ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ವಿಜಯಪುರ ವಿದ್ಯಾರ್ಥಿನಿ ಆಯ್ಕೆ; ಜನವರಿ 20ರಂದು ಮೋದಿ ಜೊತೆ ಸಂವಾದ

ಜ.16 ರಂದು ಬೆಂಗಳೂರಿನಲ್ಲಿ ಕರ್ನಾಟಕ ಸಮಗ್ರ ಶಿಕ್ಷಣ ಸಂಸ್ಥೆ ನೇತೃತ್ವದಲ್ಲಿ ಪೂರ್ವ ಸಿದ್ಧತೆ ತರಬೇತಿ ಕೊಡಲಾಗುತ್ತದೆ. ಜ. 20ರಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶಾದ್ಯಂತ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯುತ್ತದೆ. 

Latha CG | news18-kannada
Updated:January 7, 2020, 11:54 AM IST
ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ವಿಜಯಪುರ ವಿದ್ಯಾರ್ಥಿನಿ ಆಯ್ಕೆ; ಜನವರಿ 20ರಂದು ಮೋದಿ ಜೊತೆ ಸಂವಾದ
ವಿದ್ಯಾರ್ಥಿನಿ ಶ್ವೇತಾ
  • Share this:
ವಿಜಯಪುರ(ಜ.07): ಎಸ್​ಎಸ್​​ಎಲ್​ಸಿ ಪರೀಕ್ಷೆಗೆ ದಿನಗಣನೆ ಶುರುವಾಗಿದ್ದು, ವಿದ್ಯಾರ್ಥಿಗಳು ಸಿದ್ದತೆಯಲ್ಲಿ ತೊಡಗಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಸಹ ಪ್ರಧಾನಿ ಮೋದಿ 10ನೇ ತರಗತಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲಿದ್ದಾರೆ. ಇದೇ ಜನವರಿ 20ರಂದು ನವದೆಹಲಿಯಲ್ಲಿ 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮ ನಡೆಯಲಿದೆ. ಈ  ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಭಾಗಿಯಾಗಲಿದ್ದು, ಪ್ರಧಾನಿ ಮೋದಿ ಜೊತೆ ಸಂವಾದ ನಡೆಸಲಿದ್ದಾರೆ.

ಪರೀಕ್ಷಾ ಪೇ ಚರ್ಚಾಗೆ ಆಯ್ಕೆಯಾಗಲು ಪ್ರಬಂಧ ಮಂಡಿಸುವ ಮಾನದಂಡವನ್ನು ಇಡಲಾಗುತ್ತದೆ. ಅದರಂತೆ ಕರ್ನಾಟಕದಿಂದ ಒಟ್ಟು 15 ಸಾವಿರ ವಿದ್ಯಾರ್ಥಿಗಳು ಪ್ರಬಂಧ ಮಂಡನೆ ಮಾಡಿದ್ದರು. ಅವರಲ್ಲಿ ಪರೀಕ್ಷಾ ಪೇ ಚರ್ಚಾಗೆ   42 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಬಸವ ನಾಡಿನ ವಿದ್ಯಾರ್ಥಿನಿ ಶ್ವೇತಾ ಮಲ್ಲಿಕಾರ್ಜುನ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.

ಎರಡನೇ ಕಂತಿನಲ್ಲಿ ನೆರೆ ಪರಿಹಾರ ಬಿಡುಗಡೆ ಮಾಡಿದ ಕೇಂದ್ರ; ಪ್ರಧಾನಿಗೆ ಬಿಎಸ್​ವೈ ಅಭಿನಂದನೆ

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿಬಿ ಗ್ರಾಮದವರಾದ ಶ್ವೇತಾ, ಪ್ರಧಾನಿ ಮೋದಿ ಜೊತೆ ಸಂವಾದ ನಡೆಸಲು ಕಾತರರಾಗಿದ್ದಾರೆ. ಶ್ವೇತಾ ಹುಣಸ್ಯಾಳ ಆರ್‌ ಎಂ ಎಸ್‌ ಎ ಶಾಲೆಯ ವಿದ್ಯಾರ್ಥಿನಿ. ಇವರು  ಡಿ.16ರಂದು ಆನ್‌ಲೈನ್​​​ನಲ್ಲಿ ಅರ್ಜಿ ಸಲ್ಲಿಸಿದ್ದರು.

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ವಿದ್ಯಾರ್ಥಿನಿ  ಶ್ವೇತಾ, "ಅಸ್ಪೃಶ್ಯತೆ ಕುರಿತಾಗಿ ಪ್ರಬಂಧ ಮಂಡಿಸಿದ್ದೆ. ಈಗ ಪರೀಕ್ಷಾ ಪೆ ಚರ್ಚಾ ಸಂವಾದ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದು ಸಂತಸ ತಂದಿದೆ. ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಘಟನೆ ನನ್ನ ಮೇಲೆ ಪರಿಣಾಮ ಬೀರಿತ್ತು. ಸಂವಿಧಾನದಲ್ಲಿ ಅವಕಾಶ ನೀಡಿದ್ದರೂ ಶಿಕ್ಷಿತರೇ ದೂರು ನೀಡದೆ ದೂರಾಗುತ್ತಿದ್ದಾರೆ. ದೌರ್ಜನ್ಯ ನಡೆಸುತ್ತಿರುವುದು ಬೇಸರವನ್ನುಂಟು ಮಾಡುತ್ತದೆ. ಬೀದಿ ನಾಟಕ, ಜನಜಾಗೃತಿ ಮುಖಾಂತರ ಪರಿವರ್ತನೆ ಸಾಧ್ಯವಿದೆ ಎಂದು ನಾನು ಪ್ರಬಂಧ ಮಂಡಿಸಿದ್ದೆ. ಇದರಿಂದ ನನಗೆ ಅವಕಾಶ ಸಿಕ್ಕಿದೆ," ಎಂದು ಹೇಳಿದ್ದಾರೆ.

ತಾರಕಕ್ಕೇರಿದ ಟ್ರಂಪ್​​ ಮತ್ತು ಯುಎಸ್​​​​ ರಕ್ಷಣಾ ಕಾರ್ಯದರ್ಶಿ ನಡುವಿನ ಸಂಘರ್ಷ: ಇರಾನ್​​​ ವಿಚಾರದಲ್ಲಿ ಬಹಿರಂಗ

ಜ.16 ರಂದು ಬೆಂಗಳೂರಿನಲ್ಲಿ ಕರ್ನಾಟಕ ಸಮಗ್ರ ಶಿಕ್ಷಣ ಸಂಸ್ಥೆ ನೇತೃತ್ವದಲ್ಲಿ ಪೂರ್ವ ಸಿದ್ಧತೆ ತರಬೇತಿ ಕೊಡಲಾಗುತ್ತದೆ. ಜ. 20ರಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶಾದ್ಯಂತ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯುತ್ತದೆ. 
First published:January 7, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ