ಈ ದೇವಿ ಜಾತ್ರೆಗಾಗಿ ಊರಿಗೇ ಊರೇ ಖಾಲಿ; ಇಡೀ ದಿನ ಜಾತ್ರೆಗೆ ಹೋದೋರು ಸಂಜೆಯವರೆಗೆ ಮನೆಗೆ ಹೋಗುವಂತಿಲ್ಲ…!

ಗಣಿನಾಡು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಚೋರುನೂರು ಎಂಬ ಗ್ರಾಮದಲ್ಲಿ ವಿಶಿಷ್ಟ ಆಚರಣೆಯ ಜಾತ್ರೆ ನಡೆಯೋದು ಗ್ರಾಮದ ಒಳಗಲ್ಲ, ಬದಲಾಗಿ ಗ್ರಾಮದ ಹೊರವಲಯದಲ್ಲಿ. ಇದಕ್ಕಾಗಿ ಇಲ್ಲಿಯ ಜನತೆಯ ತಮ್ಮ ಗ್ರಾಮ ಬಿಟ್ಟು ಜಾತ್ರೆಗೆ ಮನೆಮಂದಿಯೆಲ್ಲ ಹೋಗ್ತಾರೆ

news18-kannada
Updated:January 15, 2020, 9:14 PM IST
ಈ ದೇವಿ ಜಾತ್ರೆಗಾಗಿ ಊರಿಗೇ ಊರೇ ಖಾಲಿ; ಇಡೀ ದಿನ ಜಾತ್ರೆಗೆ ಹೋದೋರು ಸಂಜೆಯವರೆಗೆ ಮನೆಗೆ ಹೋಗುವಂತಿಲ್ಲ…!
ಲಕ್ಕಮ್ಮ ಜಾತ್ರೆ
  • Share this:
ಬಳ್ಳಾರಿ(ಜ.15) : ಎಲ್ಲ ಗ್ರಾಮದಲ್ಲಿ ನಡೆಯುವಂತೆ ಇಲ್ಲಿಯೂ ಜಾತ್ರೆ ನಡೆಯುತ್ತೆ. ಆದರೆ ಇಲ್ಲಿಯ ಜನ ಜಾತ್ರೆಗೆ ಊರಿಗೆ ಊರೇ ಬಿಟ್ಟು ಹೊರಹೋಗ್ತಾರೆ. ಈಗಷ್ಟೆ ಹುಟ್ಟಿದ ಮಗುವಿರಲಿ, ಹಿರಿಯರಿರಲಿ ಎಲ್ಲರೂ ಮನೆ ಬಿಟ್ಟು ಹೊರಹೋಗಲೇಬೇಕು. ಇಷ್ಟು ಮಾತ್ರವಲ್ಲ ಹಿಂದೂ-ಮುಸ್ಲಿಂ ಎನ್ನುವ ಭೇದಭಾವ ಮಾಡದೇ ಮನೆಗೆ ಬೀಗ ಹಾಕಿ ಊರ ಹೊರಗೆ ಜರುಗುವ ಜಾತ್ರೆಗೆ ಕುಟುಂಬ ಸಮೇತರಾಗಿ ಭಾಗವಹಿಸುತ್ತಾರೆ.

ಪ್ರತಿವರ್ಷ ಶೂನ್ಯಮಾಸದ ತಿಂಗಳಿನಲ್ಲಿ ಒಂದು ದಿನ ಈ ರೀತಿಯ ವಾತಾವರಣವಿರುತ್ತದೆ. ಮಿಕ್ಕುಳಿದ ದಿನ ಎಂದಿನಂತೆ ಗ್ರಾಮದಲ್ಲಿ ನಡೆಯುವಂತಹ ಚಟುವಟಿಕೆ ಮುಂದುವರೆಯುತ್ತದೆ. ಇದಕ್ಕೆಲ್ಲ ಕಾರಣ ಈ ಗ್ರಾಮದಲ್ಲಿ ಪ್ರತಿವರ್ಷ ಜರುಗುವ ಅಧಿದೇವತೆ ಗುಳೇದ ಲಕ್ಕಮ್ಮ ದೇವಿಯ ಜಾತ್ರೆ.

ಗಣಿನಾಡು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಚೋರುನೂರು ಎಂಬ ಗ್ರಾಮದಲ್ಲಿ ವಿಶಿಷ್ಟ ಆಚರಣೆಯ ಜಾತ್ರೆ ನಡೆಯೋದು ಗ್ರಾಮದ ಒಳಗಲ್ಲ, ಬದಲಾಗಿ ಗ್ರಾಮದ ಹೊರವಲಯದಲ್ಲಿ. ಇದಕ್ಕಾಗಿ ಇಲ್ಲಿಯ ಜನತೆಯ ತಮ್ಮ ಗ್ರಾಮ ಬಿಟ್ಟು ಜಾತ್ರೆಗೆ ಮನೆಮಂದಿಯೆಲ್ಲ ಹೋಗ್ತಾರೆ. ಬೆಳಗ್ಗೆಯಿಂದ ಸಂಜೆಯವರೆಗೆ ಗ್ರಾಮದ ಜನರೆಲ್ಲ ಜಾತ್ರೆಗೆ ಹೋಗಲೇಬೇಕು. ಮನೆಯಲ್ಲಿ ಒಬ್ಬೇ ಒಬ್ಬರು ಇರುವಂತಿಲ್ಲ.

ಗ್ರಾಮದಿಂದ 3 ಕಿಮೀ ದೂರದಲ್ಲಿರುವ ದೇವಸ್ಥಾನಕ್ಕೆ ಲಕ್ಕಮ್ಮ ದೇವಿಯ ಪುತ್ರಿಯನ್ನ ಮೆರವಣಿಗೆ ಮೂಲಕ ತರಲಾಗುತ್ತದೆ. ಆಗ ಭಕ್ತರು ದೇವರಿಗೆ ಪೂಜೆ ಸಲ್ಲಿಸಿ ಎಲ್ಲರೂ ಒಟ್ಟಿಗೆ ಕುಳಿದುಕೊಂಡು ಊಟ ಮಾಡುತ್ತಾರೆ ಎಂದು ಗ್ರಾಮದ ಹಿರಿಯ ಮುಖಂಡ ಚೋರನೂರು ಕೊಟ್ರಪ್ಪ ಹೇಳುತ್ತಾರೆ.

ಗುಳೇದ ಲಕ್ಕಮ್ಮ ದೇವಿಯ ಜಾತ್ರೆಗೆ ಜಾತ್ಯತೀತವಾಗಿ ಧರ್ಮವನ್ನು ಮೀರಿ ಸಂಪ್ರದಾಯಗಳಿಗೆ ಇಲ್ಲಿಯ ಗ್ರಾಮಸ್ಥರು ಕಟಿಬದ್ಧರಾಗಿದ್ದಾರೆ. ಧರ್ಮ-ಮತ-ಪಂಥ ಎನ್ನದೇ ಹಿಂದೂಮುಸ್ಲಿಂ ಬಾಂಧವರು ಅಣ್ಣತಮ್ಮಂದಿರ ರೀತಿ ಜಾತ್ರೆಗೆ ಆಗಮಿಸುತ್ತಾರೆ. ಜಾತ್ರೆಯ ಪದ್ಧತಿಯಂತೆ ಅಂದು ಬೆಳಗ್ಗೆ ದೇವಿಯ ಮೆರವಣಿಗೆ ಸಂದರ್ಭದಲ್ಲಿ ಪೂಜಿಸಿ ಮನೆಗೆ ಬೀಗ ಹಾಕಿ ಮನೆಮಂದಿಯೆಲ್ಲ ಅದರ ಹಿಂದೆ ನಡೆಯುತ್ತಾರೆ. ಗ್ರಾಮದ ಹೊರವಲಯದಲ್ಲಿರುವ ತಮ್ಮ ಜಮೀನಿನಲ್ಲಿ ಇಲ್ಲವೇ ದೇವಿಯ ಜಾತ್ರೆ ನಡೆಯುವ ಸುತ್ತಮುತ್ತಲ ಪ್ರದೇಶದಲ್ಲಿ ಪೂಜೆ ಸಲ್ಲಿಸುತ್ತಾರೆ.

ಮಧ್ಯಾಹ್ನ ಮನೆಯಿಂದ ಅಡುಗೆ ಮಾಡಿಕೊಂಡು ಬಂದ ಸಜ್ಜೆ ರೊಟ್ಟಿ, ವಿವಿಧ ಕಾಳುಪಾಲ್ಯ ಜೊತೆಗೆ ಸವಿರುಚಿಯ ಭೋಜನ ಮಾಡುತ್ತಾರೆ. ಸಂಜೆ ಜಾತ್ರೆ ಮುಗಿದ ಮೇಲೆ ಗ್ರಾಮದ ಬಾರಕೇರರು ಚರಗ ಚಲ್ಲಿದ ಮೇಲೆ ತಮ್ಮೂರಿನ ಮನೆ ಕಡೆಗೆ ಹೆಜ್ಜೆ ಹಾಕ್ತಾರೆ. ಇಡೀ ಗ್ರಾಮವನ್ನೇ ಒಂದು ದಿನ ತೊರೆಯುವುದ್ರಿಂದ ಗ್ರಾಮ ಸ್ವಯಂಘೋಷಿತ ಬಂದ್ ರೀತಿಯಲ್ಲಿ ಕಾಣುತ್ತದೆ. ಗ್ರಾಮದಲ್ಲಿ ಈಡೀ ದಿನ ಯಾವೊಬ್ಬ ವ್ಯಕ್ತಿ ಇಲ್ಲದಿದ್ದರೂ, ಯಾವುದೇ ಕಳ್ಳತನ ಆಗುವುದಿಲ್ಲ ಅನ್ನೋದು ಸ್ಥಳೀಯರ ಅಭಿಪ್ರಾಯ.

ಇದನ್ನೂ ಓದಿ : ​​​​ಬಗೆಹರಿಯದ ಕೆಪಿಸಿಸಿ ಅಧ್ಯಕ್ಷ ಗಾದಿ ಕಗ್ಗಂಟು - ಬರಿಗೈಲಿ ವಾಪಸ್ಸಾದ ಸಿದ್ಧರಾಮಯ್ಯ - ಡಿಕೆಶಿ ಲಾಬಿ ಆರಂಭಇನ್ನು ಈ ಗ್ರಾಮದಲ್ಲಿ ಜಾತ್ರೆಯ ದಿನ ಬೆಳಗ್ಗೆಯಿಂದ ಸಂಜೆಯವರೆಗೆ ಸರಕಾರಿ ಶಾಲೆಗಳು, ಕಾಲೇಜು, ಗ್ರಾಮಪಂಚಾಯತಿ, ಅಂಚೆ-ಕಚೇರಿ ಕೊನೆಗೆ ಲಕ್ಕಮ್ಮ ದೇವಿಯ ದೇವಸ್ಥಾನದ ಬಾಗಿಲು ಮುಚ್ಚಿರುತ್ತದೆ. ಲಕ್ಕಮ್ಮ ದೇವಿಯ ಗಂಡನ ಊರು ಚೋರನೂರು ಗ್ರಾಮವಾದರೆ, ಲಕ್ಕಮ್ಮ ದೇವಿಯ ಗ್ರಾಮ ತವರೂರು ಗುಡೇರಹಳ್ಳಿ. ಈ ಎರಡೂ ಗ್ರಾಮದ ಮಧ್ಯೆದಲ್ಲಿ ಜಾತ್ರೆ ನಡೆಯುವುದು ಅನಾದಿ ಕಾಲದಿಂದ ನಡೆದುಕೊಂಡುಬಂದ ಪದ್ಧತಿ. ಈ ಎರಡೂ ಗ್ರಾಮಸ್ಥರು ತಮ್ಮ ಮನೆಯ ಎಲ್ಲ ಸದಸ್ಯರು, ಊರಿನ ಎಲ್ಲ ಜನರು ಇಡೀ ದಿನ ಜಾತ್ರೆಗೆ ಆಗಮಿಸಿ ಒಂದೆಡೆ ಸೇರಿ ಪ್ರೀತಿ-ಸಾಮರಸ್ಯ ಮರೆಯುವುದು ಇಲ್ಲಿನ ಮತ್ತೊಂದು ವಿಶೇಷ.
Published by: G Hareeshkumar
First published: January 15, 2020, 8:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading