Vinay Guruji: ಸಾಮಾಜಿಕ ಜಾಲತಾಣದಲ್ಲಿ ವಿನಯ್ ಗುರೂಜಿ ತೇಜೋವಧೆ; 24 ಟ್ರೋಲ್ ಪೇಜ್​ಗಳ ಮೇಲೆ ಬಿತ್ತು ಕೇಸ್​

ವಿನಯ್​ ಗುರೂಜಿ ತಲೆಯ ಮೇಲೆ ಕಾಲಿಡುವ ದೃಶ್ಯ ಪೋಸ್ಟ್ ಮಾಡಿ ಅದರಲ್ಲಿ ಕೆಟ್ಟದಾಗಿ ಕಾಮೆಂಟ್ ಹಾಕಿದ್ದಾರೆಂಬ ಕಾರಣಕ್ಕೆ ದೂರು ನೀಡಲಾಗಿದೆ. 

ವಿನಯ್​ ಗುರೂಜಿ

ವಿನಯ್​ ಗುರೂಜಿ

  • Share this:
ಬೆಂಗಳೂರು (ಜು.26) : ಟ್ರೋಲ್ ಪೇಜ್ ಗಳ (Troll Page) ಮೇಲೆ ವಿನಯ್ ಗುರೂಜಿ ಅವರು ದೂರು ನೀಡಿದ್ದಾರೆ.  ಟ್ರೋಲ್ ಪೇಜ್ ಸೇರಿ ಹಲವು ಯೂ ಟ್ಯೂಬ್ ಚಾನಲ್ ಗಳ ಮೇಲೆ‌  ವಿನಯ್ ಗುರೂಜಿ (Vinay Guruji) ತಮ್ಮ PRO ಮೂಲಕ ದೂರು ದಾಖಲಿಸಿದ್ದಾರೆ.  ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ (Banashankari Police Station) ಎಫ್ ಐ ಆರ್ (FIR) ಕೂಡ ದಾಖಲಾಗಿದೆ.  KPCC ಆನೇಕಲ್ ವಿಭಾಗ ಸೋಷಿಯಲ್ ಮೀಡಿಯಾ ವಿಂಗ್ ಸೇರಿ 22 ಟ್ರೋಲ್ ಪೇಜ್ ಗಳ ಮೇಲೆ ಪ್ರಕರಣ ದಾಖಲಾಗಿದೆ.

ವಿನಯ್​ ಗುರೂಜಿ ಟ್ರೋಲ್​

ವಿನಯ್​ ಗುರೂಜಿ ತಲೆಯ ಮೇಲೆ ಕಾಲಿಡುವ ದೃಶ್ಯ ಪೋಸ್ಟ್ ಮಾಡಿ ಅದರಲ್ಲಿ ಕೆಟ್ಟದಾಗಿ ಕಾಮೆಂಟ್ ಹಾಕಿದ್ದಾರೆಂಬ ಕಾರಣಕ್ಕೆ ದೂರು ನೀಡಲಾಗಿದೆ. ರಾತ್ರಿ ಕುಡಿದ ಅಮಲಿನಲ್ಲಿ ತಲೆಯ ಮೇಲೆ ಕಾಲಿಡುತ್ತಿರುವ ಗುರೂಜಿ , ನಶೆಯಲ್ಲಿ ನಿಲ್ಲೋಕೂ ಆಗುತ್ತಿಲ್ಲ ಎಂದು ಬರೆದು ಪೋಸ್ಟ್​ ಮಾಡಿದ್ದಾರೆ. ಗುರೂಜಿ ಗಾಂಜಾ ಸಿಗರೇಟು ಸೇದುತ್ತಾರೆ.  ಗುರೂಜಿ ಎಂದು ಹೇಳಿಕೊಳ್ಳುವ ಎಲ್ಲರೂ ಸ್ಟಾರ್ ಹೊಟೇಲ್ ನಲ್ಲಿ ನಡೆಸುವ ರಂಗಿನಾಟ ಇದು ಅಂತ  ಟ್ರೋಲ್ ಪೇಜ್ ಗಳು ಕಾಮೆಂಟ್ ಮಾಡಿವೆ.ಟ್ರೋಲ್ ಗಳಿಂದ ಸ್ವಾಮಿಜಿಯವರ ತೇಜೋವಧೆ

ಇಂತಹ ಟ್ರೋಲ್ ಗಳಿಂದ ಸ್ವಾಮಿಜಿಯವರ ತೇಜೋವಧೆ ಆಗಿದೆ. ಅವರ ಲಕ್ಷಾಂತರ ಭಕ್ತರ ಮನಸ್ಸಿಗೆ ಘಾಸಿಯುಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಸಮಾಜದಲ್ಲಿ ಅಶಾಂತಿಯನ್ನ ಸೃಷ್ಟಿಸಿ ಸಮಾಜದ ಸ್ವಾಸ್ಥ ಕೆದಡುವ ಕೆಲಸ ಆಗಿದೆ. ಇಂತಹ ಟ್ರೋಲ್ ಪೇಜ್​ ಗಳ ಮೇಲೆ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದು, ಈ ಹಿನ್ನಲೆ ಬನಶಂಕರಿ‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: Pramoda Devi Wadiyar: ಬೇಬಿ ಬೆಟ್ಟ ವಿವಾದ, ಸರ್ಕಾರದ ವಿರುದ್ಧ 'ರಾಜಮಾತೆ' ಗರಂ; ಯಾಕಿಷ್ಟು ಹಿಂಸೆ ಕೊಡುತ್ತಿದ್ದೀರಾ?

ಅನೇಕ ರಾಜಕಾರಣಿಗಳು ಹಾಗೂ ಗಣ್ಯರು ಅವಧೂತ ವಿನಯ್ ಗುರೂಜಿಯನ್ನು ಭೇಟಿಯಾಗ್ತಾರೆ. ಗುರೂಜಿ ಆಶೀರ್ವಾದ ಪಡೆದು ಹೋಗುತ್ತಾರೆ. ಕುಮಾರಸ್ವಾಮಿ, ನಿಖಿಲ್​, ಡಿಕೆ ಶಿವಕುಮಾರ್, ಯಡಿಯೂರಪ್ಪ ಸೇರಿದಂತೆ ಅನೇಕ ರಾಜಕಾರಣಿಗಳು ವಿನಯ್​ ಗುರೂಜಿ ಅವರನ್ನು ಭೇಟಿಯಾಗುತ್ತಾರೆ. ರಾಜಕಾರಣಿಗಳು ನಡೆಸೋ ಪೂಜೆ, ಸಮಾರಂಭಗಳಲ್ಲಿ ಸಹ ವಿನಯ್​ ಗುರೂಜಿ ಭಾಗಿಯಾಗುತ್ತಾರೆ.

ಗಾಂಧಿ ಜಯಂತಿಗೆ ವಿಭಿನ್ನ ಕಾರ್ಯಕ್ರಮ

ಅವಧೂತ ಶ್ರೀ ವಿನಯ್ ಗುರೂಜಿ ಅವರ ನೇತೃತ್ವದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಉತ್ತರಹಳ್ಳಿ ಸ್ಮಶಾನದಲ್ಲಿ ಸ್ವಚ್ಚತಾ ಕಾರ್ಯ ಮತ್ತು ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ರು. ಈ ಕಾರ್ಯಕ್ರಮದಲ್ಲಿ ಕೇಂದ್ರ ಬಿಂದುವಾಗಿದ್ದ ಅವಧೂತ ಶ್ರೀ ವಿನಯ್ ಗುರೂಜಿ ಅವರು ಉತ್ಸಾಹಿಯಂತೆ ಗಿಡನೆಟ್ಟರು ಮತ್ತು ಎಲ್ಲರೂ ಸ್ವಚ್ಚತಾ ಕಾರ್ಯವನ್ನು ಮೈಗೂಡಿಸಿಕೊಂಡು ನಮ್ಮ ಪರಿಸರ ರಕ್ಷಣಾ ಹೊಣೆಯನ್ನು ಚಾಚು ತಪ್ಪದೆ ಪಾಲಿಸಬೇಕು ಎಂದು ಕರೆ ನೀಡಿದರು. ಫಿಡಿಲಿಟಸ್ ಕಾರ್ಪ್ ಸಂಸ್ಥಾಪಕರಾದ ಅಚ್ಯುತ್ ಗೌಡರು, ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಶಿವರಾಜ್, ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು.

ಇದನ್ನೂ ಓದಿ: Congress Leaders: ಇದು ಬಿಜೆಪಿ ಭ್ರಷ್ಟೋತ್ಸವ, ಈ ಸರ್ಕಾರ ಅಭಿವೃದ್ಧಿ ಶೂನ್ಯ ಸರ್ಕಾರ

ಅವಧೂತ ಶ್ರೀ ವಿನಯ್ ಗುರೂಜಿ ಅವರು ಗಾಂಧಿ ಜಯಂತಿ ಪ್ರಯುಕ್ತ ಉತ್ತರಹಳ್ಳಿ ಬಳಿಯ ಭಾರತ್ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಯ ಪಾದುಕಾ ಮಂದಿರದ ಬಳಿ ಜರುಗಿದ ಬೃಹತ್ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಾರತ್ ಹೌಸಿಂಗ್ ಕೋ‌ಆಪರೇಟಿವ್ ಸೊಸೈಟಿಯ ಪಾರ್ಕ್ ನಲ್ಲಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ ಹಲವು ಔಷಧೀಯ ಸಸ್ಯಗಳನ್ನು ನೆಟ್ಟರು. ಮಾಜಿ ಕಾರ್ಪೊರೇಟರ್ ಹನುಮಂತಯ್ಯ, ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಮಾಜಿ ಕಾರ್ಪೊರೇಟರ್ ರಮೇಶ್ ರಾಜು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
Published by:Pavana HS
First published: