• Home
  • »
  • News
  • »
  • state
  • »
  • Vijayapura: "ಕೈ ಬಳೆ ಒಡೆದಾವು, ಕಣ್ಣೀರು ಹರಿದಾವು" ಎಂದ ಬಬಲಾದಿ ಮುತ್ಯಾ! ಮತ್ತೆ ಯುದ್ಧವೋ? ಅನಾಹುತವೋ?

Vijayapura: "ಕೈ ಬಳೆ ಒಡೆದಾವು, ಕಣ್ಣೀರು ಹರಿದಾವು" ಎಂದ ಬಬಲಾದಿ ಮುತ್ಯಾ! ಮತ್ತೆ ಯುದ್ಧವೋ? ಅನಾಹುತವೋ?

ಭವಿಷ್ಯ ನುಡಿವ ದೈವೀಪುರುಷ

ಭವಿಷ್ಯ ನುಡಿವ ದೈವೀಪುರುಷ

ಪ್ರಸಿದ್ಧ ಬಬಲಾದಿಯ ಮಠದಲ್ಲಿ ಜಾತ್ರೆ ಪ್ರಯುಕ್ತ ಭವಿಷ್ಯವಾಣಿ ಹೊರಬಿದ್ದಿದೆ. “ಕೈಬಳೆ ಒಡೆದಾವು, ಕಣ್ಣೀರು ಹರಿದಾವು” ಅಂತ ಹೇಳಿದ್ದಾರೆ. “ಏಪ್ರಿಲ್‌ನಿಂದ ಆಗಸ್ಟ್ ವರೆಗೆ ಪಾಪ ಕೈಮೀರಿ ಹೋದಿತು” ಅಂತ ಎಚ್ಚರಿಸಿದ್ದಾರೆ. ಈ ಹಿಂದೆ ತಿರುಪತಿ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಮುತ್ಯಾ ನುಡಿದ ಭವಿಷ್ಯ ನಿಜವಾಗಿತ್ತು.

ಮುಂದೆ ಓದಿ ...
  • Share this:

ವಿಜಯಪುರ: ಇಲ್ಲಿನ ಬಬಲೇಶ್ವರ (Babaleshwara) ತಾಲೂಕಿನ ಪ್ರಸಿದ್ಧ ಕ್ಷೇತ್ರವಾದ ಬಬಲಾದಿಯಲ್ಲಿ ದೈವೀಪುರುಷ ಸದಾಶಿವ ಮುತ್ಯಾ ಮತ್ತೆ ಭವಿಷ್ಯ ವಾಣಿ ನುಡಿದಿದ್ದಾರೆ. ರಷ್ಯಾ (Russia) ಹಾಗೂ ಉಕ್ರೇನ್ (Ukraine) ನಡುವಿನ ಯುದ್ಧ (War), ಪ್ರಕೃತಿ ವಿಕೋಪಗಳು (Natural Disasters), ಮಳೆ (Rain) ಇತ್ಯಾದಿಗಳ ಕುರಿತಂತೆ ನಿಗೂಢ ಭವಿಷ್ಯ ಹೇಳಿದ್ದಾರೆ. ಬಬಲಾದಿ ಸದಾಶಿವ ಮುತ್ಯಾಮಠದ ಪೀಠಾಧಿಪತಿ ಸಿದ್ದು ಮುತ್ಯಾ ಸ್ವಾಮೀಜಿಯವರು ಕಾಲಜ್ಞಾನದ ಭವಿಷ್ಯವಾಣಿ ನುಡಿದಿದ್ದಾರೆ. ಸದಾಶಿವ ಮುತ್ಯಾನ ಜಾತ್ರೆ ಹಿನ್ನೆಲೆಯಲ್ಲಿ ಭವಿಷ್ಯ ನುಡಿದಿದ್ದು, ಈ ನಿಗೂಢ ಮಾತಿನ ಭವಿಷ್ಯ ಇದೀಗ ವೈರಲ್ (Viral) ಆಗಿದೆ. ಜನರೆಲ್ಲರೂ ಮುತ್ಯಾನ ನಿಗೂಢ ಭವಿಷ್ಯದ ಬಗ್ಗೆ ಚರ್ಚೆ ಆರಂಭಿಸಿದ್ದಾರೆ.


 “ಕೈಬಳೆ ಒಡೆದಾವು, ಕಣ್ಣೀರು ಹರಿದಾವು”


ಹೌದು, ಈ ರೀತಿಯ ನಿಗೂಢ ಭವಿಷ್ಯ ವಾಣಿಯನ್ನು ಬಬಲಾದಿ ಮಠದ ಪೀಠಾಧಿಪತಿ ಸಿದ್ರಾಮಯ್ಯ ಹೊಳಿಮಠ ಸ್ವಾಮೀಜಿ ನುಡಿದಿದ್ದಾರೆ. ಮುಂಗಾರಿ ಮಳೆ ಫಲವಾಗಿ ಬೆಳೆ ಜಾಸ್ತಿ. ಹಿಂಗಾರಿ ಮಧ್ಯಮ ಫಲ. ಕಂಪ್ಲಿ ದೇಶಕ್ಕೆ ಬರ, ದೇಶದೊಳಗೆ ಆಹಾಕಾರ, ಕೆಟ್ಟ ಪರಿಣಾಮ. ಕೈ ಬಳೆ‌ ಒಡೆದಾವು, ಕಣ್ಣೀರ ಹರಿದಾವು ಎಂದು ಸ್ವಾಮೀಜಿ ಗೂಢಾರ್ಥದ ವಾಣಿ ನುಡಿದಿದ್ದಾರೆ.


 ಮಳೆ ಬೆಳೆಯ ಬಗ್ಗೆಯೂ ಮುತ್ಯಾನ ಭವಿಷ್ಯ


ರಾಜ್ಯ ಹಾಗೂ ದೇಶದ ಮಳೆ, ಬೆಳೆ, ಹವಾಮಾನ ಕುರಿತಂತೆ ಮುತ್ಯಾ ಭವಿಷ್ಯ ನುಡದಿದ್ದಾರೆ. “ಮುಂಗಾರಿ ಮಳೆ ಫಲವಾಗಿ ಬೆಳೆ ಜಾಸ್ತಿ. ಹಿಂಗಾರಿ ಮಧ್ಯಮ ಫಲ.


ಕಂಪ್ಲಿ ದೇಶಕ್ಕೆ ಬರ, ದೇಶದೊಳಗೆ ಹಾಹಾಕಾರ, ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ” ಅಂತ ಮುತ್ಯಾ ಎಚ್ಚರಿಸಿದ್ದಾರೆ.


ಇದನ್ನೂ ಓದಿ: Astrology: ಈ ರಾಶಿ ಜನರು ಇಂದು ಸಿಕ್ಕಾಪಟ್ಟೆ ಬ್ಯುಸಿ; ಇಲ್ಲಿದೆ ದಿನಭವಿಷ್ಯ


 ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧದ ಬಗ್ಗೆ ಭವಿಷ್ಯ


ಸದ್ಯ ಜಗತ್ತನ್ನೇ ಕಂಗೆಡಿಸಿರುವ ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧದ ಬಗ್ಗೆ ಮುತ್ಯಾ ಭವಿಷ್ಯ ನುಡಿದಿದ್ದಾರೆ. ತಂತ್ರ ಅತಂತ್ರ, ಜಗತ್ತಿನಲ್ಲಿ ಅಧಿಕ ಪಾಪ ಆಗಲಿದೆ.  ಕಲಿ ಪುರಷನ ಮುಂದೆ ಆಟ ಕೆಟ್ಟು ಹೋಗಿದೆ. ಪಡವಲು ದಿಕ್ಕಿಗೆ ತ್ರಾಸು, ಕೇಡು ಅಂತ  ಮುತ್ಯಾನ ಭವಿಷ್ಯ ನುಡಿದಿದೆ.


“ಏಪ್ರಿಲ್‌ನಿಂದ ಆಗಸ್ಟ್ ವರೆಗೆ ಪಾಪ ಕೈಮೀರಿ ಹೋದಿತು”


ಮುಂದಿನ ಐದು ತಿಂಗಳಲ್ಲಿ ಜಗತ್ತಿನಲ್ಲಿ ಗಂಭೀರ ಪರಿಸ್ಥಿತಿ ಇರಲಿದೆ ಅಂತ ಮುತ್ಯಾ ಭವಿಷ್ಯ ನುಡಿದಿದ್ದಾರೆ. “ಜೋಳ, ಕಡೆಲೆ ವರ್ಗಗಳು ಕೆಂಡಾಮಂಡಲ. ಉತ್ತರ ದಿಕ್ಕಿನಿಂದ ಮುಂದೆ ಮುರುಕಾದಿತು. ನೀತಿಯಿಂದ ನಿಜರೂಪ ತೋರುತೈತೆ.


ದೇಶದಲ್ಲೆ ಶಾಂತಿ, ಸೌಹಾರ್ದತೆ ಕೊರತೆ ಇದೆ. ಏಪ್ರಿಲ್‌ನಿಂದ ಆಗಸ್ಟ್ ವರೆಗೆ ಪಾಪ ಕೈಮೀರಿ ಹೋದಿತು ಎಂದಿದ್ದಾರೆ.


ಏಳಾಣೆ ಎಂಟಾಣೆ ಎಂದ ಮುತ್ಯಾ


ಇನ್ನು ಸೃಷ್ಠಿಮುಂದ ದುಃಖ, ನಷ್ಟ, ಲೋಕಕ್ಕೆ ಕಷ್ಟ ಎಂದಿದ್ದಾರೆ. ಜೊತೆಗೆ ಯುರೋಪ, ಅಮೇರಿಕಾ, ಇರಾಕ್ ಇರಾನ್, ರಷ್ಯಾ, ನಾ ಮುಂದು ತಾ ಮುಂದು ಎಂದು ಸಾಗೀತು. ಇದರಿಂದಾಗಿ ಅಸೂಹೆ ಕಲಹ ತಾರಕಕ್ಕೇರಿತು. ಏಳಾಣೆ ಮಳೆ, ಎಂಟಾಣೆ ಬೆಳೆ ಎಂದು ಭವಿಷ್ಯವಾಣಿ ನುಡಿದಿದ್ದಾರೆ.


ಕಾಲಜ್ಞಾನದ ಭವಿಷ್ಯ ಹೇಳುವ ಬಬಲಾದಿ ಮಠ


ಚಂದ್ರಗಿರಿಯ ಮೂಲ ಸಂಸ್ಥಾನದ ಶ್ರೀ ಸದಾಶಿವ ಮುತ್ಯಾರ ಮಠ ಪವಾಡದ ಕ್ಷೇತ್ರ. ಇದನ್ನು ಬೆಂಕಿಯ ಬಬಲಾದಿ ಎಂದು ಕರೆಯುತ್ತಾರೆ. ಈ ಜಾಗದಲ್ಲಿ ನಿಂತು ಮಾತನಾಡಿದರೆ ಅದು ಸುಳ್ಳಾಗದು ಎಂಬ ಪ್ರತೀತಿ ಇದೆ.


ಬಿಳಿಗೋಡೆಯ ಮೇಲೆ ಕಪ್ಪು ಚುಕ್ಕಿಯಂತೆ ಇಲ್ಲಿ ಮಾತನಾಡಿದ್ದು ಹುಸಿಯಾಗದು ಎಂಬುದು ಕಳೆದ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಕಾಲಜ್ಞಾನ ಕೇಳಲು ಸುತ್ತಮುತ್ತಲ ಜಿಲ್ಲೆಗಳ ಹಾಗೂ ಅನ್ಯ ರಾಜ್ಯಗಳ ಭಕ್ತರೂ ಬರುತ್ತಾರೆ.


ಇದನ್ನೂ ಓದಿ: Havana: ವಿದ್ಯೆ- ಹಣ ಪ್ರಾಪ್ತಿಗೆ ಈ ಹೋಮ-ಹವನ ಮಾಡಿದರೆ ಪುಣ್ಯ ಫಲವಂತೆ


ಈ ಹಿಂದೆ ನುಡಿದಿದ್ದ ಭವಿಷ್ಯಗಳು ಸುಳ್ಳಾಗಿದ್ದೇ ಇಲ್ಲ


ಈ ಹಿಂದೆ ಮಠದಿಂದ ಹೇಳಲಾಗಿದ್ದ ಭವಿಷ್ಯ ಎಂದಿಗೂ ಸುಳ್ಳಾಗಿದ್ದೇ ಇಲ್ಲ ಅಂತ ಭಕ್ತರು ಹೇಳುತ್ತಾರೆ. ಕಳೆದ ಬಾರಿ ತಿರುಪತಿಯಲ್ಲಿ ಉಂಟಾದ ಜಲಪ್ರಳಯದ ಬಗ್ಗೆ 9 ತಿಂಗಳ ಹಿಂದೆಯೇ  ವಿಜಯಪುರ ಜಿಲ್ಲೆಯ ಬಬಲಾದಿ ಮಠದ ಮುತ್ಯಾ ಭವಿಷ್ಯ ನುಡಿದಿದ್ದರು.


ಅಂದು ಸಿದ್ದು ಮುತ್ಯಾ ಆಡಿದ್ದ ಮಾತುಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದವು. "ಆಂಧ್ರ-ತೆಲಗು ರಾಜ್ಯಕ್ಕೆ ಕೇಡು" ಎಂದು ಭವಿಷ್ಯ ನುಡಿದಿದ್ದರು. ಸಿದ್ದು ಮುತ್ಯಾ ಹೇಳಿಕೆಯ 9 ತಿಂಗಳ ನಂತರ ತಿರುಪತಿಯನ್ನು ಕಂಡು ಕೇಳರಿಯದ ಜಲಪ್ರಳಯ ಉಂಟಾಗಿತ್ತು.

Published by:Annappa Achari
First published: