ವರುಣಾದಲ್ಲಿ ಬಸವರಾಜುರನ್ನು ಸೋಲಿಸಲು ವಿಜಯೇಂದ್ರ ಅಭಿಮಾನಿಗಳು ಸಿದ್ಧ? [Audio Viral]


Updated:April 27, 2018, 4:35 PM IST
ವರುಣಾದಲ್ಲಿ ಬಸವರಾಜುರನ್ನು ಸೋಲಿಸಲು ವಿಜಯೇಂದ್ರ ಅಭಿಮಾನಿಗಳು ಸಿದ್ಧ? [Audio Viral]

Updated: April 27, 2018, 4:35 PM IST
ಮೈಸೂರು: ಮೈಸೂರಿನ ವರುಣಾ ಕ್ಷೇತ್ರದಲ್ಲಿ ಬಿಎಸ್​ ಯಡಿಯೂರಪ್ಪರ ಮಗ ಬಿ.ವೈ ವಿಜಯೇಂದ್ರಗೆ ಟಿಕೆಟ್​ ಸಿಗದ ಅಕ್ರೋಶವನ್ನು ಹೊರ ಹಾಕಿರುವ ವಿಜಯೇಂದ್ರ ಅಭಿಮಾನಿ ವರುಣ ಬಿಜೆಪಿ ಅಭ್ಯರ್ಥಿ ಟಿ.ಬಸವರಾಜುಗೆ ಧಮ್ಕಿ ಹಾಕಿದ್ದಾರೆ.

ಇತ್ತೀಚೆಗೆ ಬಸವರಾಜ್​ಗೆ ಟಿಕೆಟ್​ ವಿಚಾರವಾಗಿ ವಿಜಯೇಂದ್ರ ಅಭಿಮಾನಿ ಕರೆ ಮಾಡಿದ್ದು ಈ ಆಡಿಯೋ ವೈರಲ್​ ಆಗಿದೆ. 'ಎಲ್ಲರೂ ಟಿಕೆಟ್ ಬೇಡ ಅಂದ್ರೆ ನೀವು ಹೇಗೆ ತಗೊಂಡ್ರಿ. ನೀವು ತಗೊಂಡಿಲ್ಲ ಅಂದಿದ್ರೆ ವಿಜಯೇಂದ್ರ ಸುಲಭವಾಗಿ  ಗೆಲ್ಲುತ್ತಿದ್ದರು, ನೀವು ಅದೇಗೆ ಗೆಲ್ಲುತ್ತೀರಿ ಎಂದು ನಾವು ನೋಡುತ್ತೇವೆ. ನಿಮ್ಮನ್ನು ಸೋಲಿಸೋಕೆ ಅಭಿಮಾನಿಗಳಾದ ನಾವು ರೆಡಿಯಾಗಿದ್ದೇವೆ. ವಿಜಯೇಂದ್ರ ಬೆಂಬಲಿಗರು ಏನು ಎಂದು ನಿಮಗೆ ತೋರಿಸುತ್ತೇವೆ' ಎಂದು ಓಪನ್​ ಆಗಿಯೇ ಹೇಳಿದ್ದಾರೆ.


ಇದಕ್ಕೆ ತಿರುಗೇಟು ನೀಡಿದ ಬಸವರಾಜು ​'ಬಿಜೆಪಿ ಪಾಕಿಸ್ತಾನದವರಿಗೆ ಟಿಕೆಟ್‌ ನೀಡಿಲ್ಲ, ವರುಣಾದ ನಿಷ್ಠಾವಂತ ಕಾರ್ಯಕರ್ತನಿಗೆ ಟಿಕೆಟ್ ನೀಡಿದೆ. ಹೀಗಾಗಿ ನೀವು ಬಿಜೆಪಿ ಪರ ಕೆಲಸ ಮಾಡಿ. ಇಲ್ಲ ಅಂದ್ರೆ ಬಿಡಿ ಎಂದು ಹೇಳಿದ್ದಾರೆ. ಸದ್ಯ ವಿಜಯೇಂದ್ರ ಅಭಿಮಾನಿ ಮತ್ತು ಬಿಜೆಪಿ ಅಭ್ಯರ್ಥಿಯ ನಡುವಿನ ಆಡಿಯೋ ವೈರಲ್ ಆಗಿದೆ.
First published:April 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...