• Home
  • »
  • News
  • »
  • state
  • »
  • Vinay Guruji: ನವೆಂಬರ್ 14ರಂದು ವಿನಯ್ ಗುರೂಜಿ ಭಕ್ತವೃಂದದಿಂದ ಪ್ರತಿಭಟನೆ

Vinay Guruji: ನವೆಂಬರ್ 14ರಂದು ವಿನಯ್ ಗುರೂಜಿ ಭಕ್ತವೃಂದದಿಂದ ಪ್ರತಿಭಟನೆ

ವಿನಯ್​ ಗುರೂಜಿ

ವಿನಯ್​ ಗುರೂಜಿ

ವಿನಯ್ ಗುರೂಜಿಗಳ ವಿರುದ್ಧ ಅಪಪ್ರಚಾರ ನಡೆಸುತ್ತಿರುವವರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಲಿ ಎಂದು ರಾಘವೇಂದ್ರ ಹೆಬ್ಬಾರ್ ಒತ್ತಾಯಿಸಿದರು.

  • Share this:

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಅವಧೂತ ವಿನಯ್ ಗುರೂಜಿ (Vinay Guruji) ಕುರಿತ ಕೆಲ ಸುದ್ದಿಗಳು ಹರಿದಾಡುತ್ತಿವೆ. ಈ ಸುದ್ದಿಗಳಿಂದ ನೊಂದಿರುವ ವಿನಯ್ ಗೂರೂಜಿ ಭಕ್ತವೃಂದ ನವೆಂಬರ್ 14ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಪ್ರತಿಭಟನಾ (Protest) ಮೆರವಣಿಗೆ ಮೂಲಕ ಸರ್ಕಾರಕ್ಕೆ (Government) ಮನವಿ ಸಲ್ಲಿಸಲಿರುವ ಭಕ್ತವೃಂದ ಅಪಪ್ರಚಾರ ನಡೆಸುತ್ತಿರೋ ಜನರ ವಿರುದ್ಧ ಸೂಕ್ತ ಮತ್ತು ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಲಿದೆ. ಪ್ರತಿಭಟನೆ  ಸಂಬಂಧ ಶನಿವಾರ ವಿನಯ್ ಗುರೂಜಿ ಭಕ್ತರಾದ ರಾಘವೇಂದ್ರ ಹೆಬ್ಬಾರ್ ಮತ್ತು ಶಂಕರ್ ಸುದ್ದಿಗೋಷ್ಠಿ ನಡೆಸಿದರು.


ಈ ವೇಳೆ ಮಾತನಾಡಿದ ರಾಘವೇಂದ್ರ ಹೆಬ್ಬಾರ್,  ಗುರೂಜಿಗಳು ನಮ್ಮ ನಾಡಿನ ಧಾರ್ಮಿಕ ಮುಖಂಡರು. ಈ ದೇಶದ ಸಂಸ್ಕೃತಿಯನ್ನು ವಿಶ್ವಮಟ್ಟದಲ್ಲಿ ಎತ್ತ ಹಿಡಿಯುವ ಕೆಲಸವನ್ನು ಮಾಡುತ್ತಿದ್ದಾರೆ. ದೇಶ ಮತ್ತು ವಿದೇಶಗಳಲ್ಲಿ ಅಪಾರ ಭಕ್ತಗಣ ಹೊಂದಿರುವ ಧಾರ್ಮಿಕ ನಾಯಕರು. ಆದ್ರೆ ಕೆಲ ದಿನಗಳಿಂದ ಅವರ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.


vinay guruji supporters protest tomorrow mrq
ವಿನಯ್ ಗುರೂಜಿ


ವ್ಯಕ್ತಿತ್ವಕ್ಕೆ ಕಳಂಕ ತರುವ ಯತ್ನಗಳು


ವಿನಯ್ ಗುರೂಜಿ ವಿರುದ್ಧ ಷಡ್ಯಂತ್ರ ರಚಿಸಲಾಗಿದೆ. ಅವರ ಹೆಸರು ಮತ್ತು ವ್ಯಕ್ತಿತ್ವಕ್ಕೆ ಕಳಂಕ ತರುವ ಯತ್ನಗಳು ನಡೆಯುತ್ತಿವೆ. ಈ ಎಲ್ಲಾ ಬೆಳವಣಿಗೆಗಳಿಂದ ಭಕ್ತವೃಂದಕ್ಕೆ ನೋವುಂಟು ಆಗಿದೆ ಎಂದು ರಾಘವೇಂದ್ರ ಹೆಬ್ಬಾರ್ ಅಸಮಾಧಾನ ಹೊರ ಹಾಕಿದರು.


ಇದನ್ನೂ ಓದಿ:  Chandrashekhar Death Case: ಡಯಾಟಮ್ ವರದಿಯಲ್ಲಿದ್ಯಾ ಚಂದ್ರಶೇಖರ್ ಸಾವಿನ ಕಾರಣ? ವಿನಯ್ ಗುರೂಜಿಯಿಂದಲೂ ಮಾಹಿತಿ ಪಡೆದ ಪೊಲೀಸರು


ಸರ್ಕಾರ ಕ್ರಮ ತೆಗೆದುಕೊಳ್ಳಲಿ


ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಮಾಡೋರು ದಾಖಲೆಗಳಿದ್ರೆ ಬಹಿರಂಗಪಡಿಸಲಿ. ದಾಖಲೆಗಳಿದ್ರೆ ನ್ಯಾಯಾಲಯಕ್ಕೆ ಹೋಗಿ ತನಿಖೆಗೆ ಒತ್ತಾಯಿಸಲಿ. ವಿನಯ್ ಗುರೂಜಿಗಳ ವಿರುದ್ಧ ಅಪಪ್ರಚಾರ ನಡೆಸುತ್ತಿರುವವರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಲಿ ಎಂದು ರಾಘವೇಂದ್ರ ಹೆಬ್ಬಾರ್ ಒತ್ತಾಯಿಸಿದರು.


ವಿನಯ್ ಗುರೂಜಿ ಭಕ್ತರಲ್ಲಿ ಆತ್ಮಸ್ಥೈರ್ಯ ತುಂಬಲು ನವೆಂಬರ್ 14ರಂದು ಶಿವಪ್ಪ ನಾಯಕ ಪ್ರತಿಮೆ ಮುಂಭಾಗದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.


ಚಂದ್ರಶೇಖರ್​ಗೆ ವಿನಯ್​ ಗುರೂಜಿ ಹೇಳಿದ್ದೇನು?


ವಿನಯ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿದ್ದ ಚಂದ್ರಶೇಖರ್​, ಆಶ್ರಮದಿಂದ ತೆರಳುವ ಮೊದಲು ಜಾಗ್ರತೆಯಿಂದ ಮನೆಗೆ ಹೋಗಿ ಎಂದು ವಿನಯ್ ಗುರೂಜಿ ಹೇಳಿದ್ದರಂತೆ. ಈ ವೇಳೆ ಚಂದ್ರಶೇಖರ್ ಜೊತೆಗೆ ಅವರ ಗೆಳೆಯ ಕಿರಣ್ ಸಹ ಉಪಸ್ಥಿತರಿದ್ದರು ಎಂದು ಆಶ್ರಮದಲ್ಲಿರುವ ಚಂದ್ರಶೇಖರ್ ಗುರೂಜಿ ಅವರ ಅಪ್ತರು ಮಾಧ್ಯಮಗಳಿಗೆ ತಿಳಿಸಿದ್ದಾರೆ.


vinay guruji supporters protest tomorrow mrq
ವಿನಯ್ ಗುರೂಜಿ


ರಾತ್ರಿ 9 ಗಂಟೆಗೆ ಆಶ್ರಮಕ್ಕೆ ಬಂದಿದ್ದ ಚಂದ್ರಶೇಖರ್​


ವಿನಯ್ ಗುರೂಜಿ ಆಶ್ರಮಕ್ಕೆ ಚಂದ್ರಶೇಖರ್ ಅವರು​ ಅಂದು ರಾತ್ರಿ 9 ಗಂಟೆಯ ನಂತರ ಆಶ್ರಮಕ್ಕೆ ಬಂದಿದ್ದರು. ಸುಮಾರು 9.40ರವರೆಗೂ ವಿನಯ್ ಗುರೂಜಿಗಾಗಿ ಕಾದಿದ್ದರು. ಚಂದ್ರಶೇಖರ್​ ಅವರು ಆಗಾಗ ಆಶ್ರಮಕ್ಕೆ ಬರುತ್ತಿದ್ದ ಕಾರಣ ಗುರೂಜಿಗೆ ಚಿರಪರಿಚಿತರಾಗಿದ್ದರು. ಯಾಕೋ ಲೇಟ್ ಆಗಿ ಬಂದೆ, ಇದು ಬರುವ ಟೈಮಾ ಎಂದು ಗುರೂಜಿಗೆ ಸಲುಗೆಯಿಂದಲೇ ಚಂದ್ರಶೇಖರ್​ಗೆ ಗದರಿಸಿದ್ದರಂತೆ.


ತಡವಾಗಿದೆ ಜಾಗ್ರತೆಯಿಂದ ತೆರಳಿ


ವಿನಯ್​ ಗುರೂಜಿ ಜೊತೆ ಮಾತಾಡಿ ವಾಪಸ್​ ತೆರಳುತ್ತಿದ್ದ ವೇಳೆ ಚಂದ್ರಶೇಖರ್​ ಅವರನ್ನು ಕರೆದು ವಿನಯ್​ ಗುರೂಜಿ ಹೀಗೆ ಹೇಳಿದ್ದರಂತೆ, ಈಗಾಗಲೇ ತಡವಾಗಿದೆ, ಜಾಗ್ರತೆಯಿಂದ ಹೋಗಿ ಎಂದು ಎಚ್ಚರಿಕೆ ಹೇಳಿದ್ದರು. ನಂತರ ರಾತ್ರಿ ಸುಮಾರು 9.45ರ ಹೊತ್ತಿಗೆ ಚಂದ್ರಶೇಖರ್ ಅವರು ಆಶ್ರಮದಿಂದ ಸ್ನೇಹಿತ ಕಿರಣ್ ಜೊತೆಗೆ ಹೊರ ಹೊರಟರು.


ಇದನ್ನೂ ಓದಿ: Renukacharya: ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್​ ಶವ ಪತ್ತೆ, ಕಾಲುವೆಯಲ್ಲಿ ಬಿದ್ದಿದ್ದ ಕಾರು


ರಾತ್ರಿ 10 ಗಂಟೆಯ ವೇಳೆಯಲ್ಲಿ ಚಂದ್ರಶೇಖರ್ ಅವರಿದ್ದ ಕಾರು ಕೊಪ್ಪ ಬಸ್​ ನಿಲ್ದಾಣದಿಂದ ದಾಟಿ ಹೋಗಿರುವ ದೃಶ್ಯ ಕೂಡ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Published by:Mahmadrafik K
First published: