ರಂಭಾಪುರಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಪಾದಪೂಜೆ ಮಾಡಿದ ಅವಧೂತ ವಿನಯ್ ಗುರೂಜಿ

ಅವಧೂತ ವಿನಯ್ ಗುರೂಜಿ ಇತ್ತೀಚಿಗೆ ಕಾಶಿಗೆ ಹೋಗಿ ಬಂದಿದ್ದರು. ಆಗ ಅಲ್ಲಿಂದ ಶ್ರೀಚಕ್ರ ತಂದಿದ್ದರು. ಅದನ್ನ ರಂಭಾಪುರಿ ಪೀಠಕ್ಕೆ ನೀಡಬೇಕೆಂದು ವಿನಯ್ ಗುರೂಜಿಗೆ ಅವರ ಗುರುಗಳ ಆಜ್ಞೆಯಾಗಿತ್ತಂತೆ. ಆ ಹಿನ್ನೆಲೆ ಇಂದು ರಂಭಾಪುರಿ ಪೀಠಕ್ಕೆ ಬಂದ ವಿನಯ್ ಗುರೂಜಿ ರಂಭಾಪುರಿ ಶ್ರೀಗಳಿಗೆ ಪಾದಪೂಜೆ ಮಾಡಿ, ಪುಷ್ಪಾರ್ಚನೆ ಮಾಡಿದ್ದಾರೆ.

news18-kannada
Updated:August 14, 2020, 7:59 AM IST
ರಂಭಾಪುರಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಪಾದಪೂಜೆ ಮಾಡಿದ ಅವಧೂತ ವಿನಯ್ ಗುರೂಜಿ
ರಂಭಾಪುರಿ ಶ್ರೀಗಳ ಪಾದಪೂಜೆ ಮಾಡಿದ ಅವಧೂತ ವಿನಯ್ ಗುರೂಜಿ
  • Share this:
ಚಿಕ್ಕಮಗಳೂರು(ಆ.14): ನಡೆದಾಡುವ ದೈವ ಎಂದೇ ಖ್ಯಾತಿಯಾಗಿರೋ ವಿನಯ್ ಗುರೂಜಿ ಪಂಚಪೀಠಗಳಲ್ಲಿ ಮೊದಲನೇ ಪೀಠವಾದ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳ ಪಾದಪೂಜೆ ಮಾಡಿದ್ದಾರೆ. ವಿನಯ್​ ಗುರೂಜಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ಗ್ರಾಮದ ಸ್ವರ್ಣಪೀಠಿಕೇಶ್ವರಿ ದತ್ತಾಶ್ರಮದ ಅವಧೂತ.

ಇದೇ ಮೊದಲ ಬಾರಿಗೆ ವಿನಯ್​ ಗುರೂಜಿ ಪಂಚಪೀಠಗಳಲ್ಲಿ ಮೊದಲನೇ ಪೀಠವಾದ ರಂಭಾಪುರಿ ಪೀಠಕ್ಕೆ ಗುರುವಾರ ಭೇಟಿ ನೀಡಿದ್ದರು. ಇದೇ ವೇಳೆ, ರಂಭಾಪುರಿ ಶ್ರೀಗಳಾದ ಶ್ರೀ ಪ್ರಸನ್ನ ವೀರಸೋಮೇಶ್ವರ ಶಿವಚಾರ್ಯ ಜಗದ್ಗುರುಗಳ ಪಾದಪೂಜೆ ಮಾಡಿ ಪುಷ್ಪಾರ್ಚನೆ ಗೈದಿದ್ದಾರೆ.ಅವಧೂತ ವಿನಯ್ ಗುರೂಜಿ ಇತ್ತೀಚಿಗೆ ಕಾಶಿಗೆ ಹೋಗಿ ಬಂದಿದ್ದರು. ಆಗ ಅಲ್ಲಿಂದ ಶ್ರೀಚಕ್ರ ತಂದಿದ್ದರು. ಅದನ್ನ ರಂಭಾಪುರಿ ಪೀಠಕ್ಕೆ ನೀಡಬೇಕೆಂದು ವಿನಯ್ ಗುರೂಜಿಗೆ ಅವರ ಗುರುಗಳ ಆಜ್ಞೆಯಾಗಿತ್ತಂತೆ. ಆ ಹಿನ್ನೆಲೆ ಇಂದು ರಂಭಾಪುರಿ ಪೀಠಕ್ಕೆ ಬಂದ ವಿನಯ್ ಗುರೂಜಿ ರಂಭಾಪುರಿ ಶ್ರೀಗಳಿಗೆ ಪಾದಪೂಜೆ ಮಾಡಿ, ಪುಷ್ಪಾರ್ಚನೆ ಮಾಡಿದ್ದಾರೆ.

ಅಲ್ಪ ಸಂಖ್ಯಾತರ ಓಲೈಕೆ ಕಾಂಗ್ರೆಸ್‌ ಪಕ್ಷಕ್ಕೆ ಮುಳುವಾಗಲಿದೆ; ಶಾಸಕ ಎಸ್‌.ಆರ್‌. ವಿಶ್ವನಾಥ್‌ ಎಚ್ಚರಿಕೆ

ಪ್ರತಿಮೆ ಕೆಳಗೆ ಶ್ರೀಚಕ್ರ ಇಡುವಂತೆ ಮನವಿ :

ಇತ್ತೀಚೆಗೆ ಕಾಶಿಗೆ ಹೋಗಿದ್ದ ವಿನಯ್ ಗುರೂಜಿ ಎರಡು ಶ್ರೀಚಕ್ರಗಳನ್ನ ತಂದಿದ್ದರು. ಅದರಲ್ಲಿ ಒಂದನ್ನ ರಂಭಾಪುರಿ ಪೀಠಕ್ಕೆ ನೀಡಿದ್ದು, ಶೀಘ್ರದಲ್ಲೇ ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ರೇಣುಕಾಚಾರ್ಯರ 61 ಅಡಿ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಲಿದೆ. ಆ ಪ್ರತಿಮೆ ಕೆಳಗೆ ಶ್ರೀಚಕ್ರ ಇಡುವಂತೆ ವಿನಯ್ ಗುರೂಜಿ ರಂಭಾಪುರಿ ಶ್ರೀಗಳಿಗೆ ಮನವಿ ಮಾಡಿದ್ದಾರೆ.

ಇನ್ನು ಗುರುವಾರ ಬೆಳಗ್ಗೆ ರಂಭಾಪುರಿ ಪೀಠಕ್ಕೆ ಬಂದ ವಿನಯ್ ಗುರೂಜಿ, ಕ್ಷೇತ್ರನಾಥ ವೀರಭದ್ರ ಸ್ವಾಮಿಗೆ ತಾವೇ ಪೂಜೆ ಮಾಡಿ ದರ್ಶನ ಪಡೆದಿದ್ದಾರೆ. ಮಠದ ಆವರಣದಲ್ಲಿ ಸುಮಾರು ಎರಡು ಗಂಟೆಗೂ ಹೆಚ್ಚು ಹೊತ್ತು ಇದ್ದು, ರಂಭಾಪುರಿ ಶ್ರೀಗಳ ಜೊತೆಯೂ ದೀರ್ಘ ಸಮಾಲೋಚನೆ ನಡೆಸಿದ್ದಾರೆ.
Published by: Latha CG
First published: August 14, 2020, 7:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading