ವಿಜಯಪುರದಲ್ಲಿ ಅಂತಾರಾಜ್ಯ ಕಳ್ಳರ ಬಂಧನ; 1 ಕಿಲೋಗೂ ಹೆಚ್ಚು ಚಿನ್ನಾಭರಣ ವಶ; ಪೊಲೀಸರಿಗೆ ಎಸ್​ಪಿ ಅಭಿನಂದನೆ


Updated:September 14, 2018, 6:55 PM IST
ವಿಜಯಪುರದಲ್ಲಿ ಅಂತಾರಾಜ್ಯ ಕಳ್ಳರ ಬಂಧನ; 1 ಕಿಲೋಗೂ ಹೆಚ್ಚು ಚಿನ್ನಾಭರಣ ವಶ; ಪೊಲೀಸರಿಗೆ ಎಸ್​ಪಿ ಅಭಿನಂದನೆ

Updated: September 14, 2018, 6:55 PM IST
- ಮಹೇಶ ವಿ. ಶಟಗಾರ, ನ್ಯೂಸ್ 18 ಕನ್ನಡ

ವಿಜಯಪುರ(ಸೆ. 14): ಜಿಲ್ಲೆಯ ಬಬಲೇಶ್ವರ ಮತ್ತು ವಿಜಯಪುರ ಗ್ರಾಮೀಣ ವೃತ್ತದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಏಳು ಜನ ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ. ಬಬಲೇಶ್ವರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಿಜಯಪುರ ಎಸ್ಪಿ ಪ್ರಕಾಶ ನಿಕಮ್, ಮಹಾರಾಷ್ಟ್ರ ಮೂಲದ ಈ ಕಳ್ಳರಿಂದ 1 ಕೆಜಿ 100 ಗ್ರಾಂ ಚಿನ್ನಾಭರಣ, 2 ಕೆಜಿ 100 ಗ್ರಾಂ ಬೆಳ್ಳಿಯ ನಾನಾ ವಸ್ತುಗಳು, ರೂ. 16000 ನಗದು, ನಾಲ್ಕು ಬೈಕ್ ವಶ ಪಡಿಸಿಕೊಳ್ಳಲಾಗಿದೆ. ದೇವಸ್ಥಾನ ಸೇರಿ ನಾನಾ ಕಡೆಗಳಲ್ಲಿ ಕಳ್ಳತನ ಮಾಡಲಾಗಿದ್ದ 13 ಪ್ರಕರಣ ಪತ್ತೆ ಮಾಡಲಾಗಿದೆ ಎಂದು ತಿಳಿಸಿದರು.

ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ರೂ. 35 ಲಕ್ಷಕ್ಕೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಆರೋಪಿಗಳು ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಬಬ್ಲು ರಮೇಶ ಚವ್ಹಾನ, ಮಚ್ಚೆಂದ್ರ ಉರ್ಫ ಅನಿಲ ಶ್ರೀಶೈಲ ಚವ್ಹಾನ, ಸುಲ್ಪ್ಯಾ ಯರ್ಫ್ ಸಂತೋಷ ಶಿಂಧೆ, ವಕಿಲ್ಯಾ ಉರ್ಫ್ ರವಿ ಗೋವಿಂದ ಶಿಂಧೆ, ಶ್ರೀಶೈಲ ಶಂಕರ ಚವ್ಹಾನ, ಗೋವಿಂದ ಉರ್ಫ್ ಶವರೆಪ್ಪ ಶಂಕರ ಶಿಂಧೆ, ಮಚ್ವೆಂದ್ರ ಜಟ್ಟೆಪ್ಪ ಜಟ್ಟೆಪ್ಪ ಢಗೆ ಬಂಧಿತರ ಆರೋಪಿಗಳಾಗಿದ್ದಾರೆ.

ಈ ಆರೋಪಿಗಳು ವಿಜಯಪುರ, ಬಾಗಲಕೋಟೆ, ಗದಗ ಜಿಲ್ಲೆಗಳು ಸೇರಿ ಮಹಾರಾಷ್ಚ್ರದ ನಾನಾ ಭಾಗಗಳಲ್ಲಿ ಕಳ್ಳತನ ನಡೆಸಿದ್ದಾರೆ. ಈ ಕಳ್ಳರನ್ನು ಬಂಧಿಸಿದ ಬಬಲೇಶ್ವರ ಮತ್ತು ವಿಜಯಪುರ ಗ್ರಾಮೀಣ ವೃತ್ತ ಪೊಲೀಸರ ಕಾರ್ಯವನ್ನು ವಿಜಯಪುರ ಎಸ್ಪಿ ಶ್ಲಾಘಿಸಿದರು. ಅಲ್ಲದೇ, ಸ್ವತಃ ಎಸ್ಪಿ ಅವರೇ ಬಬಲೇಶ್ವರಕ್ಕೆ ತೆರಳಿ ಈ ಪೊಲೀಸ್ ಸಿಬ್ಬಂದಿಯನ್ನು ಅಭಿನಂದಿಸುವ ಮೂಲಕ ಗಮನ ಸೆಳೆದರು.  ಅಲ್ಲದೇ, ಕಳ್ಳರನ್ನು ಬಂಧಿಸಿದ ಪೊಲೀಸರಿಗೆ ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರ ನೀಡಿ ನೀಡಿ ಗೌರವಿಸಿದರು.  ಈ ಸಿಬ್ಬಂದಿ ಪ್ರಶಸ್ತಿ ನೀಡಿ ಗೌರವಿಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಶಿಫಾರಸು ಮಾಡುವುದಾಗಿ ವಿಜಯಪುರ ಎಸ್ಪಿ ಪ್ರಕಾಶ ನಿಕಮ್ ತಿಳಿಸಿದರು.

ಈ ಸಂದರ್ಭದಲ್ಲಿ ವಿಜಯಪುರ ಡಿವೈಎಸ್ಪಿ ಅಶೋಕ, ವಿಜಯಪುರ ಗ್ರಾಮೀಣ ಸಿಪಿಐ ಶಂಕರಗೌಡ, ಬಬಲೇಶ್ವರ ಪಿಎಸ್‌ಐ ಬಿರಾದಾರ ಸೇರಿದಂತೆ ನಾನಾ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
First published:September 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...