• Home
  • »
  • News
  • »
  • state
  • »
  • Chikkamagaluru: ಸರ್ಕಾರಕ್ಕೆ ಸೆಡ್ಡು ಹೊಡೆದು ಸ್ಥಳೀಯರಿಂದಲೇ ಕಾಲುಸಂಕ ನಿರ್ಮಾಣ; ಪರಿಪರಿಯಾಗಿ ಬೇಡಿಕೊಂಡರೂ ಕ್ಯಾರೇ ಅನ್ನದ ಜನಪ್ರತಿನಿಧಿಗಳು!

Chikkamagaluru: ಸರ್ಕಾರಕ್ಕೆ ಸೆಡ್ಡು ಹೊಡೆದು ಸ್ಥಳೀಯರಿಂದಲೇ ಕಾಲುಸಂಕ ನಿರ್ಮಾಣ; ಪರಿಪರಿಯಾಗಿ ಬೇಡಿಕೊಂಡರೂ ಕ್ಯಾರೇ ಅನ್ನದ ಜನಪ್ರತಿನಿಧಿಗಳು!

ಕಾಲುಸಂಕ

ಕಾಲುಸಂಕ

ಹತ್ತಾರು ವರ್ಷಗಳಿಂದ ಸರ್ಕಾರ ಹಾಗೂ ಅಧಿಕಾರಿಗಳ ಬೇಜಾವಬ್ದಾರಿಯಿಂದ ನೊಂದ ಹಳ್ಳಿಗರು ತಾವೇ ಕಾಲುಸಂಕ ನಿರ್ಮಿಸಿಕೊಂಡು ಸರ್ಕಾರ-ಅಧಿಕಾರಿಗಳ ಜೀವಂತಿಕೆ ಬಗ್ಗೆ ಅನುಮಾನ ಮೂಡುವಂತೆ ಮಾಡಿದ್ದಾರೆ.

  • Share this:

ಚಿಕ್ಕಮಗಳೂರು : ಅದು ತುಂಗಾ ನದಿಯ (Tunga River) ಆಚೆಗಿರುವ ಗ್ರಾಮ. ಮಳೆಗಾಲದಲ್ಲಿ (Rainy Season) ಅಲ್ಲಿನ ನಿವಾಸಿಗಳ ಸ್ಥಿತಿಯನ್ನಂತೂ ಹೇಳೋದೆ ಬೇಡ. ಒಂದು ರೀತಿ ಹೊರಜಗತ್ತಿನ ಸಂಪರ್ಕವನ್ನೇ ಕಳೆದುಕೊಂಡು ಕಾಡುಪ್ರಾಣಿಗಳಂತೆ ದಯನೀಯವಾಗಿ ಬದುಕುವ ಬದುಕು ಅವರದ್ದು. ಹಾಗಾಗಿ ನಮಗೊಂದು ಸೇತುವೆ (Bridge) ಕಲ್ಪಿಸಿಕೊಡಿ ಎಂದು ಹತ್ತಾರು ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿದ್ದಾರೆ. ಆದ್ರೆ, ಹಳ್ಳಿಯ (Villagers) ಬಡಜನರ ಕೂಗು ದಪ್ಪ ಚರ್ಮದ ಅಧಿಕಾರಿಗಳು-ಜನನಾಯಕರಿಗೆ ಕೇಳಲೇ ಇಲ್ಲ. ಹಾಗಂತ ಆ ಹಳ್ಳಿಗರೇನು ಸುಮ್ನೆ ಕೂರಲಿಲ್ಲ. ತಲೆಯಲ್ಲಿ ಬುದ್ಧಿ ಇದೆ. ತೋಳಲ್ಲಿ ಶಕ್ತಿ ಇದೆ ಅಂತ ಸರ್ಕಾರಕ್ಕೆ  (Government) ಸೆಡ್ಡು ಹೊಡೆದಿದ್ದಾರೆ.


ಸರ್ಕಾರ, ಅಧಿಕಾರಿಗಳು, ಜನಪ್ರತಿನಿಗಳ ಬೇಜಾವಬ್ದಾರಿ ನಡೆಗೆ ಮನನೊಂದು ಹಳ್ಳಿಗರು ತಮ್ಮ ಊರಿಗೆ ತುಂಗಾ ನದಿಗೆ ತಾವೇ ಕಾಲು ಸೇತುವೆ ನಿರ್ಮಿಸಿಕೊಂಡು ಸರ್ಕಾರಕ್ಕೆ ಸವಾಲ್ ಹಾಕಿರುವ ಘಟನೆ ಜಿಲ್ಲೆಯ ಶೃಂಗೇರಿ ತಾಲೂಕಿನ ಹರೇಬಿಳಲು ಗ್ರಾಮದಲ್ಲಿ ನಡೆದಿದೆ.


Villagers Built Wooden Bridge To Cross River In chikkamgaluru vctv mrq
ಕಾಲುಸಂಕ


50ಕ್ಕೂ ಹೆಚ್ಚು ಮನೆಗಳಿರುವ ಗ್ರಾಮ


ಹರೇಬಿಳಲು ಗ್ರಾಮ ತುಂಗಾ ನದಿಯಿಂದ ಆಚೆ ಇರುವ ಗ್ರಾಮ. ಸುಮಾರು 50ಕ್ಕೂ ಹೆಚ್ಚು ಮನೆಗಳಿವೆ. ಇವರು ಮಕ್ಕಳು ಶಾಲೆಗೆ ಹೋಗಲು, ದೊಡ್ಡವರು ಕೂಲಿಗೆ ಹೋಗಲು ಪ್ರತಿಯೊಂದಕ್ಕೂ ಇದೇ ನದಿಯನ್ನೇ ಅವಲಂಬಿಸಿದ್ದಾರೆ. ಮಳೆಗಾಲದಲ್ಲಿ ಇವರು ಮೂರ್ನಾಲ್ಕು ತಿಂಗಳ ನಗರ ಪ್ರದೇಶದ ಸಂಪರ್ಕವನ್ನೇ ಕಳೆದುಕೊಳ್ಳುತ್ತಾರೆ.


Villagers Built Wooden Bridge To Cross River In chikkamgaluru vctv mrq
ಕಾಲುಸಂಕ


ನಗರ ಪ್ರದೇಶಕ್ಕೆ ಮಾರ್ಗವಿದ್ದರೂ ಸುಮಾರು 14 ಕಿ.ಮೀ. ಸುತ್ತಿಕೊಂಡು ಬರಬೇಕು. ಹಾಗಾಗಿ, ಇಲ್ಲಿನ ಜನ ಕಳೆದ ಹತ್ತಾರು ವರ್ಷಗಳಿಂದ ಸರ್ಕಾರ-ಅಧಿಕಾರಿಗಳಿಗೆ ಮನವಿ ಮಾಡುತ್ತಲೇ ಇದ್ದಾರೆ. ಆದರೆ ಇವರ ಕಷ್ಟ-ನೋವಿಗೆ ಯಾರೂ ಸ್ಪಂದಿಸಿಲ್ಲ.


ಕಾಲುಸುಂಕ ನಿರ್ಮಿಸಿಕೊಂಡ ಗ್ರಾಮಸ್ಥರು


ಹಾಗಾಗಿ, ಹಳ್ಳಿಗರೇ ತುಂಗಾ ನದಿಗೆ ಇಳಿದು ತಿಂಗಳುಗಟ್ಟಲೇ ಕೆಲಸ ಮಾಡಿ ಕಾಲುಸಂಕವನ್ನ ನಿರ್ಮಿಸಿಕೊಂಡಿದ್ದಾರೆ. ಇವರು ಸರ್ಕಾರದ ದಾರಿ ಕಾಯುತ್ತಿದ್ದರೆ. ಬಹುಶಃ ಇವರ ಮೊಮ್ಮಕ್ಕಳ ಕಾಲಕ್ಕೂ ಆಗುತ್ತಿತ್ತೋ ಇಲ್ವೋ ಗೊತ್ತಿಲ್ಲ. ಯಾಕಂದ್ರೆ, ಜಿಲ್ಲೆಯಲ್ಲಿ ಹತ್ತಾರು ಹಳ್ಳಿಯ ಜನ ಸರ್ಕಾರದ ದಾರಿ ಕಾದು-ಕಾದು ಕಾಯುತ್ತಲೇ ಇದ್ದಾರೆ. ಇಂದಿಗೂ ಸೇತುವೆ ನಿರ್ಮಾಣವಾಗಿಲ್ಲ. ಕಾಲಸಂಕವನ್ನೇ ಆಶ್ರಯಿಸಿದ್ದಾರೆ.


Villagers Built Wooden Bridge To Cross River In chikkamgaluru vctv mrq
ಕಾಲುಸಂಕ


ಇದನ್ನೂ ಓದಿ:  Udupi: ನಗರದಲ್ಲೇ ದ್ವೀಪ ವಾಸಿಗಳಂತೆ ಪರಿಶಿಷ್ಟ ಪಂಗಡ ನಿವಾಸಿಗಳ ವಾಸ; ಆಡಳಿತ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ


ಬೇಸಿಗೆಯಲ್ಲಿಯೂ ಎದೆಮಟ್ಟದಷ್ಟು ನೀರು


ಬೇಸಿಗೆಯಲ್ಲೇ ತುಂಗಾ ನದಿ ನೀರು ಎದೆ ಮಟ್ಟಕ್ಕೆ ಬರುತ್ತೆ. ಮಳೆಗಾಲದಲ್ಲಿ ಕೇಳೋದೇ ಬೇಡ. ಬೇಸಿಗೆಯಲ್ಲೇ ತುಂಗಾ ನದಿ ದಾಟಬೇಕಂದ್ರೆ ಜೀವವನ್ನ ಪಣಕ್ಕಿಟ್ಟು ದಾಟಬೇಕು. ಅದರಲ್ಲೂ ಕಳೆದ ನಾಲ್ಕೈದು ವರ್ಷಗಳಿಂದ ಮಲೆನಾಡಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಮಲೆನಾಡ ನದಿ-ಹಳ್ಳ-ಕೊಳ್ಳದ ಸುತ್ತಮುತ್ತಲಿನ ಜನ ಹೈರಾಣಾಗಿದ್ದಾರೆ. ಹಾಗಾಗಿ, ಸರ್ಕಾರದ ದಾರಿ ಕಾದು ಹಳ್ಳಿಗರೇ ತಿಂಗಳುಗಟ್ಟಲೇ ನದಿಯಲ್ಲೇ ಕೆಲಸ ಮಾಡಿ ತಮ್ಮೂರಿಗೆ ತಾವೇ ಕಾಲುಸಂಕ ನಿರ್ಮಿಸಿಕೊಂಡಿದ್ದಾರೆ.


Villagers Built Wooden Bridge To Cross River In chikkamgaluru vctv mrq
ಕಾಲುಸಂಕ


ಸದ್ಯಕ್ಕೆ ಕಾಲುಸಂಕ ನಿರ್ಮಿಸಿಕೊಂಡಿರುವುದರಿಂದ ಹರೇಬಿಳಲು-ನೆಮ್ಮಾರು ಗ್ರಾಮಕ್ಕೆ ಸಂಪರ್ಕ ಸಿಕ್ಕಿದಂತಾಗಿದೆ. ಜನ ನೆಮ್ಮಾರು ಮೂಲಕ ಶೃಂಗೇರಿ ಪಟ್ಟಣಕ್ಕೆ ಬರಲು ಸುಲಭವಾದಂತಾಗಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಮನೆಬಾಗಿಲಿಗೆ ಬರುವ ಜನಪ್ರತಿನಿಧಿಗಳು ಮತ್ತೆ ಬರೋದು ಮುಂದಿನ ಚುನಾವಣೆಗೆ ಎಂದು ಜನಪ್ರತಿನಿಧಿಗಳ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ.


ಇದನ್ನೂ ಓದಿ:  Karnika: ಯುವಕನಿಗೆ ಸಿಗಲಿದೆ ಕರ್ನಾಟಕದ ಮುಖ್ಯಮಂತ್ರಿ ಸ್ಥಾನ; ಕಾರ್ಣಿಕ ಭವಿಷ್ಯವಾಣಿ


ಇದು ತಾತ್ಕಾಲಿಕ ಬಳಕೆಗೆ ಮಾತ್ರ


ಹತ್ತಾರು ವರ್ಷಗಳಿಂದ ಸರ್ಕಾರ ಹಾಗೂ ಅಧಿಕಾರಿಗಳ ಬೇಜಾವಬ್ದಾರಿಯಿಂದ ನೊಂದ ಹಳ್ಳಿಗರು ತಾವೇ ಕಾಲುಸಂಕ ನಿರ್ಮಿಸಿಕೊಂಡು ಸರ್ಕಾರ-ಅಧಿಕಾರಿಗಳ ಜೀವಂತಿಕೆ ಬಗ್ಗೆ ಅನುಮಾನ ಮೂಡುವಂತೆ ಮಾಡಿದ್ದಾರೆ. ಆದರೆ ಈ ಸಂಕ ತಾತ್ಕಾಲಿಕ ಬಳಕೆಗೆ ಮಾತ್ರ. ಯಾಕಂದ್ರೆ, ಮತ್ತೆ ಮಳೆಗಾಲ ಶುರುವಾಗುವ ಹೊತ್ತಿಗೆ ತುಂಗಾ ನದಿಯ ಅಬ್ಬರಕ್ಕೆ ಈ ಸಂಕ ಕೊಚ್ಚಿ ಹೋಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಆಗ ಈ ಜನರ ಪಾಡೋ ದೇವರೇ ಬಲ್ಲ.


Villagers Built Wooden Bridge To Cross River In chikkamgaluru vctv mrq
ಕಾಲುಸಂಕ


ಸದ್ಯ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವಂತೆ ಸ್ಥಳಿಯರು ತಾತ್ಕಲಿಕವಾಗಿ ಓಡಾಡಲು ಸೇತುವೆ ಮಾಡಿಕೊಂಡಿದ್ದಾರೆ. ಇನ್ನಾದ್ರು ಸರ್ಕಾರ, ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನಹರಿಸಿ ಈ ಹಳ್ಳಿಗರ ಸಮಸ್ಯೆಗೆ ಶಾಶ್ವತ ಮುಕ್ತಿ ಕೊಡಿಸಲಿ ಅನ್ನೋದು ನಮ್ಮ ಆಶಯ.

Published by:Mahmadrafik K
First published: