ಬಾಲ್ಯ ವಿವಾಹ ತಡೆಯಲು ಹೋದ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಗ್ರಾಮಸ್ಥರು

child marriage: ಅಧಿಕಾರಿಗಳು ಮದುವೆ ಮಂಟಪದ ಕಡೆಗೆ ತೆರಳುವಾಗ ಗ್ರಾಮಸ್ಥರು ಘೇರಾವ್ ಹಾಕಿ ಕೂಗಾಡಿದ್ದಾರೆ. ನಿಮಗೆ ಮದುವೆ ನಡೆಯುತ್ತಿದ್ದೆ ಎಂದು ಯಾರು ಹೇಳಿದರು. ಹೇಗೆ ನಮ್ಮ ಹುಡುಗಿಗೆ ಕರೆದುಕೊಂಡು ಹೋಗುತ್ತೀರಾ, ನೋಡುತ್ತೇವೆ ಎಂದು ಬೆದರಿಸಿದ್ದಾರೆ. 

ಅಧಿಕಾರಿಗಳೊಂದಿಗೆ ಗ್ರಾಮಸ್ಥರ ಮಾತಿನಚಕಮಕಿ

ಅಧಿಕಾರಿಗಳೊಂದಿಗೆ ಗ್ರಾಮಸ್ಥರ ಮಾತಿನಚಕಮಕಿ

  • Share this:
ಯಾದಗಿರಿ (ಅ.30): ಲಾಕ್​ಡೌನ್​ ಸಂದರ್ಭದಲ್ಲಿ ಶಾಲೆಗಳಿಲ್ಲದಿರುವುದರಿಂದ ಅಪ್ರಾಪ್ತ ಮಕ್ಕಳನ್ನು ಮದುವೆ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಲಿದೆ. ಜಿಲ್ಲೆಯಲ್ಲೂ ಬಾಲ್ಯ ವಿವಾಹ ಪ್ರಕರಣಗಳು ಕಂಡು ಬರುತ್ತಿರುವ ಹಿನ್ನಲೆ ಅಧಿಕಾರಿಗಳು ಎಚ್ಚರವಹಿಸಿದ್ದಾರೆ. ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯ ಮದುವೆ ಸುದ್ದಿ ತಿಳಿಯುತ್ತಿದ್ದಂತೆ ಅದನ್ನು ತಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ, ಗ್ರಾಮಸ್ಥರೇ ಮದುವೆ ತಡೆಯಲು ಹೋದ ಅಧಿಕಾರಿಗಳನ್ನು ಬೆದರಿಸಿದ ಪ್ರಕರಣ ಬೆಳಕಿಗೆ ಬಂದಿದೆ. ತಾಲೂಕಿನ ವಿಶ್ವಾಸಪುರ ತಾಂಡಾದಲ್ಲಿ 16 ವರ್ಷದ ಬಾಲಕಿ ಜೊತೆ 22 ವರ್ಷದ ಯುವಕನ ವಿವಾಹ ಜರುಗುತಿತ್ತು. ಈ ವೇಳೆ ಖಚಿತ ಮಾಹಿತಿ ಮೆರೆಗೆ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ. ಮದುವೆಯನ್ನು ನಿಲ್ಲಿಸುವಂತೆ ಕೂಡ ಮನವೊಲಿಸಿದ್ದಾರೆ.

ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಮದುವೆಗೆ ಸಿದ್ದತೆ ನಡೆಸಿರುವ ವಿಷಯ ತಿಳಿಯುತ್ತಿದ್ದಂತೆ ಶಿಶು ಅಭಿವೃದ್ಧಿ ಅಧಿಕಾರಿ ರಾಧಾ ಮಣ್ಣೂರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಗೋವಿಂದ ರಾಠೋಡ ಅವರ ಅಧಿಕಾರಿಗಳ ತಂಡ ವಿಶ್ವಾಸಪುರ ತಾಂಡಾಕ್ಕೆ ಭೇಟಿ ನೀಡಿದ್ದಾರೆ.

ಇದನ್ನು ಓದಿ: ರಾಜ್ಯೋತ್ಸವದಿನದಂದು ಎಂಇಎಸ್​ ಕಪ್ಪು ಪಟ್ಟಿ ಪ್ರತಿಭಟನೆ; ಕನ್ನಡ ಸಂಘಗಳಿಂದ ವಿರೋಧ

ಈ ವೇಳೆ ಅಧಿಕಾರಿಗಳು  ಮದುವೆ ಮಂಟಪದ ಕಡೆಗೆ ತೆರಳುವಾಗ ಗ್ರಾಮಸ್ಥರು ಘೇರಾವ್ ಹಾಕಿ ಕೂಗಾಡಿದ್ದಾರೆ. ನಿಮಗೆ ಮದುವೆ ನಡೆಯುತ್ತಿದ್ದೆ ಎಂದು ಯಾರು ಹೇಳಿದರು. ಹೇಗೆ ನಮ್ಮ ಹುಡುಗಿಗೆ ಕರೆದುಕೊಂಡು ಹೋಗುತ್ತೀರಾ, ನೋಡುತ್ತೇವೆ ಎಂದು ಬೆದರಿಸಿದ್ದಾರೆ.  ಈ ವೇಳೆ ಅಧಿಕಾರಿ ಹಾಗೂ ಗ್ರಾಮಸ್ಥರ ನಡುವೆ ಮದುವೆ ಮಂಟಪದಲ್ಲಿಯೇ‌ ಮಾತಿನ ಚಕಮಕಿಯೂ ನಡೆಯಿತು.

ಅಧಿಕಾರಿಗಳು ವಾಗ್ವಾದಕ್ಕೆ ಇಳಿದನ್ನು ಕಂಡ ಪೋಷಕರು, ಅಪ್ರಾಪ್ತ ಮಗಳನ್ನು ಬಚ್ಚಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಅಪ್ರಾಪ್ತೆಯನ್ನು ಹುಡುಕಾಡಲು ಅಧಿಕಾರಿಗಳು ಪ್ರಾಯಸ ಪಟ್ಟರು. ಈ ಸಂದರ್ಭದಲ್ಲಿ ಅಪ್ರಾಪ್ತೆ ತಾಯಿ ಅಧಿಕಾರಿಗಳನ್ನು ಬೆದರಿಸುವ ಪ್ರಯತ್ನ ಮಾಡಿ ಹೈಡ್ರಾಮಾ ಸೃಷ್ಟಿಸಿದರು.   ಸ್ಥಳಕ್ಕೆ ಪೊಲೀಸರ ಆಗಮನದ ಬಳಿಕ ಕುಟುಂಬದವರು ಶಾಂತವಾದರು. ಬಳಿಕ ಪೊಲೀಸರ ಸಹಾಯದಿಂದ ಅಪ್ರಾಪ್ತ ಬಾಲಕಿಯನ್ನು ರಕ್ಷಿಸಲಾಗಿದ್ದು, ಬಾಲ ಮಂದಿರಕ್ಕೆ ಒಪ್ಪಿಸಲಾಗಿದೆ ಎಂದು ಶಿಶು ಅಭಿವೃದ್ಧಿ ಅಧಿಕಾರಿ ರಾಧಾ ಮಣ್ಣೂರು ತಿಳಿಸಿದ್ದಾರೆ.
Published by:Seema R
First published: