• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • ಒಡವೆಗಾಗಿ ಕೆರೆ ನೀರು ಖಾಲಿ ಮಾಡಲು ಮುಂದಾದ ಗ್ರಾಮಸ್ಥರು ; ಅದೇ ಗ್ರಾಮದ ಹೋರಾಟಗಾರನಿಂದ ಉಳಿಯಿತು ಕೆರೆ ನೀರು

ಒಡವೆಗಾಗಿ ಕೆರೆ ನೀರು ಖಾಲಿ ಮಾಡಲು ಮುಂದಾದ ಗ್ರಾಮಸ್ಥರು ; ಅದೇ ಗ್ರಾಮದ ಹೋರಾಟಗಾರನಿಂದ ಉಳಿಯಿತು ಕೆರೆ ನೀರು

ಬಿಳಗುಂಬ ಗ್ರಾಮ ಕೆರೆ

ಬಿಳಗುಂಬ ಗ್ರಾಮ ಕೆರೆ

ಡಿಸೆಂಬರ್ 9 ರಂದು ಕೆರೆಗೆ ಮೋಟಾರ್ ಅಳವಡಿಸಿ, ಸುಮಾರು ಒಂದು ಗಂಟೆಗಳ ಕಾಲ ನೀರನ್ನು ಸಾಗಿಸಿದ್ದಾರೆ ಎಂದು ಅದೇ  ಗ್ರಾಮದ ಬಿ.ಟಿ.ರಾಜೇಂದ್ರ ಎಂಬುವವರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು

 • Share this:

ರಾಮನಗರ(ಡಿಸೆಂಬರ್​.13): ಚಿನ್ನಕ್ಕಾಗಿ ಕೆರೆ ನೀರು ಖಾಲಿ ಮಾಡಲು ಈ ಗ್ರಾಮದ ಜನ ನಿರ್ಧರಿಸಿದ್ದರು. ನೀರು ತೆಗೆಯಲು ಗ್ರಾಮದ ಮುಖಂಡರು ಪಂಚಾಯ್ತಿ ನಡೆಸಿ ನಿರ್ಧಾರ ಮಾಡಿದ್ದರು. ಆದರೆ, ಇದೇ ಗ್ರಾಮದ ಹೋರಾಟಗಾರನೊಬ್ಬ ಜಿಲ್ಲಾಧಿಕಾರಿಗೆ ದೂರು ಕೊಟ್ಟ ಬಳಿಕ ಕೆರೆಯಿಂದ ನೀರು ಹೊರತೆಗೆಯುವುದು ತಟಸ್ಥಗೊಂಡಿದೆ. ಇಂತಹದೊಂದು ಘಟನೆ ರೇಷ್ಮೆನಗರಿ ರಾಮನಗರದಲ್ಲಿ ನಡೆದಿದೆ. ತಾಲೂಕಿನ ಬಿಳಗುಂಬ ಗ್ರಾಮದ ಭಗವಂತ ಎಂಬಾತನ ಹೆಂಡತಿ ಸವಿತಾಳ ಮಾತು ನಂಬಿಕೊಂಡು ಕಳೆದು ಹೋಗಿದ್ದ ಚಿನ್ನದ ಒಡವೆ ಹುಡುಕಲು ಇಡೀ ಕೆರೆಯನ್ನೆ ಬರಿದು ಮಾಡಲು, ಬಿಳಗುಂಬ ಗ್ರಾಮ ಮುಂದಾಗಿತ್ತು. ಅದೃಷ್ಟವಶಾತ್ ವ್ಯಕ್ತಿಯೊಬ್ಬರು ನೀಡಿದ್ದ ದೂರಿನ ಹಿನ್ನಲೆಯಲ್ಲಿ ಕೆರೆ ಬರಿದು ಮಾಡುವ ಯೋಜನೆ ಈಗ ಸ್ಥಗಿತಗೊಂಡಿದೆ. ಬಿಳಗುಂಬ ಗ್ರಾಮದಲ್ಲಿನ ಕೆರೆಯೇ (ಹಲಗೇಗೌಡನಕಟ್ಟೆ) ಈ ವರದಿಯ ಆರ್ಕಷಣೆ. ಇದೇ ಗ್ರಾಮದ ಸವಿತಾ ಎಂಬ ಮಹಿಳೆಯ ಒಡವೆಗಳು ಮೂರು ದಿನದ ಹಿಂದೆ ಮನೆಯಿಂದ ಕಾಣೆಯಾಗಿದ್ದವು.


ಇದರಿಂದಾಗಿ ಆಕೆಯ ಮನೆಯಲ್ಲಿ ಜಗಳ ಶುರುವಾಗಿತ್ತು. ಈ ವೇಳೆ ಮಹಿಳೆಯೇ ತನ್ನಲ್ಲಿದ್ದ ಮಾಂಗಲ್ಯ ಸರ, ಚಿನ್ನದ ಬಳೆ, ಉಂಗುರ ಸೇರಿದಂತೆ ಬರೊಬ್ಬರಿ 60-70 ಗ್ರಾಂ ಚಿನ್ನದ ಒಡವೆಯನ್ನು ಕವರ್‌ನಲ್ಲಿ ಕಟ್ಟಿ ಕೆರೆಗೆ ಎಸೆದಿದ್ದಾಗಿ ಒಪ್ಪಿಕೊಂಡಿದ್ದಾಳೆ. ಇದರಿಂದಾಗಿ ಇಡೀ ಊರಿನ ಮುಖಂಡರೆಲ್ಲ ಸಭೆ ಸೇರಿ, ಇಡೀ ಕೆರೆಯ ನೀರನ್ನು ಬರಿದು ಮಾಡಿ, ಚಿನ್ನದ ಹುಡುಕಾಟ ನಡೆಸಲು ಆರಂಭಿಸಿದ್ದರು.


ಬಿಳಗುಂಬ ಗ್ರಾಮ ಪಂಚಾಯತಿ ಎದುರಲ್ಲೆ ಕೆರೆ ನೀರು ಬರಿದು ಮಾಡುವ ಕೆಲಸಕ್ಕೆ ಗ್ರಾಮಸ್ಥರು ಮುಂದಾಗಿದ್ದರು. ಡಿಸೆಂಬರ್ 9 ರಂದು ಕೆರೆಗೆ ಮೋಟಾರ್ ಅಳವಡಿಸಿ, ಸುಮಾರು ಒಂದು ಗಂಟೆಗಳ ಕಾಲ ನೀರನ್ನು ಸಾಗಿಸಿದ್ದಾರೆ ಎಂದು ಅದೇ  ಗ್ರಾಮದ ಬಿ.ಟಿ.ರಾಜೇಂದ್ರ ಎಂಬುವವರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆ ಸ್ಥಳೀಯ ಪಿಡಿಓ ಗೆ ಮಾಹಿತಿ ಬಂದು ಕೆರೆ ನೀರನ್ನ ಹೊರತೆಗೆಯುವುದು ಸ್ಥಗಿತವಾಯ್ತು. ಆದರೆ, ಸವಿತಾ ಮತ್ತು ಗಂಡ ಭಗವಂತನ ಮಾತು ಕೇಳಿದರೆ ನಗುಬರುತ್ತದೆ. ಸವಿತಾ ಮಾತನಾಡಿ ನನಗೆ ಮನೆಯಲ್ಲಿರುವ ಒಡವೆಗಳನ್ನ ಕೆರೆಗೆ ಎಸಿಯಲು ಮನಸ್ಸು ಬಂತು, ನನ್ನನ್ನ ತಳ್ಳಿದ ರೀತಿ ಆಯ್ತು ಅದಕ್ಕೆ ಎಸೆದೆ ಅಂತಾಳೆ ಮಹಿಳೆ ಸವಿತಾ


ಇದನ್ನೂ ಓದಿ : ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ತೊರೆಯುವುದು ನಿಜವಾ? ಕುತೂಹಲ ಮೂಡಿಸಿದೆ ಡಿಕೆಶಿ ಭೇಟಿ


ಇನ್ನು ಈ ಬಗ್ಗೆ ಇದೇ ಗ್ರಾಮದ ಬಿ.ಟಿ.ರಾಜೇಂದ್ರ ಎಂಬುವರು ಜಿಲ್ಲಾಧಿಕಾರಿಗೆ ದೂರು ಕೊಟ್ಟು ಕೆರೆ ನೀರನ್ನ ಹೊರತೆಯುವುದನ್ನ ನಿಲ್ಲಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ರಾಜೇಂದ್ರ, ರಾಗಿ ಒಕ್ಕಣೆ ಮಾಡಬೇಕಾದರೆ ಮಹಿಳೆಯ ಸರ ಕಾಣೆಯಾಗಿದೆ. ಆದರೆ, ಆಕೆ ಕೆರೆಗೆ ಎಸೆದಿರುವುದಾಗಿ ಹೇಳಿದ್ದಾರೆ. ಇದನ್ನೆ ನೆಪ ಮಾಡಿಕೊಂಡು ಕೆಲವರು ಕೆರೆ ನೀರು ಖಾಲಿ ಮಾಡಲು ಮುಂದಾಗಿದ್ದರು. ಒಂದೆರಡು ಟ್ರಾಕ್ಟರ್ ಲೋಡ್ ನೀರನ್ನ ಮೋಟರ್ ಮೂಲಕ ಹೊರತೆಗೆದ್ದಿದ್ದರು. ಆದರೆ, ನಾನು ಅವರಿಗೆ ಕೇಳಿದ್ದೆ, ಕೆರೆ ನೀರನ್ನ ಖಾಲಿ ಮಾಡಿದರೆ ಯಾರು ಜವಾಬ್ದಾರಿ, ಮತ್ತೆ ನೀರು ತುಂಬಿಸುವವರು ಯಾರು ಅಂದರೆ ಅದಕ್ಕೆ ಉತ್ತರಿಸಲಿಲ್ಲ. ಅದಕ್ಕಾಗಿ ನಾನು ಜಿಲ್ಲಾಧಿಕಾರಿಗೆ ದೂರು ಕೊಟ್ಟು ಈ ಕೆಲಸ ನಿಲ್ಲಿಸಿದರು.


ಊರಿನವರಿಗೆ ನಾನು ಹೇಳಿದೆ, 18 ಲಕ್ಷದ ಒಡವೆ ಇಲ್ಲದಾಗಿದೆ ಅಂತಿದ್ದಾರೆ, ಅದು ಕೆರೆಯಲ್ಲಿ ಸಿಕ್ಕಿದರೆ ನಾನು ಅವರಿಗೆ 18 ಲಕ್ಷ ರೂ ಕೊಡುತ್ತೇನೆ, ಒಡವೆ ಸಿಕ್ಕಿಲ್ಲಾಂದ್ರೆ ಅವರು ನನಗೆ 18 ಲಕ್ಷ ರೂ ಕೊಡಲಿ. ಕೆರೆ ಖಾಲಿ ಮಾಡಿದರೆ ಮತ್ತೆ ನೀರು ತುಂಬಿಸಲು ಅಗ್ರಿಮೆಂಟ್ ಮಾಡಲಿ ಎಂದಿದ್ದಾರೆ.

top videos


  ವರದಿ : ಎ.ಟಿ.ವೆಂಕಟೇಶ್

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು