Krishna River Flood: ಕೃಷ್ಣೆಯಿಂದ ಸೇತುವೆ ಮುಳುಗಡೆ ಭೀತಿ, ಜನಪ್ರತಿನಿಧಿಗಳ ವಿರುದ್ಧ ಜನರ ಆಕ್ರೋಶ

ಪ್ರವಾಹ ಬಂದಾಗ ಕ್ಯಾಮರಾಗಳ ಮುಂದೆ ಪೋಸು ಕೊಟ್ಟು ಇನ್ನೇನು ಕೆಲಸ‌ಮಾಡಿ ಕೊಡ್ತಿವಿ ಅಂತಾ ಹೇಳಿ ಕೇವಲ ಕಾಗದ ಪತ್ರಕ್ಕೆ ಸಿಮಿತವಾಗಿರೋ ಜನಪ್ರತಿನಿದಿಗಳ ವಿರುದ್ದ ಕೊಳ್ಳೂರು ಎಂ. ಗ್ರಾಮಸ್ಥರು ಗರಂ ಆಗಿದ್ದಾರೆ. ಜನರ ಸಮಸ್ಯೆಗೆ ಸ್ಪಂದಿಸದೇ ಇದ್ದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಮುಳುಗಡೆ ಭೀತಿಯಲ್ಲಿ ಇರುವ ಕೊಳ್ಳೂರು ಎಂ ಸೇತುವೆ

ಮುಳುಗಡೆ ಭೀತಿಯಲ್ಲಿ ಇರುವ ಕೊಳ್ಳೂರು ಎಂ ಸೇತುವೆ

  • Share this:
ಯಾದಗಿರಿ: ನೆರೆ ರಾಜ್ಯ (State) ಮಹಾರಾಷ್ಟ್ರದಲ್ಲಿ (Maharashtra) ಸುರಿಯುತ್ತಿರುವ ಮಹಾಮಳೆಗೆ (Heavy Rain) ಕೃಷ್ಣಾ ನದಿಯು (Krishna River) ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದೆ. ಕೃಷ್ಣಾ ನದಿಯ ಅಬ್ಬರಕ್ಕೆ ಕೊಳ್ಳೂರು ಎಂ ಸೇತುವೆ (Kolluru M Bridge) ಮುಳುಗಡೆ ಭೀತಿ ಎದುರಿಸುತ್ತಿದೆ. ಪ್ರವಾಹ (Flood) ಬಂದಾಗ ಗ್ರಾಮಕ್ಕೆ ಬರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು (Officers) ಸುಳ್ಳು ಭರವಸೆ ನೀಡಿ ಹೋಗುತ್ತಾರೆ. ಆದರೆ ಮತ್ತೆ ಮಳೆಗಾಲ (Rainy Season) ಬಂದಾಗ ಮತ್ತದೇ ಗೋಳು ಶುರುವಾಗುತ್ತದೆ. ಹೀಗಾಗಿ ಇದೀಗ ಈ ಗ್ರಾಮದ ಜನರು ಆಕ್ರೋಶಗೊಂಡಿದ್ದಾರೆ.

ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಆಕ್ರೋಶ

ಪ್ರವಾಹ ಬಂದಾಗ ಕ್ಯಾಮರಾಗಳ ಮುಂದೆ ಪೋಸು ಕೊಟ್ಟು ಇನ್ನೇನು ಕೆಲಸ‌ಮಾಡಿ ಕೊಡ್ತಿವಿ ಅಂತಾ ಹೇಳಿ ಕೇವಲ ಕಾಗದ ಪತ್ರಕ್ಕೆ ಸಿಮಿತವಾಗಿರೋ ಜನಪ್ರತಿನಿದಿಗಳ ವಿರುದ್ದ ಕೊಳ್ಳೂರು ಎಂ. ಗ್ರಾಮಸ್ಥರು ಗರಂ ಆಗಿದ್ದಾರೆ. ಜನರ ಸಮಸ್ಯೆಗೆ ಸ್ಪಂದಿಸದೇ ಇದ್ದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಮುಳುಗಡೆ ಭೀತಿಯಲ್ಲಿರುವ ಸೇತುವೆ


ಮಹಾರಾಷ್ಟ್ರದಲ್ಲಿ ಇನ್ನೂ ತಣ್ಣಗಾಗದ ವರುಣನ ಅಬ್ಬರ

ಮಹಾರಾಷ್ಟ್ರದ ಕೊಯ್ನಾ ಹಾಗೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದೆ. ಹೀಗಾಗಿ ಉತ್ತರ ಕರ್ನಾಟಕದ ಬಹುತೆಕ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು,ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳುರು ಎಂ ಗ್ರಾಮದ ಬಳಿಯ ಸೇತುವೆ ಮುಳುಗುವ ಹಂತ ತಲುಪಿದೆ. ಶಹಾಪುರ ತಾಲೂಕಿನ ಕೊಳ್ಳುರ ಎಂ ಗ್ರಾಮದಲ್ಲಿ ಹರಿಯುವ ಕೃಷ್ಣಾ ನದಿಗೆ  ಅಡ್ಡಲಾಗಿ 1968 ರಲ್ಲಿ ಸೇತುವೆ ನಿರ್ಮಾಣಮಾಡಲಾಗಿತ್ತು. ಇದು ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಯಾಗಿದೆ.

ಸೇತುವೆ ಎತ್ತರ ಹೆಚ್ಚಿಸಲು ಆಗ್ರಹ


ಇದನ್ನೂ ಓದಿ: Tunga Bhadra: ತುಂಗಭದ್ರೆಯ ಒಡಲಲ್ಲಿ ಜಲರಾಶಿಯ ಅಬ್ಬರ! ಅದ್ಭುತ ದೃಶ್ಯ ನೀವೂ ಕಣ್ತುಂಬಿಕೊಳ್ಳಿ

ಕೊಳ್ಳೂರು ಎಂ. ಸೇತುವೆಗೆ ಮುಳುಗಡೆ ಭೀತಿ

ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಈಗಾಲೇ ಒಂದು ಲಕ್ಷ ಕ್ಯೂಸೆಕ್ಸ್ ಗೂ ಅಧಿಕ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದೆ. ಹೀಗಾಗಿ ಶಹಾಪುರ ತಾಲೂಕಿನ ಕೊಳ್ಳುರು ಎಂ ಸೇತುವೆ ಮುಳುಗಡೆ ಭೀತಿ ಶುರುವಾಗಿದೆ. ಸೇತುವೆ ಮುಳುಗಡೆಗೆ ಇನ್ನು ಎರಡರಿಂದ ಮೂರು ಅಡಿ ಮಾತ್ರ ಬಾಕಿ ಉಳಿದಿದೆ. ಅತ್ತ ಮಹಾರಾಷ್ಟ್ರದಲ್ಲಿ ಕ್ಷಣ ಕ್ಷಣಕ್ಕೂ ವರುಣಾರ್ಭಟ ಜೋರಾಗಿದ್ದೂ ಯಾವುದೇ ಕ್ಷಣದಲ್ಲಾದ್ರು ಮತ್ತೆ ಹೆಚ್ಚಿನ ನೀರು ಬಿಡುಗಡೆ ಮಾಡುವ ಸಾದ್ಯತೆ ಇದೆ. ಇದರಿಂದಾಗಿ ಕೊಳ್ಳುರ ಸೇತುವೆ ಮುಳುಗಡೆ ಭೀತಿ ಶುರುವಾಗಿದೆ.

ಕೊಳ್ಳೂರು ಎಂ. ಗ್ರಾಮಸ್ಥರ ಆಕ್ರೋಶ


ಸೇತುವೆ ಮುಳುಗಿದ್ರೆ ಯಾದಗಿರಿ-ರಾಯಚೂರು ಸಂಪರ್ಕ ಕಡಿತ

ಒಂದು ವೇಳೆ ಸೇತುವೆ ಮುಳುಗಡೆಯಾದ್ರೆ ಯಾದಗಿರಿ- ರಾಯಚೂರುಗೆ ಸಂಪರ್ಕ ಕಡಿತಗೊಳ್ಳುವ ಆತಂಕ ಕೃಷ್ಣಾ ನದಿ ತೀರದಲ್ಲಿ ಗ್ರಾಮಸ್ಥರಲ್ಲಿ ಶುರುವಾಗಿದೆ. 2019 ರಲ್ಲಿ ಅಂದಿನ ಸಿಎಂ ಬಿಎಸ್ ಯಡಿಯೂರಪ್ಪ ಸೇತುವೆಗೆ ಭೇಟಿ ನೀಡಿದ್ದರು, ಕೊಳ್ಳುರು ಸೇತುವೆ ಎತ್ತರಕ್ಕೆ ನಿರ್ಮಾಣ ಮಾಡುವ ಭರವಸೆ ನೀಡಿದ್ದರು. ಹಲವು ಸರ್ಕಾರಗಳು ಬಂದರು ಬರೀ ಭರವಸೆ ನೀಡುತ್ತಿದ್ದಾರೆ. ಪ್ರವಾಹ ಬಂದಾಗ ಮಾಧ್ಯಮಗಳ ಕ್ಯಾಮರಾ ಮುಂದೆ ಪೊಸುಕೊಟ್ಟು ಕಾಗದ ಪತ್ರಗಳಿಗೆ ಮಾತ್ರ ಹೇಳಿಕೆಗಳು ಸೀಮಿತವಾಗುತ್ತಿವೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದು,ಕೂಡಲೇ ಸೇತುವೆ ಎತ್ತರಕ್ಕೆ ಎರಿಸದಿದ್ದರೆ ಕೊಳ್ಳುರು ಗ್ರಾಮ ಸೇರಿದಂತೆ ಸುತ್ತ ಹತ್ತು ಹಳ್ಳಿ ಸೇರಿ ಉಗ್ರ ಹೋರಾಟ ಮಾಡುತ್ತೆವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಯಾದಗಿರಿ-ರಾಯಚೂರು ಸಂಪರ್ಕ ಸೇತುವೆ


ಇದನ್ನೂ ಓದಿ: Karnataka Weather Report: ರಾಜ್ಯದ ಎಂಟು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್; ಇಂದು ಬೆಂಗಳೂರಿನಲ್ಲಿ ಮಳೆ ಆಗುತ್ತಾ?

ಸೇತುವೆ ನಿರ್ಮಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆ ಶಿವರೆಡ್ಡಿ ಎಂಬುವರು ಮಾತನಾಡಿ, ಪ್ರತಿ ವರ್ಷ ಕೃಷ್ಣಾ ನದಿ ಪ್ರವಾಹದಿಂದ ಕೊಳ್ಳೂರು ಎಂ ಹೂವಿನಹಡಗಿ ಸೇತುವೆ ಮುಳುಗಡೆಯಾಗುತ್ತದೆ. ಯಾದಗಿರಿ -ರಾಯಚೂರು‌ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದೆ. ಈ ಸೇತುವೆ  ಸಂಪರ್ಕ ಬಂದ್ ಆಗಿ ಸುತ್ತಮುತ್ತಲಿನ ಗ್ರಾಮಸ್ಥರು ಆಸ್ಪತ್ರೆ ಹಾಗೂ ವಿವಿಧ ಕೆಲಸಕ್ಕೆ ತೆರಳಲು ರಾಯಚೂರು ಹೋಗಲು ಕಷ್ಟವಾಗುತ್ತದೆ.ಸರಕಾರ ಈ ಸೇತುವೆ ಎತ್ತರವಾಗಿ ನಿರ್ಮಾಣ ಮಾಡಿ ಶಾಶ್ವತ ಸಮಸ್ಯೆಗೆ ಮುಕ್ತಿ ಕಲ್ಪಿಸಬೇಕಿದೆ.ಸೇತುವೆ ಎತ್ತರ ನಿರ್ಮಾಣ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
Published by:Annappa Achari
First published: