• Home
  • »
  • News
  • »
  • state
  • »
  • Untouchability: ದಲಿತ ಮಹಿಳೆ ನೀರು ಕುಡಿದಿದ್ದಕ್ಕೆ ಟ್ಯಾಂಕ್ ಖಾಲಿ; ಗೋಮೂತ್ರದಿಂದ ಶುದ್ಧಿ!​

Untouchability: ದಲಿತ ಮಹಿಳೆ ನೀರು ಕುಡಿದಿದ್ದಕ್ಕೆ ಟ್ಯಾಂಕ್ ಖಾಲಿ; ಗೋಮೂತ್ರದಿಂದ ಶುದ್ಧಿ!​

ಗ್ರಾಮದ ಎಲ್ಲಾ ಟ್ಯಾಂಕ್​ಗಳಲ್ಲಿ ನೀರು ಕುಡಿದ ಯುವಕರು

ಗ್ರಾಮದ ಎಲ್ಲಾ ಟ್ಯಾಂಕ್​ಗಳಲ್ಲಿ ನೀರು ಕುಡಿದ ಯುವಕರು

ದಲಿತ ಮಹಿಳೆ ನೀರಿ ಕುಡಿದಿದ್ದಕ್ಕೆ ಇಡೀ ಟ್ಯಾಂಕ್​ ನೀರು ಖಾಲಿ ಮಾಡಿದ  ಘಟನೆ ತಾಲೂಕು ಆಡಳಿತ ಮಂಡಳಿ ಗಮನಕ್ಕೆ ಬಂದಿದ್ದು, ಸ್ಥಳೀಯ ಕಂದಾಯ ನಿರೀಕ್ಷಕ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

  • News18 Kannada
  • Last Updated :
  • Karnataka, India
  • Share this:

ಚಾಮರಾಜನಗರ (ನ.19): ದೇಶ ಎಷ್ಟೇ ಅಭಿವೃದ್ಧಿ ಹೊಂದಿದ್ರು ಜಾತಿ ಹಾಗೂ ಅಸ್ಪೃಶ್ಯತೆ ಭೂತ ಸಮಾಜವನ್ನು ಬಿಟ್ಟು ಹೋಗಿಲ್ಲ. ಚಾಮನಗರ ಜಿಲ್ಲೆ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ದಲಿತ ಮಹಿಳೆಯೊಬ್ಬರು (Dalit Women) ಊರಲ್ಲಿರುವ ಟ್ಯಾಂಕ್‌ (Tank) ನಲ್ಲಿಯಲ್ಲಿ ನೀರು (Water) ಕುಡಿದರೆಂಬ ಕಾರಣಕ್ಕೆ ಅದರಲ್ಲಿದ್ದ ನೀರೆಲ್ಲವನ್ನೂ ಹೊರಕ್ಕೆ ಹರಿಸಿ, ಗೋಮೂತ್ರದಿಂದ ಶುದ್ಧೀಕರಿಸಲಾಗಿದೆ. ಟ್ಯಾಂಕ್​ನ ಎಲ್ಲಾ ನಲ್ಲಿಗಳಿಂದಲೂ ನೀರು ಹರಿಸುತ್ತಿರುವ ವೀಡಿಯೊವನ್ನು (Video) ವ್ಯಕ್ತಿಯೊಬ್ಬರು ಫೇಸ್‌ಬುಕ್‌ನಲ್ಲಿ (Facebook) ಹಾಕಿದ್ದಾರೆ.


ಗ್ರಾಮಕ್ಕೆ ಅಧಿಕಾರಿಗಳ ಭೇಟಿ 


ದಲಿತ ಮಹಿಳೆ ನೀರಿ ಕುಡಿದಿದ್ದಕ್ಕೆ ಇಡೀ ಟ್ಯಾಂಕ್​ ನೀರು ಖಾಲಿ ಮಾಡಿದ  ಘಟನೆ ತಾಲೂಕು ಆಡಳಿತ ಮಂಡಳಿ ಗಮನಕ್ಕೆ ಬಂದಿದ್ದು, ಸ್ಥಳೀಯ ಕಂದಾಯ ನಿರೀಕ್ಷಕ ಸೇರಿದಂತೆ ಅಧಿಕಾರಿಗಳು ಇಂದು ಹೆಗ್ಗೋಠಾರ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದು, ತಹಶೀಲ್ದಾರ್‌ಗೆ ವರದಿ ನೀಡಿದ್ದಾರೆ.




ಲಿಂಗಾಯತರ ಬೀದಿಯ ನಲ್ಲಿಯಲ್ಲಿ ನೀರು ಕುಡಿದ ಮಹಿಳೆ


ಪರಿಶಿಷ್ಟ ಜಾತಿಗೆ ಸೇರಿದ ಯುವಕನೊಬ್ಬನ ಮದುವೆ ಶುಕ್ರವಾರ ಗ್ರಾಮದಲ್ಲಿ ನಡೆದಿತ್ತು. ವಧುವಿನ ಕಡೆಯವರು ಎಚ್‌.ಡಿ ಕೋಟೆ ತಾಲೂಕಿನ ಸರಗೂರಿನಿಂದ ಬಂದಿದ್ದರು. ಮಧ್ಯಾಹ್ನದ ಊಟ ಮುಗಿಸಿ ಬಸ್‌ಗೆ ಹೋಗುವ ಸಂದರ್ಭದಲ್ಲಿ ಮಹಿಳೆಯೊಬ್ಬರು ಗ್ರಾಮದ ಹಳೆ ಮಾರಿಗುಡಿ ಬಳಿ ಲಿಂಗಾಯತರ ಬೀದಿಯಲ್ಲಿರುವ ತೊಂಬೆಯ ನಲ್ಲಿಯಲ್ಲಿ ನೀರು ಕುಡಿದಿದ್ದಾರೆ.


ಗೋಮೂತ್ರ ಹಾಕಿ ಟ್ಯಾಕ್​ ಸ್ವಚ್ಛ


ಮಹಿಳೆ ನೀರು ಕುಡಿಯುತ್ತಿರುವುದನ್ನು ಅದೇ ರಸ್ತೆಯಲ್ಲಿರುವ ಯಾರೋ ಇದನ್ನು ನೋಡಿದ್ದಾರೆ. ಮಹಿಳೆ ದಲಿತ ಸಮುದಾಯದವಳು ಎಂದು ಗೊತ್ತಾಗುತ್ತಿದ್ದಂತೆ ಆಕೆಗೆ ಬೈದಿದ್ದಾರೆ. ನಂತರ ಎಲ್ಲಾ ನಲ್ಲಿಯನ್ನು ತೆರೆದು ನೀರು ಖಾಲಿ ಮಾಡಿ ಗೋಮೂತ್ರ ಹಾಕಿ ಸ್ವಚ್ಛಗೊಳಿಸಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.


 20ಕ್ಕೂ ಹೆಚ್ಚು ಯುವಕರು ಕೊಟ್ರು ಲಿಖಿತ ಮಾಹಿತಿ


ಶನಿವಾರ ಕಂದಾಯ ನಿರೀಕ್ಷಕ ಹಾಗೂ ಗ್ರಾಮಲೆಕ್ಕಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯ 20ಕ್ಕೂ ಹೆಚ್ಚು ಯುವಕರು ಘಟನೆ ನಡೆದಿರುವ ಬಗ್ಗೆ ಲಿಖಿತವಾಗಿ ದೃಢಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


ತಪ್ಪಿತಸ್ಥರ ವಿರುದ್ಧ ಕ್ರಮದ ಭರವಸೆ


ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಚಾಮರಾಜನಗರ ತಾಲೂಕು ತಹಶೀಲ್ದಾರ್‌ ಐ.ಇ.ಬಸವರಾಜು ಈ ಬಗ್ಗೆ ಮಾಹಿತಿ ಬಂದಿದೆ. ಶನಿವಾರ ಕಂದಾಯ ನಿರೀಕ್ಷಕರನ್ನು ಕಳುಹಿಸಿ ವರದಿ ಪಡೆದಿದ್ದೇನೆ.


ಅದರ ಆಧಾರದಲ್ಲಿ, ಗ್ರಾಮಕ್ಕೆ ತೆರಳಿ ಸ್ಥಳೀಯರನ್ನು ವಿಚಾರಿಸಿ ಸಂಪೂರ್ಣ ಮಾಹಿತಿ ಕಲೆ ಹಾಕಿ ಸಮಗ್ರ ವರದಿ ನೀಡಲು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚಿಸುತ್ತೇನೆ. ಗ್ರಾಮದಲ್ಲಿ ಎಲ್ಲ ಸಮುದಾಯದವರ ಸಭೆ ನಡೆಸಿ, ಘಟನೆ ನಡೆದಿರುವುದು ನಿಜವೇ ಆಗಿದ್ದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.


ಇದನ್ನೂ ಓದಿ: Dharawada: ರೈತರ ಖಾತೆಗಳಿಗೆ ಬ್ಯಾಂಕ್​ಗಳ ಬ್ಲಾಕ್ ಬರೆ; ಪರಿಹಾರ ಬಂದ್ರೂ ಡ್ರಾ ಮಾಡಲಾರದ ಸ್ಥಿತಿ!


ದೇಗುಲದಲ್ಲಿ ಮಾಡಲಿಲ್ಲ ಪೂಜೆ


ತುಮಕೂರು (ಅ.12): ದೇಶದಲ್ಲಿ ಇನ್ನೂ ಅಸ್ಪೃಶ್ಯತೆ ತೊಲಗಿಲ್ಲ. ದೇಶ ಎಷ್ಟೇ ಅಭಿವೃದ್ಧಿಗೊಂಡರು ಜಾತಿ (Cast) ಎನ್ನುವ ಭೂತ ಮಾತ್ರ ಸಮಾಜವನ್ನು ಬಿಟ್ಟು ತೊಲಗಿಲ್ಲ. ದೇವಸ್ಥಾನದಲ್ಲಿ ಪೂಜೆ ಮಾಡಿಸಲು ಬಂದಿದ್ದ ದಲಿತ ಕುಟುಂಬವನ್ನ (Dalit Family) ಅರ್ಚಕರು (Priest) ಹೊರಗೆ ಕಳುಹಿಸಿದ ಘಟನೆ ನಡೆದಿದೆ. ಪೂಜೆ (Pooja) ಮಾಡಿಕೊಡಲು ನಿರಾಕರಿಸಿದ ಅರ್ಚಕರು ಹಣ್ಣು ಕಾಯಿ ವಾಪಸ್ ತಗೊಂಡು ಹೋಗಿ ಎಂದಿದ್ದರು


ದಲಿತರನ್ನು ದೇವಾಲಯದ ಒಳಗೆ ಬಿಟ್ಟುಕೊಳ್ಳಲು ಅರ್ಚಕ ಒಪ್ಪಿಲ್ಲ. ಇಂತಹ ಅಮಾನವೀಯ ಘಟನೆಯೊಂದು ತುಮಕೂರು ಜಿಲ್ಲೆ, ಗುಬ್ಬಿ ತಾಲೂಕು, ನಿಟ್ಟೂರಿನ ಮೈಸೂರು ರಸ್ತೆಯಲ್ಲಿರುವ ಮುಳಕಟ್ಟಮ್ಮ ದೇವಾಲಯದಲ್ಲಿ ನಡೆದಿತ್ತು.

Published by:ಪಾವನ ಎಚ್ ಎಸ್
First published: