Vijayapura: ಅಬಕಾರಿ ಪೊಲೀಸರ ಎಡವಟ್ಟು; ಆರೋಪಿಯ ಮುಖಕ್ಕೆ ಕಪ್ಪು ಬಟ್ಟೆ ಬದಲು ಕ್ಯಾರಿ ಬ್ಯಾಗ್ ಹಾಕಿದ್ರು

ಕಪ್ಪು ಬಟ್ಟೆ ಬದಲಿಗೆ ಮಾರ್ಕೆಟ್ ನಲ್ಲಿ ಕೇವಲ 1 ರೂಪಾಯಿಗೆ ಸಿಗುವ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಬಳಕೆ ಮಾಡಲಾಗಿದೆ. ಆರೋಪಿಯನ್ನ ಪ್ಲಾಸ್ಟಿಕ್ ಕಪ್ಪು ಕ್ಯಾರಿಬ್ಯಾಗ್ ಹಾಕಿಯೇ ಕೂರಿಸಿ ಪೋಟೋ ತೆಗೆದು ಮಾಧ್ಯಮಗಳಿಗೆ ರವಾನಿಸಲಾಗಿದೆ.

ವೈರಲ್ ಆಗಿರುವ ಫೋಟೋ

ವೈರಲ್ ಆಗಿರುವ ಫೋಟೋ

  • Share this:
ವಿಜಯಪುರ: ಅಧಿಕಾರಿಗಳ (Excise Officers) ಎಡವಟ್ಟಿಗೆ ಆರೋಪಿ ಕೆಲ ಕಾಲ ನರಕ ಅನುಭವಿಸಿದ ಘಟನೆ ವಿಜಯಪುರ ಅಬಕಾರಿ ಕಚೇರಿಯಲ್ಲಿ (Vijayapura Excise Office) ನಡೆದಿದೆ. ಅಬಕಾರಿ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕ್ತಿದ್ದಾರೆ. ಸಾಮಾನ್ಯವಾಗಿ ಆರೋಪಿಗಳನ್ನ ಬಂಧಿಸಿ ಕರೆತಂದಾಗ ಪೊಲೀಸರು ಮುಖಕ್ಕೆ ಕಪ್ಪು ಬಟ್ಟೆ ಹಾಕಿ ಮಾಧ್ಯಮಗಳ ಎದುರು ಪ್ರದರ್ಶಿಸುತ್ತಾರೆ. ಆರೋಪಿ ಮುಖ (Accused Face) ಗುರುತು ಸಿಗದಿರಲಿ. ನ್ಯಾಯಾಲಯದಲ್ಲಿ ಆರೋಪಿ ಅಪರಾಧಿ ಹೌದೋ ಅಲ್ಲವೋ ಎನ್ನುವುದು ತೀರ್ಮಾನವಾಗುತ್ತೆ ಎನ್ನುವ ಕಾರಣಕ್ಕೆ. ಆದ್ರೆ ವಿಜಯಪುರ ಅಬಕಾರಿ ಪೊಲೀಸರು ಆರೋಪಿ ಜೊತೆಗೆ ನಡೆದುಕೊಂಡ ರೀತಿ ಸಾರ್ವಜನಿಕರಲ್ಲೂ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿ ಮುಖಕ್ಕೆ ಕಪ್ಪು ಬಟ್ಟೆ ಬದಲಿಗೆ, ಕಪ್ಪು ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಹಾಕಿ ಎಡವಟ್ಟು ಮಾಡಿದ್ದಾರೆ.

ಗಾಂಜಾ ಸಾಗಾಟ ಪ್ರಕರಣದಲ್ಲಿ ಇಂಡಿ ತಾಲೂಕಿನ ಹಿರೆರೂಗಿ ನಿವಾಸಿ ಸೋಮನಿಂಗ್ ಗುಡಿಯನ್ನ ಬಂಧಿಸಲಾಗಿತ್ತು. ರೂಗಿ-ಅಥರ್ಗಾ ಮಾರ್ಗದಲ್ಲಿ ಪೀರಾಪೂರ ದರ್ಗಾ ಬಳಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ.

ಈ ಬಗ್ಗೆ ಮಾಹಿತಿ ಪಡೆದ ಅಬಕಾರಿ ಅಧಿಕಾರಿಗಳು ಆತನನ್ನ ಬಂಧಿಸಿದ್ದರು. ಆತನಿಂದ 40 ಸಾವಿರ ಮೌಲ್ಯದ 950 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದರು. ಇದೇ ಆರೋಪಿಗೆ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಮುಖಕ್ಕೆ ಹಾಕಿ ಎಡವಟ್ಟು ಮಾಡಿದ್ದಾರೆ ಅಬಕಾರಿ ಅಧಿಕಾರಿಗಳು.

ಕಪ್ಪು ಬಟ್ಟೆ ಅಲ್ಲ, ಪ್ಲಾಸ್ಟಿಕ್ ಕವರ್

ಕಪ್ಪು ಬಟ್ಟೆ ಬದಲಿಗೆ ಮಾರ್ಕೆಟ್ ನಲ್ಲಿ ಕೇವಲ 1 ರೂಪಾಯಿಗೆ ಸಿಗುವ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಬಳಕೆ ಮಾಡಲಾಗಿದೆ. ಆರೋಪಿಯನ್ನ ಪ್ಲಾಸ್ಟಿಕ್ ಕಪ್ಪು ಕ್ಯಾರಿಬ್ಯಾಗ್ ಹಾಕಿಯೇ ಕೂರಿಸಿ ಪೋಟೋ ತೆಗೆದು ಮಾಧ್ಯಮಗಳಿಗೆ ರವಾನಿಸಲಾಗಿದೆ. ಬಳಿಕ ಮುಖಕ್ಕೆ ಹಾಕಿದ್ದು ಕಪ್ಪು ಬಟ್ಟೆ ಅಲ್ಲ, ಕಟ್ಟು ಪ್ಲಾಸ್ಟಿಕ್ ಅನ್ನೋದು ಬಯಲಾಗಿದೆ.

ಉಸಿರಾಡಲು ಪರದಾಡಿದ ಆರೋಪಿ

ಇತ್ತ ಮುಖಕ್ಕೆ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಹಾಕಿದ್ದರಿಂದ ಆರೋಪಿ ಸೋಮನಿಂಗ್ ಕೆಲಕಾಲ ನರಕ ಯಾತನೆ ಅನುಭವಿಸುವಂತಾಯ್ತು.‌ ಕಪ್ಪು ಪ್ಲಾಸ್ಟಿಕ್ ಕ್ಯಾರಿಬ್ಯಾಕ್ ಮುಖಕ್ಕೆ ಹಾಕಿದ್ದರಿಂದ ಆರೋಪಿ ಉಸಿರಾಡಲು ಪರದಾಡಿದ್ದಾನೆ. ಜೊತೆಗೆ ಅತಿವ ಆಕ್ಸಿಜನ್, ಗಾಳಿಯ ಕೊರತೆಯಿಂದ ಕೆಲಕಾಲ ಹಿಂಸೆ ಅನುಭವಿಸುವಂತಾಗಿದೆ.

ಇದನ್ನೂ ಓದಿ:  Bengaluru Pothole: ಅಯ್ಯಯ್ಯೋ ಬೆಂಗಳೂರಿನ ಗುಂಡಿಗಳಿಗೆ 5 ಸ್ಟಾರ್ ಕೊಡ್ತಂತೆ ಗೂಗಲ್!

ಆರೋಪಿ ಮುಖಕ್ಕೆ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಹಾಕಿ ಯಡವಟ್ಟು ಸಿಬ್ಬಂದಿ ಮಾಡಿದ ಯಡವಟ್ಟನ್ನ ಅಲ್ಲೆ ಇದ್ದ ಹಿರಿಯ ಅಬಕಾರಿ ಪೊಲೀಸರು ಪ್ರಶ್ನಿಸಿಲ್ಲ. ಇದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಪಾಪದ ಕಥೆಗಳನ್ನ ನೋಡಿ ಪತಿ ಕಥೆ ಮುಗಿಸಿದ್ಳು

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಿ ಕ್ರೈಂ ಎಪಿಸೋಡ್ (Crime Episode) ನೋಡಿ ಪತಿಯ ಹತ್ಯೆಗೆ ಸ್ಕೆಚ್ ಹಾಕಿದ ಪತ್ನಿ, ಅಕ್ರಮ ಸಂಬಂಧಕ್ಕೆ (Illicit Relationship) ಅಡ್ಡಿಯಾಗಿದ್ದ ಗಂಡನ ಕಥೆಯನ್ನೇ ಮುಗಿಸಿದ್ದಾಳೆ. ಪ್ರಿಯಕರನೊಂದಿಗೆ ಸೇರಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದ ಈ ಕಳ್ಳ ಜೋಡಿ ಈಗ ಮಳವಳ್ಳಿ ಪೊಲೀಸರ (Malavalli Police) ಅತಿಥಿಯಾಗಿದ್ದಾರೆ. ಶಶಿಕುಮಾರ್ (35) ಕೊಲೆಯಾದ ಪತಿ. ಕೊಲೆಗೈದ ಆರೋಪದಡಿ ಶಶಿಕುಮಾರ್ ಪತ್ನಿ ನಾಗಮಣಿ (28) ಮತ್ತು ಆಕೆಯ ಪ್ರಿಯಕರ ಕನಕಪುರದ ಹೇಮಂತ್ (25) ಜೈಲು ಸೇರಿದ್ದಾರೆ.

ಇದನ್ನೂ ಓದಿ:  NIA Raid: ಬೆಂಗಳೂರಿನ 12 ಸ್ಥಳ, ಮಂಗಳೂರಿನ 10 ಕಡೆ NIA ರೇಡ್‌; PFI ಕಾರ್ಯಕರ್ತರಿಂದ ಗೋ ಬ್ಯಾಕ್ ಪ್ರತಿಭಟನೆ

ಮಂಡ್ಯದ ಮಳವಳ್ಳಿ (Manalavalli, Mandya) ಪಟ್ಟಣದ ಎನ್ಇಎಸ್ ಬಡಾವಣೆಯಲ್ಲಿ ಕಳೆದ ಸೆ.18 ರಂದು ಶಶಿಕುಮಾರ್ ಅವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಈ ಬಗ್ಗೆ ಶಶಿಕುಮಾರ್ ತಾಯಿಗೆ ಸೊಸೆ ನಾಗಮಣಿ ಕೆಲವು ದುಷ್ಕರ್ಮಿಗಳು ಬಂದು ನನ್ನ ಹಾಗೂ ಮಗನ ಕೈ ಕಾಲು ಕಟ್ಟಿ ರೂಮಿನಲ್ಲಿ ಕೂಡಿ ಹಾಕಿ ಶಶಿಕುಮಾರ್​​​ನನ್ನು ಕೊಲೆ ಮಾಡಿ ಪರಾರಿಯಾದರು ಎಂದು ಸುಳ್ಳು ಹೇಳಿದ್ದಳು.

ವರದಿ: ಗುರುರಾಜ್ ಗದ್ದನಕೇರಿ
Published by:Mahmadrafik K
First published: