ಆಚರಣೆ ಹೆಸರಿನಲ್ಲಿ ನರಿಗೆ ನರಕಯಾತನೆ: ಮೈಸೂರಿನಲ್ಲೊಂದು ವಿಚಿತ್ರ ಜಾತ್ರೆ

ಜಾತ್ರೆಯಲ್ಲಿ ನರಿ- ನಾಯಿ ನಡುವೆ ಕಾಳಗ ಏರ್ಪಡಿಸಿ ನರಿ ಬಾಯಿ ಕಟ್ಟಿ ನಾಯಿಗಳಿಂದ ದಾಳಿ ಮಾಡಿಸೋ ಆಟವಾಡಿದ್ದಾರೆ. ಹುಲಿಕುರೆ ವೇಣುಗೋಪಾಲ ಸ್ವಾಮಿ ಜಾತ್ರಾ ಮಹೋತ್ಸದಲ್ಲಿ ನರಿಗೆ ಪೂಜೆ ಮಾಡಿ ನಂತರ ನಾಯಿಗಳ ಜೊತೆ ಕಾದಾಟಕ್ಕೆ ಇಳಿಸಿದ್ದಾರೆ.  ಹುಲಿಕುರೆ ಹಾಗೂ ಹೆಬ್ಬಲಗುಪ್ಪೆ ಗ್ರಾಮದ ಅಕ್ಕಪಕ್ಕದ ಗ್ರಾಮಗಳಲ್ಲಿ ಇದು ಸಾಮಾನ್ಯ ಸಂಗತಿಯಾಗಿದೆ.

ನರಿ ಹಿಡಿದುಕೊಂಡು ಬರುತ್ತಿರುವ ಗ್ರಾಮಸ್ಥರು.

ನರಿ ಹಿಡಿದುಕೊಂಡು ಬರುತ್ತಿರುವ ಗ್ರಾಮಸ್ಥರು.

  • Share this:
ನಮ್ಮ ದೇಶದಲ್ಲಿ ಪ್ರಾಣಿಗಳಿಗೆ ಪೂಜೆ ಸಲ್ಲಿಸೋದು, ಅವುಗಳಿಗೆ ದೈವ ರೂಪ ಕೊಟ್ಟು ಆರಾಧಿಸೋದು ಹೊಸದೇನಲ್ಲ, ಅದರಲ್ಲು ಗ್ರಾಮೀಣ ಪ್ರದೇಶದ ಹಲವಾರು ಆಚರಣೆಗಳಲ್ಲಿ ಪ್ರಾಣಿಗಳನ್ನು ಬಳಸಿಕೊಂಡು ಅವುಗಳಿಗೆ ಬಹುಮುಖ್ಯ ಪಾತ್ರ ಕೊಡೋದು ಸಾಮಾನ್ಯ ಸಂಗತಿ. ಆದರೆ ಮೈಸೂರಿನಲ್ಲೊಂದು ವಿಚಿತ್ರ ಆಚರಣೆ ನಡೆದಿದ್ದು, ಕಾಡಿನಿಂದ ನರಿಯನ್ನು ಹಿಡಿದು ತಂದು ಗ್ರಾಮಸ್ಥರು ಊರಿನ ಜಾತ್ರೆಯಲ್ಲಿ ನಾಯಿಯೊಂದಿಗೆ ಕಾದಾಟಕ್ಕಿಳಿಸಿ ನರಿಗೆ ಚಿತ್ರಹಿಂಸೆ ನೀಡಿದ್ದಾರೆ.

ಸಂಪ್ರದಾಯದ ಹೆಸರಿನಲ್ಲಿ ಮೈಸೂರಿನ ಹೆಚ್.ಡಿ.ಕೋಟೆಯ ಹೆಬ್ಬಲಗುಪ್ಪೆ ಗ್ರಾಮದಲ್ಲಿ ಈ ವಿಚಿತ್ರ ಆಚರಣೆ ನಡೆದಿದೆ. ಜಾತ್ರೆ  ಹೆಸರಿನಲ್ಲಿ ನರಿಯೊಂದಕ್ಕೆ ನರಕಯಾತನೆ ನೀಡಿದ್ದಾರೆ. ನರಿ ಮತ್ತು ನಾಯಿಗಳ ಕಾದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜನವರಿ 16ರಂದು ನಡೆದ ಹುಲಿಕುರೆ ವೇಣುಗೋಪಾಲ ಸ್ವಾಮಿ ಜಾತ್ರಾ ಮಹೋತ್ಸದಲ್ಲಿ ನರಿಯೊಂದಕ್ಕೆ ನರಕಯಾತನೆ ಕೊಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕಾಡಿನಿಂದ ನರಿ ಹಿಡಿದು ತಂದು ಮೋಜಿನಾಟ ಆಡಿದ ಗ್ರಾಮಸ್ಥರು ಸಂಪ್ರದಾಯದ ಹೆಸರಿನಲ್ಲಿ ಕಾಡು ಪ್ರಾಣಿಗೆ ಚಿತ್ರಹಿಂಸೆ ನೀಡಿದ್ದಾರೆ. ಜಾತ್ರೆಯಲ್ಲಿ ನರಿ- ನಾಯಿ ನಡುವೆ ಕಾಳಗ ಏರ್ಪಡಿಸಿ ನರಿ ಬಾಯಿ ಕಟ್ಟಿ ನಾಯಿಗಳಿಂದ ದಾಳಿ ಮಾಡಿಸೋ ಆಟವಾಡಿದ್ದಾರೆ. ಹುಲಿಕುರೆ ವೇಣುಗೋಪಾಲ ಸ್ವಾಮಿ ಜಾತ್ರಾ ಮಹೋತ್ಸದಲ್ಲಿ ನರಿಗೆ ಪೂಜೆ ಮಾಡಿ ನಂತರ ನಾಯಿಗಳ ಜೊತೆ ಕಾದಾಟಕ್ಕೆ ಇಳಿಸಿದ್ದಾರೆ.  ಹುಲಿಕುರೆ ಹಾಗೂ ಹೆಬ್ಬಲಗುಪ್ಪೆ ಗ್ರಾಮದ ಅಕ್ಕಪಕ್ಕದ ಗ್ರಾಮಗಳಲ್ಲಿ ಇದು ಸಾಮಾನ್ಯ ಸಂಗತಿಯಾಗಿದ್ದು, ತಲ ತಲಾಂತರಗಳಿಂದ ಜಾರಿಯಲ್ಲಿರುವ ಮೌಢ್ಯ ಆಚರಣೆಯನ್ನು  ಗ್ರಾಮಸ್ಥರು ಇಂದಿಗೂ ಆಚರಿಸಿಕೊಂಡು ಬಂದಿದ್ದಾರೆ.

ನರಿ-ನಾಯಿಗಳ ಕಾಳಗದಿಂದ ಗ್ರಾಮಕ್ಕೆ ಒಳಿತಾಗುತ್ತದೆ ಎನ್ನುವ ಮೂಢನಂಬಿಕೆಯಲ್ಲಿ ಜನರು ಪ್ರತಿವರ್ಷದಂತೆ ಈ ವರ್ಷದ ಜಾತ್ರೆಯಲ್ಲೂ ಕಾಡಿನಿಂದ ನರಿ ಹಿಡಿದುಕೊಂಡು ಬಂದು ಕಾದಾಟ ನಡೆಸಿ ಜಾತ್ರೆ ಮುಗಿಸಿದ್ದಾರೆ. ಸದ್ಯ ಈ ಕಾದಾಟದ ವಿಡಿಯೋ ವೈರಲ್‌ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇನ್ನು ಘಟನೆ ಬಗ್ಗೆ ಮಾಹಿತಿ ಇದ್ದರು ಕಣ್ಮುಚ್ಚಿ ಕುಳಿತ ಅರಣ್ಯ ಇಲಾಖೆ ಗ್ರಾಮಸ್ಥರ ಮೇಲಾಗಲಿ? ಜಾತ್ರೆಯ ಆಯೋಜಕರು ಅಥವಾ ಉಸ್ತುವಾರಿ ಹೊತ್ತವರ ಮೇಲಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ.

ಇದನ್ನು ಓದಿ: ಶಿವಮೊಗ್ಗದಲ್ಲೊಂದು ಚಿಣ್ಣರ ಸಂತೆ; ತರಕಾರಿ ಮಾರಿದ ಶಾಲಾ ಮಕ್ಕಳು

ಇನ್ನು ಈ ನರಿ ಪೂಜೆ ಆಚರಣೆ ಇಂದು ನಿನ್ನೆಯದಲ್ಲ ಅನ್ನೋದು ಆಧ್ಯತ್ಮ ಚಿಂತಕರ ವಾದವಾಗಿದೆ. ಹಿಂದಿನ ಕಾಲದಲ್ಲಿ ರಾಜಮಹಾರಾಜ ಈ ಆಚರಣೆ ನಡೆಸುತ್ತಿದ್ದರು. ಸಂಕ್ರಾಂತಿ ಮುಗಿದ ಸುಗ್ಗಿ ಸಂದರ್ಭದಲ್ಲಿ ಜನರೆಲ್ಲ ಉತ್ತಮ ಬೆಳೆ ಪಡೆದು ಸುಖವಾಗಿರುತ್ತಿದ್ದರು. ಆಗ ರಾಜರು ಸಹ ಸಂತೋಷ ಕೂಟಗಳನ್ನು ಆಯೋಜಿಸುತ್ತಿದ್ದರು. ಮನರಂಜನೆಗಾಗಿ ನಾಯಿಗಳನ್ನು ಕಾಡಿಗೆ ಬಿಟ್ಟು ನರಿಗಳನ್ನು ಬೇಟೆಯಾಡುತ್ತಿದ್ದರು. ನರಿ ಒಂದು ಅದೃಷ್ಟದ ಪ್ರಾಣಿಯಾಗಿದೆ. ನರಿ ದೃಷ್ಟಿ ಮನುಷ್ಯರ ಮೇಲೆ ಬೀಳಬೇಕು ಅನ್ನೋ ಕಾರಣದಿಂದ ನರಿಯನ್ನು ನಾಯಿಗಳಿಂದ ಅಟ್ಟಾಡಿಸಿಕೊಂಡು ಹೋದರೆ ಅವು ತಮ್ಮ ರಕ್ಷಣೆ ಹಾಗೂ ಹಿಂದೆ ಬರುವ ನಾಯಿಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮನುಷ್ಯರನ್ನು ನೋಡುತ್ತಿದ್ದವು. ಆಗ ಅಲ್ಲಿನ ಜನರಿಗೆ ಹಾಗೂ ಗ್ರಾಮಕ್ಕೆ ಒಳಿತು ಆಗುತ್ತಿತ್ತು ಅನ್ನೋದು ನಂಬಿದೆ. ಆದರೆ ಈಗ ಕಾಡು ಪ್ರಾಣಿಗಳ  ಬೇಟೆ ಅಕ್ರಮವಾಗಿರುವುದರಿಂದ ಗ್ರಾಮೀಣ ಪ್ರದೇಶದ ಜನರು ನರಿಯನ್ನು ಹಿಡಿದುಕೊಂಡು ಬಂದು ಗ್ರಾಮದಲ್ಲೇ ಹಳೆ ಸಂಪ್ರದಾಯ ಆಚರಣೆ ಮಾಡ್ತಾರೆ.
First published: