HOME » NEWS » State » VILLAGERS PROTESTED AGAINST ILLEGAL RECRUIT OF WOMEN IN ANGANAVADI IN HASANA GNR

ಹಾಸನ: ಅಂಗನವಾಡಿ ಅಕ್ರಮ ನೇಮಕಾತಿ ವಿರೋಧಿಸಿ ಗ್ರಾಮಸ್ಥರ ಪ್ರತಿಭಟನೆ

ಅಧಿಕಾರಿಗಳು ಸರ್ಕಾರದ ನಿಯಮ ಮೀರಿ ಅನ್ಯ ಗ್ರಾಮದ ಮಹಿಳೆಗೆ ನಮ್ಮ ಊರಿನ ಅಂಗನವಾಡಿಯಲ್ಲಿ ಕೆಲಸ ನೀಡಿದ್ದಾರೆ. ಹೀಗಾಗಿ ನಮ್ಮ ಗ್ರಾಮದಲ್ಲಿ ಅಂಗನವಾಡಿ ಇಲ್ಲದೇ ಇದ್ದರೂ ಪರವಾಗಿಲ್ಲ. ಆದರೆ ಬೇರೆ ಊರಿನ ಮಹಿಳೆ ಬಂದು ಅಂಗನವಾಡಿ ತೆರೆಯಲು ಮಾತ್ರ ಬಿಡಲ್ಲ ಅಂತಿದ್ದಾರೆ.

news18-kannada
Updated:September 14, 2020, 7:18 AM IST
ಹಾಸನ: ಅಂಗನವಾಡಿ ಅಕ್ರಮ ನೇಮಕಾತಿ ವಿರೋಧಿಸಿ ಗ್ರಾಮಸ್ಥರ ಪ್ರತಿಭಟನೆ
ಅಂಗನವಾಡಿ
  • Share this:
ಹಾಸನ(ಸೆ.14): ಸರ್ಕಾರ ಗ್ರಾಮಗಳ ಮಕ್ಕಳ ಅನುಕೂಲ ಸೇರಿದಂತೆ ಹಲವಾರು ಉದ್ದೇಶಗಳಿಗಾಗಿ ಅಂಗನವಾಡಿ ಕೇಂದ್ರ ತೆರೆದಿರುತ್ತೆ. ಆದರೆ, ಅಂಗನವಾಡಿಗೆ ಹುದ್ದೆಗೆ ನೇಮಕಾತಿ ವಿಚಾರದಲ್ಲಿ ಅಕ್ರಮ ನಡೆದಿದೆ ಎಂದು ಎರಡು ವರ್ಷದಿಂದ ಅಂಗನವಾಡಿ ಕೇಂದ್ರಕ್ಕೆ ಬೀಗ ಜಡಿಯಲಾಗಿದ್ದು, ಗ್ರಾಮಸ್ಥರು ಮತ್ತು ಅಧಿಕಾರಿಗಳ ನಡುವೆ ಗಲಾಟೆಗೆ ಕಾರಣವಾಗಿದೆ. ಹೀಗೆ ಅಂಗನವಾಡಿಗೆ ಬೀಗ ತೆರೆಯಲು ಅವಕಾಶ ಮಾಡಿಕೊಡದೆ ಪೊಲೀಸ್ ಇನ್ಸ್‌ಪೆಕ್ಟರ್ ಜೊತೆ ವಾಕ್ಸಮರ ನಡೆಸಿದವರು ಅರಕಲಗೂಡು ತಾಲ್ಲೂಕಿನ ಕೋಟೆ ಹಿಂದಲಕೊಪ್ಪಲು ಗ್ರಾಮಸ್ಥರು. ಅಂಗನವಾಡಿ ಕಾರ್ಯಕರ್ತೆ ಹುದ್ದೆಯನ್ನು ಕಾನೂನಿನ ಪ್ರಕಾರ ಸ್ಥಳೀಯ ಮಹಿಳೆಗೆ ನೀಡಬೇಕು. ಅಧಿಕಾರಿಗಳು ಸರ್ಕಾರದ ನಿಯಮ ಮೀರಿ ಅನ್ಯ ಗ್ರಾಮದ ಮಹಿಳೆಗೆ ನಮ್ಮ ಊರಿನ ಅಂಗನವಾಡಿಯಲ್ಲಿ ಕೆಲಸ ನೀಡಿದ್ದಾರೆ. ಹೀಗಾಗಿ ನಮ್ಮ ಗ್ರಾಮದಲ್ಲಿ ಅಂಗನವಾಡಿ ಇಲ್ಲದೇ ಇದ್ದರೂ ಪರವಾಗಿಲ್ಲ. ಆದರೆ ಬೇರೆ ಊರಿನ ಮಹಿಳೆ ಬಂದು ಅಂಗನವಾಡಿ ತೆರೆಯಲು ಮಾತ್ರ ಬಿಡಲ್ಲ ಅಂತಿದ್ದಾರೆ.

ಅಂಗನವಾಡಿ ಕೇಂದ್ರದ ಬೀಗ ತೆರೆಯಲು ಬಂದ ಶಿಶು ಅಭಿವೃದ್ಧಿ ಅಧಿಕಾರಿ ಹರಿಪ್ರಸಾದ್‌  ಹಾಗೂ ಸಬ್ ಇನ್ಸ್​ಪೆಕ್ಟರ್ ವಿಜಯಕೃಷ್ಣರನ್ನ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಸಬ್ ಇನ್ಸ್‌ಪೆಕ್ಟರ್ ಗ್ರಾಮಸ್ಥರನ್ನು ಕುರಿತು ಅಂಗನವಾಡಿ ಕೇಂದ್ರದ ಬೀಗ ತೆರೆಯಲು ಬಿಡಿ ಎಂದು ಎಚ್ಚರಿಕೆ ನೀಡಿದರೂ ಕೂಡ ಇದಕ್ಕೆ ಒಪ್ಪಂದ ಮಹಿಳೆಯ, ನಮ್ಮ ಬೇಡಿಕೆ ನ್ಯಾಯ ಸಮ್ಮತವಾಗಿದೆ. ಇಲಾಖೆ ಅಧಿಕಾರಿಗಳೇ ನಿಯಮ ಮೀರಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಆಯ್ಕೆ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವಿನ ಗಲಾಟೆಯಿಂದಾಗಿ ಅಂಗನವಾಡಿ ಕೇಂದ್ರ ಗ್ರಾಮದಲ್ಲಿ ಇದ್ದೂ ಇಲ್ಲದಂತಾಗಿದೆ. ಇದ್ರಿಂದ ಬಾಣಂತಿಯರಿಗೆ ಹಾಗೂ ಮಕ್ಕಳಿಗೆ ಅಂಗನವಾಡಿ ಕೇಂದ್ರದಿಂದ ಸಿಗುವ ಸೌಲಭ್ಯ ಕೂಡ ಸಿಗದಂತಾಗಿದೆ. ಆದಷ್ಟು ಬೇಗ ಗ್ರಾಮಸ್ಥರು ಮತ್ತು ಅಧಿಕಾರಿಗಳು ಒಮ್ಮತದ ನಿರ್ಧಾರಕ್ಕೆ ಬಂದು ಆಗಿರುವ ಸಮಸ್ಯೆ ಸರಿಪಡಿಸಬೇಕಿದೆ.

ಇದನ್ನೂ ಓದಿ: ಸಂಸಾರದಲ್ಲಿ ಜಗಳ ಜೀವನದ ಭಾಗ - ಗೃಹ ಸಚಿವ ಬಸವರಾಜ ಬೊಮ್ಮಾಯಿ
Published by: Ganesh Nachikethu
First published: September 14, 2020, 7:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading