News18 India World Cup 2019

ಹಳ್ಳಿ ಜನರು ತೆರಿಗೆ ಕಟ್ಟಲ್ಲ, ಉದ್ಯಮಿಗಳು ಮಾತ್ರ ಕಟ್ಟುತ್ತಾರೆ ಎಂದು ಕೃಷಿಕರ ಬಗ್ಗೆ ಹಗುರವಾಗಿ ಮಾತನಾಡಿದ ಸಚಿವ ಡಿಕೆಶಿ

ಜಿಂದಾಲ್​ ಕಂಪನಿಗೆ ರಾಜ್ಯ ಸರ್ಕಾರ ಕಡಿಮೆ ದರದಲ್ಲಿ 3665 ಎಕರೆ ಜಮೀನು ಮಾರಲು ಮುಂದಾಗಿತ್ತು. ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ಪಕ್ಷಗಳಿಂದ ಹಿಡಿದು ಹಲವು ಸಾಮಾಜಿಕ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದರು.

HR Ramesh | news18
Updated:June 14, 2019, 3:28 PM IST
ಹಳ್ಳಿ ಜನರು ತೆರಿಗೆ ಕಟ್ಟಲ್ಲ, ಉದ್ಯಮಿಗಳು ಮಾತ್ರ ಕಟ್ಟುತ್ತಾರೆ ಎಂದು ಕೃಷಿಕರ ಬಗ್ಗೆ ಹಗುರವಾಗಿ ಮಾತನಾಡಿದ ಸಚಿವ ಡಿಕೆಶಿ
ಡಿಕೆ ಶಿವಕುಮಾರ್
HR Ramesh | news18
Updated: June 14, 2019, 3:28 PM IST
ಬೆಂಗಳೂರು: ಹಳ್ಳಿ ಜನರು ತೆರಿಗೆ ಕಟ್ಟುತ್ತಾರಾ, ತೆರಿಗೆ ಕಟ್ಟುವವರು ಉದ್ಯಮಿಗಳು ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳುವ ಮೂಲಕ ಹಳ್ಳಿ ಜನರ ಬಗ್ಗೆ ಹಗುರವಾಗಿ ಮಾತನಾಡಿ, ಉದ್ಯಮಿಗಳ ಪರ ಬ್ಯಾಟ್ ಬೀಸಿದ್ದಾರೆ.

ಜಿಂದಾಲ್​ಗೆ ಭೂಮಿ ಹಂಚಿಕೆ ವಿಚಾರವಾಗಿ ಮಾತನಾಡಿದ ಡಿಕೆಶಿ, ಹಳ್ಳಿಗರು ಕೃಷಿ ಮಾಡ್ತಾರೆ, ಆದರೆ ತೆರಿಗೆ ಕಟ್ಟೋದಿಲ್ಲ! ಉದ್ಯಮಿಗಳು ಮಾತ್ರ ತೆರಿಗೆ ಕಟ್ತಾರೆ, ಜಿಎಸ್​ಟಿ ಕಟ್ಟುತ್ತಾರೆ ಎಂದು ಹೇಳುವ ಮೂಳಕ ಉದ್ಯಮಿಗಳನ್ನು ಸಮರ್ಥಿಸಿಕೊಂಡಿದ್ದಾರೆ.

ಇದನ್ನು ಓದಿ: ಜಿಂದಾಲ್​ಗೆ ಭೂಮಿ ನೀಡುವ ವಿಚಾರ ಮರುಪರಿಶೀಲನೆಗೆ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ; ಎಸ್​.ಆರ್.ಹಿರೇಮಠ

ಜಿಂದಾಲ್​ ಕಂಪನಿಗೆ ರಾಜ್ಯ ಸರ್ಕಾರ ಕಡಿಮೆ ದರದಲ್ಲಿ 3665 ಎಕರೆ ಜಮೀನು ಮಾರಲು ಮುಂದಾಗಿತ್ತು. ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ಪಕ್ಷಗಳಿಂದ ಹಿಡಿದು ಹಲವು ಸಾಮಾಜಿಕ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ, ಸರ್ಕಾರದ ಕ್ರಮದ ವಿರುದ್ಧ ಬಿಜೆಪಿ ಇಂದು ರಾಜ್ಯದಲ್ಲಿ ಎರಡು ದಿನ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದೆ. ಎಲ್ಲೆಡೆಯಿಂದ ವ್ಯಾಪಕ ಆಕ್ರೋಶ ವ್ಯಕ್ತವಾದ ನಂತರ ಸರ್ಕಾರ ಜಿಂದಾಲ್​ಗೆ ಭೂಮಿ ಮಾರಾಟ ಮಾಡುವ ವಿಚಾರವನ್ನು ಸಚಿವ ಸಂಪುಟದಲ್ಲಿ ಸಭೆಯಲ್ಲಿ ಮರುಪರಿಶೀಲನೆ ಮಾಡಲು ನಿರ್ಧರಿಸಿದೆ. ಏತನ್ಮಧ್ಯೆ, ಸಚಿವ ಡಿಕೆಶಿ ಅವರು ಈ ವಿಚಾರವಾಗಿ ಮಾತನಾಡುವಾಗ ಹೀಗೆ ಹೇಳಿಕೆ ನೀಡಿದ್ದಾರೆ.

First published:June 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...