ಭೀಮಾ ತೀರದಲ್ಲಿ ತಲೆತಲಾಂತರಗಳಿಂದ ಸದ್ದಿಲ್ಲದೆ ನಡೆದಿದೆ ಹೆಡಿಗೆ ಜಾತ್ರೆ

ಅಪರಾಧ ಕೃತ್ಯಗಳಿಂದ ಸದಾ ಸುದ್ದಿಯಲ್ಲಿದೆ ಭೀಮಾ ತೀರ. ಇದೇ ಭೀಮಾ ತೀರದಲ್ಲಿ ಸದ್ದಿಲ್ಲದೆ ನಡೆದಿದೆ ಸಾಮರಸ್ಯದ ಹೆಡಿಗೆ ಜಾತ್ರೆ, ಕಾರ್ಣಿಕರು ನುಡಿಯುವ ಭವಿಷ್ಯವಾಣಿಯೂ ಕೂಡ ಈ ಜಾತ್ರೆಯ ವೈಶಿಷ್ಟ್ಯಗಳಲ್ಲೊಂದು.


Updated:August 29, 2018, 1:57 PM IST
ಭೀಮಾ ತೀರದಲ್ಲಿ ತಲೆತಲಾಂತರಗಳಿಂದ ಸದ್ದಿಲ್ಲದೆ ನಡೆದಿದೆ ಹೆಡಿಗೆ ಜಾತ್ರೆ
ಹೆಡಿಗೆ ಜಾತ್ರೆ

Updated: August 29, 2018, 1:57 PM IST
- ಮಹೇಶ ವಿ. ಶಟಗಾರ, ನ್ಯೂಸ್18 ಕನ್ನಡ

ವಿಜಯಪುರ(ಆ. 28): ಭೀಮಾ ತೀರ ಎಂದರೆ ಸಾಕು ಈಗ ರಾಜ್ಯಾದ್ಯಂತ ಮತ್ತೇನಾದರೂ ಅಪರಾಧವಾಯ್ತಾ?  ಸಿಐಡಿ ಪೊಲೀಸರೇನಾದರೂ ಮತ್ತೆ ಯಾರನ್ನಾದರೂ ಬಂಧಿಸಿದರಾ ಎಂಬ ವಿಚಾರ ಕರ್ನಾಟಕದ ಜನರ ತಲೆಯಲ್ಲಿ ಸುಳಿದಾಡುತ್ತದೆ.  ಸದಾ ಅಪರಾಧ ಕೃತ್ಯಗಳಿಂದ ಸುದ್ದಿಯಲ್ಲಿರುವ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಉಮರಾಣಿಯಲ್ಲಿ ಸದ್ದುಗದ್ದಲವಿಲ್ಲದೆ ಹೆಡಿಗೆ ಜಾತ್ರೆ ಮುಗಿದಿದೆ.ಈ ಹೆಡಿಗೆ ಜಾತ್ರೆ ಉಮರಾಣಿ ಗ್ರಾಮದ ವೈಶಿಷ್ಟ್ಯದ ಪ್ರತಿಕ.  ತಮ್ಮ ಮನೆಯಲ್ಲಿ ತರಹೇವಾಹಿ ಅಡುಗೆ ತಯಾರಿಸುವ ಮಹಿಳೆಯರು ತಾವು ಸಿದ್ಧಪಡಿಸಿದ ಸಜ್ಜೆ ರೊಟ್ಟಿ, ನಾನಾ ರೀತಿಯ ಪಲ್ಯೆಗಳು, ಅನ್ನವನ್ನು ಕಟ್ಟಿಕೊಂಡು ಹೆಡಿಗೆ, ಅಂದರೆ ಬುಟ್ಟಿಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ.  ನಂತರ ಆ ಹೆಡಿಗೆಯನ್ನು ತಲೆಯ ಮೇಲೆ ಹೊತ್ತುಕೊಂಡ ಮಹಿಳೆಯರು ಹಸಿರು ಕಬ್ಬಿನ ಗದ್ದೆಯಲ್ಲಿ ಹಾದು ಹೋಗುವ ದೃಶ್ಯಗಳು ಎಂಥವರನ್ನೂ ಮಂತ್ರಮುಗ್ದಗೊಳಿಸುತ್ತವೆ.  ಹಳೆ ಉಮರಾಣಿಯ ಭೀಮಾ ತೀರದಲ್ಲಿರುವ ಅಂಕ್ಲೆವ್ವ ದೇವಸ್ಥಾನದವರೆಗೆ ಈ ಮಹಿಳೆಯರು ತೆರಳಿದರು.  ಅಲ್ಲಿ ಪಲ್ಲಕ್ಕಿಯಲ್ಲಿ ಅಂಕ್ಲೆವ್ವ ದೇವಿಯ ಮೂರ್ತಿಗಳನ್ನು ತಂದು ಭೀಮಾ ನದಿಯಲ್ಲಿ ಸ್ನಾನ ಮಾಡಿಸಿ ಪಲ್ಲಕ್ಕಿಯಲ್ಲಿ ತೆಗೆದುಕೊಂಡು ಹೋಗುತ್ತಾರೆ.ಈ ಸಂದರ್ಭದಲ್ಲಿ ತಾವು ತಂದಿದ್ದ ಅಡುಗೆಯನ್ನು ಅಂಕ್ಲೆವ್ವ ದೇವಿಗೆ ನೈವೇದ್ಯ ಹಿಡಿದು ಪೂಜೆ ಸಲ್ಲಿಸುತ್ತಾರೆ. ನಂತರ ತಾವು ತಂದಿದ್ದ ಆಹಾರವನ್ನು ಇಟ್ಟುಕೊಂಡು ಸಾಮೂಹಿಕ ಭೋಜನ ಸವಿಯುತ್ತಾರೆ. ಇದೆಲ್ಲ ಭೀಮಾ ನದಿ ತಟದಲ್ಲಿಯೇ ನಡೆಯುತ್ತಿದ್ದು, ಪರಂಪರಾಗತವಾಗಿ ನಡೆದುಕೊಂಡು ಬಂದಿದೆ.


Loading...

ಅಷ್ಟೇ ಅಲ್ಲ, ಇಲ್ಲಿ ಪಲ್ಲಕ್ಕಿ ಜೊತೆ ಬರುವ ಪೂಜಾರಿ ಕಾರ್ಣಿಕನ ರೂಪದಲ್ಲಿ ನುಡಿಯುವ ಭವಿಷ್ಯವೂ ನಿಜವಾಗಿದೆ ಎನ್ನುತ್ತಾರೆ ರೈತರಾದ ಲಕ್ಷಣ ಚಿಂಚೋಳಿ, ಬಸವರಾಜ ಭೈರಗೊಂಡ ಮತ್ತು ಅಣ್ಣಪ್ಪ ಪದಮಗೊಂಡ ಮುಂತಾದವರು.ಸಾಮೂಹಿಕವಾಗಿ ಭೋಜನ ಸವಿಯುವ ಉಮರಾಣಿ ಗ್ರಾಮಸ್ಥರು, ಈ ಸಂದರ್ಭದಲ್ಲಿ ಬಡವರಿಗೆ ಅನ್ನದಾನವನ್ನೂ ಮಾಡುವ ಮೂಲಕ ಪರೋಪಕಾರ ಮಾಡುತ್ತಾರೆ.  ತಲೆತಲಾಂತರಗಳಿಂದ ಈ ಗ್ರಾಮದಲ್ಲಿ ಹೆಡಿಗೆ ಜಾತ್ರೆ ಸದ್ದುಗದ್ದಲವಿಲ್ಲದೆ ನಡೆಯುವ ಮೂಲಕ ಗಮನ ಸೆಳೆಯುತ್ತಿದೆ.
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...