ವಿಜಯಪುರ(ಡಿ.02): ದೇಶಾದ್ಯಂತ ಸದ್ಯ ಹಿಂದೂ, ಮುಸ್ಲಿಂ (Muslim) ವಿಚಾರ ಮಾತನಾಡುವಂತಿಲ್ಲ. ಕೊಂಚ ಏರುಪೇರಾದರೂ ಕೋಮುಗಲಭೆ ಸೃಷ್ಟಿಯಾಗುವ ಅಪಾಯವಿರುತ್ತದೆ. ಕರ್ನಾಟಕವೂ (Karnataka) ಇದಕ್ಕೆ ಹೊರತಾಗಿಲ್ಲ. ಕಳೆದ ಕೆಲ ತಿಂಗಳುಗಳಿಂದ ಇಲ್ಲಿ ನಡೆಯುತ್ತಿರುವ ವಿದ್ಯಾಮಾನಗಳೇ ಇದಕ್ಕೆ ಸಾಕ್ಷಿ. ಹೌದು ಮಾಂಸದ ವಿಚಾರ, ಹಿಜಾಬ್-ಕೇಸರಿ ಶಾಲು ವಿವಾದ, ಕೊಲೆ ಪ್ರಕರಣ, ಟಿಪ್ಪು ಜಯಂತಿ (Tippu Jayanti) ಹೀಗೆ ಎಲ್ಲಾ ವಿಚಾರಗಳೂ ಕೋಮು ಸೌಹಾರ್ದತೆ ಕೆಡಿಸಿವೆ. ಸದ್ಯ ನಿವೃತ್ತ ಜಿಲ್ಲಾ ನ್ಯಾಯಾಧೀಶರೊಬ್ಬರು ರಾಮ ,ಕೃಷ್ಣ ಇತಿಹಾಸ ಪುರುಷರಲ್ಲ ಎಂದು ನೀಡಿರುವ ಹೇಳಿಕೆ ಭಾರೀ ವಿವಾದ ಸೃಷ್ಟಿಸುವ ಸುಳಿವು ನೀಡಿದೆ.
ಇದನ್ನೂ ಓದಿ: ನೋಡನೋಡ್ತಿದ್ದಂತೆ ಬಸ್ ಬ್ರೇಕ್ಫೇಲ್, 30 ಪ್ರಯಾಣಿಕರು ಗ್ರೇಟ್ ಎಸ್ಕೇಪ್!
ಅಕ್ಬರನ ಹೆಂಡತಿ ಹಿಂದೂ, ಮತಾಂತರ ಮಾಡಲಿಲ್ಲ
ಹೌದು ವಿಜಯಪುರದಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ಆಶಯ ಈಡೇರಿದೆಯೇ !? ಎನ್ನುವ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ನಿವೃತ್ತ ಜಿಲ್ಲಾ ನ್ಯಾಯಾಧೀಶ ವಸಂತ ಮುಳಸಾವಳಗಿ ರಾಮ ,ಕೃಷ್ಣ ಇತಿಹಾಸ ಪುರುಷರಲ್ಲ, ಅವರು ಕೇವಲ ಕಾದಂಬರಿ ಪಾತ್ರಧಾರಿಗಳು ಎಂದಿದ್ದಾರೆ. ಅಲ್ಲದೇ ಅಕ್ಬರ್ ಮುಸ್ಲಿಂ ಆಗಿದ್ದ, ಹೆಂಡತಿ ಹಿಂದೂವಾಗಿದ್ದರು. ಆದರೂ ಧರ್ಮಾಂತರ ಮಾಡಿಸಲಿಲ್ಲ. ಬದಲಾಗಿ ಆಸ್ಥಾನದಲ್ಲೇ ಕೃಷ್ಣನ ಮಂದಿರ ಕಟ್ಟಿಸಿದ ಎಂದು ಮೊಘಲ್ ದೊರೆಯನ್ನು ಹೊಗಳಿದ್ದಾರೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಗಲಾಟೆ, ಕಲ್ಲುತೂರಾಟ; ಇಬ್ಬರು ಸಾವು- ನಿಷೇಧಾಜ್ಞೆ ಜಾರಿ
700 ವರ್ಷ ಆಳಿದರೂ ಇಂದು ಅವರು ಅಲ್ಪಸಂಖ್ಯಾತರು
ಇದೇ ಸಂದರ್ಭದಲ್ಲಿ ಮುಸಲ್ಮಾನರನ್ನು ವಿರೋಧಿಸಿ ಮಾತನಾಡುವವರನ್ನು ಎಚ್ಚರಿಸಿದ ಅವರು ಮುಸ್ಲಿಮರು ಹಾಗೆ ಮಾಡಿದ್ದಾರೆ, ಹೀಗೆ ಮಾಡಿದ್ದಾರೆ ಅಂತೀರಲ್ಲಾ? ಮುಸ್ಲಿಮರು ಏಳುನೂರು ವರ್ಷ ಆಳ್ವಿಕೆ ಮಾಡಿರೋದು ಇತಿಹಾಸ ಹೇಳುತ್ತೆ. ಅವರು ಹಿಂದೂಗಳನ್ನು ವಿರೋಧ ಮಾಡಿದ್ದರೆ, ಒಬ್ಬರೂಹಿಂದೂ ಭಾರತದಲ್ಲಿ ಇರುತ್ತಿರಲಿಲ್ಲ. ಎಲ್ಲರನ್ನೂ ಕೊಲ್ಲಬಹುದಿತ್ತು. ಅಷ್ಟಾದರೂ ಮುಸ್ಲಿಮರು ಅಲ್ಪಸಂಖ್ಯಾತರು ಯಾಕಾದ್ರು..!? ಎಂದು ಪ್ರಶ್ನಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ