ಡಿಕೆಶಿಗೆ ಮತ್ತೆ ಕಾದಿದೆ ಸಂಕಷ್ಟ; ಇದರ ಬೆನ್ನಲ್ಲೇ ಸಿಗಲಿದೆ ಉನ್ನತ ಹುದ್ದೆ; ವಿನಯ್​ ಗುರೂಜಿ ಭವಿಷ್ಯ

ಡಿಕೆಶಿ ಜೈಲಿಗೆ ಹೋಗುವ ಮುನ್ನ ವಿನಯ್​ ಗುರೂಜಿ ಅವರ ಬಗ್ಗೆ ಭವಿಷ್ಯ ನುಡಿದಿದ್ದರು. ನಿಮಗೆ ಎದುರಾಗಲಿರುವ ಸಂಕಷ್ಟವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ವಿನಯ್​ ಗುರೂಜಿ ಹೇಳಿದ್ದರು. ಅವಧೂತರು ಭವಿಷ್ಯ ನುಡಿದಿದ್ದ 15-20 ದಿನಗಳಲ್ಲೇ ಡಿಕೆಶಿಗೆ ಇಡಿ ಸಂಕಷ್ಟ ಶುರುವಾಗಿತ್ತು. 

Latha CG | news18-kannada
Updated:November 1, 2019, 8:32 PM IST
ಡಿಕೆಶಿಗೆ ಮತ್ತೆ ಕಾದಿದೆ ಸಂಕಷ್ಟ; ಇದರ ಬೆನ್ನಲ್ಲೇ ಸಿಗಲಿದೆ ಉನ್ನತ ಹುದ್ದೆ; ವಿನಯ್​ ಗುರೂಜಿ ಭವಿಷ್ಯ
ಡಿ.ಕೆ. ಶಿವಕುಮಾರ್
  • Share this:
ಬೆಂಗಳೂರು(ನ.01): ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಸಂಕಷ್ಟದ ನಡುವೆಯೂ ಎರಡು ಹುದ್ದೆಗಳು ಸಿಗಲಿವೆ ಎಂದು ವಿನಯ್ ಗುರೂಜಿ ಭವಿಷ್ಯ ನುಡಿದಿದ್ದಾರೆ.

ಬೆಂಗಳೂರಿನ ಉತ್ತರಹಳ್ಳಿ ಬಳಿ ಇರುವ ಆಶ್ರಮದಲ್ಲಿ ಇಂದು ಮಾಜಿ ಸಚಿವ ಡಿಕೆಶಿ ವಿನಯ್​ ಅವಧೂತರನ್ನು ಭೇಟಿಯಾಗಿದ್ದರು. ಗುರೂಜಿ ಜೊತೆ ಸುಮಾರು ಮುಕ್ಕಾಲು ಗಂಟೆ ಮಾತುಕತೆ ನಡೆಸಿದ್ದರು.ಈ ವೇಳೆ ವಿನಯ್​ ಗುರೂಜಿ ಮತ್ತೆ ಡಿಕೆಶಿ ಬಗ್ಗೆ ಭವಿಷ್ಯ ನುಡಿದಿದ್ದಾರೆ.

"ನಿಮ್ಮ ಮುಂದೆ ಮತ್ತೆ ಕಷ್ಟಗಳು ಬರಲಿವೆ. ಹಾಗೆಯೇ ಎರಡು ಹುದ್ದೆಗಳು ನಿಮಗೆ ಸಿಗಲಿವೆ. ಆ ಕಷ್ಟಗಳ ಮಧ್ಯೆಯೇ ಒಂದು ಹುದ್ದೆ ಸಿಕ್ಕರೂ ಸಿಗಬಹುದು. ಇನ್ನೊಂದು ದೊಡ್ಡ ಹುದ್ದೆ ನಿಮ್ಮ ಎಲ್ಲಾ ಸಮಸ್ಯೆಗಳು ಬಗೆಹರಿದ ಮೇಲೆ ಸಿಗಲಿದೆ," ಎಂದು ಡಿಕೆಶಿಗೆ ಭವಿಷ್ಯ ನುಡಿದಿದ್ದಾರೆ.

ಟಿವಿಯಲ್ಲಿ ಕಾಣಿಸಿಕೊಂಡು ತೋರಿಕೆಯ ಕೆಲಸ ಮಾಡುತ್ತಿಲ್ಲ; ಸುಮಲತಾ ಎಲ್ಲಿದ್ದೀಯಮ್ಮ ಎಂದವರಿಗೆ ಸಂಸದೆ ತಿರುಗೇಟು

ಮತ್ತೆ ಎರಡು ಕಷ್ಟಗಳು ಬರಲಿವೆ ಎಂದು ನೀವು ಹೇಳುತ್ತೀರಿ, ಆದರೆ ಎಲ್ಲಾ ಕಷ್ಟಗಳು ಮುಗಿಯಿತು ಎಂದು ಕೆಲವರು ಹೇಳುತ್ತಾರಲ್ಲ ಎಂದು ಡಿಕೆಶಿ ಗುರೂಜಿಗೆ ಪ್ರಶ್ನೆ ಮಾಡಿದರು. ಅದಕ್ಕೆ ಉತ್ತರಿಸಿದ ವಿನಯ್​ ಗುರೂಜಿ, ಅವರು ನಿಮ್ಮನ್ನು ಮೆಚ್ಚಿಸಲು ಹಾಗೆ ಹೇಳಬಹುದು. ನಾನು ನಿಮ್ಮಿಂದ ಯಾವ ನಿರೀಕ್ಷೆಯನ್ನೂ ಅಪೇಕ್ಷಿಸದೆ ಇದನ್ನು ಹೇಳುತ್ತಿದ್ದೇನೆ ಎಂದು ಡಿಕೆಶಿಗೆ ಗುರೂಜಿ ಹೇಳಿದ್ದಾರೆ.

ಡಿಕೆಶಿ ಜೈಲಿಗೆ ಹೋಗುವ ಮುನ್ನ ವಿನಯ್​ ಗುರೂಜಿ ಅವರ ಬಗ್ಗೆ ಭವಿಷ್ಯ ನುಡಿದಿದ್ದರು. ನಿಮಗೆ ಎದುರಾಗಲಿರುವ ಸಂಕಷ್ಟವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ವಿನಯ್​ ಗುರೂಜಿ ಹೇಳಿದ್ದರು. ಅವಧೂತರು ಭವಿಷ್ಯ ನುಡಿದಿದ್ದ 15-20 ದಿನಗಳಲ್ಲೇ ಡಿಕೆಶಿಗೆ ಇಡಿ ಸಂಕಷ್ಟ ಶುರುವಾಗಿತ್ತು.

ಜಾರ್ಖಂಡ್​ ವಿಧಾನಸಭಾ ಚುನಾವಣೆ; ನ.30ರಿಂದ 5ಹಂತಗಳಲ್ಲಿ ಮತದಾನ, ಡಿ. 23ಕ್ಕೆ ಫಲಿತಾಂಶಈಗ ಮತ್ತೆ ವಿನಯ್​ ಗುರೂಜಿ ಡಿಕೆಶಿ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಕೆಲವು ಸಂಕಷ್ಟದ ಜೊತೆಗೆ ಹುದ್ದೆ ಸಿಗಲಿವೆ ಎಂದು ಹೇಳಿದ್ದಾರೆ. ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

First published:November 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading