• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • RSS Vs Priyank Kharge: ಕಾನೂನು ಉಲ್ಲಂಘನೆ ಮಾಡಿ ನೋಡಿ, ಅಂಬೇಡ್ಕರ್ ಸಂವಿಧಾನದ ಪವರ್ ಏನೆಂದು ತೋರಿಸ್ತೀವಿ: ಖರ್ಗೆ ಖಡಕ್ ಎಚ್ಚರಿಕೆ

RSS Vs Priyank Kharge: ಕಾನೂನು ಉಲ್ಲಂಘನೆ ಮಾಡಿ ನೋಡಿ, ಅಂಬೇಡ್ಕರ್ ಸಂವಿಧಾನದ ಪವರ್ ಏನೆಂದು ತೋರಿಸ್ತೀವಿ: ಖರ್ಗೆ ಖಡಕ್ ಎಚ್ಚರಿಕೆ

RSS - ಪ್ರಿಯಾಂಕ್ ಖರ್ಗೆ

RSS - ಪ್ರಿಯಾಂಕ್ ಖರ್ಗೆ

Congress Vs RSS: ಕಾಂಗ್ರೆಸ್ ಆಗಲೂ ಇತ್ತು ಈಗಲೂ ಇದೆ, ಮುಂದೆಯೂ ಇರಲಿದೆ. ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಆವರಣದಲ್ಲಿ RSS ಚಟುವಟಿಕೆಗಳನ್ನು ತಡೆಯುವ ಕುರಿತು ವಿಮರ್ಶಿಸಲಾಗುವುದು ಎಂದು ಕಾಂಗ್ರೆಸ್ ಹೇಳಿದೆ.

 • Share this:

ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ (Minister Priyank Kharge) ಮತ್ತೊಮ್ಮೆ ಬಿಜೆಪಿಗೆ (BJP) ಎಚ್ಚರಿಕೆ ಸಂದೇಶವನ್ನು  ಟ್ವೀಟ್ ಮೂಲಕ ರವಾನಿಸಿದ್ದಾರೆ. ಕಳೆದ ಎರಡು ದಿನದಿಂದ ರಾಜ್ಯದಲ್ಲಿ ಆರ್​ಎಸ್​ಎಸ್ (RSS)​ ಬ್ಯಾನ್ ವಿಷಯದ ಕುರಿತು ಚರ್ಚೆಗಳು ನಡೆಯುತ್ತಿವೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel), ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ (Former CM Basavaraj Bommai) ಈ ಬಗ್ಗೆ ಪ್ರತಿಕ್ರಿಯಿಸಿ ಆರ್​ಎಸ್​ಎಸ್​ ಬ್ಯಾನ್ ಮಾಡಿ ನೋಡಿ ಎಂದು ಎಚ್ಚರಿಕೆ ನೀಡಿದ್ದರು. ಇದೀಗ ಎಚ್ಚರಿಕೆಗೆ ಮರು ಎಚ್ಚರಿಕೆಯನ್ನು ಪ್ರಿಯಾಂಕ್ ಖರ್ಗೆ ರವಾನಿಸಿದ್ದಾರೆ. ಅಸಂವಿಧಾನಿಕ ಚಟುವಟಿಕೆ ಮಾಡುವ ಪ್ರಯತ್ನ ಮಾಡಿ ನೋಡಿ, ಸಂವಿಧಾನದ ಪವರ್ ತೋರಿಸುತ್ತೇವೆನ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.


ಪ್ರಿಯಾಂಕ್ ಖರ್ಗೆ ಟ್ವೀಟ್


ಬಿಜೆಪಿಗರು, ಪದೇ ಪದೇ, RSS ಬ್ಯಾನ್ ಮಾಡಿ ನೋಡಿ ಅಂತಿದ್ದಾರೆ. ಇಷ್ಟು ದಿನ ಕುರುಡರ ಆಡಳಿತದಲ್ಲಿ ಆಟವಾಡಿದ ಹಾಗಲ್ಲಾ.


ಈಗ ಒಂದೇ ಒಂದು ಬಾರಿ ಸಮಾಜದಲ್ಲಿ ಶಾಂತಿ ಕದಡುವ, ಹೆಣದ ಮೇಲೆ ರಾಜಕೀಯ ಬೇಳೆ ಬೇಯಿಸುವ, ಅಸಂವಿಧಾನಿಕ ಚಟುವಟಿಕೆ ಮಾಡುವ ಪ್ರಯತ್ನ ಮಾಡಿ ನೋಡಿ.


ಆಗ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಪವರ್ ನಾವು ತೋರಿಸುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಟ್ವೀಟ್


ಭಾರತದಲ್ಲಿ RSS ಎಂಬ ವಿಚ್ಛಿದ್ರಕಾರಿ ಸಂಘಟನೆ 3 ಬಾರಿ ನಿಷೇಧಕ್ಕೊಳಪಟ್ಟಿತ್ತು. ಸರ್ದಾರ್ ಪಟೇಲರೇ ಭಾರತ ವಿರೋಧಿ ಸಂಘಟನೆ ಎಂಬ ಸರ್ಟಿಫಿಕೇಟ್ ನೀಡಿದ್ದರು.


ಇದನ್ನೂ ಓದಿ: Laxmi Hebbalkar: ಸಿದ್ದರಾಮಯ್ಯ ಸರ್ಕಾರದ ಏಕೈಕ ಸಚಿವೆಗೆ ಡಬಲ್‌ ಧಮಾಕಾ; ಮಂತ್ರಿಗಿರಿ ಜೊತೆಗೆ ಅಜ್ಜಿ ಆಗೋದ್ರು ಹೆಬ್ಬಾಳ್ಕರ್‌

top videos


  ಕಾಂಗ್ರೆಸ್ ಆಗಲೂ ಇತ್ತು ಈಗಲೂ ಇದೆ, ಮುಂದೆಯೂ ಇರಲಿದೆ. ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಆವರಣದಲ್ಲಿ RSS ಚಟುವಟಿಕೆಗಳನ್ನು ತಡೆಯುವ ಕುರಿತು ವಿಮರ್ಶಿಸಲಾಗುವುದು ಎಂದು ಕಾಂಗ್ರೆಸ್ ಹೇಳಿದೆ.

  First published: