HOME » NEWS » State » VINAY GURUJI SAYS ABOUT DK SHIVAKUMARS DAUGHTER MARRIAGE AT CHIKKAMAGALURU VCTV LG

ವ್ಯಾಲಂಟೈನ್ಸ್​ ಡೇ ದಿನ ಡಿಕೆಶಿ ಮಗಳ ಮದುವೆಯಾಗಲಿ ಅಂತ ತಮಾಷೆ ಮಾಡಿದ್ದೆ; ಈಗ ಹಾಗೆಯೇ ಆಗುತ್ತಿದೆ; ವಿನಯ್ ಗುರೂಜಿ

ಡಿಕೆಶಿ ರಾಜಕೀಯದ ಸುಮಾರು ವಿಷಯ ಕೇಳಿದರು. ಮದುವೆಯ ನಂತರ ಮಾತನಾಡೋಣ ಎಂದಿದ್ದೇನೆ. ಮದುವೆಗೆ ಕರೆಯಲು ಬಂದಿದ್ದರು. ಮದುವೆ ವಿಚಾರ ಮಾತನಾಡುತ್ತಾ ಇದರ ಬಗ್ಗೆ ಸಲಹೆ ಕೊಡುವುದು ಸರಿಯಲ್ಲ ಎಂದು ಹೇಳಿದರು.

news18-kannada
Updated:January 27, 2021, 11:41 AM IST
ವ್ಯಾಲಂಟೈನ್ಸ್​ ಡೇ ದಿನ ಡಿಕೆಶಿ ಮಗಳ ಮದುವೆಯಾಗಲಿ ಅಂತ ತಮಾಷೆ ಮಾಡಿದ್ದೆ; ಈಗ ಹಾಗೆಯೇ ಆಗುತ್ತಿದೆ; ವಿನಯ್ ಗುರೂಜಿ
ವಿನಯ್ ಗುರೂಜಿ
  • Share this:
ಚಿಕ್ಕಮಗಳೂರು(ಜ.27): ಡಿಕೆ ಶಿವಕುಮಾರ್ ಮಗಳ ಮದುವೆ ವ್ಯಾಲಂಟೈನ್​ ಡೇ ದಿನ ಆಗಲಿ ಎಂದು ಹೋದ ವರ್ಷ ತಮಾಷೆ ಮಾಡಿದ್ದೆ. ಈಗ ನೋಡಿದರೆ ಅದೇ ದಿನ ಮದುವೆಯಾಗುತ್ತಿದೆ. ಇದು ಖುಷಿಯ ವಿಚಾರ. ಇಬ್ಬರು ಮಕ್ಕಳಲ್ಲೂ ಒಂದೇ ರೀತಿಯ ಯೋಚನಾ ಲಹರಿ ಇದೆ. ಹಾಗಾಗಿ, ಇಬ್ಬರೂ ತುಂಬಾ ಚೆನ್ನಾಗಿ ಇರುತ್ತಾರೆ ಎಂದು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಗಳ ಮದುವೆಗೆ ಶುಭ ಹಾರೈಸಿದ್ದಾರೆ.

ಮಗಳ ಮದುವೆಗೆ ಗುರೂಜಿಯನ್ನ ಆಹ್ವಾನಿಸಲು ಮಂಗಳವಾರ ಡಿಕೆಶಿ ಜಿಲ್ಲೆಗೆ ಆಗಮಿಸಿದ್ದರು. ಇದೇ ವೇಳೆ, ಮಾತನಾಡಿದ ವಿನಯ್ ಗುರೂಜಿ, ಎರಡು ಕುಟುಂಬಗಳೂ ಒಂದಾಗಲೆಂದು ಆಶ್ರಮ ತುಂಬಾ ಪ್ರಯತ್ನ ಮಾಡಿತ್ತು. ಮದುವೆಗೆ ಕರೆಯಲು ಬಂದಿದ್ದರು. ಎರಡು ಕುಟುಂಬಗಳು ಆಶ್ರಮಕ್ಕೆ ತುಂಬಾ ನಿಕಟವಿರೋ ಫ್ಯಾಮಿಲಿಗಳು. ಎರಡು ಫ್ಯಾಮಿಲಿಗಳ ಮದುವೆ ಆಶ್ರಮದ ಮದುವೆ ಇದ್ದಂತೆ ಎಂದರು.

ಸಿದ್ದಾರ್ಥ ಅವರು ಎಲ್ಲೇ ಇದ್ದರೂ ಸೂಕ್ಷ್ಮ ಶರೀರದಲ್ಲಿ ಇರುತ್ತಾರೆ. ಅಲ್ಲಿಂದಲೇ ಖುಷಿಪಡುತ್ತಾರೆ. ವಸಂತಕ್ಕನಿಗೂ ಸ್ವಲ್ಪ ನೆಮ್ಮದಿ ಆಗುತ್ತೆ. ಎಲ್ಲರಿಗೂ ಖುಷಿಪಡುವ ವಿಚಾರ ಎಂದರು. ಡಿಕೆಶಿ ರಾಜಕೀಯದ ಸುಮಾರು ವಿಷಯ ಕೇಳಿದರು. ಮದುವೆಯ ನಂತರ ಮಾತನಾಡೋಣ ಎಂದಿದ್ದೇನೆ. ಮದುವೆಗೆ ಕರೆಯಲು ಬಂದಿದ್ದರು. ಮದುವೆ ವಿಚಾರ ಮಾತನಾಡುತ್ತಾ ಇದರ ಬಗ್ಗೆ ಸಲಹೆ ಕೊಡುವುದು ಸರಿಯಲ್ಲ ಎಂದು ಹೇಳಿದರು.

Petrol Diesel Price: ಮತ್ತೆ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆ: ವಿವಿಧ ನಗರಗಳಲ್ಲಿ ಇಂದಿನ ದರ ಎಷ್ಟು?

ರುದ್ರಾಕ್ಷಿ ಹಾರ ನಮ್ಮ ಉಜ್ಜೈನಿ ದೇವಸ್ಥಾನದ್ದು. ಪ್ರಸಾದ ಎಂದು ಎಲ್ಲರಿಗೂ ಹಾಕಿದ್ದೇನೆ. ಅದರಲ್ಲಿ ಯಾವುದೇ ವಿಶೇಷ ಇಲ್ಲ. ಉಜ್ಜಯಿನಿಯ ಮಹಾಕಾಲನಿಗೆ ಹಾಕಿದ ರುದ್ರಾಕ್ಷಿ ಆರೋಗ್ಯವನ್ನು ವೃದ್ಧಿ ಮಾಡುತ್ತದೆ ಎಂಬುದು ನನ್ನ ನಂಬಿಕೆ.

ಇನ್ನು ಇದೇ ವೇಳೆ ಕೃಷಿ ಕಾಯ್ದೆ ತಿದ್ದುಪಡಿ ಬಗ್ಗೆ ಮಾತಾನಾಡಿದ ಅವಧೂತ ವಿನಯ್ ಗುರೂಜಿ, ರೈತರು ಸಾವಯವ ಕೃಷಿಯತ್ತ ಮುಖ ಮಾಡಬೇಕು, ರಾಸಯನಿಕ ಗೊಬ್ಬರ ಬಳಸುವುದನ್ನ ನಿಷೇಧಿಸಿ, ಸಾವಯವ ಗೊಬ್ಬರದತ್ತ ಮುಖಮಾಡಬೇಕು, ಈ ಹಿಂದೆ ದೆಹಲಿಯಲ್ಲಿ ಕೇಂದ್ರ ಸಚಿವ ಸದಾನಂದ ಗೌಡರು ಸಿಕ್ಕಾಗ ಈ ಬಗ್ಗೆ ಚರ್ಚೆ ಮಾಡಿದ್ದೆ, ರೈತರು ಮಷಿನ್ ಬಳಕೆಯನ್ನ ಬಿಡಬೇಕು, ಜನರಿಗೆ ರೈತರು ಕೆಲಸ ನೀಡಬೇಕು, ಜನರು ಬರೀ ದುಡ್ಡಿನ ಹಿಂದೆ ಹೋಗಬಾರದು, ಜನರ ಬಗ್ಗೆ ಗಮನಕೊಡಬೇಕು ಎಂದರು.
ಹೊಸ ಕೃಷಿ ಕಾಯ್ದೆ ಬಗ್ಗೆ ಸಂಬಂಧಪಟ್ಟವರಿಗೆ ಫೋನಿನ ಮೂಲಕ ಹಾಗೂ ಪತ್ರದ ಮೂಲಕ ಮನವಿ ಮಾಡಿದ್ದೇನೆ, ನನ್ನ ಕೈಯಲ್ಲಿ ಏನು ಸಾಧ್ಯನೋ ಆ ಪ್ರಯತ್ನ ಮಾಡಿದ್ದೀನಿ, ಬರೀ ಭಾಷಣ ಮಾಡುವುದರಿಂದ ರೈತರಿಗೆ ನ್ಯಾಯ ಸಿಗುತ್ತೆ ಅಂತಾ ನನಗೆ ಅನ್ನಿಸುವುದಿಲ್ಲ. ಹೊಸ ಕಾಯ್ದೆಯನ್ನ ಹೇಗೆ ಬಗೆಹರಿಸಬಹುದು ಎಂಬುದನ್ನ ಪತ್ರದ, ಫೋನಿನ ಮೂಲಕ ಸಂಬಂಧಪಟ್ಟವರಿಗೆ ತಿಳಿಸಿದ್ದೇನೆ. ರೈತರಿಗೂ ತೊಂದರೆಯಾಗಬಾರದು, ಸರ್ಕಾರಕ್ಕೂ ಅವಮಾನವಾಗಬಾರದು.  ಆ ರೀತಿ ಕಾಯ್ದೆ ಬದಲಾವಣೆ ಮಾಡಬೇಕು ಎಂದು ವಿನಯ್ ಗುರೂಜಿ ಮನವಿ ಮಾಡಿದ್ರು, ಇನ್ನು ರೈತರ ದೌಜನ್ಯದ ಬಗ್ಗೆ ವಿಷಾದಿಸುತ್ತೇನೆ ಎಂದರು.
Published by: Latha CG
First published: January 27, 2021, 11:41 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories