ಕೀನ್ಯಾದಲ್ಲಿ ಮಾನವೀಯತೆ ಮೆರೆದ ಬಸವನಾಡಿನ ಯುವಕ; ಪ್ರವಾಹ ಪೀಡಿತರ ನೆರವಿಗೆ ನಿಂತ ವಿಜಯಪುರದ ಕೇತನ್ ನಾಯ್ಕ

ರಾಯ್ ಗ್ರೂಪ್ ಆಫ್ ಕಂಪನೀಸ್​ನ ಸಕ್ಕರೆ ಕಾರ್ಖಾನೆಯಲ್ಲಿ ಕೃಷಿ ಮ್ಯಾನೇಜರ್ ಆಗಿದ್ದ ವಿಜಯಪುರದ ಕೇತನ್ ನಾಯ್ಕ ಕಾರ್ಯ ನಿರ್ವಹಿಸುವ ಪಶ್ಚಿಮ ಕೀನ್ಯಾದ ನಿವಾನಿ, ಜಮಾನಾ, ಪೊಂಗಲ್‌ಬೀಜಾ ಸೇರಿದಂತೆ ಸುಮಾರು 20ರಿಂದ 30 ಗ್ರಾಮಗಳಲ್ಲಿ ಕೆಲವು ದಿನಗಳ ಹಿಂದೆ ಭೀಕರ ಪ್ರವಾಹ ಉಂಟಾಗಿತ್ತು.

news18-kannada
Updated:January 11, 2020, 5:35 PM IST
ಕೀನ್ಯಾದಲ್ಲಿ ಮಾನವೀಯತೆ ಮೆರೆದ ಬಸವನಾಡಿನ ಯುವಕ; ಪ್ರವಾಹ ಪೀಡಿತರ ನೆರವಿಗೆ ನಿಂತ ವಿಜಯಪುರದ ಕೇತನ್ ನಾಯ್ಕ
ಕೀನ್ಯಾ ನೆರೆ ಸಂತ್ರಸ್ತರಿಗೆ ಆಹಾರ ಧಾನ್ಯ ಪೂರೈಸಿದ ವಿಜಯಪುರದ ಕೇತನ್ ನಾಯ್ಕ.
  • Share this:
ವಿಜಯಪುರ (ಜ. 11): ಬಸವನಾಡಿನ ಕನ್ನಡಿಗರೊಬ್ಬರು ಪ್ರವಾಹಪೀಡಿತ ವಿದೇಶದಲ್ಲಿ ನೆರೆ ಸಂತ್ರಸ್ತರಿಗೆ ನೆರವಾಗುವ ಮೂಲಕ ದಕ್ಷಿಣ ಆಫ್ರಿಕಾಗೆ ಕನ್ನಡಿಗರ ಹೃದಯ ವೈಶಾಲ್ಯತೆಯನ್ನು ಪಸರಿಸಿದ್ದಾರೆ.

ಇವರ ಮಾನವೀಯತೆಯ ಕೆಲಸವನ್ನು ಕೀನ್ಯಾ ಮಾಧ್ಯಮಗಳು ಹಾಡಿ ಹೊಗಳಿವೆ. ತನ್ನನ್ನು ಕನ್ನಡಿಗ ಎಂದೇ ಸಂಭೋದಿಸಿ ಎಂದು ಹೇಳುವ ಮೂಲಕ ಕನ್ನಡದ ಕಂಪನ್ನು ಹೆಚ್ಚಿಸಿರುವ ವ್ಯಕ್ತಿಯ ಹೆಸರು ಕೇತನ್ ನಾಯ್ಕ.

ಬಸವನಾಡಿನ ಈ ಯುವಕ 2017ರಲ್ಲಿ ಆಫ್ರಿಕಾ ಖಂಡದ ಕೀನ್ಯಾಗೆ ತೆರಳಿ,  ಅಲ್ಲಿರುವ ಸಕ್ಕರೆ ಕಾರ್ಖಾನೆಯಲ್ಲಿ ಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.  ರಾಯ್  ಗ್ರೂಪ್ ಆಫ್ ಕಂಪನೀಸ್​ನ ಸಕ್ಕರೆ ಕಾರ್ಖಾನೆಯಲ್ಲಿ ಕೃಷಿ ಮ್ಯಾನೇಜರ್ ಆಗಿದ್ದ ಕೇತನ್ ಕಾರ್ಯ ನಿರ್ವಹಿಸುವ ಪಶ್ಚಿಮ ಕೀನ್ಯಾದ ನಿವಾನಿ, ಜಮಾನಾ, ಪೊಂಗಲ್‌ಬೀಜಾ ಸೇರಿದಂತೆ ಸುಮಾರು 20ರಿಂದ 30 ಗ್ರಾಮಗಳಲ್ಲಿ ಈಗ ಕೆಲವು ದಿನಗಳ ಹಿಂದೆ ಭೀಕರ ಪ್ರವಾಹ ಉಂಟಾಗಿತ್ತು.

ಆ ಭೀಕರ ಪ್ರವಾಹಕ್ಕೆ ಅಲ್ಲಿನ ಸರ್ಕಾರ ಕೂಡ ಸೂಕ್ತ ರೀತಿಯಲ್ಲಿ ಸ್ಪಂದಿಸಿರಲಿಲ್ಲ. ಯಾವ ಸ್ವಯಂಸೇವಾ ಸಂಸ್ಥೆಗಳೂ ನೆರವಿಗೆ ಬಂದಿರಲಿಲ್ಲ.  ಆಗ ಈತನಿಗೆ ನೆನಪಾಗಿದ್ದು  ಉತ್ತರ ಕರ್ನಾಟಕದಲ್ಲಿ ಉಂಟಾಗಿದ್ದ ಪ್ರವಾಹ.  ಇದರಿಂದ ಕೂಡಲೆ ಜಾಗೃತನಾದ ಈತ ತನ್ನ ಕಂಪನಿಯ ಮುಖ್ಯಸ್ಥ ತೇಜವೀರ್‌ಸಿಂಗ್ ಅವರಿಗೆ ಫೋನ್ ಮಾಡಿ ನೆರವಾಗುವ ಬಗ್ಗೆ ಕೇಳಿದರು.  ಆಗ ಆತನ ಕಂಪನಿಯ ಬಾಸ್ ಸರಿ,  ನಿಮಗೆ ತಿಳಿದಂತೆ ನೆರವಾಗಿ ಎಂದು ಒಪ್ಪಿಗೆ ಸೂಚಿಸಿದರು. ತಮ್ಮ ಕಾರ್ಖಾನೆಯ ಕಾರ್ಮಿಕರ ಜೊತೆಗೂಡಿ ನೆರೆ ಸಂತ್ರಸ್ತರಿಗೆ ನೆರವಾದ ಕೇತನ್ ಸಂತ್ರಸ್ತರಿಗೆ ಅಗತ್ಯವಾದ ವಸ್ತುಗಳನ್ನು ಸರಬರಾಜು ಮಾಡಿ, ಅವರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಿದ್ದಾರೆ.

ಇದನ್ನೂ ಓದಿ: ಅಂಗನವಾಡಿಯಲ್ಲಿ ನರ್ಸ್ ನೀಡಿದ ಇಂಜೆಕ್ಷನ್​ಗೆ ಮೂರು ತಿಂಗಳ ಮಗು ಸಾವು; ಬೆಳಗಾವಿಯಲ್ಲೊಂದು ದಾರುಣ ಘಟನೆ

ವಿಜಯಪುರ ಜಿಲ್ಲೆಯ ಬರಟಗಿ ಲಂಬಾಣಿ ತಾಂಡಾದ ಕೇತನ್ ನಾಯ್ಕ ಈ ಮೂಲಕ ಕೀನ್ಯಾದಲ್ಲಿ ಸುದ್ದಿಯಾಗಿರುವ ಕನ್ನಡಿಗ. ತನ್ನ ಬಾಸ್ ಒಪ್ಪಿಗೆ ಸೂಚಿಸಿದ ಕೂಡಲೆ ಕಾರ್ಖಾನೆಯ ಕಾರ್ಮಿಕರ ಜೊತೆಗೂಡಿ ಬಡ ಜನರಿಗೆ ನೆರವಾಗಿರುವ ಕೇತನ್ ನಾಯ್ಕ ನೆರೆ ಸಂತ್ರಸ್ತರಿಗೆ ನೆರವಾಗಿದ್ದಾರೆ.

ಕೇತನ್ ಕೆಲಸ ಮಾಡುವ ರಾಯ್ ಗ್ರೂಪ್ ಆಫ್ ಕಂಪನಿಯವರೇ ಸಕ್ಕರೆ, ಎಣ್ಣೆ, ಸಾಬೂನು ಸೇರಿದಂತೆ ಹಲವಾರು ಕಾರ್ಖಾನೆಗಳನ್ನು ಹೊಂದಿದ್ದಾರೆ.  ಪರಿಹಾರದ ನೇತೃತ್ವ ವಹಿಸಿದ ಕೇತನ ನಾಯ್ಕ ಮೊದಲು ನೆರೆ ಸಂತ್ರಸ್ತರನ್ನು ಎತ್ತರದ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆ.  ಅಲ್ಲಿ ನಿರಾಶ್ರಿತರ ಶಿಬಿರ ತೆರೆದು ಅವರಿಗೆ ಅಗತ್ಯವಾದ ಮೆಕ್ಕೆಜೋಳ, ಎಣ್ಣೆ, ಸಕ್ಕರೆ, ಸೋಪು, ಬಿಸ್ಕಿಟ್ ಸೇರಿದಂತೆ ಹಲವಾರು ಸಾಮಗ್ರಿಗಳನ್ನು ಒದಗಿಸಿದ್ದಾರೆ.  ಕಾರ್ಖಾನೆಗಳಲ್ಲಿ ಸಿಗುವ ಲಭ್ಯ ವಸ್ತುಗಳನ್ನು ಕೂಡಾ ಅವರಿಗೆ ನೀಡಿ, ನಾಡಿಗೆ ಅನ್ನ ನೀಡುತ್ತಿರುವ ರೈತರಿಗೆ 10 ದಿನಗಳ ಕಾಲ ಸ್ಪಂದಿಸಿದ್ದಾರೆ. ನಂತರ ವೈದ್ಯಾಧಿಕಾರಿಗಳನ್ನು ಕರೆಯಿಸಿ ಅವರಿಗೆ ಅಗತ್ಯ ಚಿಕಿತ್ಸೆಯನ್ನು ಕೊಡಿಸಿದ್ದಾರೆ.
ನೆರೆ ಸಂತ್ರಸ್ತರಿಗೆ ಹಂಚಲು ಆಹಾರ ಸಾಮಗ್ರಿ ದಾಸ್ತಾನು ಮಾಡುತ್ತಿರುವುದು.


ನೆರೆಯಿಂದಾಗಿ ಊರಿನೊಳಗೆ ನೀರು ನುಗ್ಗಿರುವುದು.


ಇದನ್ನೂ ಓದಿ: ರಮೇಶ್ ಕುಮಾರ್ ವಿರುದ್ಧ 535 ಕೋಟಿ ರೂ. ಅಕ್ರಮದ ಗಂಭೀರ ಆರೋಪ ಹೊರಿಸಿದ ಜೆಡಿಎಸ್ ಮಾಜಿ​ ಶಾಸಕ

ಕೀನ್ಯಾ ಸರಕಾರ ಮಾಡದ ಕೆಲಸವನ್ನು ರಾಯ್‍ ಗ್ರೂಪ್ ಆಫ್ ಕಂಪನಿ ವತಿಯಿಂದ ನೆರವೇರಿಸಿರುವ ಕೇತನ್ ನಾಯ್ಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.  ಅಲ್ಲಿರುವವರೆಲ್ಲ ಕೇತನ ಅವರನ್ನು ಏಷ್ಯನ್ ಅಂತಲೇ ಕರೆಯುತ್ತಾರೆ,  ಆದರೆ, ಕೇತನ ನಾಯ್ಕ ತಮ್ಮನ್ನು ಏಷ್ಯನ್ ಎಂದು ಕರೆಯಬೇಡಿ, ನನ್ನನ್ನು ಭಾರತೀಯ ಅದರಲ್ಲೂ ಕನ್ನಡಿಗ ಎಂದು ಕರೆಯಿರಿ ಎಂದು ಅವರಲ್ಲಿ ಹೇಳಿದಾಗ, ಅವರೆಲ್ಲ ಇವರನ್ನು ಕನ್ನಡಿಗ ಅಂತ ಕರೆಯುತ್ತಿರುವುದು ತಮ್ಮಲ್ಲಿ ಅಭಿಮಾನ ಮೂಡಿಸಿದೆ ಎಂದು ಕೇತನ್ ಸಂತಸದಿಂದ ಹೇಳಿದ್ದಾರೆ. ಕೇತನ್ ನಾಯ್ಕ ಅವರ ಸಹಾಯವನ್ನು ಕೀನ್ಯಾದ ರಾಷ್ಟ್ರೀಯ ಮಾಧ್ಯಮಗಳು ಕೊಂಡಾಡಿವೆ.  ಒಟ್ಟಾರೆ ಬಡ ರಾಷ್ಟ್ರ ಕೀನ್ಯಾದ ಜನರಿಗೆ ಬಸವನಾಡು ವಿಜಯಪುರ ಜಿಲ್ಲೆಯ ಹೆಮ್ಮೆಯ ಕನ್ನಡಿಗ ಸ್ಪಂದಿಸಿರುವುದು ಕನ್ನಡಿಗರಿಗೂ ಹೆಮ್ಮೆಯ ವಿಷಯ.
First published:January 11, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ