K Annamalai: ಹೆಲಿಕಾಪ್ಟರ್​​ನಲ್ಲಿ ಹಣ ತಂದ್ರಾ ಅಣ್ಣಾಮಲೈ? ಏನಿದು ಗಂಭೀರ ಆರೋಪ?

ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

ನಾನು ಹೆಲಿಕಾಪ್ಟರ್ ನಲ್ಲಿ ಬಂದಿದ್ದು ನಿಜ. ಉಡುಪಿಯಿಂದ ಇನ್ನೊಂದು ಕಡೆಗೆ ತುರ್ತಾಗಿ ಹೋಗಬೇಕು, ಒಟ್ಟು ಐದು ಕಾರ್ಯಕ್ರಮಗಳು ನಿಗದಿಯಾಗಿದೆ ಎಂದು ಅಣ್ಣಾಮಲೈ ಸ್ಪಷ್ಟನೆ ನೀಡಿದ್ದಾರೆ.

  • Share this:

ಉಡುಪಿ: ಕರ್ನಾಟಕ (Karnataka) ರಾಜ್ಯ ಬಿಜೆಪಿ (BJP) ಪಕ್ಷದ ಚುನಾವಣಾ ಉಸ್ತುವಾರಿ, ತಮಿಳುನಾಡು (Tamil Nadu) ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ (Annamalai) ವಿರುದ್ಧ ಉಡುಪಿಯಲ್ಲಿ (Udupi) ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ (Vinay Kumar Sorake) ಗಂಭೀರ ಆರೋಪ ಮಾಡಿದ್ದಾರೆ. ಅಣ್ಣಾಮಲೈ ಬಂದಿರುವ ಹೆಲಿಕಾಫ್ಟರ್​​​ನಲ್ಲಿ ಹಣ ಗಂಟು ತಂದಿದ್ದಾರೆ. ಉಡುಪಿಯಲ್ಲಿ ಹಣ ಹಂಚಲು ಹೆಲಿಕಾಪ್ಟರ್​​ನಲ್ಲಿ (Helicopter) ಅಣ್ಣಾಮಲೈ ಬಂದಿದ್ದಾರೆ. ಸಮಯಕ್ಕೆ ಮೊದಲೇ ಹೆಲಿಕಾಪ್ಟರ್ ಲ್ಯಾಂಡ್ ಆಗಿದೆ ಎಂದು ಸೊರಕೆ ಆರೋಪಿಸಿದ್ದಾರೆ. ಇನ್ನು, ಈ ಆರೋಪಕ್ಕೆ ಅಣ್ಣಾಮಲೈ ತಿರುಗೇಟು ನೀಡಿದ್ದಾರೆ.


ಕಾಂಗ್ರೆಸ್​ ನಾಯಕರಿಗೆ ಅಣ್ಣಾಮಲೈ ತಿರುಗೇಟು!


ಆರೋಪದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅಣ್ಣಾಮಲೈ, ಸೊರಕೆ ಅವರು ಎಲ್ಲರೂ ಅವರ ಥರಾನೇ ಇದ್ದಾರೆ ಅಂದುಕೊಂಡಿರಬೇಕು. ನಾವು ಪ್ರಾಮಾಣಿಕವಾಗಿ ಇದ್ದೇವೆ. ಅಪಪ್ರಚಾರ ಮಾಡುವ ಕಾಂಗ್ರೆಸ್ ಬಾಯಿಗೆ ಬಂದಂತೆ ಮಾತನಾಡುತ್ತೆ. ಪ್ರತಿಸ್ಪರ್ಧಿಗೆ ಹೆದರಿ ಸೊರಕೆ ಈ ರೀತಿ ಮಾತನಾಡುತ್ತಿದ್ದಾರೆ. ಇದರಿಂದ ನಮ್ಮ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಗೆಲುವು ಖಚಿತ ಅನ್ನೋದು ಗೊತ್ತಾಗಿದೆ ಎಂದರು.
ಇದನ್ನೂ ಓದಿ: DK Shivakumar: ಸಿಎಂ ಆಗಲು ಪವರ್ ಫುಲ್ ದೇವಿಗೆ ಕೆಪಿಸಿಸಿ ಅಧ್ಯಕ್ಷರ ಹರಕೆ; ಹುಂಡಿಗೆ ಕಂತೆ ಕಂತೆ ಕಾಣಿಕೆ ಸುರಿದ ಡಿಕೆಶಿ


ಅಲ್ಲದೆ, ನಾನು ಹೆಲಿಕಾಪ್ಟರ್ ನಲ್ಲಿ ಬಂದಿದ್ದು ನಿಜ. ಉಡುಪಿಯಿಂದ ಇನ್ನೊಂದು ಕಡೆಗೆ ತುರ್ತಾಗಿ ಹೋಗಬೇಕು, ಒಟ್ಟು ಐದು ಕಾರ್ಯಕ್ರಮಗಳು ನಿಗದಿಯಾಗಿದೆ. ಸುಳ್ಯ, ತೀರ್ಥಹಳ್ಳಿ, ಚಿಕ್ಕಮಗಳೂರು ಎಲ್ಲಾ ಕಡೆ ಓಡಾಟ ಇದೆ. ಸಮಯಕ್ಕೆ ಸರಿಯಾಗಿ ಎಲ್ಲಾ ಸ್ಥಳದಲ್ಲಿ ಹಾಜರಿರಬೇಕು. ಸೊರಕೆಯವರು ನನ್ನ ಒಳ್ಳೆ ಮಿತ್ರರು, ಅಸಹಾಯಕತೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ.

top videos
    First published: