• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Crime News: ಅತ್ಯಾಚಾರಕ್ಕೆ ಯತ್ನ, ಯುವಕರಿಬ್ಬರ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ; ಏಳು ಜನ ಅರೆಸ್ಟ್

Crime News: ಅತ್ಯಾಚಾರಕ್ಕೆ ಯತ್ನ, ಯುವಕರಿಬ್ಬರ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ; ಏಳು ಜನ ಅರೆಸ್ಟ್

ಯುವಕರು

ಯುವಕರು

ತೇಜು ಚೌಹಾಣ್ ಮತ್ತು ರಾಜು ಚೌಹಾಣ್ ಅತ್ಯಾಚಾರಕ್ಕೆ ಯತ್ನಿಸಿದ ಅವಳಿ ಸೋದರರು. ಈ ವಿಷಯ ತಿಳಿದ ತಾಂಡಾದಲ್ಲಿರುವ ಲಂಬಾಣಿ ಸಮುದಾಯದ ಮುಖಂಡರು ಇಬ್ಬರಿಗೂ ಶಿಕ್ಷೆ ನೀಡಿದ್ದಾರೆ.

  • Share this:

ವಿಜಯಪುರ: ಕಳೆದ ಎರಡು ದಿನಗಳಿಂದ ವಿಜಯಪುರ ಭಾಗದಲ್ಲಿ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ (Video Viral) ಆಗುತ್ತಿದೆ. ಈ ವಿಡಿಯೋದಲ್ಲಿ ಯುವಕರಿಬ್ಬರ ತಲೆ ಬೋಳಿಸಿ, ಕೊರಳಿಗೆ ಚಪ್ಪಲಿ ಹಾರ ಹಾಕಿ, ಅರೆಬೆತ್ತಲೆಗೊಳಿಸಿ ಇಡೀ ಗ್ರಾಮದ ತುಂಬೆಲ್ಲಾ ಮೆರವಣಿಗೆ ಮಾಡಲಾಗಿದೆ. ಈ ಘಟನೆ ನಡೆದಿರೋದು ವಿಜಯಪುರ ತಾಲೂಕಿನ ಹೆಗಡಿಹಾಳ್ ತಾಂಡಾದಲ್ಲಿ (Hegdihal Tanda, Vijayapura) ನಡೆದಿದೆ. ಯುವಕರಿಬ್ಬರು ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಕ್ಕೆ (Rape Attempt) ಗ್ರಾಮಸ್ಥರು ಈ ಶಿಕ್ಷೆ ನೀಡಿದ್ದಾರೆ. ಇದೀಗ ಶಿಕ್ಷೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ. ಯುವಕರಿಬ್ಬರು ಹೆಗಡಿಹಾಳ್ ತಾಂಡಾದ ನಿವಾಸಿಗಳು. ಸೋದರರಾಗಿರುವ ಆರೋಪಿಗಳು ಕೆಲಸಕ್ಕಾಗಿ ಮಹಾರಾಷ್ಟ್ರಕ್ಕೆ (Maharshtra) ತೆರಳಿದ್ದ ವೇಳೆ ಮಹಿಳೆಯ ಮೇಲೆ  ಅತ್ಯಾಚಾರಕ್ಕೆ ಮುಂದಾಗಿದ್ದರು.


ತೇಜು ಚೌಹಾಣ್ ಮತ್ತು ರಾಜು ಚೌಹಾಣ್ ಅತ್ಯಾಚಾರಕ್ಕೆ ಯತ್ನಿಸಿದ ಅವಳಿ ಸೋದರರು. ಈ ವಿಷಯ ತಿಳಿದ ತಾಂಡಾದಲ್ಲಿರುವ ಲಂಬಾಣಿ ಸಮುದಾಯದ ಮುಖಂಡರು ಇಬ್ಬರಿಗೂ ಶಿಕ್ಷೆ ನೀಡಿದ್ದಾರೆ.


ಆರೋಪಿಗಳಿಂದ ದೌರ್ಜನ್ಯಕ್ಕೆ ಒಳಗಾದ ಮಹಿಳೆ ಯಾರು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.


ಗ್ರಾಮದ ಏಳು ಜನರ ಬಂಧನ


ಹೆಗಡಿಹಾಳ ತಾಂಡಾದಲ್ಲಿ ತಲೆ ಬೋಳಿಸಿ, ಮೆರವಣಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಗ್ರಾಮೀಣ ಪೊಲೀಸರು ಏಳು ಜನರನ್ನು ಬಂಧಿಸಿದ್ದಾರೆ. ಗ್ರಾಮ ಪಂಚಾಯ್ತಿ ಅಧ್ಯಕ್ಷ ಸೇರಿದಂತೆ ತಾಂಡಾದ ಪ್ರಮುಖರನ್ನು ಬಂಧಿಸಲಾಗಿದೆ.
ಅನಿಲ್ ಲಮಾಣಿ, ಮಂಗೇಶ್, ಹೇಮು, ರಮೇಶ್, ರಾಜು, ಚನ್ನು, ರಾಮಸಿಂಗ್ ಲಮಾಣಿ ಬಂಧಿತರು. ಐಪಿಸಿ ಸೆಕ್ಷನ್ 504, 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ: Suspected Terrorist: ಬೆಂಗಳೂರಿನಲ್ಲಿ ಶಂಕಿತ ಉಗ್ರ ವಶಕ್ಕೆ; ಐಸಿಸ್ ಜೊತೆ ನಿರಂತರ ಸಂಪರ್ಕ


ರಸ್ತೆಯಲ್ಲಿ ಬಡಿದಾಡಿಕೊಂಡ ಬ್ರೋಕರ್​​ಗಳು


ಬೆಂಗಳೂರಿನ ಎಸ್​​ಪಿ ರಸ್ತೆಯಲ್ಲಿ ಬ್ರೋಕರ್​ಗಳು ಬಡಿದಾಡಿಕೊಂಡಿದ್ದಾರೆ. ಕಸ್ಟಮರ್​ಗಾಗಿ ಬೀದಿಯಲ್ಲೇ ಬ್ರೋಕರ್​​ಗಳು ಜಗಳವಾಡಿಕೊಂಡಿದ್ದಾರೆ. ಬಡಿದಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಕೆಲವು ಅಂಗಡಿಯವರು ಗ್ರಾಹಕರನ್ನ ಅಂಗಡಿಗೆ ಕರೆತರಲು ಬ್ರೋಕರ್​ಗಳನ್ನ ಇಟ್ಟಿದ್ದಾರೆ. ಇದರಿಂದಾಗಿ ಜನರು ಹಾಗೂ ಅಂಗಡಿ ಮಾಲೀಕರಿಗೆ ಕಿರಿಕಿರಿ ಆಗಿದ್ಯಂತೆ. ಈ ಬಗ್ಗೆ ಹಲವು ಬಾರಿ ಪೊಲೀಸರ ಗಮನಕ್ಕೆ ತಂದರೂ ಕ್ರಮವಿಲ್ಲ ಎಂದು ಅಂಗಡಿ ಮಾಲೀಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.


ರಸ್ತೆ ದಾಟುತ್ತಿದ್ದ ಜಿಂಕಿಮರಿಗೆ ಕಾರು ಡಿಕ್ಕಿ


ಚಾಮರಾಜನಗರದಲ್ಲಿ ರಾಷ್ಟ್ರೀಯ ಹೆದ್ದಾರಿ 766 ರಲ್ಲಿ ಜಿಂಕೆ‌ಮರಿ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಮೃತಪಟ್ಟಿದೆ.


ಬಂಡೀಪುರದ ಮದ್ದೂರು ವಲಯದಲ್ಲಿ ಘಟನೆ ನಡೆದಿದ್ದು ಕಾರು ಚಾಲಕನನ್ನ ಬಂಧಿಸಲಾಗಿದೆ. ಆಂಧ್ರಪ್ರದೇಶದ ಚಿತ್ತೂರು ಮೂಲದ ಸಬೀರ್ ಬಂಧನ ಎಂಬಾತನನ್ನ ಬಂಧಿಸಲಾಗಿದೆ.. ಮದ್ದೂರು ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರು ಚಾಲಕನನ್ನ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಿಡಿಎಗೆ ಲೋಕಾಯುಕ್ತ ಶಾಕ್


ಎಸಿಬಿ ರದ್ದುಗೊಳಿಸಿ ಲೋಕಾಯುಕ್ತಕ್ಕೆ ಪವರ್ ಕೊಟ್ಟ ಬಳಿಕ ಇದೇ ಮೊದಲ ಬಾರಿಗೆ ಲೋಕಾಯುಕ್ತ ಅಧಿಕಾರಿಗಳು ದೊಡ್ಡ ಮಟ್ಟದ ದಾಳಿ ಮಾಡಿದ್ದಾರೆ. ವ್ಯಾಪಕ ಅವ್ಯವಹಾರ ನಡೆಯುತ್ತಿರುವ ದೂರುಗಳನ್ನು ಆಧರಿಸಿ ಬಿಡಿಎ ಕೇಂದ್ರ ಕಚೇರಿ ಮೇಲೆ ನಿನ್ನೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಶೋಧ ನಡೆಸಿದ್ದಾರೆ.


ಜೊತೆಗೆ ಬಿಡಿಎ ಕಚೇರಿಯಲ್ಲಿದ್ದ ಮೂವರು ದಲ್ಲಾಳಿಗಳನ್ನ ವಶಕ್ಕೆ ಪಡೆದಿದ್ದಾರೆ. ಆದಿನಾರಾಯಣ, ಮಂಜಪ್ಪ ಮತ್ತು ಅನಿಲ್‌ಕುಮಾರ್‌ ಎಂಬ ದಲ್ಲಾಳಿಗಳನ್ನು ತನಿಖಾ ತಂಡ ವಶಕ್ಕೆ ಪಡೆದಿದೆ. ಹೆಚ್ಚಿನ ತನಿಖೆಗಾಗಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ಪುನಃ ತಮ್ಮ ವಶಕ್ಕೆ ಪಡೆಯಲು ತನಿಖಾಧಿಕಾರಿಗಳು ಮುಂದಾಗಿದ್ದಾರೆ.

Published by:Mahmadrafik K
First published: