ಅಜ್ಜನ ಸಾವಿಗೂ ಹೋಗದೇ ಪ್ರವಾಹ ಸಂತ್ರಸ್ತರ ಕಣ್ಣೀರೊರೆಸಿದ ವಿಜಯಪುರ ಜಿಲ್ಲಾಧಿಕಾರಿ!

ವಿಜಯಪುರ ಜಿಲ್ಲೆಯ ನೆರೆ ಸಂತ್ರಸ್ತರ ಕಣ್ಣೀರು ಒರೆಸಿದ ಜಿಲ್ಲಾಧಿಕಾರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Latha CG | news18
Updated:August 13, 2019, 4:53 PM IST
ಅಜ್ಜನ ಸಾವಿಗೂ ಹೋಗದೇ ಪ್ರವಾಹ ಸಂತ್ರಸ್ತರ ಕಣ್ಣೀರೊರೆಸಿದ ವಿಜಯಪುರ ಜಿಲ್ಲಾಧಿಕಾರಿ!
ವಿಜಯಪುರ ಜಿಲ್ಲಾಧಿಕಾರಿ
  • News18
  • Last Updated: August 13, 2019, 4:53 PM IST
  • Share this:
ವಿಜಯಪುರ, (ಆ. 13): ಉತ್ತರ ಕರ್ನಾಟಕ ನೆರೆಯಿಂದ ಸಂಪೂರ್ಣ ಜಲಾವೃತವಾಗಿದೆ. ಸಾವಿರಾರು ಕುಟುಂಬಗಳು ಮನೆ-ಮಠ ಕಳೆದುಕೊಂಡು ನಿರ್ಗತಿಕರಾಗಿ ಬೀದಿಗೆ ಬಿದ್ದಿದ್ದಾರೆ. ರಾಜ್ಯದಲ್ಲಿ ನೂತನ ಸರ್ಕಾರ ರಚನೆಯಾದರೂ ಇನ್ನೂ ಸಚಿವ ಸಂಪುಟ ರಚನೆಯಾಗಿಲ್ಲ. ಹೀಗಾಗಿ ಆಯಾ ಜಿಲ್ಲಾಧಿಕಾರಿಗಳೇ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸುತ್ತಿತ್ತಾರೆ. ಅದರಂತೆ ವಿಜಯಪುರದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಸ್ವಂತ ಅಜ್ಜ ನಿಧನರಾದರೂ ಅಂತಿಮ ದರ್ಶನ ಪಡೆಯದೇ ಪ್ರವಾಹ ಸಂತ್ರಸ್ತರ ಕಣ್ಣೀರು ಒರೆಸುವ ಮೂಲಕ ಮನ ಮಿಡಿಯುವ ಕೆಲಸ ಮಾಡಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಈಗ ಹೇಳಿ ಕೇಳಿ ಕೃಷ್ಣಾ ಮತ್ತು ಭೀಮಾ ನದಿ ಪ್ರವಾಹ ಉಂಟಾಗಿದೆ.  ಈ ಸಂದರ್ಭದಲ್ಲಿ ಯಾವುದೇ ಜೀವಹಾನಿಯಾಗದಂತೆ ತಡೆಯಲು ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ಸ್ವತಃ ಪ್ರವಾಹ ಪೀಡಿತ ಸ್ಥಳಗಳಿಗೆ ತೆರಳಿ ಹಗಲಿರುಳು ಸಂಚರಿಸಿ ಪ್ರವಾಹ ಪೀಡಿತ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿಸಿದ್ದಾರೆ. ಇಂಥ ಭೀಕರ ಪ್ರವಾಹ ಸಂದರ್ಭದಲ್ಲಿಯೇ ಇವರನ್ನು ಬಾಲ್ಯದಿಂದಲೇ ಸಾಕಿ ಸಲುಹಿ ಓದಿಸಿದ ಇವರ ಸ್ವಂತ ಅಜ್ಜ ಎಂ.ಎಚ್.ನಾಯ್ಕರ ನಿಧರಾಗಿದ್ದಾರೆ. ಶುಕ್ರವಾರ ತಮ್ಮ ಸ್ವಂತ ಅಜ್ಜ ನಿಧನರಾದರೂ ಅವರ ಅಂತ್ಯಕ್ರಿಯೆ ಇರಲಿ, ಅಂತಿಮ ದರ್ಶನಕ್ಕೂ ತೆರಳದೇ ತಮ್ಮ ಕರ್ತವ್ಯ ನಿಷ್ಛೆ ಮೆರೆದಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಕೃಷ್ಣಾ ಮತ್ತು ಭೀಮಾ ನದಿ ಪ್ರವಾಹ ಉಂಟಾಗಿದೆ.  ಈ ನದಿ ತೀರದ ಗ್ರಾಮಗಳಿಗೆ ಖುದ್ದಾಗಿ ತೆರಳಿದ ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ, ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಶುಕ್ರವಾರ ಇವರನ್ನು ಬಾಲ್ಯದಿಂದಲೇ ಸಾಕಿ ಸಲುಹಿದ ಇವರ ಅಜ್ಜ (ತಾಯಿಯ ಅಪ್ಪ), ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾಗಿದ್ದ ಬೆಳಗಾವಿ ಜಿಲ್ಲೆ, ಬೈಲಹೊಂಗಲ ತಾಲೂಕಿನ ನಾಗನೂರ ಗ್ರಾಮದ ಎಂ.ಎಚ್.ನಾಯ್ಕರ  ((91) ನಿಧನರಾಗಿದ್ದಾರೆ. ಈ ಸುದ್ದಿ ಬರಸಿಡಿಲಿನಂತೆ ಬಂದರೂ ಜಿಲ್ಲಾಧಿಕಾರಿ ಧೃತಿಗೆಡಲಿಲ್ಲ. ಅಜ್ಜನನ್ನು ಮನದಲ್ಲೇ ನೆನೆದು ಅಂತಿಮ ದರ್ಶನಕ್ಕೂ ತೆರಳದೆ ಪ್ರವಾಹದಲ್ಲಿ ಸಿಲುಕಿದ್ದ ಜನರ ರಕ್ಷಣೆಗೆ ಮುಂದಾಗಿದ್ದಾರೆ.

ಪ್ರವಾಹ ಪೀಡಿತ ಸ್ಥಳಗಳಿಗೆ ತೆರಳಿ ಸಂತ್ರಸ್ಥರ ಕಷ್ಟ ಆಲಿಸುತ್ತಿರುವ ಜಿಲ್ಲಾಧಿಕಾರಿ ವೈ.ಎಸ್​.ಪಾಟೀಲ


ತುಂಗಭದ್ರೆಯಲ್ಲಿ ಪ್ರವಾಹ; ವಿಶ್ವ ಪ್ರಸಿದ್ಧ ಹಂಪಿ-ವಿರುಪಾಪೂರಗಡ್ಡಿಯಲ್ಲಿ ಸಿಲುಕಿದ್ದ 400ಕ್ಕೂ ಹೆಚ್ಚು ಜನರ ರಕ್ಷಣೆ

ಅಜ್ಜ ತೀರಿ ಹೋದರು. ಈಗ ಏನೂ ಮಾಡಲು ಸಾಧ್ಯವಿಲ್ಲ. ಪ್ರಸ್ತುತ ಉಂಟಾಗಿರುವ ಪ್ರವಾಹದಿಂದ ವಿಜಯಪುರ ಜಿಲ್ಲೆಯ ಸಂತ್ರಸ್ತರಿಗೆ ತೊಂದರೆಯಾಗದಿದ್ದರೆ ಸಾಕು ಎಂಬ ಭಾವನೆಯಿಂದ ಕರ್ತವ್ಯ ನಿರ್ವಹಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಸುಲಧಾಳ ಗ್ರಾಮದವರಾದ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ಅವರು ಕಳೆದೊಂದು ವಾರದಿಂದ ಕಚೇರಿಯಲ್ಲಿ ಕೂರದೇ ಪ್ರವಾಹಪೀಡಿತ ಗ್ರಾಮಗಳಿಗೆ ಭೇಟಿ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.  ಅಷ್ಟೇ ಅಲ್ಲ, ಭಾನುವಾರವೂ ವಿಜಯಪುರ ಜಿಲ್ಲೆಯ ಸಿಬ್ಬಂದಿಗೆ ರಜೆಯನ್ನೂ ನೀಡದೇ, ತಾವೂ ವಾರದ ರಜೆ ಪಡೆಯದೇ ಸ್ವತಃ ಕೆಲಸ ಮಾಡಿ ಗಮನ ಸೆಳೆದಿದ್ದಾರೆ.

ವಿಜಯಪುರ ಜಿಲ್ಲೆಯ ನೆರೆ ಸಂತ್ರಸ್ತರ ಕಣ್ಣೀರು ಒರೆಸಿದ ಜಿಲ್ಲಾಧಿಕಾರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಷ್ಟೇ ಅಲ್ಲದೇ. ದಶಕದ ಹಿಂದೆ 2009ರಂದು ಬಂದಿದ್ದ ಪ್ರವಾಹದ ಸಂದರ್ಭದಲ್ಲಿಯೂ ಇದೇ ವೈ.ಎಸ್.ಪಾಟೀಲ ಅವರು ಜಿಲ್ಲೆಯ ಉಪವಿಭಾಗಾಧಿಕಾರಿಯಾಗಿದ್ದರು. ಆ ಪ್ರವಾಹದ ಸಂದರ್ಭದಲ್ಲಿ ಸಾರವಾಡ ಗ್ರಾಮದ ಡೋಣಿ ನದಿ ಪ್ರವಾಹ ಉಂಟಾದ ಸಮಯದಲ್ಲಿ ವೈ.ಎಸ್. ಪಾಟೀಲ, ಡೋಣಿ ನದಿಯ ಕೆಸರಿನೊಳಗೆ ನಾಲ್ಕಾರು ಕಿಲೋ ಮೀಟರ್ ನಡೆದುಕೊಂಡೆ ಸಂಚರಿಸಿ ಅಲ್ಲಿ ಸಿಲುಕಿದ್ದ ಆರೇಳು ಜನ ಇದ್ದಿಲು ತಯಾರಿಸುವ ಕಾರ್ಮಿಕರನ್ನೂ ರಕ್ಷಿಸಿ ಗಮನ ಸೆಳೆದಿದ್ದರು.
Loading...

ಈಗಲೂ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ಸಾರ್ವಜನಿಕರ ಸೇವೆಗಾಗಿ ವೈಯಕ್ತಿಕ ನೋವನ್ನೂ ಮರೆತು ಕೆಲಸ ಮಾಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಲ್ಲದೇ, ಈಗಲೂ ಪ್ರವಾಹಪೀಡಿತ ಪ್ರದೇಶಗಳಲ್ಲಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗಮನ ಕೇಂದ್ರಿಕರಿಸಿ ಕಾರ್ಯೋನ್ಮುಖರಾಗಿದ್ದಾರೆ.

(ವಿಶೇಷ ವರದಿ: ಮಹೇಶ ವಿ. ಶಟಗಾರ)

First published:August 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...