ಮತ್ತೆ ನಿಜವಾಗುತ್ತಿದೆ ಹೊಳೆ ಬಬಲಾದಿ ಸದಾಶಿವನ ಮುತ್ಯಾನ ಕಾಲಜ್ಞಾನದ ಹೊತ್ತಿಗೆ ಭವಿಷ್ಯ

ಅಂದು ಜಗಕ್ಕೆ ಕೀಲಿ ಬಿದ್ದಿತ್ತು ಮಕ್ಕಳಿರಾ ಎಂದಿದ್ದರು.  ಈಗಾಗಲೇ ಕೊರೊನಾದಿಂದಾಗಿ ವಿಶ್ವಾದ್ಯಂತ ಲಾಕಡೌನ್ ಆಗಿದೆ.  ಎಲ್ಲ ದೇವರ ಪೂಜೆ ನಿಲ್ಲಿಸಬಾರದಯ್ಯ ಅಲ್ಲಮನ ಆಟ ಕಡೆತನಕ ಎಂದು ಹೇಳಿದ್ದರು.  ಕೊರೊನಾ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲ ಮಂದಿರ, ಮಸೀದಿಗಳಲ್ಲಿ ಪೂಜೆ, ಪ್ರಾರ್ಥನೆ ಬಂದ್ ಮಾಡಲಾಗಿತ್ತು ಎಂದು ತಿಳಿಸಿದರು.

news18-kannada
Updated:August 10, 2020, 12:09 PM IST
ಮತ್ತೆ ನಿಜವಾಗುತ್ತಿದೆ ಹೊಳೆ ಬಬಲಾದಿ ಸದಾಶಿವನ ಮುತ್ಯಾನ ಕಾಲಜ್ಞಾನದ ಹೊತ್ತಿಗೆ ಭವಿಷ್ಯ
ಮಠದ ಕಾರ್ಣಿಕ ಶ್ರೀ ಸಿದ್ದು ಮುತ್ಯಾ ಹೊಳಿಮಠ
  • Share this:
ವಿಜಯಪುರ (ಆ. 09): ಸುಮಾರು 300 ವರ್ಷಗಳಿಂದ ಈ ಮಠದಲ್ಲಿ ಕಾರ್ಣಿಕನಾಡುವ ಮಾತುಗಳು ನಿಜವಾಗುತ್ತಿವೆ.  ಕಳೆದ ಫೆ. 25 ರಂದು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸುಕ್ಷೇತ್ರ ಹೊಳೆ ಬಬಲಾದಿಯ ಶ್ರೀ ಗುರು ಚಕ್ರವರ್ತಿ ಸದಾಶಿವಜ್ಜ ಮೂಲ ಸಂಸ್ಥಾನ ಮಠಾಧೀಶ ಮತ್ತು ಮಠದ ಕಾರ್ಣಿಕ ಶ್ರೀ ಸಿದ್ದು ಮುತ್ಯಾ ಹೊಳಿಮಠ ನುಡಿದಿರುವ ಭವಿಷ್ಯಗಳು ಈಗ ಒಂದೊಂದಾಗಿ ನಿಜವಾಗುತ್ತಿವೆ.

ಅಂದು ನುಡಿದ ಭವಿಷ್ಯವನ್ನು ಇದೇ ಕಾರ್ಣಿಕರು ವಿಜಯಪುರದಲ್ಲಿ ನ್ಯೂಸ್ 18 ಕನ್ನಡದ ಜೊತೆ ಮತ್ತೊಮ್ಮೆ ಹಂಚಿಕೊಂಡಿದ್ದು, ಅದರ ವಿಶ್ಲೇಷಣೆಯನ್ನೂ ಮಾಡಿದ್ದಾರೆ.  ಮುಂಬರುವ ದಿನಗಳಲ್ಲಿ ಉತ್ತಮ ದೇಶದ ಮರ್ಧನವಾಗಲಿದೆ.  ಭಾರತದ ವೈರಿಗಳು ಸುಮ್ಮನೇ ಸರ್ವನಾಶವಾಗಲಿದ್ದಾರೆ.  ತಾವು ಫೆ. 25 ರಂದು ನುಡಿದ ಭವಿಷ್ಯದಂತೆ ಈಗ ಜಲಪ್ರಳಯವಾಗುತ್ತಿದೆ.  ಫಾಲ್ಗುಣದಲ್ಲಿ ವ್ಯಾದಿ ಎಂದು ಹೇಳಲಾಗಿತ್ತು.  ಪೀತ ಪ್ರೇಮ ಮಾಡುತ್ತೆ ಅಂತ ಹೇಳಿದ್ದೆವು.  ಅದರಂತೆ ಈಗ ಪೀತ(ಕಫ)ದಿಂದ ಬಂದಿರುವ ಕೊರೋನಾ ಸೋಂಕು ಇತರರಿಗೆ ಪ್ರೇಮ ಮಾಡುತ್ತಿದೆ(ಹರಡುತ್ತಿದೆ).

300 ವರ್ಷಗಳ ಬಾಯಿಗೆ ಬಾಯಿಜಾಳಿಗೆ ಬರುತ್ತೆ ಅಂತ ಅಂದಿನ ಕಾಲಜ್ಞಾನಿಗಳು ಹೇಳಿದ್ದರು.  ಇಂದು ಅವರ ಮಾತು ನಿಜವಾಗಿದ್ದು ಜನರು ಮಾಸ್ಕ್ ಧರಿಸುತ್ತಿರುವುದು ಅದಕ್ಕೆ ಸಾಕ್ಷಿಯಾಗಿದೆ. ಅಂದು ಜಗಕ್ಕೆ ಕೀಲಿ ಬಿದ್ದಿತ್ತು ಮಕ್ಕಳಿರಾ ಎಂದಿದ್ದರು.  ಈಗಾಗಲೇ ಕೊರೊನಾದಿಂದಾಗಿ ವಿಶ್ವಾದ್ಯಂತ ಲಾಕಡೌನ್ ಆಗಿದೆ.  ಎಲ್ಲ ದೇವರ ಪೂಜೆ ನಿಲ್ಲಿಸಬಾರದಯ್ಯ ಅಲ್ಲಮನ ಆಟ ಕಡೆತನಕ ಎಂದು ಹೇಳಿದ್ದರು.  ಕೊರೊನಾ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲ ಮಂದಿರ, ಮಸೀದಿಗಳಲ್ಲಿ ಪೂಜೆ, ಪ್ರಾರ್ಥನೆ ಬಂದ್ ಮಾಡಲಾಗಿತ್ತು ಎಂದು ತಿಳಿಸಿದರು.

Corona warriors: ಪಾಸಿಟಿವ್​ ಬಂದರೂ ಧೃತಿಗೆಡದ ಚಾಮರಾಜನಗರದ ಕೊರೋನಾ ವಾರಿಯರ್ಸ್

ಬಬಲಾದಿ ಅಜ್ಜನವರ ಬಬಲಾದಿ ಮಠದಲ್ಲಿ ಕತ್ತೆ ಕೂಗಿದರೂ ನಿಜವಾಗುತ್ತೆ ಎಂದು ಈ ಹಿಂದೆ ಕಾಲಜ್ಞಾನಿಗಳು ಹೇಳಿದ್ದರು.  ಈ ಜಾಗದಲ್ಲಿ ನಿಂತು ಆಡಿದ ಮಾತುಗಳೆಲ್ಲವೂ ನಿಜವಾಗುತ್ತಿವೆ.  ಇಲ್ಲಿನ ಹೇಳಿಕೆ ಕರಿ ಕಲ್ಲಿನ ಮೇಲೆ ಬಿಳಿ ಗೆರೆಯಿದ್ದಂತೆ.  ಸದಾಶಿವ ಅಜ್ಜ ಹೇಳಿದಂತೆ ಪಕ್ಷಗಳಲ್ಲಿ ಏರಿಳಿತವಾಗುತ್ತಿವೆ.  ಗೋಡೆಗೆ ಕುಳಿತವರು ರೋಡಿಗೆ ಕುಳಿತುಕೊಳ್ಳುತ್ತಾರೆ. ರೋಡಿಗಿದ್ದವರು ಗೋಡೆಗೆ ಕುಳಿತುಕೊಳ್ಳುತ್ತಾರೆ ಎಂದು ಹೇಳಲಾಗಿತ್ತು.  ಅದರಂತೆ ಪ್ರಮುಖ ಮುಖಂಡರು ಅಧಿಕಾರವಿಲ್ಲದೆ ರಾಜಕೀಯವಾಗಿ ಹಿಂಬದಿಗೆ ಸರಿದಿದ್ದಾರೆ.  ಹೊಸಬರು ಈಗ ರಾಜಕೀಯವಾಗಿ ಮುಂಚೂಣಿಗೆ ಬರುತ್ತಿದ್ದಾರೆ.  ಪ್ರಭಾವಿ ವ್ಯಕ್ತಿಗಳು ಕೆಳಗೆ ಬಂದರು.  ಸಣ್ಣ ವ್ಯಕ್ತಿಗಳು ಮೇಲೆ ಹೋದರು ಎಂದು ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ದೊಡ್ಡ ಅವಕಾಶಗಳು ಸಿಕ್ಕಿರುವ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದರು.

ಈಗ ಕೊರೊನಾ ರೋಗ ನಿಯಂತ್ರಣವಾಗಬೇಕಾದರೆ ಜಳ್ಳು ಜೊಟ್ಟು ಹಾರಬೇಕು.  ಗಟ್ಟಿ ಬೀಜ ಉಳಿಯಬೇಕು.  ದಾನ, ಧರ್ಮ, ಪರೋಪಕಾರ ಮಾಡುವವರು, ನನ್ನವರು, ತನ್ನವರು ಎಂಬ ಭಾವನೆ ಹೊಂದಿದವರು ಮತ್ತು ಧರ್ಮಕ್ಕೆ ತಲೆಬಾಗುವವರು ಉಳಿಯುತ್ತಾರೆ.  ದೇವರನ್ನು ನಂಬದವರಿಗೆ ಶಾರ್ವರಿ ನಾಮದಲ್ಲಿ ಅಂತ್ಯವಿದೆ.  ಶಾರ್ವರಿ ನಾಮದಲ್ಲಿ ನಾನು ಎಂಬುವರು ಉರಿದು ಹೋಗುತ್ತಾರೆ ಎಂದು ಸಿದ್ಧು ಮುತ್ಯಾ ಹೊಳಿಮಠ ಎಚ್ಚರಿಗೆ ನೀಡಿದರು.
ಶ್ರಾವಣ ಮಾಸದಲ್ಲಿ ಧ್ಯಾನ ಮಾಡಿದಷ್ಟು ಧನ್ಯರಾಗುತ್ತೇವೆ.  ದೇವರ ಮೇಲೆ ನಂಬಿಕೆ ಇಟ್ಟರೆ ದೇವರು ಉಳಿಸುತ್ತಾನೆ ಎಂದು ತಿಳಿಸಿದ ಅವರು, ಡಿಸೆಂಬರ್ ನಂತರವೂ ಕೊರೋನಾ ಮುಂದುವರೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
Published by: Latha CG
First published: August 10, 2020, 12:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading