HOME » NEWS » State » VIJAYAPURA DISTRICT POLICE SEIZED 5 LAKH WORTH DRUGS BY LORRY DRIVER LG

ವಿಜಯಪುರ ಪೊಲೀಸರ ಕಾರ್ಯಾಚರಣೆ; ಬೆಂಗಳೂರಿಗೆ ಸಾಗಿಸಲಾಗುತ್ತಿದ್ದ 5 ಲಕ್ಷ ರೂ. ಮೌಲ್ಯದ ಗಾಂಜಾ ವಶ

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಶಿರಾಡೋಣ ಬಳಿ ಚೆಕ್ ಪೋಸ್ಟ್ ಇದ್ದು, ಮಹಾರಾಷ್ಟ್ರದ ಗಡಿಯಿಂದ ಈ ಚೆಕ್ ಪೋಸ್ಟ್ ಮೂಲಕ ವಾಹನಗಳು ಆಗಮಿಸುತ್ತವೆ.  ಈ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಅಬಕಾರಿ ಇಲಾಖೆ ಸಿಬ್ಬಂದಿಯಾದ ಚೆಕ್ ಪೋಸ್ಟ್ ನಲ್ಲಿದ್ದ ಸಿಬ್ಬಂದಿ ಸದಾನಂದ ಕೊರ್ತಿ, ಅಶೋಕ, ಬಿರಾದಾರ ಅವರಿಂದ ಮಿಂಚಿನ ಕಾರ್ಯಾಚರಣೆ ನಡೆದಿದೆ.  

news18-kannada
Updated:October 10, 2020, 9:56 AM IST
ವಿಜಯಪುರ ಪೊಲೀಸರ ಕಾರ್ಯಾಚರಣೆ; ಬೆಂಗಳೂರಿಗೆ ಸಾಗಿಸಲಾಗುತ್ತಿದ್ದ 5 ಲಕ್ಷ ರೂ. ಮೌಲ್ಯದ ಗಾಂಜಾ ವಶ
ವಶಪಡಿಸಿಕೊಂಡ ಗಾಂಜಾ
  • Share this:
ವಿಜಯಪುರ (ಅ. 10) ವಿಜಯಪುರ ಅಬಕಾರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಬೆಂಗಳೂರಿಗೆ ಸಾಗಿಸಲಾಗುತ್ತಿದ್ದ ಡ್ರಗ್ಸ್ ವಶ ವಶಪಡಿಸಿಕೊಂಡಿದ್ದಾರೆ.  ಕರ್ನಾಟಕ-ಮಹಾರಾಷ್ಟ್ರದ ಗಡಿಯಲ್ಲಿರುವ ಶಿರಾಡೋಣ ಚೆಕ್ ಪೋಸ್ಟ್ ಬಳಿ ಈ ದಾಳಿ ನಡೆಸಿರುವ ಅಬಕಾರಿ ಇಲಾಖೆ ಸಿಬ್ಬಂದಿ ರೂ. 5 ಲಕ್ಷ ಮೌಲ್ಯದ 12.50 ಕೆಜಿ ಮಾದಕ ದ್ರವ್ಯ ಅಫೀಮು ವಶಪಡಿಸಿಕೊಂಡಿದ್ದಾರೆ. ರಾಜಸ್ಥಾನಕ್ಕೆ ಸೇರಿದ ಲಾರಿಯಲ್ಲಿ ಸಾಗಿಸಲಾಗುತ್ತಿದ್ದ ಅಫೀಮು ವಶಪಡಿಸಿಕೊಳ್ಳಲಾಗಿದ್ದು, ಖಚಿತ ಮಾಹಿತಿ ಮೇರೆಗೆ ಶಿರಾಡೋಣ ಚೆಕ್‌ ಪೋಸ್ಟ್ ಬಳಿ ದಾಳಿ ನಡೆಸಲಾಗಿದೆ.  ಅಲ್ಲದೇ, ರಾಜಸ್ಥಾನ ಮೂಲದ ಲಾರಿ ಚಾಲಕ ಸತೀಶ ಚೌಧರಿ ಎಂಬಾತನನ್ನು ಬಂಧಿಸಲಾಗಿದೆ ಎಂದು ಅಬಕಾರಿ ಇಲಾಖೆ ಜಂಟಿ ಆಯುಕ್ತ ಡಾ. ವೈ. ಮಂಜುನಾಥ ತಿಳಿಸಿದ್ದಾರೆ. ಈ ದಾಳಿಯಲ್ಲಿ ರೂ. 5 ಲಕ್ಷ ಅಫೀಮು ಮತ್ತು ರೂ. 25 ಲಕ್ಷ ಮೌಲ್ಯದ ಲಾರಿ ವಶಪಡಿಸಿಕೊಳ್ಳಲಾಗಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.  ತಜ್ಞ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಈ ಪ್ರಕರಣ ಪತ್ತೆಯಾಗಿದೆ.

ಡ್ರಗ್ಸ್ ಸಾಗಾಟದ ಕುರಿತು ಸಿಬ್ಬಂದಿಗೆ ಮೊದಲೇ ಮಾಹಿತಿ ನೀಡಲಾಗಿತ್ತು.  ರಾಜಸ್ಥಾನ ಪಾಸಿಂಗ್ ಲಾರಿ ಬಗ್ಗೆ ಮಾಹಿತಿ ನೀಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಜಯಪುರ ಅಬಕಾರಿ ಇಲಾಖೆ ಡಿಸಿ ಕೆ. ಅರುಣಕುಮಾರ, ಲಾರಿಗಳಲ್ಲಿ ಡ್ರಗ್ಸ್ ಸಾಗಾಟ ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ.  ಅಲ್ಲದೇ, ಈ ಕುರಿತು ರಾಜಸ್ಥಾನ ಮತ್ತು ಮಧ್ಯಪ್ರದೇಶದ ಅಧಿಕಾರಿಗಳಿಗೆ ಈ ಬಗ್ಗೆ ಪತ್ರ ಬರೆಯಲಾಗುವುದು.  ಅಲ್ಲಿಯೂ ತನಿಖೆ ನಡೆಸುವಂತೆ ಕೋರಲಾಗುವುದು. ಬೆಂಗಳೂರಿನಲ್ಲಿಯೂ ತನಿಖೆ ನಡೆಸಲು ಶಿಫಾರಸ್ಸು ಮಾಡಲಾಗುವುದು.  ಈ ಅಫೀಮನ್ನು ಡಾಬಾಗಳಿಗೆ ಸಾಗಾಟ ಮಾಡುತ್ತಿದ್ದ ಶಂಕೆಯಿದೆ.  ಈ ಪ್ರಕರಣದ ಹಿಂದಿರುವ ವ್ಯಕ್ತಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುವುದು.  ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಲಾಗುವುದು ಎಂದು ತಿಳಿಸಿದ್ದಾರೆ.

ಕೇದಾರನಾಥ ಶುಗರ್ಸ್​ ಕಾರ್ಖಾನೆ ಬಾಕಿ ಬಿಲ್​ಗೆ ಆಗ್ರಹಿಸಿ ಅಮರಣಾಂತ ಉಪವಾಸಕ್ಕೆ ನಿರ್ಧರಿಸಿದ ರೈತರು

ವಾಹನಗಳ ಸ್ಪೇರ್ ಪಾರ್ಟ್ಸ ಸಾಗಿಲಾಗುತ್ತಿದ್ದ ಲಾರಿಯಲ್ಲಿ ಡ್ರಗ್ಸ್​​ ಸಾಗಾಟ ಮಾಡಲಾಗುತ್ತಿತ್ತು.  ಡ್ರೈವರ್ ಕ್ಯಾಬಿನ್ ನಲ್ಲಿ ಈ ಡ್ರಗ್ಸ್ ಮುಚ್ಚಿಡಲಾಗಿತ್ತು ಎಂದು ವಿಜಯಪುರ ಅಬಕಾರಿ ಡಿಸಿ ಕೆ. ಅರುಣಕುಮಾರ ಮಾಹಿತಿ ನೀಡಿದ್ದಾರೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಶಿರಾಡೋಣ ಬಳಿ ಚೆಕ್ ಪೋಸ್ಟ್ ಇದ್ದು, ಮಹಾರಾಷ್ಟ್ರದ ಗಡಿಯಿಂದ ಈ ಚೆಕ್ ಪೋಸ್ಟ್ ಮೂಲಕ ವಾಹನಗಳು ಆಗಮಿಸುತ್ತವೆ.  ಈ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಅಬಕಾರಿ ಇಲಾಖೆ ಸಿಬ್ಬಂದಿಯಾದ ಚೆಕ್ ಪೋಸ್ಟ್ ನಲ್ಲಿದ್ದ ಸಿಬ್ಬಂದಿ ಸದಾನಂದ ಕೊರ್ತಿ, ಅಶೋಕ, ಬಿರಾದಾರ ಅವರಿಂದ ಮಿಂಚಿನ ಕಾರ್ಯಾಚರಣೆ ನಡೆದಿದೆ.

ರಾಜಸ್ಥಾನದ ಆಳ್ವಾರ ಜಿಲ್ಲೆಯ ತಿಜಾರಾ ತಾಲೂಕಿನ ಖಲಿಲಪುರಿ ಮೂಲದ ಲಾರಿ ಚಾಲಕ, ಆರೋಪಿ ಸತೀಶ ಚೌಧರಿ(37)  ಕಳೆದ ಏಳೆಂಟು ವರ್ಷಗಳಿಂದ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ.  ಅಲ್ಲದೇ, ಸುಮಾರು ನಾಲ್ಕು ವರ್ಷಗಳಿಂದ ಈ ರೀತಿ ಅಫೀಮು ಮತ್ತು ಇತರ ಮಾದಕ ದ್ರವ್ಯಗಳನ್ನು ಸಾಗಾಟ ಮಾಡುತ್ತಿದ್ದ.  ಅಲ್ಲದೇ, ಈ ಮಾದಕ ದ್ರವ್ಯವನ್ನು ಪ್ರತಿ ಕೆಜಿಗೆ ರೂ. 2500 ಬೆಲೆಗೆ ಮಾರಾಟ ಮಾಡುತ್ತಿದ್ದ.  ನಂತರ ಇದು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿತ್ತು ಎನ್ನಲಾಗಿದೆ.

ಈ ಡ್ರಗ್ಸ್ ಸೇವನೆಯಿಂದ ಹಸಿವು ಕಡಿಮೆಯಾಗುತ್ತದೆ.  ನಿದ್ರೆಯಿಲ್ಲದೇ ಎಚ್ಚರವಾಗಿರಬಹುದು ಎಂದು ಆರೋಪಿ ಸತೀಶ ಚೌಧರಿ ಮಾಹಿತಿ ನೀಡಿದ್ದಾನೆ.  ಈ ಕುರಿತು ಅಬಕಾರಿ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
Published by: Latha CG
First published: October 10, 2020, 9:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories