ಪಿಓಪಿ ಗಣೇಶ ಮಾರಾಟ- ಗುಬ್ಬವ್ವಳ ಮಾರಾಟ ಮಳಿಗೆ ಮೇಲೆ ಬ್ರಹ್ಮಾಸ್ತ್ರ ಬಿಟ್ಟ ಅಧಿಕಾರಿಗಳು, ದೊಡ್ಡವರ ಮಾತು ಕೇಳಿ ತಣ್ಣಗಾಗಿದ್ದೇಕೆ?

ತರಾತುರಿಯಲ್ಲಿ ರೋಷಾವೇಶದಿಂದ ಧಾಳಿ ನಡೆಸಿದ ಡಿಸಿ, ಕಾರ್ಪೋರೇಶನ್ ಕಮೀಷನರ್... ಒಂದೆರಡು ಕಡೆ ದಾಳಿ, ಬಡವರಿಗೆ ಸೇರಿದ ಪಿಓಪಿ ಗಣೇಶ ಮೂರ್ತಿಗಳ ವಶ… ದೊಡ್ಡ ಮಾರಾಟ ಮಳಿಗೆಗಳಿಗೆ ದಾಳಿ ನಡೆಸುತ್ತಿದ್ದಂತೆ ಮೆತ್ತಗಾಗಿ ಹಿಂದುರಿಗಿದ ಅಧಿಕಾರಿಗಳು….


Updated:September 9, 2018, 7:54 PM IST
ಪಿಓಪಿ ಗಣೇಶ ಮಾರಾಟ- ಗುಬ್ಬವ್ವಳ ಮಾರಾಟ ಮಳಿಗೆ ಮೇಲೆ ಬ್ರಹ್ಮಾಸ್ತ್ರ ಬಿಟ್ಟ ಅಧಿಕಾರಿಗಳು, ದೊಡ್ಡವರ ಮಾತು ಕೇಳಿ ತಣ್ಣಗಾಗಿದ್ದೇಕೆ?
ತರಾತುರಿಯಲ್ಲಿ ರೋಷಾವೇಶದಿಂದ ಧಾಳಿ ನಡೆಸಿದ ಡಿಸಿ, ಕಾರ್ಪೋರೇಶನ್ ಕಮೀಷನರ್... ಒಂದೆರಡು ಕಡೆ ದಾಳಿ, ಬಡವರಿಗೆ ಸೇರಿದ ಪಿಓಪಿ ಗಣೇಶ ಮೂರ್ತಿಗಳ ವಶ… ದೊಡ್ಡ ಮಾರಾಟ ಮಳಿಗೆಗಳಿಗೆ ದಾಳಿ ನಡೆಸುತ್ತಿದ್ದಂತೆ ಮೆತ್ತಗಾಗಿ ಹಿಂದುರಿಗಿದ ಅಧಿಕಾರಿಗಳು….
  • Share this:
- ಮಹೇಶ ವಿ. ಶಟಗಾರ, ನ್ಯೂಸ್18 ಕನ್ನಡ

ವಿಜಯಪುರ(ಸೆ. 09): ವಿಜಯಪುರ ನಗರ ಇಂದು ಅಧಿಕಾರಿಗಳ ಧ್ವಂದ್ವ ನಿಲುವಿಗೆ ಸಾಕ್ಷಿಯಾಯಿತು. ಕಳೆದ ಮೂರ್ನಾಲ್ಕು ವರ್ಷಗಳಿಂದಲೇ ವಿಜಯಪುರ ಜಿಲ್ಲಾಡಳಿತ ಪಿಓಪಿ ಗಣೇಶ ವಿಗ್ರಹಗಳ ಮಾರಾಟವನ್ನು ನಿಷೇಧಿಸಿದೆ. ಅಷ್ಟೇ ಅಲ್ಲ, ಕಳೆದ ಬಾರಿಯೂ ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ನೇತೃತ್ವದಲ್ಲಿ ದಾಳಿ ನಡೆಸಿ ಪಿಓಪಿ ಗಣೇಶ ಮೂರ್ತಿಗಳನ್ನು ವಶಪಡಿಸಿಕೊಂಡಿದ್ದರು.

ಇಂದು ಮಾಧ್ಯಮಗಳಿಗೆ ತುರ್ತು ಮಾಹಿತಿ ನೀಡಿದ ವಿಜಯಪುರ ಜಿಲ್ಲಾಧಿಕಾರಿ ಎಸ್. ಬಿ. ಶೆಟ್ಟೆಣ್ಣವರ್, ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಹರ್ಷಶೆಟ್ಟಿ ಜೊತೆಗೂಡಿ ವಿಜಯಪುರ ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ಬಡ ಮಹಿಳೆ ಮಾರಾಟಕ್ಕಿದ್ದ ಪಿಓಪಿ ಗಣೇಶ ಮೂರ್ತಿಗಳ ಮೇಲೆ ದಾಳಿ ನಡೆಸಿ ಸುಮಾರು 5 ಲಕ್ಷ ರೂ. ಮೌಲ್ಯದ ಪಿಓಪಿ ಮೂರ್ತಿಗಳನ್ನು ವಶಕ್ಕೆ ಪಡೆದರು. ಅಲ್ಲದೇ, ಮಹಾನಗರ ಪಾಲಿಕೆಯ ಕಸ ಸಾಗಣೆಯ ಟ್ರ್ಯಾಕ್ಟರ್​ನಲ್ಲಿ ಅವನ್ನು ಸಾಗಿಸಿದರು. ಆಗ ಈ ಮೂರ್ತಿಗಳ ಮಾರಾಟಗಾರ್ತಿ ಗುಬ್ಬವ್ವಳ ಕೂಗು ಅರಣ್ಯರೋಧನವಾಯಿತು.

ಈ ಕುರಿತು ಪ್ರತಿಕ್ರಿಯೆ ನೀಡಿದ ವಿಜಯಪುರ ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣವರ್, ಪಿಓಪಿ ಮೂರ್ತಿಗಳ ನಿಷೇಧದ ಬಗ್ಗೆ ಈ ಹಿಂದೆಯೇ ಸಭೆಯನ್ನು ಕರೆದು ಮಾಹಿತಿ ನೀಡಿದ್ದೇವೆ. ಆದರೂ ಮಾರಾಟ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಧಾಳಿ ನಡೆಸಲಾಯಿತು ಎಂದು ತಿಳಿಸಿದಸು.

ಈ ಮಧ್ಯೆ ದಾಳಿ ಮುಂದವರೆಸಿದ ಅಧಿಕಾರಿಗಳು ವಿಜಯಪುರ ನಗರದ ಮುಖ್ಯ ಮಾರುಕಟ್ಟೆಗೆ ಬರುತ್ತಿದ್ದಂತೆ ಅಲ್ಲಿ ಪ್ರತ್ಯಕ್ಷರಾದ ವಿಜಯಪುರ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ರಾಹುಲ್ ಜಾಧವ್, ಈ ಧಾಳಿಯ ಔಚಿತ್ಯವನ್ನು ಪ್ರಶ್ನಿಸಿದರು. ಜಿಲ್ಲಾಧಿಕಾರಿ ಹಾಗೂ ಪೌರಾಯುಕ್ತರ ಜೊತೆ ವಾಗ್ವಾದ ನಡೆಸಿದರು. ಅಲ್ಲದೇ, ಪಿಓಪಿ ಗಣೇಶ ಮೂರ್ತಿ ಮಾರಾಟಕ್ಕೆ ಅವಕಾಶ ನೀಡುವಂತೆ ಒತ್ತಡವನ್ನೂ ತಂದರು.

ಮಾರಾಟಗಾರರ ಒತ್ತಡ ಹಾಗೂ ಮನವಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಪೌರಾಯುಕ್ತರು, ಜಪ್ತಿ ಮಾಡಲಾಗಿದ್ದ ಮೂರ್ತಿಗಳನ್ನು ಹಿಂದಿರುಗಿಸಿ ಬಂದ ದಾರಿಗೆ ಸುಂಕವಿಲ್ಲದಂತೆ ಮರಳಿದರು.
First published:September 9, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ