news18-kannada Updated:February 17, 2020, 12:59 PM IST
ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ವಿಜಯಪುರ (ಫೆ.17): ಕನ್ನೊಳ್ಳಿಯ ಶತಾಯುಷಿ ಡಾ. ಮರುಳಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಯವರು ಇಂದು ಲಿಂಗೈಕ್ಯರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸ್ವಾಮೀಜಿಗಳು ಇಂದು ನಸುಕಿನ ಜಾವ ಲಿಂಗಪೂಜೆ ಮಾಡುತ್ತಲ್ಲೇ ದೇಹತ್ಯಾಗ ಮಾಡಿದ್ದಾರೆ.
ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ಶ್ರೀಗಳನ್ನು ಇತ್ತೀಚೆಗೆ ರ ನಗರದ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ, ಮಠಕ್ಕೆ ಮರಳಬೇಕು ಎಂದು ಶ್ರೀಗಳು ಹಠ ಹಿಡಿದ ಹಿನ್ನೆಲೆ ಅವರನ್ನು ವಾಪಸ್ಸು ಕರೆತರಲಾಗಿತ್ತು. ಇಂದು ಬೆಳಗ್ಗೆ ಕೈ ಯಲ್ಲಿ ಲಿಂಗ ಪೂಜೆ ಮಾಡುವಾಗ ಅವರು ಲಿಂಗೈಕ್ಯರಾಗಿದ್ದಾರೆ.
1915ರಲ್ಲಿ ಜನಿಸಿದ ಶ್ರೀಗಳಿ 1933ರಲ್ಲಿ ಕನ್ನೋಳ್ಳಿ ಹಿರೇಮಠದ ಪಟ್ಟಾಧಿಕಾರತ್ವ ಸ್ವೀಕರಿಸಿದರು. ಹಲವು ಪವಾಡಗಳ ಮೂಲಕ ಪ್ರಸಿದ್ಧಿಯನ್ನು ಪಡೆದಿದ್ದ ಶ್ರೀಗಳು 105 ವರ್ಷ ಬಾಳುವ ಮೂಲಕ ಶತಾಯುಷಿ ಶ್ರೀಗಳು ಎಂದು ಹೆಸರು ಮಾಡಿದ್ದಾರೆ
ಇದನ್ನು ಓದಿ: ಎಚ್ಚರಿಕೆ ವಹಿಸದಿದ್ದರೆ ಐಹೊಳೆ, ಕೂಡಲ ಸಂಗಮ ಸ್ಮಾರಕಗಳು ನಿರ್ನಾಮ: ತಜ್ಞರ ವರದಿಯಲ್ಲಿ ಎಚ್ಚರಿಕೆ
ವೀರಶೈವ ಸಂಸ್ಕಾರದೊಂದಿಗೆ ಶ್ರೀಗಳ ಅಂತಿಮ ವಿಧಿವಿಧಾನಗಳು ಜರುಗಲಿದೆ ಎಂದು ಮಠದ ಆಡಳಿತ ಮಂಡಳಿ ತಿಳಿಸಿದ್ದು, ಶ್ರೀಗಳ ಅಂತಿಮ ದರ್ಶನಕ್ಕೆ ಭಕ್ತರು ಹರಿದು ಬರುತ್ತಿದ್ದಾರೆ.
First published:
February 17, 2020, 12:56 PM IST