• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Belagavi: ನಮ್ಮೂರಿನ ಸ್ಮಶಾನಕ್ಕಿಲ್ಲ ದಾರಿ; ಡಿಸಿ ಕಚೇರಿಯಲ್ಲೇ ಮೃತದೇಹ ಅಂತ್ಯಕ್ರಿಯೆಗೆ ಯತ್ನ

Belagavi: ನಮ್ಮೂರಿನ ಸ್ಮಶಾನಕ್ಕಿಲ್ಲ ದಾರಿ; ಡಿಸಿ ಕಚೇರಿಯಲ್ಲೇ ಮೃತದೇಹ ಅಂತ್ಯಕ್ರಿಯೆಗೆ ಯತ್ನ

ಶವ ಇಟ್ಟು ಪ್ರತಿಭಟನೆ

ಶವ ಇಟ್ಟು ಪ್ರತಿಭಟನೆ

ಸ್ಮಶಾನಕ್ಕೆ ಹೋಗಲು ದಾರಿ ಇಲ್ಲ ಎಂದು ಸಿಡಿದೆದ್ದ ಸವದತ್ತಿ ತಾಲೂಕಿನ ಏಣಗಿ ಗ್ರಾಮಸ್ಥರು 90 ಕಿ.ಮೀ ದೂರದಿಂದ ಶವ ತೆಗೆದುಕೊಂಡು ಬೆಳಗಾವಿ ಡಿಸಿ ಕಚೇರಿಗೆ ಬಂದು ಪ್ರತಿಭಟನೆ ನಡೆಸಿದ್ದಾರೆ.

  • Share this:

ಬೆಳಗಾವಿ (ಜೂ.27): ಜಿಲ್ಲಾಧಿಕಾರಿಗಳ ಕಚೇರಿ (District Collector Office) ಆವರಣದಲ್ಲಿ ಬೆಳ್ಳಂ ಬೆಳಿಗ್ಗೆ ಡೆಡ್ ಬಾಡಿ ಪ್ರತ್ಯಕ್ಷವಾಗಿದೆ. ಗುದ್ದಲಿ-ಸಣಕಿ ಹಿಡಿದು, ಡೆಡ್ ಬಾಡಿ ಜೊತೆ ಬಂದ ಗ್ರಾಮಸ್ಥರನ್ನ (Villagers) ನೋಡಿ ಪೋಲಿಸರು ಹೌಹಾರಿದ್ರೆ, ಸುದ್ದಿ ತಿಳಿದ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಓಡೋಡಿ ಬಂದಿದ್ದಾರೆ.  ಇಂತಹದೊಂದು ವಿಚಿತ್ರ ಘಟನೆಗೆ ಸಾಕ್ಷಿಯಾಗಿದ್ದು ಬೆಳಗಾವಿ (Belagavi) ಜಿಲ್ಲಾಧಿಕಾರಿಗಳ ಕಚೇರಿ. ಇಂದು ಬೆಳ್ಳಂ ಬೆಳಿಗ್ಗೆ ಬೆಳಗಾವಿ ಡಿಸಿ ಆವರಣಕ್ಕೆ 30 ರಿಂದ 40 ಜನ ಬಂದಿದ್ರು, ಅವರಷ್ಟೇ ಬಂದಿದ್ರೆ ಓಕೆ, ಆದ್ರೆ ಅವರು ಸ್ಮಶಾನಕ್ಕೆ (Graveyard) ತೆಗೆದುಕೊಂಡು ಹೋಗಬೇಕಾದ ಹೆಣವನ್ನ ಹೊತ್ತುಕೊಂಡು ಬಂದಿದ್ರು.


ಜಿಲ್ಲಾಧಿಕಾರಿ ಕಚೇರಿ ಮುಂದೆ ಮೃತದೇಹ


ಹೀಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಡೆಡ್ ಬಾಡಿ ಸಮೇತ ಬಂದವರು ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಏಣಗಿ ಗ್ರಾಮಸ್ಥರು. ಸ್ಮಶಾನಕ್ಕೆ ಹೋಗಲು ದಾರಿ ಇಲ್ಲದ್ದರಿಂದ ಸಿಡಿದೆದ್ದ ಸವದತ್ತಿ ತಾಲೂಕಿನ ಏಣಗಿ ಗ್ರಾಮಸ್ಥರು 90 ಕಿ.ಮೀ ದೂರದಿಂದ ಶವ ತೆಗೆದುಕೊಂಡು ಬೆಳಗಾವಿ ಡಿಸಿ ಕಚೇರಿಗೆ ಬಂದು ಪ್ರತಿಭಟನೆ ನಡೆಸಿದ್ದಾರೆ. ಏಣಗಿ ಗ್ರಾಮದಲ್ಲಿ ಅಬ್ದುಲ್ ಖಾದರ್ ಮಿಶ್ರಿಕೋಟಿ ಎಂಬುವವರು ಸಾವನ್ನಪ್ಪಿದ್ದರು.  ಆದ್ರೆ ಗ್ರಾಮದ ಹಿಂದೂ-ಮುಸ್ಲಿಂ ಸ್ಮಶಾನಗಳಿಗೆ ಹೋಗಲು ದಾರಿಯೇ ಇಲ್ಲದಂತಾಗಿದೆ.


ಬೆಳಗಾವಿ ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ


ಹಲವು ಭಾರಿ ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಿದ್ರು ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರ ರೈತ ಮುಖಂಡರ ಬೆಂಬಲದೊಂದಿಗೆ ಅಬ್ದುಲ್ ಖಾದರ್ ಶವವನ್ನು ಬೆಳಗಾವಿ ಡಿಸಿ ಕಚೇರಿ ಆವರಣಕ್ಕೆ ತಂದು ಪ್ರತಿಭಟನೆ ನಡೆಸಿದ್ದಲ್ಲದೇ, ಇಲ್ಲಿಯೇ ಅಂತ್ಯಕ್ರಿಯೆ ಮಾಡ್ತಿವಿ ಎಂದು ಪಟ್ಟು ಹಿಡಿದಿದ್ದಾರೆ.


ಇದನ್ನೂ ಓದಿ: Siddaramaiah: ಪಾಪದ ಹಣದಲ್ಲಿ ಆಪರೇಷನ್​ ಕಮಲ; ಜೆಡಿಎಸ್​ಗೆ ನನ್ನನ್ನು ಕಂಡ್ರೆ ಭಯ- ಸಿದ್ದರಾಮಯ್ಯ


ಗ್ರಾಮಸ್ಥರ ಮನವೊಲಿಸಿದ ಡಿಸಿ


ಸುದ್ದಿ ತಿಳಿದ ಪೋಲಿಸರು ಓಡೋಡಿ ಬಂದ್ರು, ಅಪರ ಜಿಲ್ಲಾಧಿಕಾರಿಗಳು ಕೂಡ ಸ್ಥಳಕ್ಕೆ ಬಂದು ಗ್ರಾಮಸ್ಥರ ಮನವೊಲಿಸಲು ಎಷ್ಟೇ ಪ್ರಯತ್ನಿಸಿದ್ರು ಗ್ರಾಮಸ್ಥರು ಜಗ್ಗದ್ದರಿಂದ ಸ್ವತಃ ಸ್ಥಳಕ್ಕೆ ಖುದ್ದು ಬೆಳಗಾವಿ ಡಿಸಿ ನಿತೇಶ್ ಪಾಟೀಲ್ ಓಡೋಡಿ ಬಂದ್ರು, ಡಿಸಿ-ಗ್ರಾಮಸ್ಥರ ನಡುವೆ ಸಾಕಷ್ಟು ಹಗ್ಗ ಜಗ್ಗಾಟ ನಡೆದ ಬಳಿಕ ಕೊನೆಗೂ ಗ್ರಾಮಸ್ಥರ ಮನವೊಲಿಸುವಲ್ಲಿ ಡಿಸಿ ನಿತೇಶ್ ಪಾಟೀಲ್ ಯಶಸ್ವಿಯಾಗಿದ್ದಾರೆ.


ಶೀಘ್ರದಲ್ಲೇ ಸ್ಮಶಾನಕ್ಕೆ ಹೋಗುವ ದಾರಿ ವ್ಯವಸ್ಥೆ


ಎಸಿ, ತಹಶೀಲ್ದಾರ್​ ಸಮ್ಮುಖದಲ್ಲಿ ಅಂತ್ಯಕ್ರಿಯೆ ಮಾಡುವ ಭರವಸೆ ನೀಡಿರುವ ಜಿಲ್ಲಾಧಿಕಾರಿಗಳು ಶೀಘ್ರದಲ್ಲೇ ಸ್ಮಶಾನಕ್ಕೆ ಹೋಗುವ ದಾರಿಯನ್ನು ಭೂ ಸ್ವಾಧೀನ ಪಡಿಸಿಕೊಂಡು ದಾರಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ ಮೇಲೆ ಗ್ರಾಮಸ್ಥರು ಶವ ತೆಗೆದುಕೊಂಡು ಅಂತ್ಯಕ್ರಿಯೆಗಾಗಿ ಏಣಗಿ ಗ್ರಾಮಕ್ಕೆ ತೆರಳಿದ್ರು.


ತಾಳ್ಮೆಯಿಂದ ಸಮಸ್ಯೆ ಬಗೆಹರಿಸಿದ ಡಿಸಿ


ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಗೆ ದಿಢೀರ್ ಬಂದ ಡೆಡ್ ಬಾಡಿ ಕೆಲ ಕಾಲ ಗೊಂದಲ ಸೃಷ್ಟಿಸಿದ್ದು, ಜಿಲ್ಲಾಡಳಿತ ಕೂಡ ಅಷ್ಟೇ ತಾಳ್ಮೆ ಯಿಂದ ಪ್ರಕರಣವನ್ನು ಅಂತ್ಯಗೊಳಿಸಿದೆ. ಸ್ಮಶಾನಕ್ಕೆ ಜಾಗ ಇಲ್ಲದಿರುವುದಕ್ಕೆ ಡಿಸಿ ಕಚೇರಿ ಎದುರು ಹೆಣ ಇಟ್ಟು ಪ್ರತಿಭಟನೆ.  ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಡಿಸಿ ನಿತೇಶ ಪಾಟೀಲ್, ಶೀಘ್ರವೇ ಸ್ಮಶಾನ ಭೂಮಿ ಕೊಡುವ ಭರವಸೆ ನೀಡಿದರು.


ಇದನ್ನೂ ಓದಿ: Selfie Suicide: ಹುಡುಗಿ ಕೈಕೊಟ್ಟಳು ಅಂತ ವಿಷ ಕುಡಿದ ಯುವಕ! ಸೆಲ್ಫಿ ವಿಡಿಯೋ ಮಾಡಿ ಸೂಸೈಡ್‌


ಗ್ರಾಮಸ್ಥರ ನಡುವಿನ ಸಂಧಾನ ಸಭೆ ಯಶಸ್ವಿ


ಡಿಸಿ ಜೊತೆಗೆ ಗ್ರಾಮಸ್ಥರ ನಡುವಿನ ಸಂಧಾನ ಸಭೆ ಯಶಸ್ವಿ. ಬಳಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತ ಮುಖಂಡರ ಹೈಡ್ರಾಮಾ. ಸ್ಮಶಾನ ಭೂಮಿ ಮಂಜೂರಾಗುವವರೆಗೆ ಶವ ಹಸ್ತಾಂತರ ಬೇಡ ಎಂದು ಪಟ್ಟು. ರೈತ ಹೋರಾಟಗಾರ ಜಯಶ್ರೀ ಗುರೆನ್ನವರ, ಅಶೋಕ ಯಮಕನಮರಡಿ ವಶಕ್ಕೆ ಕೊರಳಪಟ್ಟಿ ಹಿಡಿದು ವಾಹನದಲ್ಲಿ ಕೂಡಿಸಿದ ಪೊಲೀಸರು.

Published by:Pavana HS
First published: