ಯತ್ನಾಳ ರಾಜೀನಾಮೆಯಿಂದ ತೆರವಾಗಿದ್ದ ವಿಧಾನ ಪರಿಷತ್​ ಸ್ಥಾನಕ್ಕೆ ಇಂದು ಚುನಾವಣೆ

news18
Updated:September 6, 2018, 7:15 AM IST
ಯತ್ನಾಳ ರಾಜೀನಾಮೆಯಿಂದ ತೆರವಾಗಿದ್ದ ವಿಧಾನ ಪರಿಷತ್​ ಸ್ಥಾನಕ್ಕೆ ಇಂದು ಚುನಾವಣೆ
news18
Updated: September 6, 2018, 7:15 AM IST
ಮಹೇಶ್​ ವಿ ಶೆಟಗಾರ್​, ನ್ಯೂಸ್​ 18 ಕನ್ನಡ

ವಿಜಯಪುರ (ಸೆ.6): ಬಸನಗೌಡ ರಾ. ಪಾಟೀಲ ಯತ್ನಾಳ ರಾಜೀನಾಮೆಯಿಂದ ತೆರವಾಗಿರುವ ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಚುನಾವಣಾ ಕಣದಲ್ಲಿ  ಕಾಂಗ್ರೆಸ್-ಜೆಡಿಎಸ್​ ಮೈತ್ರಿ ಅಭ್ಯರ್ಥಿಯಾಗಿ ಸುನಿಲಗೌಡ ಬಿ. ಪಾಟೀಲ ಸ್ಪರ್ಧಿಸಿದ್ದಾರೆ. ಬಿಜೆಪಿಯಿಂದ ಪಾಲಿಕೆ ಹಿರಿಯ ಸದಸ್ಯ ಗೂಳಪ್ಪ ಸಿದ್ದಪ್ಪ ಶೆಟಗಾರ ಸೇರಿದಂತೆ ಒಟ್ಟು ಏಳು ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ವಿಜಯಪುರ-ಬಾಗಲಕೋಟೆಯಲ್ಲಿ ಸಕಲ ಸಿದ್ಧತೆ ನಡೆಸಲಾಗಿದ್ದು, ಎರಡೂ ಜಿಲ್ಲೆಗಳಲ್ಲಿ ಹೋಬಳಿಗೊಂದರಂತೆ 38 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ.  15 ಅತೀಸೂಕ್ಷ್ಮ, 14 ಸೂಕ್ಷ್ಮ, 8 ಸಾಮಾನ್ಯ ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ.  ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ  ಮತದಾನ ನಡೆಯಲಿದೆ.

4074 ಪುರುಷ, 4163 ಮಹಿಳೆಯರು ಸೇರಿ ಒಟ್ಟು 8237 ಮತದಾರರು ಇದ್ದು, ಕರ್ತವ್ಯಕ್ಕೆ ಸಿಬ್ಬಂದಿ ಹೊರತಾಗಿ 38 ಸೆಕ್ಟರ್ ಆಫೀಸರ್ ನಿಯೋಜನೆ ಮಾಡಲಾಗಿದ್ದು, ಬಿಗಿ ಬಂದೋಬಸ್ತ್​ ಕೈಗೊಳ್ಳಲಾಗಿದೆ ಎಂದು  ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ ತಿಳಿಸಿದರು.

ಶಾಂತಿಯುತ ಮತದಾನಕ್ಕೆ ವಿಜಯಪುರದ 20 ಮತಗಟ್ಟೆಗಳಿಗೆ ಭದ್ರತೆ ಮಾಡಲಾಗಿದ್ದು, ಮೂವರು ಡಿವೈಎಸ್​ಪಿ, 7 ಮಂದಿ ಸಿಪಿಐ, 20 ಮಂದಿ ಪಿಎಸ್ಐ, 20 ಮಂದಿ ಎಎಸ್‌ಐ, 60 ಮಂದಿ ಮುಖ್ಯಪೇದೆಗಳು, 100 ಪೇದೆಗಳು, 6 ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೊಲೀಸರ ನಿಯೋಜನೆ ಮಾಡಲಾಗಿದೆ.
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ