B S Yediyurappa: ನಿನ್ನೆ ಶಿಕಾರಿಪುರ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಡ್ತೀನಿ ಅಂದ್ರು, ಇಂದು ಉಲ್ಟಾ ಹೊಡೆದ BSY!

ನಿನ್ನೆ ನಾನು ಹೇಳಿದ ಹೇಳಿಕೆ ಅನಿರೀಕ್ಷಿತ, ಅಲ್ಲಿನ ಜನ ನೀವೇ ಶಿಕಾರಿಪುರದಿಂದ ಸ್ಪರ್ಧೆ ಮಾಡಬೇಕೆಂದು ಒತ್ತಾಯ ಮಾಡಿದ್ದರು. ಅದಕ್ಕೆ ನಾನು ಸ್ಪರ್ಧೆ ಮಾಡಲ್ಲ. ನನ್ನ ಮಗ ವಿಜಯೇಂದ್ರ ಸ್ಪರ್ಧೆ ಮಾಡುತ್ತಾನೆ ಎಂದು ಹೇಳಿದ್ದೆ. 

ಬಿವೈ ವಿಜಯೇಂದ್ರ ಮತ್ತು ಬಿ.ಎಸ್.ಯಡಿಯೂರಪ್ಪ

ಬಿವೈ ವಿಜಯೇಂದ್ರ ಮತ್ತು ಬಿ.ಎಸ್.ಯಡಿಯೂರಪ್ಪ

  • Share this:
ಬೆಂಗಳೂರು (ಜು.23): ನಿನ್ನೆ ಚುನಾವಣೆ ನಿವೃತ್ತಿ ಘೋಷಣೆ ಮಾಡಿದ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಮನೆಗೆ ಬಿಜೆಪಿ ನಾಯಕರ ದಂಡೇ ಹರಿದು ಬರ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹಾಗೂ ಸಚಿವ ಆರ್​ ಅಶೋಕ್ (R Ashok) ಕಾವೇರಿ ನಿವಾಸಕ್ಕೆ ಭೇಟಿ ನೀಡಿ ಕೆಲ ಕಾಲ ಮಾತುಕತೆ ನಡೆಸಿದ್ರು. ಇದೇ ವೇಳೆ ಮಾಧ್ಯಮಗಳ ಜೊತೆ ಮಾತಾಡಿದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ನಿನ್ನೆ ನಾನು ನೀಡಿದ ಹೇಳಿಕೆ ಬಗ್ಗೆ ಸಾಕಷ್ಟು ಗೊಂದಲ ಆಗಿದೆ. ನಾನು ವಿಧಾನಸಭೆ ಚುನಾವಣೆಗೆ (Assembly Election) ನಿಲ್ಲಲ್ಲ. ನನ್ನನ್ನು ಶಿಕಾರಿಪುರದ ಜನ ಚುನಾವಣೆಗೆ ನಿಲ್ಲಲು ಒತ್ತಾಯ ಮಾಡಿದ್ರು. ಆದ್ರೆ ನಾನು ನಿಲ್ಲೋದಿಲ್ಲ, ವಿಜಯೇಂದ್ರ (Vijayendra) ನಿಲ್ತಾರೆ ಎಂದು ಹೇಳಿದೆ. ನಿನ್ನೆ ಅಲ್ಲಿಯ ಜನ ಒತ್ತಾಯ ಮಾಡಿದ ಕಾರಣ ನಾನು ಹಾಗೆ ಹೇಳಿದ್ದೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ. 

ಹೈಕಮಾಂಡ್​ ನಿರ್ಧಾರಕ್ಕೆ ನಾವು ಬದ್ಧ

ನಿನ್ನೆ ನಾನು ಹೇಳಿದ ಹೇಳಿಕೆ ಅನಿರೀಕ್ಷಿತ, ಅಲ್ಲಿನ ಜನ ನೀವೇ ಶಿಕಾರಿಪುರದಿಂದ ಸ್ಪರ್ಧೆ ಮಾಡಬೇಕೆಂದು ಒತ್ತಾಯ ಮಾಡಿದ್ದರು. ಅದಕ್ಕೆ ನಾನು ಸ್ಪರ್ಧೆ ಮಾಡಲ್ಲ. ನನ್ನ ಮಗ ವಿಜಯೇಂದ್ರ ಸ್ಪರ್ಧೆ ಮಾಡುತ್ತಾನೆ ಎಂದು ಹೇಳಿದ್ದೆ. ಮೈಸೂರು, ಚಾಮರಾಜನಗರ, ಹಳೇ ಮೈಸೂರು ಭಾಗವಾದರೂ ಸರಿ ಎಲ್ಲಾದರೂ‌ ಸರಿ ವರಿಷ್ಠರು‌‌ ಹೇಳಿದ‌ ಕಡೆ‌ ವಿಜಯೇಂದ್ರ
ಸ್ಪರ್ಧೆ ಮಾಡ್ತಾರೆ. ಅಂತಿಮ ತೀರ್ಮಾನ ಮಾಡೋದು ಮೋದಿ, ಅಮಿತ್ ಶಾ, ನಡ್ಡಾ ಅವರು ಹೈಕಮಾಂಡ್​ ತೀರ್ಮಾನವೇ ಅಂತಿಮ, ನನ್ನ ಸಲಹೆ ಅಷ್ಟೇ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಮೋದಿಯವರನ್ನ ಮತ್ತೆ ಪ್ರಧಾನಿ ಮಾಡಬೇಕು

ಬಿಜೆಪಿ ರಾಜ್ಯದಲ್ಲಿ ಯಡಿಯೂರಪ್ಪಗೆ ಸಾಕಷ್ಟು ಅವಕಾಶ ನೀಡಿದ್ದಾರೆ. ರಾಜ್ಯ ಅಧ್ಯಕ್ಷ, ಮುಖ್ಯಮಂತ್ರಿ ಸೇರಿದಂತೆ ಅನೇಕ ಹುದ್ದೆ ಕೊಟ್ಟಿದ್ದಾರೆ. ಮತ್ತೆ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಬೇಕು. ಮೋದಿಯವರನ್ನ ಮತ್ತೆ ಪ್ರಧಾನಿ ಮಾಡಬೇಕು ಎಂದು ಯಡಿಯೂರಪ್ಪ ಹೇಳಿದ್ದಾರೆ.

ಇದನ್ನೂ ಓದಿ: H D Kumaraswamy: ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆಗೆ ಸಿದ್ಧತೆ; ಯಾವಾಗ ಎಲೆಕ್ಷನ್ ಬಂದ್ರು ನಾವ್ ರೆಡಿ

ತಾನು ಕಳ್ಳ, ಪರರ ನಂಬ..

PSI ಹಗರಣದಲ್ಲಿ ವಿಜಯೇಂದ್ರ ಭಾಗಿ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಬಿ.ಎಸ್​ ಯಡಿಯೂರಪ್ಪ ಟಾಂಗ್ ಕೊಟ್ಟಿದ್ದಾರೆ. ತಾನು ಕಳ್ಳ, ಪರರ ನಂಬ, ಸಿದ್ದರಾಮಯ್ಯ ಅವರ ಹೇಳಿಕೆ ಶೋಭೆ ತರಲ್ಲ ಇದು ಮುರ್ಖತನದ ಪರಮಾವಧಿ ಹೇಳಿಕೆ ಎಂದು  ಸಿದ್ದರಾಮಯ್ಯಗೆ  ಬಿ ಎಸ್ ಯಡಿಯೂರಪ್ಪ ತಿರುಗೇಟು ನೀಡಿದ್ರು.

ಯಡಿಯೂರಪ್ಪನವರು ನಿನ್ನೆ ನೀಡಿದ್ದು ಸಲಹೆ ಅಷ್ಟೇ

ಯಡಿಯೂರಪ್ಪನವರು ನಿನ್ನೆ ನೀಡಿದ್ದು ಸಲಹೆ ಅಷ್ಟೇ, ಕ್ಷೇತ್ರದ ಜನ ಪದೆ ಪದೇ ಹೇಳ್ತಾ ಇದ್ರು. ಹಾಗಾಗಿ ಯಡಿಯೂರಪ್ಪನವರು ನಿನ್ನೆ ಆ ಹೇಳಿಕೆ ನೀಡಿದ್ದಾರೆ. ವಿಜಯೇಂದ್ರ ಬಗ್ಗೆ ಮಾತ್ರವಲ್ಲ ಇಡೀ ರಾಜ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ತೀರ್ಮಾನ ಮಾಡ್ತಾರೆ. ಯಡಿಯೂರಪ್ಪ ಅಂದ್ರೆ ಒಂದು ದೊಡ್ಡ ಶಕ್ತಿ, ನಾಲ್ಕು ದಶಕಗಳಿಂದ ಯಡಿಯೂರಪ್ಪ ರಾಜಕೀಯದಲ್ಲಿ ಇದ್ದಾರೆ ಎಂದ್ರು.

ಇದನ್ನೂ ಓದಿ: Education Department: ರಾಜ್ಯದ ಅನಧಿಕೃತ ಶಾಲೆಗಳಿಗೆ ಬೀಳಲಿದೆ ಬೀಗ!

 BSY ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲ್ಲ

ಯಡಿಯೂರಪ್ಪ ಹೇಳಿಕೆಯಿಂದ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲ್ಲ,
ಅವರು ಸಿಎಂ ಸ್ಥಾನದಿಂದ ಇಳಿದಾಗಲೇ ಇಕ್ಕಟ್ಟು ಸೃಷ್ಟಿ ಮಾಡಲಿಲ್ಲ
ಈಗ ಸೃಷ್ಟಿ ಮಾಡ್ತಾರಾ? ಯಡಿಯೂರಪ್ಪರು ತಮಗೆ ಅನಿಸಿದ್ದನ್ನು ಮಾಧ್ಯಮದ ಮುಂದೆ ಹೇಳ್ತಾರೆ. ಆ ಕ್ಷಣ ಕ್ಷೇತ್ರದ ಜನರ ಒತ್ತಾಯಕ್ಕೆ ಯಡಿಯೂರಪ್ಪ ಹಾಗೆ ಹೇಳಿದ್ದಾರೆ. ಅದು ಸಲಹೆ ಕೇವಲ ಸಲಹೆ ಅಷ್ಟೇ ಎಂದು ಸಿಎಂದ ಬಸವರಾಜ್​ ಬೊಮ್ಮಾಯಿ ಹೇಳಿದ್ರು.
Published by:Pavana HS
First published: