ಕೈಯಲ್ಲಿ ಜೀವಂತ ಹಾವಿನೊಂದಿಗೆ ಚಹಾದಂಗಡಿಗೆ ಬಂದ ಯುವಕ- ಬೆಚ್ಚಿಬಿದ್ದ ಜನರು


Updated:April 22, 2018, 6:18 PM IST
ಕೈಯಲ್ಲಿ ಜೀವಂತ ಹಾವಿನೊಂದಿಗೆ ಚಹಾದಂಗಡಿಗೆ ಬಂದ ಯುವಕ- ಬೆಚ್ಚಿಬಿದ್ದ ಜನರು

Updated: April 22, 2018, 6:18 PM IST
- ಮಹೇಶ ವಿ. ಶಟಗಾರ, ನ್ಯೂಸ್18 ಕನ್ನಡ

ವಿಜಯಪುರ (ಏ. 22): ಯುವಕನೊಬ್ಬ ಜೀವಂತ ಹಾವಿನೊಂದಿಗೆ ಚಹಾದ ಅಂಗಡಿಗೆ ಬಂದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದ ಘಟನೆ ನಗರದಲ್ಲಿ ನಡೆದಿದೆ. ಇಲ್ಲಿಯ ರಜಪೂತ ಗಲ್ಲಿ ಬಳಿ ಇರುವ ಬಸವರಾಜ ಟೀ ಸ್ಟಾಲ್​ನಲ್ಲಿ ಈ ಘಟನೆ ನಡೆದಿದ್ದು, ಯುವಕನ ಕೈಯ್ಯಲ್ಲಿ ಹಾವು ಕಂಡು ಸಾರ್ವಜನಿಕರು ಕಕ್ಕಾಬಿಕ್ಕಿಯಾಗಿದ್ದಾರೆ.

ರಜಪೂತ ಗಲ್ಲಿಯ ಮನೆಯೊಂದರಲ್ಲಿ ಕೆರೆ ಹಾವು ಕಾಣಿಸಿಕೊಂಡಿತ್ತು. ಹಾವು ಹಿಡಿದುಕೊಂಡ ಯುವಕ ನೇರವಾಗಿ ಆ ಚಹಾದಂಗಡಿಗೆ ಬಂದಿದ್ದಾನೆ.  ಆಗ ಅಲ್ಲಿ ಸೇರಿದ್ದ ಜನ ಶೇಖರ್​ನ ಅವತಾರ ಕಂಡು ಬೆಚ್ಚಿಬಿದ್ದಿದ್ದಾರೆ.

ಹಾವು ಹಿಡಿದುಕೊಂಡೇ ಚಹ ಸೇವಿಸಿದ ಯುವಕ ನಂತರ ಆ ಹಾವನ್ನು ತೆಗೆದುಕೊಂಡು ಹೋಗಿ ವಿಜಯಪುರ ನಗರದ ಹೊರವಲಯದಲ್ಲಿ ಬಿಟ್ಟಿದ್ದಾನೆ. ಕಳೆದ 10 ವರ್ಷಗಳಿಂದಲೂ ಈ ಯುವಕ ಹಾವುಗಳನ್ನು ಹಿಡಿಯುತ್ತಿದ್ದಾನೆ.
First published:April 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...