ಜನರಿಂದ ಆಯ್ಕೆಯಾಗಿಯೂ ಮತದಾನದಿಂದ ದೂರ ಉಳಿದ ಸಿದ್ದರಾಮಯ್ಯ ಹಾಗೂ ಇಬ್ಬರು ಸಚಿವರು; ಇವರೆಂಥ ಜನಪ್ರತಿನಿಧಿಗಳು..!

ಮತದಾನದಿಂದ ದೂರ ಉಳಿದ ಮಾಜಿ ಸಿಎಂ, ಇಬ್ಬರು ಸಚಿವರು. ಜಿದ್ದಾಜಿದ್ದಿಗೆ ಸಾಕ್ಷಿಯಾಗಿದ್ದ ಚುನಾವಣೆಯಲ್ಲಿ ಶೇ. 99.07 ರಷ್ಟು ಮತದಾನ. ಮತಪೆಟ್ಟಿಗೆ ಸೇರಿದ ಮಾಜಿ ಸಚಿವ ಎಂ. ಬಿ. ಪಾಟೀಲ ತಮ್ಮ ಸುನಿಲಗೌಡ ಬಿ.ಪಾಟೀಲ ಮತ್ತು ಬಿಜೆಪಿ ಅಭ್ಯರ್ಥಿ ಗೂಳಪ್ಪ ಸಿದ್ದಪ್ಪ ಶೆಟಗಾರ ಹಾಗೂ ಇತರ ಐದು ಜನರ ರಾಜಕೀಯ ಭವಿಷ್ಯ.


Updated:September 6, 2018, 6:56 PM IST
ಜನರಿಂದ ಆಯ್ಕೆಯಾಗಿಯೂ ಮತದಾನದಿಂದ ದೂರ ಉಳಿದ ಸಿದ್ದರಾಮಯ್ಯ ಹಾಗೂ ಇಬ್ಬರು ಸಚಿವರು; ಇವರೆಂಥ ಜನಪ್ರತಿನಿಧಿಗಳು..!
ಮತದಾನ ಮಾಡುತ್ತಿರುವ ಎಂ.ಬಿ. ಪಾಟೀಲ್

Updated: September 6, 2018, 6:56 PM IST
- ಮಹೇಶ ವಿ. ಶಟಗಾರ, ನ್ಯೂಸ್18 ಕನ್ನಡ

ವಿಜಯಪುರ(ಸೆ. 06): ವಿಜಯಪುರ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ನಡೆದ ಚುನಾವಣೆ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿಯ ಈ ಚುನಾವಣೆ ಫಲಿತಾಂಶ ಕುತೂಹಲ ಕೆರಳಿಸಿದೆ. ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಮತದಾನದಿಂದ ದೂರ ಉಳಿದಿದ್ದು, ವಿದೇಶ ಪ್ರವಾಸಕ್ಕೆ ತೆರಳಿರುವುದು ಕುತೂಹಲ ಕೆರಳಿಸಿದೆ. ತಾವು ಸಿಎಂ ಆಗಿದ್ದಾಗ ಆಪ್ತ ಸಚಿವರಾಗಿದ್ದ ಎಂ.ಬಿ. ಪಾಟೀಲ್ ಅವರ ಕಿರಿಯ ಸೋದರ ಸುನಿಲ್ ಗೌಡ ಬಿ. ಪಾಟೀಲ್ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಾಂಗ್ರೆಸ್ಸಿನಿಂದ ಕಣಕ್ಕಿಳಿದಿದ್ದರೂ ಸಿದ್ಧರಾಮಯ್ಯ ಮತ ಹಾಕದಿರುವುದು ಅಚ್ಚರಿ ಮೂಡಿಸಿದೆ.

ಈ ಮುಂಚೆಯೆಲ್ಲಾ ಮೈಸೂರಿನಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ವಿಧಾನಸಭೆಗೆ ಚುನಾಯಿತರಾಗುತ್ತಿದ್ದ ಸಿದ್ದರಾಮಯ್ಯ ಈ ಬಾರಿ ಬಾಗಲಕೋಟೆಯ ಬಾದಾಮಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಂಎಲ್​ಸಿ ಸ್ಥಾನಕ್ಕಾಗಿಯ ಚುನಾವಣೆಯಲ್ಲಿ ಸಿದ್ದರಾಮಯ್ಯರದ್ದೂ ಒಂದು ವೋಟು ಇತ್ತು. ವೋಟ್ ಹಾಕದೆ ವಿದೇಶಕ್ಕೆ ಹೋಗಿರುವ ಸಿದ್ದರಾಮಯ್ಯರ ನಡೆಯ ವಿರುದ್ಧ ಬಿಜೆಪಿ ಮುಖಂಡ ಬಸನಗೌಡ ಯತ್ನಾಳ್ ಕಿಡಿಕಾರಿದ್ದಾರೆ.

ಇದೇ ರೀತಿ ಆರೋಗ್ಯ ಸಚಿವ ಶಿವಾನಂದ ಎಸ್. ಪಾಟೀಲ್ ಕೂಡ ಮತದಾನದಿಂದ ದೂರ ಉಳಿದಿದ್ದಾರೆ. ಬೆಂಗಳೂರಿನಲ್ಲಿ ಕ್ಯಾಬಿನೆಟ್ ಸಭೆಯ ಹಿನ್ನೆಲೆಯಲ್ಲಿ ಶಿವಾನಂದ ಪಾಟೀಲ್ ಅವರು ಮತದಾನದಿಂದ ದೂರ ಉಳಿದಿದ್ದಾಗಿ ಮೂಲಗಳು ತಿಳಿಸಿವೆ.  ಆದರೆ ವಾಸ್ತವದಲ್ಲಿ ಎಂ.ಬಿ. ಪಾಟೀಲ್ ಜೊತೆಗಿನ ಶೀತಲ ಸಮರವೇ ಇದಕ್ಕೆ ಕಾರಣ ಎನ್ನಲಾಗಿದೆ. ಮತ್ತೊಂದೆಡೆ ಜೆಡಿಎಸ್ ಮುಖಂಡ ಮತ್ತು ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಸಹ ಇಸ್ರೆಲ್ ಪ್ರವಾಸದಲ್ಲಿದ್ದು ಮತದಾದಿನದ ದೂರ ಉಳಿದಿದ್ದಾರೆ. ಈ ಮಧ್ಯೆ ಒಟ್ಟು 8,187ರಲ್ಲಿ 8,111 ಜನರು ತಮ್ಮ ಹಕ್ಕು ಚಲಾಯಿಸಿದ್ದು, ಶೇ. 99.07 ರಷ್ಟು ಮತದಾನವಾಗಿದೆ.

ವಿಜಯಪುರ ನಗರದಲ್ಲಿರುವ ಜಿಲ್ಲಾ ಪಂಚಾಯಿತಿ ಮತಗಟ್ಟೆಗೆ ತೆರಳಿದ ಬಿಜೆಪಿ ಅಭ್ಯರ್ಥಿ ಗೂಳಪ್ಪ ಸಿದ್ದಪ್ಪ ಶೆಟಗಾರ ತಮ್ಮ ಹಕ್ಕು ಚಲಾಯಾಸಿದರೆ, ಕೇಂದ್ರ ಸಚಿವ ರಮೇಶ ಚಂ. ಜಿಗಜಿಣಗಿ, ವಿಜಯಪುರ ನಗರ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ, ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ಕೂಡ ಮತದಾನ ಮಾಡಿದರು.

ಮಾಜಿ ಸಚಿವ ಎಂ. ಬಿ. ಪಾಟೀಲ್ ಕೂಡ ಇದೇ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಅಲ್ಲದೇ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ತಮ್ಮ ಪಕ್ಷದ ಅಭ್ಯರ್ಥಿಯೇ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಮಧ್ಯೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿರುವ ಮತಗಟ್ಟೆ ಸಂಖ್ಯೆ 9ಕ್ಕೆ ನುಗ್ಗಿದ ಕಾಂಗ್ರೆಸ್ ಮುಖಂಡ ಮತ್ತು ವಿಜಯಪುರ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಲ್ಲಣ್ಣ ಸಾಲಿ ಗಲಾಟೆ ಮಾಡಿದ ಘಟನೆಯೂ ನಡೆದಿದೆ. ತಾವು ಮತದಾರರಲ್ಲದಿದ್ದರೂ ಮತಗಟ್ಟೆಗೆ ಅಕ್ರಮವಾಗಿ ನುಗ್ಗಿ ಮತಗಟ್ಟೆಯಲ್ಲಿ ಚುನಾವಣೆ ಸಿಬ್ಬಂದಿಯೊಂದಿಗೆ ಅವರು ವಾಗ್ವಾದ ನಡೆಸಿದರು.
Loading...

ಒಟ್ಟಾರೆ ಶಾಂತಿಯುತವಾಗಿ ಮತದಾನವಾಗಿದ್ದು, ಸೆಪ್ಟೆಂಬರ್ 11ರಂದು ಮತ ಎಣಿಕೆ ನಡೆಯಲಿದೆ.
First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...