ಮಗಳ ಕತ್ತುಕೊಯ್ದು ಪರಾರಿಯಾಗಿದ್ದ ತಾಯಿ ಸೇರಿ ಮೂವರನ್ನು 24 ಗಂಟೆಯಲ್ಲೇ ಬಂಧಿಸಿದ ಪೊಲೀಸರು

ಮರ್ಯಾದಾ ಹತ್ಯೆ ಪ್ರಕರಣ… ಮಗಳ ಕತ್ತುಕೊಯ್ದಿದ್ದ ಮೂವರು… ಘಟನೆ ನಡೆದ 24 ಗಂಟೆಯಲ್ಲೇ ತಾಯಿ ಸೇರಿ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ ಪೊಲೀಸರು….


Updated:November 8, 2018, 8:12 PM IST
ಮಗಳ ಕತ್ತುಕೊಯ್ದು ಪರಾರಿಯಾಗಿದ್ದ ತಾಯಿ ಸೇರಿ ಮೂವರನ್ನು 24 ಗಂಟೆಯಲ್ಲೇ ಬಂಧಿಸಿದ ಪೊಲೀಸರು
ವಿಜಯಪುರ ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿಗಳು

Updated: November 8, 2018, 8:12 PM IST
- ಮಹೇಶ ವಿ. ಶಟಗಾರ, ನ್ಯೂಸ್18 ಕನ್ನಡ

ವಿಜಯಪುರ(ನ. 08): ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಯಲಗೂರಿನಲ್ಲಿ ನಡೆದ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂರು ಜನರನ್ನು ಬಂಧಿಸಿದ್ದಾರೆ.  ಮೊನ್ನೆ ಮಂಗಳವಾರ(ನ. 6) ಸಂಜೆ ದೀಪಾವಳಿ ಅಂಗವಾಗಿ ಮನೆ ಮುಂದೆ ದೀಪ ಹಚ್ಚುತ್ತಿದ್ದ 24 ವರ್ಷದ ಯುವತಿ ರೇಣುಕಾಳನ್ನು ಆಕೆಯ ತಾಯಿ ಹಾಗೂ ಇನ್ನಿಬ್ಬರು ಕೊಲೆ ಮಾಡಿ ಪರಾರಿಯಾಗಿದ್ದರು. ಈ ಕೊಲೆಯಲ್ಲಿ ಭಾಗಿಯಾದ ರೇಣುಕಾಳ ತಾಯಿ ಮಾರೆವ್ವ ಉರ್ಫ್ ಶಿವಲಿಂಗವ್ವ, ಆಕೆಯ ಮಗ 30 ವರ್ಷದ ಮಲ್ಲಿಕಾರ್ಜುನ್ ಹಾಗೂ ಅಳಿಯ 25 ವರ್ಷದ ರಾಮ ಉರ್ಫ್ ರಾಮು ಅಲಿಯಾಸ್ ರಮೇಶ ಗೂಳಿ ಎಂಬುವರನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ.

ವಿಜಯಪುರದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ: 

ಕೊಲೆಯಾದ ನಂತರ ಈ ಆರೋಪಿಗಳು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಶಿರವಾರಕ್ಕೆ ತೆರಳಿದ್ದರು. ಅಲ್ಲಿ ಮೊದಲೇ ಸ್ಕೆಚ್ ಹಾಕಿದ್ದ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪೊಲೀಸರು ರಾಯಚೂರು ಪೊಲೀಸರ ನೆರವಿನಿಂದ ಇಂದು ಬೆಳಗಿನ ಜಾವ ಬಂಧಿಸಿದ್ದಾರೆ.

ಅಪರಾಧ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ:

ವಿಜಯಪುರ ಪ್ರಭಾರ ಎಸ್​ಪಿ ಸಿ.ಬಿ. ರಿಷಂತ್ ಮಾರ್ಗದರ್ಶನದಲ್ಲಿ ಬಸವನ ಬಾಗೇವಾಡಿ ಡಿವೈಎಸ್ಪಿ ಮಹೇಶ್ವರ ಗೌಡ ಎಸ್.ಯು., ಬಸವನ ಬಾಗೇವಾಡಿ ಸಿಪಿಐ ಮಹಾದೇವ ಶಿರಹಟ್ಟಿ, ನಿಡಗುಂದಿ ಎಎಸ್‌ಐ ಎಂ.ಬಿ. ನಾಯ್ಕೋಡಿ, ಬಿ.ಬಿ. ನರೋಜಿ, ಸಿಬ್ಬಂದಿಯಾದ ವಿ.ಎಸ್. ಹಿಪ್ಪರಗಿ, ಎಸ್.ಎಸ್.ಸಿ. ರೆಡ್ಡಿ, ಎಂ.ಎಲ್. ಹತ್ತರಕಿಹಾಳ, ವಿ.ಎಸ್. ಪಾಟೀಲ, ಎಸ್.ಎನ್. ಹಿರೇಮಠ, ಎಂ.ಎನ್. ಬೇನಾಳ, ವಿ.ಎಂ. ವಾಲಿಕಾರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ ಎಂದು ವಿಜಯಪುರ ಪ್ರಭಾರಿಯಾಗಿರುವ ಬಾಗಲಕೋಟೆ ಎಸ್​ಪಿ ರೀಷಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
First published:November 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ