B Y Vijayendra: ಸಿದ್ದರಾಮಯ್ಯರವರೇ ನಿಮಗಾಗಿ ಬಹುದೊಡ್ಡ ಕಂದಕ ಕಾಯುತ್ತಿದೆ, ವಿಜಯೇಂದ್ರ ವಾಗ್ದಾಳಿ!

ಧರ್ಮ ವಿಭಜನೆ ಸಂಬಂಧ ಸಿದ್ದರಾಮಯ್ಯ ಪಶ್ಚಾತ್ತಾಪ ಪಟ್ಟಿದ್ದರು ಅಂತಾ ರಂಭಾಪುರಿಶ್ರೀಗಳು ಹೇಳಿದ್ದರು. ಆದರೆ ತಾನು ಪಶ್ಚಾತ್ತಾಪ ಪಟ್ಟಿಲ್ಲ ಅಂತಾ ಸಿದ್ದರಾಮಯ್ಯ ಹೇಳಿದ್ದು, ಅವರ ವಿರುದ್ಧ ವಿಜಯೇಂದ್ರ ಆಕ್ರೋಶ ಹೊರಹಾಕಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಿಡಿ

ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಿಡಿ

  • Share this:
ಧರ್ಮ ವಿಭಜನೆ ಸಂಬಂಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramiah) ಪಶ್ಚಾತ್ತಾಪದ ಬಗ್ಗೆ ರಾಜ್ಯದಲ್ಲಿ ಚರ್ಚೆ ಜೋರಾಗಿದೆ. ಕಳೆದ ಶುಕ್ರವಾರ ಸಿದ್ದರಾಮಯ್ಯ ಬಾಳೆಹೊನ್ನೂರು ರಂಭಾಪುರಿ (Rambapuri)  ಮಠಕ್ಕೆ ಭೇಟಿ ನೀಡಿದ್ದರು. ಈ ಭೇಟಿಯ ಕುರಿತಾಗಿ ಮಾತನಾಡಿದ್ದ ರಂಭಾಪುರಿ ಸ್ವಾಮೀಜಿಗಳು, ಸಿದ್ದರಾಮಯ್ಯ ಅವರು ಲಿಂಗಾಯತ (Lingayat) ಪ್ರತ್ಯೇಕ ಧರ್ಮ  (Religion) ವಿಚಾರವಾಗಿ ಪಶ್ಚಾತ್ತಾಪ ಪಟ್ಟಿರುವುದಾಗಿ ಹೇಳಿದ್ದಾರೆ ಎಂದಿದ್ದರು. ಆದರೆ ಇದಕ್ಕೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು, ಸ್ವಾಮೀಜಿಗೆ ವಿವರಣೆ ಕೊಟ್ಟಿದ್ದೇನೆ. ಪಶ್ಚಾತ್ತಾಪ ಪಟ್ಟಿಲ್ಲ ಎಂದಿದ್ದಾರೆ. ಈ ಬಗ್ಗೆ ಕಾಂಗ್ರೆಸ್​-ಬಿಜೆಪಿ ನಡುವೆ ಮಾತಿನ ಸಮರ ನಡೆಯುತ್ತಿದೆ. ಈಗ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ( Vijayendra) ಕಿಡಿಕಾಡಿದ್ದಾರೆ.

ಧರ್ಮ ವಿಭಜನೆ ಸಂಬಂಧ ಸಿದ್ದರಾಮಯ್ಯ ಪಶ್ಚಾತ್ತಾಪ ಪಟ್ಟಿದ್ದರು ಅಂತಾ ರಂಭಾಪುರಿಶ್ರೀಗಳು ಹೇಳಿದ್ದರು. ಆದರೆ ತಾನು ಪಶ್ಚಾತ್ತಾಪ ಪಟ್ಟಿಲ್ಲ ಅಂತಾ ಸಿದ್ದರಾಮಯ್ಯ ಹೇಳಿದ್ದು, ಅವರ ವಿರುದ್ಧ ವಿಜಯೇಂದ್ರ ಆಕ್ರೋಶ ಹೊರಹಾಕಿದ್ದಾರೆ.

ಸಿದ್ದರಾಮಯ್ಯ ತಕ್ಕ ಬೆಲೆ ತೆತ್ತಿದ್ದಾರೆ- ವಿಜಯೇಂದ್ರ

ಈಗಾಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ತಕ್ಕ ಬೆಲೆ ತೆತ್ತಿದ್ದಾರೆ. ಪಶ್ಚಾತ್ತಾಪದ ಮಾತು ನಿಮ್ಮಿಂದ ಯಾರೂ ನಿರೀಕ್ಷಿಸುವುದಿಲ್ಲ. ಆದರೆ ಧರ್ಮಗುರುಗಳ ದರ್ಶನಕ್ಕೆ ತೆರಳಿ ಅಲ್ಲಿಯೂ ಸಿದ್ದರಾಮಯ್ಯನವರು ವಿತಂಡ ವಿವಾದ ಸೃಷ್ಟಿಸುವುದು ಎಷ್ಟು ಸರಿ ಎಂದು ಬಿ.ವೈ.ವಿಜಯೇಂದ್ರ ಟ್ವಿಟರ್​​ನಲ್ಲಿ ಪ್ರಶ್ನಿಸಿದ್ದಾರೆ.

Vijayendra outraged against Siddaramaiah on Religion division repentance
ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಿಡಿ


ಎತ್ತಿ ಕಟ್ಟುವ ನಿಮ್ಮ ರಾಜಕೀಯ ನಡೆ ಸಾಕು

ವಿಪಕ್ಷ ನಾಯಕ ಸಿದ್ದರಾಮಯ್ಯ ಒಂದು ಕಡೆ ಧರ್ಮ ಒಡೆಯುವ, ಮತ್ತೊಂದು ಕಡೆ ವೀರ ಸಾವರ್ಕರ್​​ರಂಥ ಸ್ವಾತಂತ್ರ್ಯ ಸೇನಾನಿಗಳನ್ನ ಅವಹೇಳನ ಮಾಡುತ್ತಿದ್ದಾರೆ. ಈ ಮೂಲಕ ಮತಾಂಧರನ್ನು ಎತ್ತಿ ಕಟ್ಟುವ ನಿಮ್ಮ ರಾಜಕೀಯ ನಡೆ ರಾಜ್ಯದ ಜನತೆ ಗಮನಿಸುತ್ತಿದ್ದಾರೆ ಅಂತಾ ಕಿಡಿಕಾರಿದ್ರು.

ಇದನ್ನೂ ಓದಿ: ನಾಟಿಕೋಳಿ ಸಾರು ತಿಂದು ದೇವಸ್ಥಾನಕ್ಕೆ ಹೋದ್ರಾ ಸಿದ್ದರಾಮಯ್ಯ? ಫೋಟೋ ವೈರಲ್

ಬಹುದೊಡ್ಡ ಕಂದಕ ಕಾಯುತ್ತಿದೆ- ವಿಜಯೇಂದ್ರ

ಸಿದ್ದರಾಮಯ್ಯನವರೇ ಧರ್ಮರಾಜಕಾರಣದ ಬಿಸಿ ಅನುಭವಿಸಿಯೂ ಮತ್ತದೇ ಹಾದಿಯಲ್ಲಿ ಸಾಗುತ್ತಿದ್ದೀರಿ. ನಿಮಗಾಗಿ ಬಹುದೊಡ್ಡ ಕಂದಕ ಕಾಯುತ್ತಿದೆ ಎಂದು ಟ್ವೀಟ್ ಮೂಲಕ ಸಿದ್ದರಾಮಯ್ಯ ವಿರುದ್ಧ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.

ಸುಳ್ಳು ಹೇಳುವುದೇ ಸಿದ್ದರಾಮಯ್ಯ ಪ್ರವೃತ್ತಿ- ಶೆಟ್ಟರ್​

ಸಿದ್ದರಾಮಯ್ಯ ಅಂದರೆ ಸುಳ್ಳು ಹೇಳುವುದನ್ನ ತಮ್ಮ ಪ್ರವೃತ್ತಿ ಮಾಡಿಕೊಂಡಿದ್ದಾರೆ. ಲಿಂಗಾಯತ ಧರ್ಮ ಒಡೆಯಲು ಸಿಎಂ ಇದ್ದಾಗ ಪ್ರಚೋದನೆ ನೀಡಿದ್ರು. ಇದೀಗ ತಾನು ಪಶ್ಚಾತ್ತಾಪ ಪಟ್ಟಿಲ್ಲ ಅಂತ ಹೇಳ್ತಾರೆ. ಡಿಕೆ ಶಿವಕುಮಾರ್ ಅವರೇ ಧರ್ಮ ಒಡೆದ ವಿಚಾರಕ್ಕೆ ಕ್ಷಮೆ ಕೇಳಿದ್ದಾರೆ. ಸಿದ್ದರಾಮಯ್ಯ ಉಲ್ಟಾ ಹೇಳಿಕೆ ಕೊಡ್ತಿದ್ದಾರೆ. ಇದು ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹದು ಅಂತಾ ಕಿಡಿಕಾರಿದ್ರು.

ಸಿದ್ದರಾಮಯ್ಯ ಟೂರ್ ಶುರುವಾಗಿದೆ

ಜಗದೀಶ್​ ಶೆಟ್ಟರ್ ಮಾತನಾಡಿ, ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಿದ್ದರಾಮಯ್ಯ ಅವರ ಟೂರ್ ಚಾಲುವಾಗಿದೆ. ಶೃಂಗೇರಿ, ರಂಭಾಪುರಿ, ಮೂರುಸಾವಿರ ಮಠ, ತುಮಕೂರು ಮೈಸೂರು ಹೀಗೆ ಮಠಗಳಿಗೆ ಹೋಗೋದು ಶುರುವಾಗಿದೆ. ಎಲೆಕ್ಷನ್ ಸಲುವಾಗಿ ಮಠ ಮಾನ್ಯಕ್ಕೆ ಓಡಾಡುತ್ತಿದ್ದಾರೆ ಅಂತಾ ಹೇಳಿದ್ರು.

ಇದನ್ನೂ ಓದಿ: ಗಣವೇಷಧಾರಿಯಾಗಿ ರಂಜನ್ ಜೊತೆಗೆ ತರಬೇತಿ ಪಡೆದಿರುವ ಸಂಪತ್ ಯಾವ ಪಕ್ಷ?

ಕಾಂಗ್ರೆಸ್ ನವರಿಗೆ ತಕ್ಕ ಪಾಠ ಕಲಿಸಿದ್ದಾರೆ- ನಿರಾಣಿ

ಧರ್ಮ ವಿಭಜನೆ ಕುರಿತು ಸಿದ್ದರಾಮಯ್ಯ ಪಶ್ಚಾತ್ತಾಪ ಹೇಳಿಕೆ ಬಗ್ಗೆ ಸಚಿವ ಮುರುಗೇಶ್ ನಿರಾಣಿ ಪ್ರತಿಕ್ರಿಯಿಸಿದ್ದಾರೆ. ಪ್ರತ್ಯೇಕ ಧರ್ಮ ಮಾಡಿದ್ದಕ್ಕೆ ಕರ್ನಾಟಕ ಜನತೆ, ಕಾಂಗ್ರೆಸ್ ನವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಧರ್ಮ ಒಡೆಯುವ ಕೆಲಸ ಯಾರೇ ಮಾಡಿದ್ರು ತಪ್ಪು. ಶ್ರೀಗಳು ಮತ್ತು ಸಿದ್ದರಾಮಯ್ಯ ಇಬ್ರು ಏನು ಮಾತಾಡಿದ್ದಾರೋ ಗೊತ್ತಿಲ್ಲ ಅಂದ್ರು.

ರಂಭಾಪುರಿ ಶ್ರೀಗಳ ಮಾತಿಗೆ ಸಿದ್ದರಾಮಯ್ಯ ಯೂಟರ್ನ್​ ಬಗ್ಗೆ ಬಿಜೆಪಿ ನಾಯಕರು ಆಕ್ರೋಶ ಹೊರಹಾಕ್ತಿದ್ದಾರೆ.
Published by:Thara Kemmara
First published: