪ್ರತಿನಿಧಿ ಕಾಯ್ದೆ), 1950, 1951, 1989 (U/s-123) ಅಡಿ ಪ್ರಕರಣ ದಾಖಲಾಗಿದೆ.

ಪ್ರಕರಣ ದಾಖಲಿಸಿ ತನಿಖೆ ನಡೆಸಲು ಕೋರ್ಟ್​ ಸೂಚನೆ

ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುವಂತೆ ನ್ಯಾಯಾಲಯ ಪೂರ್ವ ಠಾಣೆ ಪೊಲೀಸರಿಗೆ ಸೂಚಿಸಿತ್ತು. ‘ನ್ಯಾಯಾಲಯದ ನಿರ್ದೇಶನದ ಮೇರೆಗೆ ಸಚಿವ ಅಶ್ವತ್ಥನಾರಾಯಣ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದ್ದು ನೀತಿ ಸಂಹಿತೆ ಉಲ್ಲಂಘಿಸಿದ ಕುರಿತು ತನಿಖೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ತಿಳಿಸಿದರು. PSI ಕೆ.ಎನ್.ಕೇಶವಮೂರ್ತಿ ಕೋರ್ಟ್ ಆದೇಶದಂತೆ FIR ದಾಖಲಿಸಿದ್ದಾರೆ.

ಇದನ್ನೂ ಓದಿ:  Text Book Row: ಪಠ್ಯಪುಸ್ತಕ ಪರಿಷ್ಕರಣೆ ವಿರೋಧ; ಮೇ 31ರಂದು ರಾಜ್ಯಾದ್ಯಂತ ಹೋರಾಟಕ್ಕೆ ಕರವೇ ಸಜ್ಜು

ಸಿದ್ದರಾಮಯ್ಯ ಹೇಳಿಕೆಗೆ ಬಿ.ಸಿ ನಾಗೇಶ್ ತಿರುಗೇಟು

ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನಲೆ ಅಮೃತ ಭಾರತಿಗೆ ಕನ್ನಡಾದರತಿ ಅಭಿಯಾನಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯ ಮೂರು ಕಡೆಗಳಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಕೊಪ್ಪಳ, ಗಂಗಾವತಿ , ಅಳವಂಡಿಯಲ್ಲಿ ಜರುಗುತ್ತಿರುವ ಅಭಿಯಾನಕ್ಕೆ ಇಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್  ಚಾಲನೆ ನೀಡಿದರು. ಕಾರ್ಯಕ್ರಮಕ್ಕೂ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ ಬಿ.ಸಿ.ನಾಗೇಶ್, ಪಠ್ಯದಲ್ಲಿ ಬ್ರಾಹ್ಮಿಕರಣ ಮಾಡಲಾಗುವುದು ಎಂಬ ಆರೋಪಕ್ಕೆ ತಿರುಗೇಟು ನೀಡಿದರು. ಆರೋಪ ಮಾಡಲು ಏನು ಇಲ್ಲದವರು ಈ ರೀತಿ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ:  Hijab Row: ಸೊಕ್ಕಿನಿಂದ ವರ್ತನೆ ಮಾಡುತ್ತ ಹಿಜಾಬ್ ಧರಿಸಿ ಬಂದವರ ಮೇಲೆ ಕೇಸ್ ಹಾಕಿ: ಪ್ರಮೋದ್ ಮುತಾಲಿಕ್

ಪಠ್ಯದಲ್ಲಿ ಇತಿಹಾಸ ರಾಷ್ಟೀಯತೆ ಇದೆ. ಈಗಾಗಲೇ ಪಠ್ಯ ಪುಸ್ತಕಗಳು ಮುದ್ರಣಗೊಂಡು ಹೊರ ಬಂದಿವೆ. ಕಾಂಗ್ರೆಸ್ ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸುತ್ತಿದೆ. ಈ ಮೊದಲು ಟಿಪ್ಪು ಸುಲ್ತಾನ್, ಭಗತ್ ಸಿಂಗ್, ಬಸವಣ್ಣ ಅವರ ಪಠ್ಯ ತೆಗೆದಿದ್ದಾರೆ ಎಂಬ ಗೊಂದಲ ಮೂಡಿಸಿದರು ಎಂದು ಆಕ್ರೋಶ ಹೊರ ಹಾಕಿದರು.
Published by:Pavana HS
First published: