ಎರಡನೇ ಹಂತದ ಗ್ರಾ.ಪಂ.ಚುನಾವಣೆಗೆ ವಿಜಯಪುರದಲ್ಲಿ ಸಕಲ ಸಿದ್ಧತೆ; ಈಗಾಗಲೇ 119 ಜನರ ಅವಿರೋಧ ಆಯ್ಕೆ

ದೇವರ ಹಿಪ್ಪರಗಿ ತಾಲೂಕಿನಲ್ಲಿ 14 ಗ್ರಾಮ ಪಂಚಾಯಿತಿಗಳ 255 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಒಂದು ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸಿಲ್ಲ.  12 ಕ್ಷೇತ್ರಗಳಿಗೆ ಇಲ್ಲಿ ಅವಿರೋಧ ಆಯ್ಕೆ ನಡೆದಿದ್ದು, ಬಾಕಿ ಇರುವ 242 ಸ್ಥಾನಗಳಿಗೆ 677 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವಿಜಯಪುರ( ಡಿ. 26):  ಬಸವ ನಾಡಿನಲ್ಲಿ 2ನೇ ಹಂತದಲ್ಲಿ ನಾಳೆ ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆಗೆ ಸಿದ್ಧತೆಗಳು ಭರದಿಂದ ಸಾಗಿವೆ.  ವಿಜಯಪುರ ಜಿಲ್ಲೆಯಲ್ಲಿ ನಾಳೆ ನಾಲ್ಕು ತಾಲೂಕುಗಳ ಗ್ರಾಮ ಪಂಚಾಯಿತಿಗಳಿಗೆ 2ನೇ ಹಂತದಲ್ಲಿ ಮತದಾನ ನಡೆಯಲಿದೆ.  ಚಡಚಣ, ಇಂಡಿ, ಸಿಂದಗಿ ಮತ್ತು ದೇವರ ಹಿಪ್ಪರಗಿ ತಾಲೂಕುಗಳಲ್ಲಿ ನಾಳೆ ಮತದಾನ ನಡೆಯಲಿದೆ. ನಾಲ್ಕು ತಾಲೂಕುಗಳ 88 ಗ್ರಾ. ಪಂ. ಗಳ 1628 ಸ್ಥಾನಗಳಿಗೆ ನಾಳೆ ಮತದಾನ ನಡೆಯಲಿದ್ದು, 4 ಸ್ಥಾನಗಳಿಗೆ ಯಾರೂ ನಾಮಪತ್ರ ಸಲ್ಲಿಸಿಲ್ಲ.  ಈಗಾಗಲೇ 119 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.  ಈ ಹಿನ್ನೆಲೆಯಲ್ಲಿ ನಾಳೆ 1505 ಸ್ಥಾನಗಳಿಗೆ ಮತದಾನ ನಡೆಯಲಿದೆ.

ಎಲ್ಲ ನಾಲ್ಕೂ ತಾಲೂಕು ಕೇಂದ್ರಗಳಲ್ಲಿ ಈಗ ಮತಗಟ್ಟೆಗಳ ಅಧಿಕಾರಿಗಳಿಗೆ ಮತದಾನಕ್ಕೆ ಅಗತ್ಯವಾಗಿರುವ ಸಲಕರಣೆಗಳನ್ನು ವಿತರಣೆ ಕಾರ್ಯ ಭರದಿಂದ ಸಾಗಿದೆ.  ಇಂದು ಸಂಜೆಯ ವೇಳೆಗೆ ಎಲ್ಲ ಸಿಬ್ಬಂದಿ ಮತಪತ್ರಗಳು, ಮತಪೆಟ್ಟಿಗೆಗಳು ಸೇರಿದಂತೆ ಚುನಾವಣೆ ಮತದಾನಕ್ಕೆ ಅಗತ್ಯವಾಗಿರುವ ಸಲಕರಣೆಗಳೊಂದಿಗೆ ತಮಗೆ ನಿಗದಿ ಪಡಿಸಲಾಗಿರುವ ಮತಗಟ್ಟೆಗಳಿಗೆ ತೆರಳಲಿದ್ದಾರೆ.

ಚಡಚಣ ತಾಲೂಕಿನ 13 ಗ್ರಾಮ ಪಂಚಾಯಿತಿಗಳ ಒಟ್ಟು 271 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಈಗಾಗಲೇ 9 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ಬಾಕಿ ಇರುವ 26 ಸ್ಥಾನಗಳಿಗೆ 787 ಜನ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಇಂಡಿ ತಾಲೂಕಿನ 38 ಗ್ರಾಮ ಪಂಚಾಯಿತಿಗಳ ಒಟ್ಟು 671 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, 3 ಸ್ಥಾನಗಳಿಗೆ ಯಾರೊಬ್ಬರೂ ನಾಮಪತ್ರ ಸಲ್ಲಿಸಿಲ್ಲ.  ಈಗಾಗಲೇ 48 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.  ಈಗ 620 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಒಟ್ಟು 1716 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.

ಸಿಂದಗಿ ತಾಲೂಕಿನ 23 ಗ್ರಾಮ ಪಂಚಾಯಿತಿಗಳ 431 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, 50 ಕ್ಷೇತ್ರಗಳಿಗೆ ಈಗಾಗಲೇ ಅವಿರೋಧ ಆಯ್ಕೆ ನಡೆದಿದೆ.  ಬಾಕಿ ಇರುವ 381 ಸ್ಥಾನಗಳಿಗೆ 1070 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ದೇವರ ಹಿಪ್ಪರಗಿ ತಾಲೂಕಿನಲ್ಲಿ 14 ಗ್ರಾಮ ಪಂಚಾಯಿತಿಗಳ 255 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಒಂದು ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸಿಲ್ಲ.  12 ಕ್ಷೇತ್ರಗಳಿಗೆ ಇಲ್ಲಿ ಅವಿರೋಧ ಆಯ್ಕೆ ನಡೆದಿದ್ದು, ಬಾಕಿ ಇರುವ 242 ಸ್ಥಾನಗಳಿಗೆ 677 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

2024ಕ್ಕೆ ಸ್ವಯಂಚಾಲಿತ ಎಲೆಕ್ಟ್ರಿಕ್​ ಕಾರು ಪರಿಚಯಿಸಲಿದೆ ಆ್ಯಪಲ್​ ಸಂಸ್ಥೆ?

ಎಲ್ಲ ನಾಲ್ಕೂ ತಾಲೂಕುಗಳಲ್ಲಿ ಎರಡನೇ ಹಂತದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಒಟ್ಟು 4250 ಅಭ್ಯರ್ಥಿಗಳು ಕಣದಲ್ಲಿದ್ದು, ನಾಳೆ ಬೆ. 7 ರಿಂದ ಸಂ. 5ರ ವರೆಗೆ ನಡೆಯಲಿರುವ ಮತದಾನ ನಡೆಯಲಿದೆ.  ಒಟ್ಟು 5 ಲಕ್ಷ 45 ಸಾವಿರದ 655 ಮತದಾರರಿಂದ ಹಕ್ಕು ಚಲಾವಣೆ ಮಾಡಲಿದ್ದಾರೆ.  ಇವರಲ್ಲಿ 2 ಲಕ್ಷ 83 ಸಾವಿರದ 186 ಪುರುಷ, 2 ಲಕ್ಷ 62 ಸಾವಿರದ 424 ಮಹಿಳಾ, 45 ಜನ ಇತರ ಹಾಗೂ 484 ಜನ ಸೇವಾ ನಿರತ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಮತದಾರರ ಅನುಕೂಲಕ್ಕಾಗಿ ವಿಜಯಪುರ ಜಿಲ್ಲಾಡಳಿತ ಒಟ್ಟು 784 ಮತಗಟ್ಟೆಗಳನ್ನು ಸ್ಥಾಪಿಸಿದೆ.  ಸುಗಮ ಮತದಾನಕ್ಕಾಗಿ 99 ಜನ ಚುನಾವಣೆ ಅಧಿಕಾರಿಗಳು, 108 ಜನ ಸಹಾಯಕ ಚುನಾವಣಾಧಿಕಾರಿಗಳು, 43 ಸೆಕ್ಟರ್ ಅಧಿಕಾರಿಗಳು, 4 ಎಂಸಿಸಿ ಟೀಮ್, 876 ಪೊಲೀಂಗ್ ಪಾರ್ಟಿಗಳನ್ನು ಚುನಾವಣೆ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ.,
ಒಟ್ಟು 146 ಮಾರ್ಗಗಳಲ್ಲಿ 108 ಬಸ್ಸುಗಳು ಚುನಾವಣೆ ಸಿಬ್ಬಂದಿಯನ್ನು ಕರೆದೊಯ್ಯಲಿವೆ.  ಅಲ್ಲದೇ, 14 ಮಿನಿ ಬಸ್ಸುಗಳು, 26 ಕ್ರೂಸರ್ ಜೀಪುಗಳು, 8 ಇತರ ಜೀಪುಗಳು, 10 ಮೀಸಲು ಜೀಪ್ ಗಳನ್ನೂ ಕೂಡ ಈ ಸಂದರ್ಭದಲ್ಲಿ ಬಳಕೆ ಮಾಡವಲಾಗುತ್ತಿದೆ.

ಚುನಾವಣೆ ಶಾಂತಿಯುತ ಮತದಾನಕ್ಕಾಗಿ ಚುನಾವಣೆ ನಡೆಯಲಿರುವ ಚಡಚಣ, ಇಂಡಿ, ಸಿಂದಗಿ ಮತ್ತು ದೇವರ ಹಿಪ್ಪರಗಿ ತಾಲೂಕುಗಳಲ್ಲಿ ಬಿಗೀ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿದೆ.

ಒಟ್ಟು 784 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಅವುಗಳಲ್ಲಿ 113 ಸೂಕ್ಷ್ಣ, 89 ಅತೀ ಸೂಕ್ಷ್ಮ, 582 ಸಾಮಾನ್ಯ ಮತಗಟ್ಟೆಗಳೆಂದು ವಿಜಯಪುರ ಜಿಲ್ಲಾಡಳಿತ ಗುರುತಿಸಿದೆ.  ಶಾಂತಿಯುತ ಮತದಾನಕ್ಕಾಗಿ ಪೊಲೀಸರನ್ನೂ ನಿಯೋಜನೆ ಮಾಡಲಾಗಿದೆ.  ಚುನಾವಣೆ ಕರ್ತವ್ಯಕ್ಕಾಗಿ 4 ಜನ ಡಿವೈಎಸ್ಪಿ, 12 ಜನ ಸಿಪಿಐ, 48 ಜನ ಪಿಎಸ್‌ಐ, 88 ಜನ ಎಎಸ್‌ಐ, 100 ಜನ ಎಚ್. ಸಿ., 866 ಪಿಸಿಗಳು, ಒಟ್ಟು 1118 ಪೊಲೀಸ್ ಸಿಬ್ಬಂದಿಯನ್ನು ಬಳಕೆ ಮಾಡಲಾಗುತ್ತಿದೆ ಎಂದು ವಿಜಯಪುರ ಜಿಲ್ಲಾಡಳಿತ ಮಾಹಿತಿ ನೀಡಿದೆ.
Published by:Latha CG
First published: