ಬರದ ನಾಡಿನಲ್ಲಿ ಹಸಿರಿಗೆ ಪೂರಕವಾದ ಪರಿಸರ ಪ್ರೇಮ ಗಣೇಶೋತ್ಸವ

news18
Updated:September 13, 2018, 3:39 PM IST
ಬರದ ನಾಡಿನಲ್ಲಿ ಹಸಿರಿಗೆ ಪೂರಕವಾದ ಪರಿಸರ ಪ್ರೇಮ ಗಣೇಶೋತ್ಸವ
  • Advertorial
  • Last Updated: September 13, 2018, 3:39 PM IST
  • Share this:
- ಮಹೇಶ ವಿ.ಶಟಗಾರ, ನ್ಯೂಸ್ 18 ಕನ್ನಡ

 ವಿಜಯಪುರ ( ಸೆ.13) :  ಗಣೇಶ ಹಬ್ಬ ಬಂತೆಂದರೆ ಸಾಕು ಪರಿಸರವಾದಿಗಳು, ಪ್ರಗತಿಪರರು ಪರಿಸರದ ಬಗ್ಗೆಯೇ ಹೆಚ್ಚು ಮಾತನಾಡುತ್ತಾರೆ. ಗಣೇಶ ಹಬ್ಬ ಹೀಗೆ ಆಚರಿಸಬೇಕು, ಹಾಗೆ ಮಾಡಬೇಕು ಎಂದು ಉಪದೇಶ ನೀಡುತ್ತಾರೆ. ಆದರೆ ಬಸವನಾಡಿನಲ್ಲಿರುವ ಈ ಗಣೇಶ ಉತ್ಸವ ಮಂಡಳಿಯವರು ಕಳೆದ 40 ವರ್ಷಗಳಿಂದ ಪರಿಸರ ಪ್ರೇಮಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಗಮನ ಗಮನ ಸೆಳೆದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪರಿಸರದ ಬಗ್ಗೆ ಕಾಳಜಿ ತೋರಿಸುತ್ತಿರುವ ಪರಿಸರವಾದಿಗಳು ಮತ್ತು ಪ್ರಗತಿಪರರು ಗಣೇಶ ಹಬ್ಬದ ಆಚರಣೆ ಹಾಗಿರಬೇಕು. ಹೀಗೆ ಮಾಡಬೇಕು ಎಂದು ವಾದಿಸುತ್ತ ಹಲವಾರು ಸೂಚನೆಗಳನ್ನೂ, ಸಲಹೆಗಳನ್ನು ನೀಡುತ್ತಿದ್ದಾರೆ.ಇತ್ತೀಚಿನ ದಿನಗಳಲ್ಲಿ ಪರಿಸರದ ಬಗ್ಗೆ ಕಾಳಜಿ ತೋರಿಸುತ್ತಿರುವ ಪರಿಸರವಾದಿಗಳು ಮತ್ತು ಪ್ರಗತಿಪರರು ಗಣೇಶ ಹಬ್ಬದ ಆಚರಣೆ ಹಾಗಿರಬೇಕು. ಹೀಗೆ ಮಾಡಬೇಕು ಎಂದು ವಾದಿಸುತ್ತ ಹಲವಾರು ಸೂಚನೆಗಳನ್ನೂ, ಸಲಹೆಗಳನ್ನು ನೀಡುತ್ತಿದ್ದಾರೆ.ಆದರೆ, ವಿಜಯಪುರ ನಗರದ ರಾಮಪ್ರಸಾದ ಗಲ್ಲಿಯಲ್ಲಿರುವ ಶ್ರೀ ಸಿದ್ದಿ ವಿನಾಯಕ ಸ್ನೇಹಿತರ ಬಳಗ ಕಳೆದ 14 ವರ್ಷಗಳಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ಗಮನ ಸೆಳೆಯುತ್ತಿದೆ.  ಈ ಹಿಂದೆ ಸಕ್ಕರೆ, ಬೆಳ್ಳಿ, ಅಡಿಕೆ, ಚಿನ್ನ ಲೇಪಿತ ನಾಣ್ಯಗಳನ್ನು ಬಳಸಿ ಈ ಬಳಗ ಗಣೇಶ ಮೂರ್ತಿಯನ್ನೂ ನಿರ್ಮಿಸಿದ್ದರು.

ಈ ಬಾರಿಯೂ ಪರಿಸರ ಪ್ರಜ್ಞೆ ಮೆರೆದಿರುವ ಈ ಬಳಗ ಪೆಬಲ್ ಹರಳುಗಳನ್ನು ಬಳಸಿ ಗಣೇಶ ಮೂರ್ತಿ ತಯಾರಿಸಿದೆ. ಸುಮಾರು 26 ಕೆಜಿ ಪೆಬೆಲ್ ಅಂದರೆ ಬೆಣಚು ಕಲ್ಲುಗಳ 3000ಕ್ಕೂ ಹೆಚ್ಚು ಹರಳುಗಳನ್ನು ಬಳಸಲಾಗಿದೆ.  ಉಮೇಶ ಗಡೆಕರ ಮಾರ್ಗದರ್ಶನದಲ್ಲಿ ಈ ಮೂರ್ತಿಯನ್ನು ತಯಾರಿಸಲಾಗಿದೆ ಎನ್ನುತ್ತಾರೆ ರಾಮಪ್ರಸಾದ ಗಲ್ಲಿಯ ವೆಂಕಟೇಶ ಕುಲಕರ್ಣಿ ಮತ್ತು ಸಚಿನ ಮಿತ್ರ ಗೋತ್ರೆ. ಈ ಬಾರಿಯೂ ಪರಿಸರ ಪ್ರಜ್ಞೆ ಮೆರೆದಿರುವ ಈ ಬಳಗ ಪೆಬಲ್ ಹರಳುಗಳನ್ನು ಬಳಸಿ ಗಣೇಸ ಮೂರ್ತಿ ತಯಾರಿಸಿದೆ.

ಸುಮಾರು 26 ಕೆಜಿ ಪೆಬೆಲ್ ಅಂದರೆ ಬೆಣಚು ಕಲ್ಲುಗಳ 3000ಕ್ಕೂ ಹೆಚ್ಚು ಹರಳುಗಳನ್ನು ಬಳಸಲಾಗಿದೆ.  ಉಮೇಶ ಗಡೆಕರ ಮಾರ್ಗದರ್ಶನದಲ್ಲಿ ಈ ಮೂರ್ತಿಯನ್ನು ತಯಾರಿಸಲಾಗಿದೆ ಎನ್ನುತ್ತಾರೆ ರಾಮಪ್ರಸಾದ ಗಲ್ಲಿಯ ವೆಂಕಟೇಶ ಕುಲಕರ್ಣಿ ಮತ್ತು ಸಚಿನ ಮಿತ್ರ ಗೋತ್ರೆ.  ಬರಕ್ಕೆ ಹೆಸರುವಾಸಿಯಾಗಿರುವ ವಿಜಯಪುರ ಜಿಲ್ಲೆಯಲ್ಲಿ ಹಸಿರಿಗೆ ಪೂರಕವಾಗಿರುವ ಪರಿಸರ ಪ್ರೇಮಿ ಗಣೇಶ ಮೂರ್ತಿಗಳನ್ನು ಈ ಸಂಘಟನೆ ಕಳೆದ 40 ವರ್ಷಗಳಿಂದ ನಡೆಸಿಕೊಂಡು ಬಂದಿರುವುದು ಶ್ಲಾಘನೀಯವಾಗಿದೆ. 
First published:September 13, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ