HOME » NEWS » State » VIJAYPUR ZILLA PANCHAYAT PRESIDENT VILLAGE STAY TO KNOW SHEPHERDS PROBLEMS SCT

Vijaypur: ಬಯಲು ಶೌಚಕ್ಕೆ ಹೋದವರಿಗೆ ಹೂವಿನ ಹಾರ!; ವಿಜಯಪುರದಲ್ಲಿ ವಿನೂತನ ಅಭಿಯಾನ

ಕುರಿಗಾಹಿಗಳ ಸಮಸ್ಯೆಯನ್ನು ತಿಳಿಯಲು ವಿಜಯಪುರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಸೋಮನಾಥ ಕಳ್ಳಿಮನಿ ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಗ್ರಾಮ ವಾಸ್ಯವ್ಯ ಮಾಡಿದರು.

news18-kannada
Updated:September 5, 2020, 12:00 PM IST
Vijaypur: ಬಯಲು ಶೌಚಕ್ಕೆ ಹೋದವರಿಗೆ ಹೂವಿನ ಹಾರ!; ವಿಜಯಪುರದಲ್ಲಿ ವಿನೂತನ ಅಭಿಯಾನ
ಬಯಲಲ್ಲಿ ಶೌಚಕ್ಕೆ ಹೋದವರಿಗೆ ಹೂವಿನ ಹಾರ ಹಾಕಿದ ವಿಜಯಪುರ ಜಿ.ಪಂ. ಅಧ್ಯಕ್ಷೆ ಸುಜಾತಾ ಸೋಮನಾಥ ಕಳ್ಳಿಮನಿ
  • Share this:
ವಿಜಯಪುರ (ಸೆ. 5): ಬೆಳ್ಳಂಬೆಳಗ್ಗೆ ಬಯಲು ಬಹಿರ್ದೆಸೆಗೆ ಹೋಗಿ ಬರುತ್ತಿದ್ದವರನ್ನು ಹಾರ ಹಾಕಿ ಸನ್ಮಾನಿಸಲಾಯಿತು. ನಿನ್ನೆ ರಾತ್ರಿಯಷ್ಟೇ ತಮ್ಮ ಗ್ರಾಮದ ಬಳಿ ಅಡವಿಯಲ್ಲಿ ವಾಸ್ತವ್ಯ ಮಾಡಿದ್ದ ಜಿ.ಪಂ. ಅಧ್ಯಕ್ಷೆ ಮತ್ತು ಅವರ ಪತಿ ಹೀಗೆ ಬೆಳ್ಳಂಬೆಳಿಗ್ಗೆ ಬಂದು ತಮಗೆ ಯಾಕೆ ಹೂವಿನ ಹಾರ ಹಾಕಿದ್ದಾರೆ ಎಂದು ತಿಳಿಯದೆ ಬಯಲು ಬಹಿರ್ದೆಸೆಗೆ ತೆರಳಿದ್ದವರು ಗಾಬರಿಯಾದರು. ಆಗ, ಅವರಿಗೆ ತಿಳಿ ಹೇಳಿದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ 'ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಿ.  ಇದರಿಂದ ಶುಚಿತ್ವ ಕಾಪಾಡಲು ಸಾಧ್ಯ' ಎಂದು ಜಾಗೃತಿ ಮೂಡಿಸಿದರು. ಈ ಘಟನೆ ನಡೆದಿದ್ದು, ವಿಜಯಪುರ ಜಿಲ್ಲೆಯ ಇಟ್ಟಂಗಿಹಾಳ ಅಡವಿಯಲ್ಲಿ.  ಉತ್ತರ ಕರ್ನಾಟಕದಲ್ಲಿ ಸಾವಿರಾರು ಜನ ಕುರಿಗಾಹಿಗಳಿದ್ದಾರೆ.  ಅವರು ತಮ್ಮ ಕುರಿಗಳೊಂದಿಗೆ ಅಡವಿಯಲ್ಲಿ ಅಲೆದಾಡುತ್ತ ವಾಸಿಸುತ್ತಾರೆ. ಇಂತಹ ಕುರಿಗಾಹಿಗಳ ಸಮಸ್ಯೆಯನ್ನು ತಿಳಿಯಲು ವಿಜಯಪುರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಸೋಮನಾಥ ಕಳ್ಳಿಮನಿ ಜಿಲ್ಲೆಯ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಗ್ರಾಮ ವಾಸ್ಯವ್ಯ ಮಾಡಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆಯೊಬ್ಬರು ಮಾಡಿದ ಮೊದಲ ಗ್ರಾಮ ವಾಸ್ತವ್ಯ ಇದಾಗಿದ್ದು, ಅಧ್ಯಕ್ಷರು ಅಡವಿಯಲ್ಲಿಯೇ ಇದೇ ಕುರಿಗಾಹಿಗಳು ವಾಸಿಸುವ ಟೆಂಟ್ ನಲ್ಲಿ ಮಲಗುವ ಮೂಲಕ ಗಮನ ಸೆಳೆದರು. ಇದಕ್ಕೂ ಮೊದಲು ವಾಸ್ತವ್ಯಕ್ಕೆ ಬಂದ ಅಧ್ಯಕ್ಷೆ ಮತ್ತು ಆಕೆಯ ಪತಿ ಹಾಗೂ ಕಾಂಗ್ರೆಸ್ ಮುಖಂಡ ಸೋಮನಾಥ ಕಳ್ಳಿಮನಿ ಹಾಗೂ ಇತರ ಜಿಲ್ಲಾ ಪಂಚಾಯಿತಿ ಸದಸ್ಯರು ಮತ್ತು ಅಧಿಕಾರಿಗಳನನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತ ಕೋರಿದರು.  ಗ್ರಾಮದಿಂದ ಡೊಳ್ಳು, ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿ ವಾಸ್ತವ್ಯದ ಸ್ಥಳಕ್ಕೆ ಕರೆತಂದರು. ಈ ಸಂದರ್ಭದಲ್ಲಿ ಅಧ್ಯಕ್ಷೆ ಸುಜಾತಾ ಸೋಮನಾಥ ಕಳ್ಳಿಮನಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಾಲಾರ್ಪಣೆ ಮಾಡಿದರು.

ಇದನ್ನೂ ಓದಿ:  ರಾಜ್ಯದ 11 ಜಿಲ್ಲೆಗಳಲ್ಲಿ ಇಂದಿನಿಂದ ಭಾರೀ ಮಳೆ; ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಹೀಗಿದೆ

ಮೆರವಣಿಗೆಯಲ್ಲಿ  ತಿಕೋಟಾ ತಾ. ಪಂ. ಅಧ್ಯಕ್ಷೆ ಪ್ರಭಾವತಿ ನಾಟಿಕಾರ, ಜಿ. ಪಂ. ಸದಸ್ಯರಾದ ಕಲ್ಲಪ್ಪ ಮಟ್ಟಿ, ಡಾ. ಬಸವರಾಜ ಅಸ್ಕಿ, ಜಿ. ಪಂ. ಸದಸ್ಯ ಕಲ್ಲಪ್ಪ ಮಟ್ಟಿ, ಮುಖಂಡರಾದ ಬೀರಪ್ಪ ಕಾಳೆ, ಬೀರಪ್ಪ ಮಾನೆ, ಮಲ್ಲಪ್ಪ ಬಿದರಿ, ದೇವಕಾಂತ ಬಿಜ್ಜರಗಿ, ಚಂದ್ರಶೇಖರ ತೋಳಮಟ್ಟಿ, ಮಹಾದೇವ ಹಿರೇಕುರಬರ, ಯಶವಂತ ಖರಾತ, ಬೀರಪ್ಪ ಖರಾತ, ಅಮೋಘಿ ಖರಾತ, ಬೀವಾ ಮಾನೆ ಮತ್ತಿತರರು ಪಾಲ್ಗೊಂಡಿದ್ದರು.

ಬಳಿಕ ಕುರಿಗಾಹಿಗಳೊಂದಿಗೆ ಸಂವಾದ ನಡೆಸಿದ ಅಧ್ಯಕ್ಷೆ ಸುಜಾತಾ ಸೋಮನಾಥ ಕಳ್ಳಿಮನಿ, ಅವರ ಸಮಸ್ಯೆಗಳನ್ನು ಆಲಿಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ಮಹಿಳೆ ರಾಯಕ್ಕ ಖರಾತ, ಬಾಣಂತಿಯರಿಗೆ ಸರಕಾರದಿಂದ ಸೂಕ್ತ ಸೌಲಭ್ಯ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.  ಪಾಂಡು ತಾಂಬೆ ಎಂಬುವರು ಸರಕಾರದಿಂದ ಬರುವ ಕುರಿ ಸಾಕಾಣಿಕೆ ಬಗ್ಗೆ ಹಲವು ಬಾರಿ ಕಚೇರಿಗೆ ಅಲೆದಾಡಿದರೂ ಪ್ರಯೋಜವಾಗಿಲ್ಲ ಎಂದು ಆಕ್ರೋಶ ಹೊರ ಹಾಕಿದರು.  ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
Youtube Video

ಈ ಮಧ್ಯೆ, ಬೆಳ್ಳಂಬೆಳಿಗ್ಗೆ ಬಯಲಿನಲ್ಲಿ ಬಹಿರ್ದೆಸೆಗೆ ತೆರಳಿದ್ದ ಜನರನ್ನು ಅಧ್ಯಕ್ಷೆಯ ಪತಿ ಸೋಮನಾಥ ಕಳ್ಳಿಮನಿ ಹೂವಿನ ಹಾರ ಹಾಕಿ ಸನ್ಮಾನಿಸುವ ಮೂಲಕ ವಿನೂತನವಾಗಿ ಜಾಗೃತಿ ಮೂಡಿಸಿದರು.  ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಿ ಎಂದು ಅಧ್ಯಕ್ಷೆ ಸುಜಾತಾ ಸೋಮನಾಥ ಕಳ್ಳಿಮನಿ ಈ ಸಂದರ್ಭದಲ್ಲಿ ಮಾಡಿದ ಮನವಿ ಬಯಲು ಶೌಚಾಲಯ ಮುಕ್ತ ಸಮಾಜಕ್ಕೆ ನಡೆಯುತ್ತಿರುವ ಅರಿವು ಕಾರ್ಯಕ್ರಮಕ್ಕೆ ಹೇಳಿ ಮಾಡಿಸಿದಂತಿತ್ತು.
Published by: Sushma Chakre
First published: September 5, 2020, 11:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories